
ಸಂಖ್ಯಾಶಾಸ್ತ್ರ (Numerology) ತಜ್ಞರ ಪ್ರಕಾರ, ಜೀವನದಲ್ಲಿ ಬರುವ ಪ್ರತಿಯೊಂದು ಸಂಖ್ಯೆ ತನ್ನದೇ ಆದ ವಿಶಿಷ್ಟ ಅರ್ಥವನ್ನು ಹೊಂದಿದೆ. ಕೆಲ ಸಂಖ್ಯೆ ನಮಗೆ ಆಗಾಗ ಕಾಣಿಸ್ತಿರುತ್ತದೆ. ದಾರಿಯಲ್ಲಿ ಹೋಗ್ವಾಗ, ಬಸ್ ನಂಬರ್, ಟಿಕೆಟ್ ಅಥವಾ ವೋಚರ್ ಎಲ್ಲದ್ರಲ್ಲೂ ನಿಮಗೆ ಒಂದೇ ಸಂಖ್ಯೆ ಕಾಣಿಸ್ತಿರುತ್ತದೆ. ಕೆಲ ಸಂಖ್ಯೆಗಳನ್ನು ದೇವರ ಸಂಖ್ಯೆ ಎಂದೇ ಗುರುತಿಸಲಾಗುತ್ತದೆ. ಅಂಥ ಸಂಖ್ಯೆ ಆಗಾಗ ನಮ್ಮ ಕಣ್ಣ ಮುಂದೆ ಬಂದ್ರೆ ಅದು ದೇವರ ಸೂಚನೆ ಎಂದು ಸಂಖ್ಯಾಶಾಸ್ತ್ರಜ್ಞರು ನಂಬ್ತಾರೆ. ನಿಮ್ಮ ನಿತ್ಯ ಜೀವನದಲ್ಲಿ 9ಕ್ಕೆ ಸಂಬಂಧಿಸಿದಂತೆ 99,999,99.99 ಇಂಥ ಸಂಖ್ಯೆ ಪದೇ ಪದೇ ಕಾಣ್ತಿದ್ದರೆ ಅದ್ರ ಅರ್ಥ ಏನು ಅನ್ನೋದನ್ನು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗಿದೆ.
ಸಂಖ್ಯೆ 9 ರ ಮಹತ್ವ ಏನು? : ಸಂಖ್ಯೆ 9 ದೇವದೂತ ಸಂಖ್ಯೆಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ದೇವರನ್ನು ನಂಬದವರಿಗೂ ಸಹ ಈ ಸಂಖ್ಯೆಗಳನ್ನು ನಂಬಿಕೆ-ಪ್ರೇರಕವೆಂದು ಪರಿಗಣಿಸಲಾಗುತ್ತದೆ.
ಸಂಖ್ಯೆ 9 ರ ಗುಣಲಕ್ಷಣಗಳು : ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆ 9 ಮೂಲತಃ ಆಧ್ಯಾತ್ಮಿಕತೆಗೆ ಸಂಬಂಧಿಸಿದೆ. 1 ರಿಂದ 9 ರವರೆಗಿನ ಸಂಖ್ಯಾಶಾಸ್ತ್ರ ಸಂಖ್ಯೆಗಳಲ್ಲಿ, ಸಂಖ್ಯೆ 9 ಪರಿಪೂರ್ಣತೆಯನ್ನು ಸೂಚಿಸುತ್ತದೆ. ಇದು ವ್ಯಕ್ತಿಯ ದಯೆ, ಸಹಾನುಭೂತಿ ಮತ್ತು ಮಾನವೀಯತೆಯನ್ನು ಸೂಚಿಸುವ ಸಂಖ್ಯೆಯಾಗಿದೆ. ಸಂಖ್ಯೆ 9, ಕೆಂಪು ಗ್ರಹ ಮಂಗಳನಿಂದ ಆಳಲ್ಪಡುವ ಸಂಖ್ಯೆಯಾಗಿದೆ.
'ಅಂದು ಕುಡಿದು ಅಮ್ಮನವ್ರ ದೇವಸ್ಥಾನಕ್ಕೆ ಹೋದೆ ಅಂತ ಪಶ್ಚಾತ್ತಾಪವಾಯ್ತು'- ಸಂಗೀತ ನಿರ್ದೇಶಕ ಅರ್ಜುನ್ ಜನ್ಯ
ಮೂಲಾಂಕ 9 ಹೊಂದಿರುವವರ ಸ್ವಭಾವ : ಮೂಲಾಂಕ 9 ಹೊಂದಿರುವ ಜನರು ಸ್ವಾಭಾವಿಕವಾಗಿ ಸೃಜನಶೀಲರು. ಅವರು ಸಂಯಮ ಮತ್ತು ತಾಳ್ಮೆಗೆ ಒತ್ತು ನೀಡುತ್ತಾರೆ. ಸ್ಪಷ್ಟ ಮತ್ತು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ.
ಆಗಾಗ 999 ಸಂಖ್ಯೆ ಕಾಣ್ತಿದ್ದರೆ ಏನರ್ಥ? : ಸಂಖ್ಯೆ 9 ಅನ್ನು ಶಕ್ತಿಶಾಲಿ ಸಖಖ್ಯೆ ಎಂದು ನಂಬಲಾಗುತ್ತದೆ. 999 ಸಂಖ್ಯೆಯನ್ನು ಒಂದು ಚಕ್ರದ ಅಂತ್ಯ ಮತ್ತು ಮುಂದಿನ ಚಕ್ರದ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. 999ರ ಸಂಖ್ಯೆ ಹೊಸ ಆರಂಭದ ಸಂಕೇತ. ಉದಾಹರಣೆಗೆ ಹೇಳೋದಾದ್ರೆ ನೀವು ಮಾರ್ಕೆಟ್ ನಲ್ಲಿ ವಸ್ತುಗಳನ್ನು ಖರೀದಿ ಮಡ್ತೀರಿ. ಬಿಲ್ ನಲ್ಲಿ 99.99 ರೂಪಾಯಿ ನೋಡುತ್ತೀರಿ. ಇಲ್ಲಿ ಕಾಣಿಸಿಕೊಳ್ಳುವ ಈ ಸಂಖ್ಯೆ ದೇವತೆ ಸಂಖ್ಯೆ. ಇದನ್ನು ಹೊಸ ಆರಂಭದ ಸಂಕೇತವೆಂದು ಪರಿಗಣಿಸಬಹುದು.
ಪ್ರೀತಿಯ ಸಂಕೇತ 9999 : ಸಂಖ್ಯಾಶಾಸ್ತ್ರದ ಪ್ರಕಾರ, 9999 ಸಂಖ್ಯೆ, ಪ್ರೀತಿಯ ಸೂಚಕವಾಗಿದೆ. ಪ್ರೀತಿಯಲ್ಲಿಲ್ಲದ ವ್ಯಕ್ತಿಗೆ 9999 ಕಾಣಿಸ್ತಿದ್ದರೆ ಆತ ಶೀಘ್ರವೇ ಪ್ರೀತಿಯಲ್ಲಿ ಬೀಳಲಿದ್ದಾನೆ ಎಂಬುದನ್ನು ಸೂಚಿಸುತ್ತದೆ.
ಮನೆಯಲ್ಲಿ ಹಾಲು ಒಡೆದರೆ ಒಳ್ಳೆಯದೋ, ಕೆಟ್ಟದ್ದೋ? ವಾಸ್ತು ದೋಷದ ಕಾರಣ ಮತ್ತು ಪರಿಹಾರವೇನು?
ಮದುವೆಗೆ ಸೂಚನೆ ನೀಡುತ್ತೆ ಈ ಸಂಖ್ಯೆ : ಈಗಾಗಲೇ ಪ್ರೀತಿಯಲ್ಲಿರುವವರಿಗೆ ಪ್ರೀತಿ, ಮದುವೆಗೆ ತಂದು ನಿಲ್ಲಿಸಲಿದೆ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಪ್ರೇಮಿ ಜೊತೆ ಜೀವನ ನಡೆಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದನ್ನು ಇದು ಸೂಚಿಸುತ್ತದೆ.
ವೃತ್ತಿಜೀವನದಲ್ಲಿ 999 ರ ಅರ್ಥವೇನು? : ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಈ ಸಂಖ್ಯೆಯನ್ನು ಪದೇ ಪದೇ ನೋಡ್ತಿದ್ರೆ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರಲಿದ್ದೀರಿ ಎಂದರ್ಥ. ಕಲಾ ಜಗತ್ತಿನಲ್ಲಿ ಈ ಸಂಖ್ಯೆ ಅನೇಕ ಪ್ರಯೋಜನಗಳನ್ನು ತರುವ ದೇವತೆ ಸಂಖ್ಯೆ ಎಂದು ಪರಿಗಣಿಸಲಾಗಿದೆ. ಇದು ನಿರೀಕ್ಷೆಗೆ ಮೀರಿದ ಬದಲಾವಣೆ ತರುತ್ತದೆ.
ಆಧ್ಯಾತ್ಮಿಕತೆ ಜೊತೆ ನಂಟು : ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆ 9 ಆಧ್ಯಾತ್ಮಿಕತೆಗೆ ಸಂಬಂಧಿಸಿದೆ. 999 ಸಂಖ್ಯೆಯನ್ನು ಪದೇ ಪದೇ ನೋಡುವುದನ್ನು ಆಧ್ಯಾತ್ಮಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.