ಶಿವಯ್ಯ ಮುತ್ಯಾರ ಭವಿಷ್ಯ ಕೇಳಲು ತುದಿಗಾಲಲ್ಲಿ ನಿಂತ ರಾಜಕಾರಣಿಗಳು
ಕತ್ನಳ್ಳಿಯ 5 ದಿನಗಳ ಜಾತ್ರೆಗೆ ಭಕ್ತರ ತಯಾರಿ
ಗುರು ಚಕ್ರವರ್ತಿ ಸದಾಶಿವ ಅಜ್ಜನ ಯುಗಾದಿ ಜಾತ್ರೆಯಲ್ಲಿ ನೂರೆಂಟು ವಿಶೇಷ
ಷಡಕ್ಷರಿ ಕಂಪೂನವರ್, ವಿಜಯಪುರ
ಕೆಲ ಮಠಗಳಲ್ಲಿ, ಧಾರ್ಮಿಕ ಕ್ಷೇತ್ರಗಳಲ್ಲಿ ನುಡಿಯೋ ಕಾರಣಿಕ, ಭವಿಷ್ಯಗಳಿಗೆ ತಮ್ಮದೆ ಆದ ಮಹತ್ವವಿದೆ. ಇಂಥ ಕ್ಷೇತ್ರಗಳಲ್ಲಿ ನುಡಿಯೋ ಭವಿಷ್ಯಗಳು, ಕಾರಣಿಕಗಳನ್ನ ಜನರು ಗಾಢವಾಗಿ ನಂಬ್ತಾರೆ. ಕೋಡಿಹಳ್ಳಿ ಮಠದ ತಾಳೆಗರೆ ಭವಿಷ್ಯ, ಮೈಲಾರ ಕ್ಷೇತ್ರದ ಕಾರ್ಣಿಕ, ದೇವರಗುಡ್ಡದ ಕಾರ್ಣಿಕಗಳಿಗೆ ತಮ್ಮದೆ ಆದ ಮಹತ್ವ ಇದೆ. ವರ್ಷಕ್ಕೊಮ್ಮೆ ನುಡಿಯೋ ಭವಿಷ್ಯಗಳನ್ನ ಕೇಳಲು ಭಕ್ತಗಣ ಕಾತುರದಿಂದ ಕಾಯುತ್ತಿರುತ್ತಾರೆ.
undefined
ವಿಜಯಪುರ ತಾಲೂಕಿನ ಕತ್ನಳ್ಳಿ ಗ್ರಾಮದ ಚಕ್ರವರ್ತಿ ಸದಾಶಿವ ಮಠ(Chakravarti Sadashiva Mata)ದಲ್ಲಿ ನುಡಿಯೋ ಭವಿಷ್ಯ(prediction)ವು ತನ್ನದೆಯಾದ ಮಹತ್ವ ಹೊಂದಿದೆ. ಬಬಲಾದಿ ಮೂಲ ಮಠ(Babaladi mutt)ದಲ್ಲಿ ಶಿವರಾತ್ರಿಯಂದು ಭವಿಷ್ಯ ನುಡಿದರೆ, ಇಲ್ಲಿ ಯುಗಾದಿ(Ugadi)ಯಂದು ಭವಿಷ್ಯ ನುಡಿಯೋದು ವಾಡಿಕೆ. ಯುಗಾದಿಯಂದು ನಡೆಯುವ ಕತ್ನಳ್ಳಿ ಸದಾಶಿವ ಅಜ್ಜನ ಜಾತ್ರೆಯ ದಿನವೇ ಇಲ್ಲಿ ಶಿವಯ್ಯ ಸ್ವಾಮೀಗಳು ಮುಂದಿನ ಒಂದು ವರ್ಷದ ಭವಿಷ್ಯವನ್ನ ನುಡಿಯುತ್ತಾರೆ. ಮಳೆ-ಬೆಳೆ, ಕಷ್ಟ ಕಾರ್ಪಣ್ಯಗಳ ಬಗ್ಗೆ ಇಲ್ಲಿ ನಿಖರವಾಗಿ ಭವಿಷ್ಯ ಹೇಳಲಾಗುತ್ತೆ.. ವಿಶೇಷ ಅಂದ್ರೆ ಇಲ್ಲಿ ದೇಶದ ರಾಜಕಾರಣದ ಬಗ್ಗೆ ನುಡಿಯೋ ಭವಿಷ್ಯ..
ಹುಡುಗಿಗೆ ವರನ ವೇಷ ಹಾಕಿ ಹರಕೆ ಸಲ್ಲಿಕೆ, ಹೀಗೆ ಮಾಡಿದ್ರೆ ಆರೋಗ್ಯ ಭಾಗ್ಯ!
ರಾಜಕಾರಣಿಗಳಿಗೂ(Politicians) ಕತ್ನಳ್ಳಿ ಭವಿಷ್ಯದ ಮೇಲೆ ಕಣ್ಣು!
ವಿಶೇಷ ಅಂದ್ರೆ ಹೊಳೆ ಬಬಲಾದಿ ಮೂಲ ಮಠದಲ್ಲಿ ಜಗತ್ತಿನ ಆಗು ಹೋಗು, ಕೆಡಕುಗಳ ಬಗ್ಗೆ 300 ವರ್ಷಗಳ ಹಿಂದೆ ಬರೆದಿಟ್ಟ ಮುಂಡಗಿ ಪದಗಳನ್ನ ವಿಶ್ಲೇಷಣೆ ಮಾಡಿ ಭವಿಷ್ಯ ಹೇಳಲಾಗುತ್ತೆ. ಆದ್ರೆ ಕತ್ನಳ್ಳಿ ಸದಾಶಿವ ಅಜ್ಜನ ಮಠದಲ್ಲಿ ಮಾತಿನಲ್ಲೆ ಭವಿಷ್ಯ ಹೇಳಲಾಗುತ್ತೆ. ಯುಗಾದಿಯಂದು ಕತ್ನಳ್ಳಿ ಮಠದ ಶಿವಯ್ಯ ಸ್ವಾಮಿಗಳು ಕಟ್ಟೆಯ ಮೇಲೆ ನಿಂತು ಹೇಳುವ ಮಾತುಗಳನ್ನೆ ಇಲ್ಲಿ ಭವಿಷ್ಯವಾಗಿ ಪರಿಗಣಿಸಲಾಗುತ್ತೆ. ರಾಜ್ಯ ರಾಜಕಾರಣ, ದೇಶದ ರಾಜಕೀಯ, ರಾಜಕಾರಣಿಗಳ ಏಳು-ಬೀಳುಗಳ ಬಗ್ಗೆ ಇಲ್ಲಿ ನುಡಿಯೋ ಭವಿಷ್ಯದ ಬಗ್ಗೆ ಜನರಲ್ಲಿ ಕುತೂಹಲ ಇರುತ್ತೆ. ಅದ್ರಲ್ಲೂ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ ಸೇರಿ ಹಲವು ಜಿಲ್ಲೆಗಳ ರಾಜಕಾರಣಿಗಳು, ರಾಜ್ಯದ ಪ್ರತಿಷ್ಟಿತ ರಾಜಕೀಯ ನಾಯಕರು ಇಲ್ಲಿ ನುಡಿಯೋ ಭವಿಷ್ಯವನ್ನ ಆಲಿಸೋಕೆ ತುದಿಗಾಲ ಮೇಲೆ ನಿಂತಿರುತ್ತಾರೆ..
ಭವಿಷ್ಯಗಳಾಗಿವೆ ಸತ್ಯ..!
ಇನ್ನು ಕಾಲಜ್ಞಾನಿ ಸದಾಶಿವ ಅಜ್ಜನವರ ಶಾಖಾ ಮಠವಾಗಿರುವ ಕತ್ನಳ್ಳಿ ಮಠದಲ್ಲಿ ರಾಜಕಾರಣದ ಬಗ್ಗೆ ನುಡಿದ ಭವಿಷ್ಯಗಳು ಸತ್ಯವಾಗಿವೆ. ಚಹಾ ಮಾರುವಾತ ದೇಶದ ಚುಕ್ಕಾಣಿ ಹಿಡಿಯುತ್ತಾನೆ ಎಂದು ಇಲ್ಲಿ ದಶಕಗಳ ಹಿಂದೆಯೇ ಶಿವಯ್ಯ ಸ್ವಾಮಿಗಳು ಭವಿಷ್ಯ ನುಡಿದಿದ್ದರು. ಚಹಾ ಜೊತೆಗೆ ಕಪ್ಪು-ಬಸಿ ಸೇರುತ್ತೆ ಎನ್ನುವ ಮೂಲಕ ಮೋದಿ-ಯೋಗಿ ಜೋಡಿ ಕೂಡುವ ಬಗ್ಗೆ ಮೊದಲೇ ಹೇಳಿದ್ದರು. ಇನ್ನು ರಾಜ್ಯ ರಾಜಕಾರಣದ ಬಗ್ಗೆ ಆನೆ ಮೇಲೆ ಅಂಬಾರಿ, ಅಂಬಾರಿ ಒಳಗೆ ಕಮಲ ಎಂದು ಭವಿಷ್ಯ ನುಡಿಯಲಾಗಿತ್ತು. ಬಳಿಕ ಅದೆ ಮೊದಲ ಬಾರಿಗೆ ಬಿಜೆಪಿ ಗೆದ್ದು ಯಡಿಯೂರಪ್ಪನವರು ಸಿಎಂ ಕೂಡ ಆಗಿದ್ದರು. ಆನೆ ಮೇಲೆ ಆಡು (ಮೇಕೆ) ಬಿದ್ದರೆ ಆನೆಯೆ ಪುಡಿ ಎನ್ನುವ ಮೂಲಕ ಪ್ರತಿಷ್ಟಿತ ರಾಜಕಾರಣಿಗಳೆ ಚುನಾವಣೆಯಲ್ಲಿ ಸೋಲಲಿದ್ದಾರೆ ಎನ್ನುವುದನ್ನ ಮೊದಲೇ ಇಲ್ಲಿ ಶಿವಯ್ಯ ಸ್ವಾಮೀಜಿ ಭವಿಷ್ಯದ ಮೂಲಕ ನುಡಿದಿದ್ದರು. ಇನ್ನು ವಿಶೇಷ ಅಂದ್ರೆ ಇದೆ ಕತ್ನಳ್ಳಿ ಕ್ಷೇತ್ರದಲ್ಲಿ ಆಕಾಶಕ್ಕೆ ಔಷಧಿ ಹೊಡೆಯೋ ಟೈಂ ಬರಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆ ಬರಗಾಲ ಬಿದ್ದಾಗ ಸರ್ಕಾರ ಮೋಡ ಬಿತ್ತನೆ ನಡೆಸಿತ್ತು. ಕೊರೊನಾ ಒಕ್ಕರಿಸುವ ಮೊದಲೆ ಇಲ್ಲಿ ವೈದ್ಯರಿಗೆ ತಲೆ ನೋವಾಗೋ ರೋಗ ಬರುತ್ತೆ ಎಂದು ಭವಿಷ್ಯ ಹೇಳಿದ್ದರು ಶಿವಯ್ಯ ಸ್ವಾಮೀಜಿ..
Ugadi 2022: ಬದುಕಿನ ಪಾಠ ಹೇಳುವ ಬೇವು ಬೆಲ್ಲ.. ಈ ಕಾರಣಕ್ಕೆ ಸೇವಿಸಿ
5 ದಿನಗಳ ಜಾತ್ರಾ ಮಹೋತ್ಸವ(Fare)
ಯುಗಾದಿಯಂದು ಇಲ್ಲಿ ಭವಿಷ್ಯ ನುಡಿದರೆ, ಅದರ ಹಿಂದಿನ ದಿನ ಕತ್ನಳ್ಳಿ ಗುರುಚಕ್ರವರ್ತಿ ಮಠದಲ್ಲಿ 5 ದಿನಗಳ ಜಾತ್ರೆಗೆ ಚಾಲನೆ ಸಿಗುತ್ತದೆ. ಏಪ್ರಿಲ್ 1 ರಂದು ಕತ್ನಳ್ಳಿ ಮಠದ ಶಿವಯ್ಯ ಸ್ವಾಮಿಗಳು ಜಾತ್ರೆಗೆ ಚಾಲನೆ ನೀಡುತ್ತಾರೆ. ಜಾನುವಾರು ಜಾತ್ರೆ, ಕೆಸರು ಗದ್ದೆ ಓಟ, ಕೃಷಿ ಮೇಳದ ಉದ್ಘಾಟನೆ ನಡೆಯಲಿದೆ. ದಿನಾಂಕ 2 ರಂದು ಕುಂಭಾಭಿಷೇಕ, ರಸಪ್ರಶ್ನೆ ಸ್ಪರ್ಧೆ, ಶ್ರೀ ಚಿದಂಬರ ಮಹಾಗುರು ಪುರಾಣಗಳು ನಡೆಯಲಿವೆ. ದಿನಾಂಕ 3 ರಂದು ಪಲ್ಲಕ್ಕಿ ಉತ್ಸವ, ಆರೆತ್ತಿನ ನೇಗಿಲು ಜಗ್ಗುವ ಸ್ಪರ್ಧೆ, ರಥೋತ್ಸವ ನಡೆಯಲಿವೆ. ದಿನಾಂಕ 4 ರಂದು ಸರಳ ಸಾಮೂಹಿನ ವಿವಾಹ, ಮಹಾಪ್ರಸಾದ, ನಗೆಹಬ್ಬ ಕಾರ್ಯಕ್ರಮಗಳು ಜರುಗುವವು. ದಿನಾಂಕ 5 ರಂದು ಭಾರ ಎತ್ತುವ ಸ್ಪರ್ಧೆ, ಜಂಗಿ ನಿಕಾಲಿ ಕುಸ್ತಿ, ಚಿತ್ರ-ವಿಚಿತ್ರ ಮದ್ದು ಸುಡು ಕಾರ್ಯಕ್ರಮಗಳು ನಡೆಯಲಿವೆ. ಅದೆ ದಿನ 5 ದಿನಗಳ ಜಾತ್ರಾ ಮಹೋತ್ಸವ ಕೊನೆಯಾಗಲಿದೆ..