ಅಯೋಧ್ಯೆ ರಾಮಲಾಲಾ ಪ್ರಾಣ ಪ್ರತಿಷ್ಠೆಗೂ ಮುನ್ನವೇ ವಿಶೇಷ ಅನುಷ್ಠಾನ ಶುರು ಮಾಡಿದ ಮೋದಿ

By Suvarna NewsFirst Published Jan 12, 2024, 12:57 PM IST
Highlights

ಅಯೋಧ್ಯೆಯಲ್ಲಿ ರಾಮನ ಜಪ ಕೇಳಿ ಬರ್ತಿದೆ. ಇಡೀ ಭಾರತವೇ ರಾಮನ ಪ್ರಾರ್ಥನೆಯಲ್ಲಿ ತಲ್ಲೀನವಾಗ್ತಿದೆ. ಇನ್ನು ಕೆಲವೇ ದಿನಗಳಲ್ಲಿ ರಾಮಲಾಲಾ ಪ್ರಾಣ ಪ್ರತಿಷ್ಠಾ ಕಾರ್ಯ ನಡೆಯುವ ಕಾರಣ ನರೇಂದ್ರ ಮೋದಿ ಕೂಡ ಧಾರ್ಮಿಕ ನಿಯಮಗಳ ಪಾಲನೆ ಶುರು ಮಾಡಿದ್ದಾರೆ.
 

ವಿಶ್ವದ ಪ್ರತಿಯೊಬ್ಬ ಹಿಂದುವೂ ರಾಮನ ಜಪದಲ್ಲಿ ತಲ್ಲೀನರಾಗುವ ಕಾಲ ಇದು. ಅಯೋಧ್ಯೆಯಲ್ಲಿ ಐತಿಹಾಸಿಕ ಘಟನೆಯೊಂದು ನಡೆಯಲಿದೆ. ಇದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ. ಅಯೋಧ್ಯೆಯಲ್ಲಿ ರಾಮಲಾಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕೇವಲ 11 ದಿನಗಳು ಮಾತ್ರ ಉಳಿದಿವೆ.  ಧರ್ಮಗ್ರಂಥಗಳಲ್ಲಿ  ದೇವತೆಯ ವಿಗ್ರಹದ ಪ್ರತಿಷ್ಠಾಪನೆಯು ವಿವರವಾದ ಮತ್ತು ವ್ಯಾಪಕವಾದ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸವಿಸ್ತಾರವಾದ ನಿಯಮಗಳನ್ನು ನೀಡಲಾಗಿದ್ದು, ಇದನ್ನು ಕೆಲ ದಿನಗಳ ಮೊದಲೇ ಪಾಲಿಸಲು ಶುರು ಮಾಡಬೇಕು. 

ರಾಮ (Ram) ನಿಗೆ ತಮ್ಮನ್ನು ತಾವು ಸಂಪೂರ್ಣ ಅರ್ಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಾಣ ಪ್ರತಿಷ್ಠಾ ಕಾರ್ಯಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಆಚರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. 11 ದಿನಗಳ ಕಾಲ ಯಮ-ನಿಯಮವನ್ನು ಆಚರಿಸಲು ಮುಂದಾಗಿದ್ದಾರೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಎಂದ್ರೆ ವಿಗ್ರಹಕ್ಕೆ ದೈವಿಕ ಶಕ್ತಿಯನ್ನು ತುಂಬುವುದಾಗಿದೆ. ಇದಕ್ಕೆ ಸಂಬಂಧಿಸಿದವರು ಉಪವಾಸ ಸೇರಿದಂತೆ ಕೆಲ ನಿಯಮ ಪಾಲಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಗುರುವಾರ, ರಾಮಲಾಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಡಿಯೋ ಒಂದನ್ನು ಜನರ ಮುಂದಿಟ್ಟಿದ್ದಾರೆ.  

Latest Videos

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇಬ್ಬರು ಶಂಕರಾಚಾರ್ಯರ ವಿರೋಧ: ಕಾರ್ಯಕ್ರಮಕ್ಕೆ ಪುರಿ, ಬದರಿ ಸ್ವಾಮೀಜಿ ಗೈರು

ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಏನಿದೆ? :  ರಾಮನಿಗೆ ಜೈಕಾರ ಹಾಕುತ್ತಲೇ ತಮ್ಮ ಮಾತು ಶುರು ಮಾಡಿದ ನರೇಂದ್ರ ಮೋದಿ, ಅಯೋಧ್ಯೆಯಲ್ಲಿ ನಡೆಯುವ ರಾಮಲಾಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಅವರನ್ನು ಎಷ್ಟು ಭಾವುಕಗೊಳಿಸಿದೆ, ಆಧ್ಯಾತ್ಮಿಕಗೊಳಿಸಿದೆ ಎಂಬುದನ್ನು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಲಾಲಾ ಪ್ರತಿಷ್ಠಾಪನೆಗೆ ಕೇವಲ 11 ದಿನಗಳು ಮಾತ್ರ ಉಳಿದಿವೆ. ಈ ಸುಸಂದರ್ಭಕ್ಕೆ ನಾನೂ ಸಹ ಸಾಕ್ಷಿಯಾಗಿರುವುದು ನನ್ನ ಅದೃಷ್ಟ. ಜೀವನದ ಸಮರ್ಪಣೆಯ ಸಮಯದಲ್ಲಿ ಭಾರತದ ಎಲ್ಲಾ ಜನರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು ಸಾಧನವನ್ನಾಗಿ ಮಾಡಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ 11 ದಿನಗಳ ಕಾಲ ವಿಶೇಷ ಆಚರಣೆ ಆರಂಭಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಕೆಲವು ತಪಸ್ವಿಗಳು ಮತ್ತು ಆಧ್ಯಾತ್ಮಿಕ ಯಾತ್ರೆಯ ಮಹಾಪುರುಷರಿಂದ ನನಗೆ ದೊರೆತ ಮಾರ್ಗದರ್ಶನ ಮತ್ತು ಅವರು ಸೂಚಿಸಿದ ನಿಯಮಗಳ ಪ್ರಕಾರ, ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ ಎಂದ ಅವರು, ನನ್ನ ಕಾರ್ಯದಲ್ಲಿ ಯಾವುದೇ ತೊಡಕಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇದಕ್ಕೆ ನಾನು ಎಲ್ಲ ಜನರ ಆಶೀರ್ವಾದವನ್ನು ಕೇಳುತ್ತಿದ್ದೇನೆ. ಎಲ್ಲರೂ ತಮ್ಮ ಶಬ್ಧಗಳಲ್ಲಿ ನನಗೆ ಆಶೀರ್ವಾದ ನೀಡಿ. ನಿಮ್ಮ ಪ್ರತಿ ಶಬ್ಧ ನನಗೆ ಮಂತ್ರ. ಅದು ನನಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದಿದ್ದಾರೆ.

ಬೌದ್ಧರ ನಾಡಾದ ಥೈಲ್ಯಾಂಡ್‌ನ ರಾಜರ ಹೆಸರೆಲ್ಲ ರಾಮನೇ! ಇಲ್ಲಿನ ಆಯುತಾಯಕ್ಕೂ ಅಯೋಧ್ಯೆಗೂ ಉಂಟು ನಂಟು!

ಈ ಸಮಯದಲ್ಲಿ, ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನ ಮಾಡಿದ್ದೇನೆ ಎಂದ ಮೋದಿ, ಎಲ್ಲೆಡೆ ಶ್ರೀರಾಮನ ಭಕ್ತಿಯ ಅದ್ಭುತ ವಾತಾವರಣವಿದೆ. ದೇಶದ ಪ್ರತಿಯೊಬ್ಬರೂ ಜನವರಿ 22 ಕ್ಕೆ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಲಾಲಾ ಪಟ್ಟಾಭಿಷೇಕಕ್ಕೆ ಕೇವಲ 11 ದಿನಗಳು ಮಾತ್ರ ಉಳಿದಿವೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಅಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ. ನಾನು ಭಕ್ತಿಯ ವಿಭಿನ್ನ ಭಾವನೆಯನ್ನು ಅನುಭವಿಸುತ್ತಿದ್ದೇನೆ ಎಂದಿದ್ದಾರೆ. 

ದೇವರನ್ನು ಆರಾಧಿಸಲು, ನಮ್ಮಲ್ಲಿ ದೈವಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು ಎಂದು ನಮ್ಮ ಗ್ರಂಥಗಳಲ್ಲಿ ಹೇಳಲಾಗಿದೆ.  ಇದಕ್ಕಾಗಿ ಉಪವಾಸ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಧರ್ಮಗ್ರಂಥಗಳಲ್ಲಿ ನಿಗದಿಪಡಿಸಲಾಗಿದೆ ಎಂದಿದ್ದಾರೆ. ತಮ್ಮ 11 ದಿನಗಳ ಆಚರಣೆಯನ್ನು ನಾಸಿಕ್-ಧಾಮ ಪಂಚವಟಿಯಿಂದ ಪ್ರಾರಂಭಿಸುತ್ತಿರುವುದು ನನ್ನ ಅದೃಷ್ಟ ಎಂದ ಮೋದಿ, ಪಂಚವಟಿಯು ಭಗವಾನ್ ರಾಮನು ಸಾಕಷ್ಟು ಸಮಯವನ್ನು ಕಳೆದ ಪುಣ್ಯಭೂಮಿಯಾಗಿದೆ ಎಂದರು. 

ಸ್ವಾಮಿ ವಿವೇಕಾನಂದರನ್ನು ನೆನೆದ ನರೇಂದ್ರ ಮೋದಿ, ಮಾತಾ ಜೀಜಾಬಾಯಿಯವರನ್ನು ನೆನಪು ಮಾಡಿಕೊಂಡರು. ಮಾತಾ ಜೀಜಾಬಾಯಿ ಅವರನ್ನು ನೆನಪಿಸಿಕೊಳ್ಳುವಾಗ ಸಹಜವಾಗಿಯೇ ನನ್ನ ತಾಯಿಯನ್ನೂ ನೆನಪಿಸಿಕೊಳ್ಳುತ್ತೇನೆ ಎಂದ ಪ್ರಧಾನಿ, ನನ್ನ ತಾಯಿ ಜೀವನದ ಕೊನೆಯವರೆಗೂ ಜಪಮಾಲೆಯನ್ನು ಜಪಿಸುವಾಗ ಸೀತಾ ಮತ್ತು ರಾಮನ ಹೆಸರನ್ನು ಜಪಿಸುತ್ತಿದ್ದರು ಎಂದು ಮೋದಿ ಹೇಳಿದ್ದಾರೆ. 

प्राण-प्रतिष्ठा से पूर्व 11 दिवसीय व्रत अनुष्ठान का पालन मेरा सौभाग्य है। मैं देश-विदेश से मिल रहे आशीर्वाद से अभिभूत हूं। https://t.co/JGk7CYAOxe pic.twitter.com/BGv4hmcvY1

— Narendra Modi (@narendramodi)
click me!