ಹಂಪಿ ಉತ್ಸವದಲ್ಲಿ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ: ತೆಪ್ಪ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೀನುಗಾರರು

By Govindaraj S  |  First Published Jan 29, 2023, 7:49 PM IST

ಹಂಪಿ ಉತ್ಸವ‌ ಕೊನೆಯ ದಿನ ಸಮಾರೋಪ ಸಮಾರಂಭಕ್ಕೂ ಮುನ್ನ  ಐತಿಹಾಸಿಕ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಬಳಿಯಿಂದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ದವರೆಗೆ ಜಾನಪದ ತಂಡಗಳಿಂದ ಭವ್ಯ ಮೆರವಣಿಗೆ ಮಾಡಲಾಯ್ತು. 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್, ವಿಜಯನಗರ

ವಿಜಯನಗರ (ಜ.29): ಹಂಪಿ ಉತ್ಸವ‌ ಕೊನೆಯ ದಿನ ಸಮಾರೋಪ ಸಮಾರಂಭಕ್ಕೂ ಮುನ್ನ  ಐತಿಹಾಸಿಕ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಬಳಿಯಿಂದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ದವರೆಗೆ ಜಾನಪದ ತಂಡಗಳಿಂದ ಭವ್ಯ ಮೆರವಣಿಗೆ ಮಾಡಲಾಯ್ತು. ಸಚಿವ ಆನಂದ್ ಸಿಂಗ್ ಭುವನೇಶ್ವರ ದೇವಿಗೆ ಪೂಜೆ ನೆರವೇರಿಸುವುದರ ಮೂಲಕ ಜಾನಪದ ವಾಹಿನಿ ಮೆರವಣಿಗೆ ಚಾಲನೆ ನೀಡಿದರು. 

Tap to resize

Latest Videos

undefined

ಜಾನಪದ ವಾಹಿನಿ ಕಲಾ ತಂಡಗಳ ಮೆರವಣಿಗೆ ನಾಡಿನ ಗ್ರಾಮೀಣ ಭಾಗದ ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳು ಮೆರವಣಿಯಲ್ಲಿ ಪಾಲ್ಗೊಳ್ಳುವ ಮೂಲಕ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ ನಡೆಯಿತು. ಅದ್ಧೂರಿ ಮೆರವಣಿಗೆ ಉತ್ಸವಕ್ಕೆ ಆಗಮಿಸಿದ  ಜನತೆಯ ಆಕರ್ಷಣೆಗೆ ಕಾರಣವಾಯಿತು. ವಿದೇಶಿ ಪ್ರವಾಸಿಗರು ಸಹ ಜಾನಪದ ಕಲೆಗಳಿಗೆ ಮನಸೋತು ವಿಡಿಯೋ, ಪೋಟೋ ತೆಗೆದುಕೊಂಡು ಸಂಭ್ರಮಿಸೋದ್ರ ಜೊತೆಗೆ ವಿದೇಶಿ ಮಹಿಳೆ ಜನಪದ ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. 

ಈ ಊರಿಗೆ ರಸ್ತೆಯೇ ಇಲ್ಲ: ನಂಜರಾಯಪಟ್ಟಣದಲ್ಲಿ ಆನೆ, ಚಿರತೆಗಳ ಆತಂಕ

ಗಮನ ಸೆಳೆದ ಜಾನಪದ ವಾಹಿನಿ ಮೆರವಣಿಗೆ: ಮೆರವಣಿಗೆಯಲ್ಲಿ ಜಾನಪದ ಕಲಾ ಪ್ರಕಾರಗಳು, ಕಲಾತಂಡಗಳು ನೋಡುಗರ ಗಮನ ಸೆಳೆದವು. ತಾಂಡೋಲ್, ಹಲಗೆವಾದನ, ವೀರಗಾಸೆ, ನಾದಸ್ವರ, ಹಗಲುವೇಷ, ಸಿಂಧೋಳ್ ಕುಣಿತ, ನಂದಿಧ್ವಜ, ಕಹಳೆ ವಾದನ, ಮರಗಾಲು ಕುಣಿತ, ಗೊಂಬೆ ಕುಣಿತ, ಹಕ್ಕಿಪಿಕ್ಕಿ ನೃತ್ಯ, ಕರಡಿ ಮೇಳ, ಪುರವಂತಿಕೆ, ಪೂಜಾ ಕುಣಿತ, ಬೊಂಬೆ ನೃತ್ಯ, ಚಿಲಿಪಿಲಿ ಗೊಂಬೆ, ಸಮಾಳವಾದನ, ಮಹಿಳಾ ನಗಾರಿ, ಲಂಬಾಣಿ ವೃತ್ತ, ಮಹಿಳಾ ಪಟಕುಣಿತ, ಕೊಡವ ನೃತ್ಯ, ಕೋಳಿ ನೃತ್ಯ, ನಗಾರಿ, ಕಂಸಾಳೆ, ಚಂಡೆವಾದ್ಯ, ಸೋಮನ ಕುಣಿತ, ಮಹಿಳಾ ಡೊಳ್ಳುಕುಣಿತ, ಯಕ್ಷಗಾನ, ಹುಲಿವೇಷ, ಗಾರುಡಿಗೊಂಬೆ, ಪಾತರಗಿತ್ತಿ ನೃತ್ಯ, ಗೊರವರ ಕುಣಿತ, ಚಿಟ್ಟಿಮೇಳ ಕಲಾತಂಡ ಸೇರಿದಂತೆ ಒಟ್ಟು ಅರವತ್ತಕ್ಕೂ‌ ಹೆಚ್ಚು ಕಲಾ ತಂಡಗಳು‌‌ ಭಾಗವಹಿದ್ದವು

ಕೆರೆಯಲ್ಲಿ ರೋಚಕ ಹರಿಗೋಲು ಸ್ವರ್ಧೆ ಹಂಪಿ ಉತ್ಸವ ಅಂಗವಾಗಿ ಕಮಲಾಪುರ ಕೆರೆಯಲ್ಲಿ ಭಾನುವಾರದಂದು ಸಂಜೆ ಏರ್ಪಡಿಸಿದ್ದ ಹರಿಗೋಲು ಸ್ವರ್ಧೆಯಲ್ಲಿ ಸ್ಥಳೀಯ ಮೀನುಗಾರರು ಭಾಗವಹಿಸಿ ಪಂದ್ಯಕ್ಕೆ ಮೆರಗು ನೀಡಿದರು. ಸಂಜೆಯ ವೇಳೆ ಸೂರ್ಯಾಸ್ತದ ವೇಳೆ ಹರಿಗೋಲು ಹುಟ್ಟು ಹಾಕೋ ಮೂಲಕ ತಾಮುಂದು ನಾಮುಂದು ಎಂದು ಪೈಪೋಟಿಗಿಳಿದರು. ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೊಯರ್ ಹರ್ಷಲ್ ನಾರಾಯಣರಾವ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಸ್ವರ್ಧೆಗೆ ಚಾಲನೆ ನೀಡಿದರು. ಪುರುಷ ಮತ್ತು ಮಹಿಳಾ ಮೀನುಗಾರರ ಪ್ರತ್ಯೇಕ ಪಂದ್ಯಾವಳಿಗಳು ನಡೆದವು. ರೋಚಕ ಸ್ಪರ್ಧೆಯಲ್ಲಿ ರವಿ-ರಾಮು ತಂಡ ಪ್ರಥಮ ಸ್ಥಾನ, ಗೋಪಿ- ಹನುಮಂತ ದ್ವಿತೀಯ ಸ್ಥಾನ ಮತ್ತು ವಿಜಯ-ರಾಜು ತೃತೀಯ ಸ್ಥಾನ ಪಡೆದರು.

ರಾತ್ರಿ ಓಡಾಡುವವರೇ ಹುಷಾರ್: ಗಾಡಿ ಡಿಕ್ಕಿ ಹೊಡೆದಂತೆ ಮಾಡಿ ರಾಬರಿ ಮಾಡ್ತಾರೆ!

ಹುಟ್ಟು ಹಾಕುವಲ್ಲಿ ಮಹಿಳೆಯರೂ ಮುಂದು; ಸ್ವರ್ಧೆಯಲ್ಲಿ ತಾವು ಯಾರಿಗೂ ಕಮ್ಮಿ ಇಲ್ಲವೆನ್ನುವಂತೆ ಮಹಿಳಾ ಮೀನುಗಾರರು ಸಹ ಉತ್ಸಾಹದಿಂದ ಭಾಗವಹಿಸಿ ಹರಿಗೋಲಿಗೆ ಹುಟ್ಟು ಹಾಕಿದರು. ಸ್ಪರ್ಧೆಗೆ ಭಾಗವಹಿಸಲು ನೊಂದಾಯಿಸಿದ್ದ 6 ಜೋಡಿ ಮಹಿಳಾ ಮೀನುಗಾರರ ಪೈಕಿ ಎನ್.ನಂದಿನಿ-ಹನುಮಕ್ಕ ತಂಡ ಪ್ರಥಮ ಸ್ಥಾನ, ಗೋವಿಂದಮ್ಮ- ಮನ್ನಮ್ಮ ದ್ವಿತೀಯ ಸ್ಥಾನ ಮತ್ತು ನಂದಕುಮಾರಿ- ಭಾರತಿ ತೃತೀಯ ಸ್ಥಾನ ಗಿಟ್ಟಿಸಿಕೊಂಡರು. ಸ್ವರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಕ್ರಮವಾಗಿ 5 ಸಾವಿರ, 3 ಸಾವಿರ, 2 ಸಾವಿರ ರೂ. ನಗದನ್ನು ಬಹುಮಾನವಾಗಿ ವಿತರಿಸಿದರು.

click me!