ಡಕಾಯಿತ ಅಂಗುಲಿಮಾಲ ಜನರನ್ನು ಕೊಂದ ನಂತರ ಅವರ ಬೆರಳುಗಳ ಹಾರವನ್ನು ಮಾಡಿಕೊಂಡು ಅದನ್ನು ಸರದಂತೆ ಕತ್ತಿಗೆ ಹಾಕಿಕೊಳ್ಳುತ್ತಿದ್ದನು. ಈ ಕಾರಣದಿಂದ ಅವನಿಗೆ 'ಅಂಗುಲಿಮಾಲ' ಎಂದು ಹೆಸರಿಸಲಾಯಿತು. ಆದರೆ ಭಗವಾನ್ ಬುದ್ಧನನ್ನು ಭೇಟಿಯಾದ ನಂತರ, ಅವನು ಸಂತನಾದನು.
ಜನರನ್ನು ಕೊಂದು ಅವರ ಬೆರಳುಗಳನ್ನು ಕತ್ತರಿಸಿ ಹೂಮಾಲೆಯಂತೆ ಕತ್ತಿಗೆ ಧರಿಸುತ್ತಿದ್ದ 'ಅಂಗುಲಿಮಾಲ'ನ ಕತೆ ಎಲ್ಲರಿಗೂ ತಿಳಿದಿದೆ. ಆದರೆ ಅವನ ಬಾಲ್ಯದ ಹೆಸರು ಅಂಗುಲಿಮಾಲ ಅಲ್ಲ, ಅಥವಾ ಅವನು ಬಾಲ್ಯದಿಂದಲೂ ಹಿಂಸಾತ್ಮಕ ಸ್ವಭಾವದವನಲ್ಲ. ಬದಲಾಗಿ, ಅವನು ದಾರಿ ತಪ್ಪಿದ ವಿದ್ವಾಂಸ ಬ್ರಾಹ್ಮಣನಾಗಿದ್ದನು. ಅವನು ತನ್ನ ಗುರುಗಳ ಶಾಪದಿಂದ ಡಕಾಯಿತನಾದನು. ಈ ಬಗ್ಗೆ ವಿವರ ಹೆಚ್ಚಿನವರಿಗೆ ತಿಳಿದಿಲ್ಲ.
ಅಂಗುಲಿಮಾಲನ ಬಾಲ್ಯದ ಹೆಸರು 'ಅಹಿಂಸಕ'
ಕೋಸಲ ರಾಜನ ಪ್ರಸೇನಜಿತ್ ಆಸ್ಥಾನದ ರಾಜಪುರೋಹಿತನ ಮನೆಯಲ್ಲಿ ಅಹಿಂಸಕ ಜನಿಸಿದ. ಅವನ ಹುಟ್ಟಿನಿಂದ, ಇಡೀ ಮನೆಯಲ್ಲಿ ಸಂತೋಷ ಮಾತ್ರ ಇತ್ತು. ಆದರೆ ಸಂಪ್ರದಾಯದ ಪ್ರಕಾರ, ಮಗುವಿನ ಜಾತಕವನ್ನು ತಯಾರಿಸಲಪ ಎಲ್ಲರೂ ಜ್ಯೋತಿಷಿಯ ಬಳಿಗೆ ಹೋದಾಗ, ಭವಿಷ್ಯವಾಣಿಯನ್ನು ಕೇಳಿ ಆಶ್ಚರ್ಯಚಕಿತರಾದರು. ಮಗು ಹುಟ್ಟಿದ ಅಶುಭ ಯೋಗದ ಕಾರಣದಿಂದ ಆತ ಡಕಾಯಿತನಾಗುತ್ತಾರೆ ಅಥವಾ ಕೊಲೆಗಾರನಾಗುತ್ತಾನೆ ಎಂದು ರಾಜಜ್ಯೋತಿಷಿ ಹೇಳಿದರು. ಇದನ್ನು ಕೇಳಿ ಎಲ್ಲರ ಕೈಕಾಲು ನಡುಗಿತು. ನಂತರ ಕುಟುಂಬ ಸದಸ್ಯರು, ಹಳೆಯ ವಾದಗಳನ್ನು ಬೆಂಬಲಿಸಿ, ಮಗುವಿಗೆ 'ಅಹಿಂಸಕ' ಎಂದು ಏಕೆ ಹೆಸರಿಸಬಾರದು? ಪದೇ ಪದೇ ಈ ಹೆಸರಿನಿಂದ ಕರೆದರೆ ಅವರ ಮನಸ್ಸಿನಲ್ಲಿ ಹಿಂಸೆಯ ಭಾವನೆ ಬರುವುದಿಲ್ಲ ಎಂದು ನಿರ್ಧರಿಸಿ ಆತನಿಗೆ ಅಹಿಂಸಕನೆಂದು ಹೆಸರಿಟ್ಟರು.
ಬುದ್ಧಿವಂತ
ಬಾಲ್ಯದಿಂದಲೂ, ಅಹಿಂಸಕ ಕಲಿಕೆ, ತಿಳುವಳಿಕೆ ಮತ್ತು ಓದುವಿಕೆಯಲ್ಲಿ ಬುದ್ಧಿವಂತನಾಗಿದ್ದನು. ಅವನು ಎಲ್ಲ ವಿಷಯಗಳಲ್ಲಿ ತನ್ನ ಇತರ ಸಹಚರರಿಗಿಂತ ಮುಂದಿದ್ದನು. ಗುರುಗಳು ಮಾತ್ರವಲ್ಲದೆ ಗುರುವಿನ ಪತ್ನಿ ಅಂದರೆ ಗುರುಮಾತೆ ಕೂಡ ಇವನ ಗುಣಗಳಿಗೆ ಮೆಚ್ಚಿ ಮಾತಾಡುತ್ತಿದ್ದರು. ಇದರಿಂದಾಗಿ, ಅಹಿಂಸಕ್ನ ಕೆಲವು ಸಹಪಾಠಿಗಳಿಗೆ ಅಸೂಯೆ ಹುಟ್ಟಿತು.
February 2023 Taurus Horoscope: ವೃಷಭಕ್ಕೆ ಫೆಬ್ರವರಿ ತಿಂಗಳಲ್ಲಿ ಇದೆಯೇ ಯಶಸ್ಸು?
ಒಂದು ದಿನ ಅವನ ಸಹಚರರು ಅಹಿಂಸಕನನ್ನು ಅವಮಾನಿಸಲು ಒಂದು ಉಪಾಯವನ್ನು ಮಾಡಿದರು ಮತ್ತು ಆಚಾರ್ಯರ ಮನಸ್ಸಿನಲ್ಲಿ ಅಹಿಂಸಕನ ಬಗ್ಗೆ ದ್ವೇಷವನ್ನು ಉಂಟುಮಾಡುವ ಸಲುವಾಗಿ, ಅಹಿಂಸಕನು ಗುರುಮಾತೆಯ ಕಡೆಗೆ ಕೆಟ್ಟ ಕಣ್ಣು ಇಟ್ಟಿದ್ದಾನೆ ಎಂದು ಹೇಳಿದರು.
ಇದನ್ನು ಕೇಳಿದ ಆಚಾರ್ಯರಿಗೆ ಕೋಪವನ್ನು ನಿಯಂತ್ರಿಸಲಾಗಲಿಲ್ಲ ಮತ್ತು ಅವರು ಅಹಿಂಸಕನಿಗೆ, 'ನಿನಗೆ ಬ್ರಾಹ್ಮಣನ ಮಗ ಎಂದು ಕರೆಸಿಕೊಳ್ಳುವ ಸಾಮರ್ಥ್ಯವಿಲ್ಲ. ನೂರು ಜನರ ಕೈ ಬೆರಳುಗಳನ್ನು ಕತ್ತರಿಸಿ ತಂದಾಗ ಮಾತ್ರ ನಿನ್ನ ಅಂತಿಮ ಶಿಕ್ಷಣವು ಪೂರ್ಣಗೊಳ್ಳುತ್ತದೆ ಮತ್ತು ಆಗ ಮಾತ್ರ ನಿನಗೆ ದೀಕ್ಷೆ ಸಿಗುತ್ತದೆ' ಎಂದು ಆದೇಶಿಸಿದರು. ಆಚಾರ್ಯರ ಆದೇಶವನ್ನು ಅಹಿಂಸಕ ಪಾಲಿಸಲಾರಂಭಿಸಿದ.
ಡಕಾಯಿತನಾದ..
ಅಹಿಂಸಕನು ಆಚಾರ್ಯರ ಆದೇಶದ ಮೇರೆಗೆ ಜನರನ್ನು ಕೊಂದ ನಂತರ ಅವರ ಬೆರಳುಗಳನ್ನು ಕತ್ತರಿಸಲು ಆರಂಭಿಸಿದ. ಅವನು ಶ್ರಾವಸ್ತಿ ಅರಣ್ಯಕ್ಕೆ ಹೋಗಿ ಜನರನ್ನು ಕೊಲ್ಲಲು ಪ್ರಾರಂಭಿಸಿದ. ಕೊಲೆಗಳನ್ನು ಲೆಕ್ಕ ಹಾಕಲು ಮತ್ತು ಬೆರಳುಗಳು ಕಣ್ಮರೆಯಾಗದಂತೆ, ಮಾಡುವ ಎಲ್ಲ ಕೊಲೆಗಳಲ್ಲಿ ಜನರ ಬೆರಳುಗಳನ್ನು ಕತ್ತರಿಸಿ ಮಾಲೆಗಳಲ್ಲಿ ಹಾಕಿಕೊಳ್ಳುತ್ತಿದ್ದ. ಆದುದರಿಂದ ಇವರಿಗೆ ಅಂಗುಲಿಮಾಲ ಎಂಬ ಹೆಸರು ಬಂತು.
ಗೌತಮ ಬುದ್ಧನ ಭೇಟಿ
ಶ್ರಾವಸ್ತಿಯಲ್ಲಿ ಅಂಗುಲಿಮಾಲನ ಭಯವಿದ್ದಾಗ ಗೌತಮ ಬುದ್ಧನು ಇಲ್ಲಿಗೆ ಬಂದ. ಅಂಗುಲಿಮಾಲನ ಭಯೋತ್ಪಾದನೆಯ ಬಗ್ಗೆ ಜನರು ಗೌತಮ ಬುದ್ಧನಿಗೆ ತಿಳಿಸಿದರು. ಆದರೆ ಬುದ್ಧ ಹೆದರದೆ ಮೌನವಾಗಿ ಕಾಡಿನ ಕಡೆಗೆ ಹೋದ. ಆಗ ಹಿಂದಿನಿಂದ ‘ನಿಲ್ಲು, ಎಲ್ಲಿಗೆ ಹೋಗುತ್ತಿದ್ದೀ?’ ಎಂಬ ಧ್ವನಿ ಕೇಳಿಸಿತು.
ವಾರ ಭವಿಷ್ಯ: ಕರ್ಕಾಟಕಕ್ಕೆ ಅನುಕೂಲಕರ ವಾರ, ಸಿಗಲಿದೆ ಯಶಸ್ಸಿನ ರುಚಿ
ಬುದ್ಧನು ಹಿಂತಿರುಗಿ ನೋಡಿದನು, ಅಂಗುಲಿಮಾಲ ನಿಂತಿದ್ದನು ಮತ್ತು ಸತ್ತವರ ಬೆರಳುಗಳ ಹಾರವು ಅವನ ಕುತ್ತಿಗೆಯಲ್ಲಿ ನೇತಾಡುತ್ತಿತ್ತು. ಅವನ ಭಯಾನಕ ರೂಪವನ್ನು ನೋಡಿದ ನಂತರವೂ ಬುದ್ಧನು ಶಾಂತ ಮತ್ತು ಸರಳನಾಗಿದ್ದನು. ಬುದ್ಧನು ಮಧುರವಾದ ಧ್ವನಿಯಲ್ಲಿ ಹೇಳಿದನು - 'ನಾನು ನಿಂತಿದ್ದೇನೆ, ನೀನು ಯಾವಾಗ ನಿಲ್ಲಿಸುತ್ತೀ?'
ಬುದ್ಧನ ನಿರ್ಭಯತೆ ಮತ್ತು ಅವನ ಮುಖದ ತೀಕ್ಷ್ಣತೆಯನ್ನು ನೋಡಿ ಅಂಗುಲಿಮಾಲ ಹೇಳಿದನು - 'ಓ ಸನ್ಯಾಸಿ! ನಿನಗೆ ನನಗೆ ಭಯವಿಲ್ಲವೇ? ನೋಡು, ನಾನು ಜನರನ್ನು ಕೊಂದು ಅವರ ಬೆರಳುಗಳ ಮಾಲೆಯನ್ನು ಧರಿಸಿದ್ದೇನೆ.'
ಬುದ್ಧನು ಹೇಳಿದನು - 'ನಿನಗೆ ಏಕೆ ಭಯ ಪಡಬೇಕು, ನಿಜವಾಗಿಯೂ ಶಕ್ತಿಶಾಲಿಯಾದವನಿಗೆ ಹೆದರುತ್ತೇನೆ.'
ಆಗ ಅಂಗುಲಿಮಾಲನು - 'ನಾನು ಹತ್ತು ಜನರ ತಲೆಯನ್ನು ಏಕಕಾಲದಲ್ಲಿ ಕತ್ತರಿಸಬಲ್ಲೆ' ಎಂದನು.
ಬುದ್ಧ ಹೇಳಿದ - 'ನೀನು ನಿಜವಾಗಿಯೂ ಬಲಶಾಲಿಯಾಗಿದ್ದರೆ, ಹೋಗಿ ಮರದಿಂದ ಹತ್ತು ಎಲೆಗಳನ್ನು ಕಿತ್ತುಬಾ.' ಅಂಗುಲಿಮಾಲ ತಕ್ಷಣ ಮರದಿಂದ ಎಲೆಗಳನ್ನು ಕಿತ್ತು ಹೇಳಿದನು- 'ಅದರಲ್ಲಿ ಏನಿದೆ ಅಂತ ಹೇಳಿದರೆ ಇಡೀ ಮರವನ್ನೇ ಕಿತ್ತು ಹಾಕುತ್ತೇನೆ.'
ಬುದ್ಧ ಹೇಳಿದ- 'ಮರವನ್ನು ಕಿತ್ತು ಹಾಕುವ ಅಗತ್ಯವಿಲ್ಲ. ನೀನು ನಿಜವಾಗಿಯೂ ಬಲಶಾಲಿಯಾಗಿದ್ದರೆ, ಈ ಮುರಿದ ಎಲೆಗಳನ್ನು ಮತ್ತೆ ಮರಕ್ಕೆ ಸೇರಿಸು.
ಆಗ ಅಂಗುಲಿಮಾಲ ಹೇಳಿದರ - 'ಮುರಿದ ಎಲೆಗಳು ಮತ್ತೆ ಹೇಗೆ ಸೇರುತ್ತವೆ?'
February Planet Transit: 4 ರಾಶಿಗಳಿಗೆ ನೋ ವರಿ ತಿಂಗಳು ಫೆಬ್ರವರಿ
ಬುದ್ಧನು ಬಹಳ ಸರಳವಾಗಿ ಹೇಳಿದನು - 'ನೀನು ಸೇರಿಸಲು ಸಾಧ್ಯವಾಗದ ವಸ್ತುವನ್ನು ಮುರಿಯುವ ಹಕ್ಕು ನಿನಗೆ ಹೇಗೆ ಸಿಕ್ಕಿತು? ಮನುಷ್ಯನ ತಲೆಯನ್ನು ಸೇರಿಸಲು ಆಗದಿದ್ದರೆ ಅದನ್ನು ಕಡಿಯುವುದರಲ್ಲಿ ಎಂತಹ ಧೈರ್ಯವಿದೆ?'
ಇದನ್ನು ಕೇಳಿದ ಅಂಗುಲಿಮಾಲನು ಬೆಚ್ಚಿಬಿದ್ದನು ಮತ್ತು ಬುದ್ಧನಿಗೆ, 'ನನ್ನನ್ನು ನಿನ್ನ ಆಶ್ರಮಕ್ಕೆ ಕರೆದುಕೊಂಡು ಹೋಗು' ಹೀಗೆ ಹೇಳುತ್ತಾ ಅಂಗುಲಿಮಾಲನು ತನ್ನ ಕತ್ತಿಯನ್ನು ನದಿಗೆ ಎಸೆದು ಬುದ್ಧನ ಪಾದಕ್ಕೆ ಬಿದ್ದನು. ಭಗವಾನ್ ಬುದ್ಧನು ಅವನನ್ನು ಭಿಕ್ಷುವಾಗಿ ಸೇರಿಸಿಕೊಂಡನು.