
ಪಿತೃ ಪಕ್ಷ (pitru-paksha)ದಲ್ಲಿ ಪೂರ್ವಜರಿಗೆ ತರ್ಪಣ (Tarpana) ಬಿಟ್ಟು, ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷ ಹದಿನೈದು ದಿನಗಳ ಕಾಲ ಇರುತ್ತದೆ. ಈ ಬಾರಿ ಸೆಪ್ಟೆಂಬರ್ 7 ರಿಂದ ಪಿತೃಪಕ್ಷ ಆರಂಭವಾಗಲಿದೆ. ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರ್ತಾರೆ, ಮಕ್ಕಳನ್ನು ಹರಸ್ತಾರೆ ಎಂಬ ನಂಬಿಕೆ ಇದೆ. ಈ 15 ದಿನಗಳ ಕಾಲ ಪೂರ್ವಜರಿಗೆ ಪ್ರಿಯವಾಗುವಂತೆ ನಡೆದುಕೊಂಡಲ್ಲಿ ಎಲ್ಲ ಇಚ್ಛೆಗಳು ಈಡೇರುತ್ತವೆ. ದೇವರಷ್ಟೆ ಹಿಂದೂ ಧರ್ಮದಲ್ಲಿ ಪೂರ್ವಜರಿಗೆ ಮನ್ನಣೆ ನೀಡಲಾಗುತ್ತದೆ. ಮಹಾಲಯ ಅಮವಾಸ್ಯೆಯಂದು ಪೂರ್ವಜರಿಗೆ ತರ್ಪಣ ನೀಡಿದ್ರೆ ಹೆಚ್ಚು ಉತ್ತಮ ಎಂದು ನಂಬಲಾಗಿದೆ. ಪಿತೃ ಪಕ್ಷದಲ್ಲಿ ಹಿರಿಯರ ಪೂಜೆ, ಶಾದ್ಧದ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಆದ್ರೆ ಇನ್ನೂ ಪ್ರಪಂಚ ಕಂಡಿರದ, ಹೊಟ್ಟೆಯಲ್ಲೇ ಸಾವನ್ನಪ್ಪಿದ ಮಕ್ಕಳಿಗೂ ಶ್ರಾದ್ಧ ಮಾಡ್ಬೇಕ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಗರ್ಭಿಣಿ ಮಹಿಳೆಯರು ಚಂದ್ರಗ್ರಹಣದ ದಿನ ಈ ವಸ್ತುಗಳನ್ನು ಮುಟ್ಟಲೇ ಬಾರದು
ಮಲೀನ ಷೋಡಶಿ ಎಂದ್ರೇನು? : ಹಿಂದೂ ಧರ್ಮದ ಪ್ರಕಾರ, ಮರಣಾನಂತರದ ಆಚರಣೆಯನ್ನು ಮಲೀನ ಷೋಡಶಿ ಎನ್ನಲಾಗುತ್ತದೆ. ಮೃತರ ಮೊದಲ ಪಿಂಡದಾನವನ್ನು ಮರಣದ ಸ್ಥಳದಲ್ಲಿ, ಎರಡನೆಯದನ್ನು ಅವರ ದ್ವಾರದಲ್ಲಿ, ಮೂರನೆಯದನ್ನು ಶ್ಮಶಾನದ ಅರ್ಧದಾರಿಯಲ್ಲಿ, ನಾಲ್ಕನೆಯದನ್ನು ಚಿತೆಯ ಬಳಿ ಮತ್ತು ಐದನೆಯದನ್ನು ಮೃತ ದೇಹದ ಬಳಿ ಮತ್ತು ಆರನೆಯದನ್ನು ಚಿತಾಭಸ್ಮವನ್ನು ಸಂಗ್ರಹಿಸಿದ ನಂತರ ಮಾಡಲಾಗುತ್ತದೆ. ಮರಣದ ಮೊದಲ ದಿನದಿಂದ ಹತ್ತನೇ ದಿನದವರೆಗೆ, ಪ್ರತಿದಿನ ಹತ್ತು ಪಿಂಡಗಳನ್ನು ಒಂದೊಂದಾಗಿ ನೀಡಲಾಗುತ್ತದೆ. ಈ ಹದಿನಾರು ಶ್ರಾದ್ಧಗಳನ್ನು ಪ್ರಥಮ ಷೋಡಶಿ ಅಥವಾ ಮಲೀನ್ ಷೋಡಶಿ ಎಂದು ಕರೆಯಲಾಗುತ್ತದೆ.
ಎಷ್ಟು ವಯಸ್ಸಿನ ಮಕ್ಕಳಿಗೆ ಶ್ರಾದ್ಧ ಮಾಡಲಾಗುವುದಿಲ್ಲ? : ಜನನದ ನಂತ್ರ ಮಗು ಸಾವನ್ನಪ್ಪಿದ್ರೂ ಹಿಂದೂ ಧರ್ಮದ ಪ್ರಕಾರ ಶ್ರಾದ್ಧ ಮಾಡುವುದಿಲ್ಲ. ಸಾವಿನ ಸಮಯದಲ್ಲಿ ಮಗುವಿನ ವಯಸ್ಸನ್ನು ನೋಡಬೇಕಾಗುತ್ತದೆ. ಎರಡು ವರ್ಷದೊಳಗಿನ ಮಕ್ಕಳು ಸಾವನ್ನಪ್ಪಿದ್ರೆ ಅವರ ಶ್ರಾದ್ಧ ಮಾಡುವುದಿಲ್ಲ. ಅವರಿಗೆ ಮಲೀನ ಷೋಡಶಿ ಇದೆ. ಸಾಂಪ್ರದಾಯಿಕ ಶ್ರಾದ್ಧ ವಿಧಿಗಳನ್ನು ನಡೆಸದ ಕಾರಣ ತರ್ಪಣ ಬಿಡಲಾಗುತ್ತದೆ. ಈ ಮಕ್ಕಳಿಗೆ ಶ್ರಾದ್ಧ ಮತ್ತು ವಾರ್ಷಿಕ ಆಚರಣೆ ಇರೋದಿಲ್ಲ.
ಸೆಪ್ಟೆಂಬರ್ ತಿಂಗಳು ಈ ರಾಶಿಗೆ ಲಕ್ಕಿ, ತಿಂಗಳಾದ್ಯಂತ ಭರ್ಜರಿ ಅದೃಷ್ಟ
ಈ ವಯಸ್ಸಿನ ಮಕ್ಕಳಿಗೆ ಮಾಡ್ಬಹುದು ಶ್ರಾದ್ಧ : ಪಿತೃ ಪಕ್ಷದಲ್ಲಿ, 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶ್ರಾದ್ಧ ಮಾಡ್ಬಹುದು. ಸಾಮಾನ್ಯವಾಗಿ ಅವರ ಮರಣದ ದಿನದಂದು ಶ್ರಾದ್ಧ ಮಾಡಲಾಗುತ್ತದೆ. ಮರಣದ ದಿನಾಂಕ ನೆನಪಿಲ್ಲವಾದ್ರೆ ತ್ರಯೋದಶಿಯಂದು ಪೂರ್ಣ ವಿಧಿಯಲ್ಲಿ ಶ್ರಾದ್ಧ ಮಾಡಲಾಗುತ್ತೆ. ಇದು ಮಗುವಿನ ಆತ್ಮಕ್ಕೆ ಶಾಂತಿ ನೀಡುತ್ತದೆ. ದಿನಾಂಕ ತಿಳಿದಿಲ್ಲ ಎನ್ನುವವರು ತ್ರಯೋದಶಿ ತಿಥಿಯಂದು ಮಾತ್ರ ತರ್ಪಣ ಬಿಡಬೇಕು. ಇದುಮೋಕ್ಷಕ್ಕೆ ಕಾರಣವಾಗುತ್ತದೆ.
ಈ ಬಾರಿ ಸೆಪ್ಟೆಂಬರ್ 7 ರಿಂದ ಪಿತೃಪಕ್ಷ ಶುರುವಾಗಲಿದೆ. ಸೆಪ್ಟೆಂಬರ್ 21, ಮಹಾಲಯ ಅಮವಾಸ್ಯೆಯಂದು ಪಿತೃಪಕ್ಷ ಮುಗಿಯಲಿದೆ. ಪಿತೃ ಪಕ್ಷದಂದು ಪೂರ್ವಜರಿಗೆ ಜಲ ಅರ್ಪಿಸಿ. ಬಡವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ.