ಪೂರ್ವಜರು, ಅವರ ಆತ್ಮ ಕಣ್ಣಿಗೆ ಕಾಣುವುದಿಲ್ಲ. ಆದ್ರೆ ಪಿತೃ ಪಕ್ಷದಲ್ಲಿ ಅವರು ಭೂಮಿಗೆ ಬರ್ತಾರೆಂಬ ನಂಬಿಕೆ ಬಲವಾಗಿದೆ. ಅವರು ಯಾವ ರೀತಿ ಮನೆಗೆ ಬರ್ತಾರೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ವರ್ಷದಲ್ಲಿ 15 ದಿನಗಳನ್ನು ನಮ್ಮ ಹಿರಿಯರಿಗೆ ಮೀಸಲಿಡಲಾಗಿದೆ. ಪಿತೃ ಪಕ್ಷದ ಹೆಸರಿನಲ್ಲಿ ಆ 15 ದಿನ ಪೂರ್ವಜರನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಸದ್ಯ ಪಿತೃಪಕ್ಷ ನಡೆಯುತ್ತಿದೆ. ಸೆಪ್ಟೆಂಬ್ 25ರವರೆಗೆ ಪಿತೃ ಪಕ್ಷವಿರಲಿದೆ. ಈ ಸಂದರ್ಭದಲ್ಲಿ ಹಿರಿಯರ ಶ್ರಾದ್ಧ, ತರ್ಪಣಕ್ಕೆ ಮಹತ್ವದ ಸ್ಥಾನವಿದೆ. ವರ್ಷದಲ್ಲಿ ಒಮ್ಮೆ ಪೂರ್ವಜರನ್ನು ನೆನಪು ಮಾಡಿಕೊಳ್ಳುವುದು ಬಹಳ ಮುಖ್ಯ. ದೇವರ ಆಶೀರ್ವಾದದ ಜೊತೆ ಪೂರ್ವಜರ ಆಶೀರ್ವಾದವಿದ್ದಲ್ಲಿ ಮಾತ್ರ ಯಶಸ್ಸು ಸಾಧ್ಯ. ಅನೇಕ ಬಾರಿ ಪಿತೃಗಳು ಕೋಪಗೊಂಡರೆ ವಿನಾಶ ನಿಶ್ಚಿತ. ತಲೆ ತಲಾಂತರದವರೆಗೆ ಪಿತೃ ದೋಷವಿರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಎಲ್ಲ ಹಿರಿಯರ ಮರಣದ ದಿನವನ್ನು ನೆನಪಿಟ್ಟುಕೊಂಡು ಅವರಿಗೆ ಶ್ರಾದ್ಧ ಮಾಡಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರ ಹೆಸರಿನಲ್ಲಿ ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವುದು ಒಳ್ಳೆಯದು ಎಂದು ನಂಬಲಾಗಿದೆ.
ಪಿತೃ ಪಕ್ಷ (Pitru Paksha) ದಲ್ಲಿ ಪೂರ್ವಜರು ಭೂಮಿಗೆ ಬರ್ತಾರೆ. ಅವರು ನಮ್ಮ ಆಸುಪಾಸೆ ಇರ್ತಾರೆ. ನಾವು ಮಾಡಿದ ಕೆಲಸ ಹಾಗೂ ಶ್ರಾದ್ಧ ಅವರಿಗೆ ತೃಪ್ತಿ ತಂದರೆ ಅವರು ಖುಷಿಯ ಸಂಕೇತವನ್ನು ಕೆಲ ವಿಧಾನಗಳ ಮೂಲಕ ತೋರಿಸ್ತಾರೆ ಎನ್ನಲಾಗಿದೆ. ಪಿತೃಗಳು ಬೇರೆ ಬೇರೆ ರೂಪದಲ್ಲಿ ನಮ್ಮ ಮುಂದೆ ಬರ್ತಾರೆ. ನಾವಿಂದು ಪೂರ್ವಜರು ಯಾವ ರೂಪದಲ್ಲಿ ನಮ್ಮ ಬಳಿ ಬರ್ತಾರೆ ಎನ್ನುವುದನ್ನು ಹೇಳ್ತೇವೆ.
ಈ ರೂಪದಲ್ಲಿ ಕಾಣಿಸಿಕೊಳ್ತಾರೆ ಪೂರ್ವಜರು :
ಕಾಗೆ (Crow) : ಕಾಗೆಯನ್ನು ಯಾವಾಗ್ಲೂ ಪೂರ್ವಜರಿಗೆ ಹೋಲಿಕೆ ಮಾಡಲಾಗುತ್ತದೆ. ಕಾಗೆಗೆ ಶ್ರಾದ್ಧದ ವಿಧಿ – ವಿಧಾನ ಮುಗಿದ ನಂತ್ರ ಆಹಾರ ನೀಡುವ ಪದ್ಧತಿಯಿದೆ. ಪಿತೃ ಪಕ್ಷದಲ್ಲಿ ಕಾಗೆ ರೂಪದಲ್ಲಿ ಪೂರ್ವಜರು ಮನೆಗೆ ಬರ್ತಾರೆ ಎನ್ನಲಾಗುತ್ತದೆ. ಹಾಗಾಗಿ ಕಾಗೆ ಪಿತೃ ಪಕ್ಷದಲ್ಲಿ ಮನೆಗೆ ಬಂದು ಕೂಗಿದ್ರೆ ಅದನ್ನು ಬೈದು ಕಳಿಸಬೇಡಿ. ಕಾಗೆಗೆ ಆಹಾರವನ್ನು ನೀಡಿ. ಪಿತೃ ಪಕ್ಷದಲ್ಲಿ ಪೂರ್ಜವರು ಪ್ರಸನ್ನರಾಗ್ಬೇಕೆಂದ್ರೆ 15 ದಿನಗಳ ಕಾಲ ಕಾಗೆಗೆ ಆಹಾರವನ್ನು ನೀಡಲು ಮರೆಯಬೇಡಿ.
ನಾಯಿ (Dog) : ಪೂರ್ವಜರು ನಾಯಿಗಳ ರೂಪದಲ್ಲಿ ಕೂಡ ನಮ್ಮ ಬಳಿಗೆ ಬರ್ತಾರೆ ಎಂದು ಹೇಳಲಾಗಿದೆ. ನಾಯಿಯನ್ನು ಯಮನ ಸಂದೇಶವಾಹಕ ಎಂದು ಹೇಳಲಾಗುತ್ತದೆ. ಪಿತೃ ಪಕ್ಷದಲ್ಲಿ ಮನೆ ಅಕ್ಕಪಕ್ಕ ಯಾವುದೇ ನಾಯಿ ಕಾಣಿಸಿಕೊಂಡರೆ ಅದನ್ನು ಪೂರ್ವಜರ ಸಂಕೇತವೆಂದು ಭಾವಿಸಿ. ನಾಯಿಗೆ ಆಹಾರ ನೀಡಲು ಮರೆಯದಿರಿ. ಈ ಸಮಯದಲ್ಲಿ ಯಾವುದೇ ನಾಯಿಗೆ ಹೊಡೆಯುವ ಹಾಗೂ ಬೈಯ್ಯುವ ಕೆಲಸ ಮಾಡ್ಬೇಡಿ.
ಇರುವೆ : ಪಿತೃ ಪಕ್ಷದಲ್ಲಿ ಇದ್ದಕ್ಕಿದ್ದಂತೆ ಇರುವೆಗಳು ಮನೆಗೆ ಬಂದ್ರೆ ಅದನ್ನು ಓಡಿಸುವ ಪ್ರಯತ್ನ ಮಾಡ್ಬೇಡಿ. ಇರುವೆಗೆ ಈ 15 ದಿನಗಳ ಕಾಲ ಸಕ್ಕರೆಯನ್ನು ನೀವು ಹಾಕಬೇಕು. ಇದ್ರಿಂದ ಪೂರ್ವಜರು ಸಂತೃಪ್ತರಾಗ್ತಾರೆ.
ಇದನ್ನೂ ಓದಿ: Astrology Tips: ಹಳೆ ಪೊರಕೆ ಎಸೆಯುವ ಮುನ್ನ ಇದು ನೆನಪಿರಲಿ
ಬಡವರು ಮತ್ತು ನಿರ್ಗತಿಕರು : ಪಿತೃ ಪಕ್ಷದಲ್ಲಿ ಬಡವರು ಅಥವಾ ಭಿಕ್ಷುಕರು ಮನೆ ಬಾಗಿಲಿಗೆ ಬಂದರೆ ಅವರನ್ನು ಬರಿಗೈನಲ್ಲಿ ಕಳುಹಿಸಬೇಡಿ. ಅವರಿಗೆ ಅವಮಾನ ಮಾಡಬೇಡಿ. ಮನೆಗೆ ಬಂದ ಬಡವರಿಗೆ ಸಹಾಯ ಮಾಡಿ. ಒಂದ್ವೇಳೆ ಮನೆಯಿಂದ ಹೊರಗೆ ಹೋಗುವ ವೇಳೆ ನಿರ್ಗತಿಕರು ನಿಮ್ಮ ಮನೆ ಬಳಿ ನಿಂತು ನಿಮ್ಮನ್ನು ನೋಡ್ತಿದ್ದರೆ ನೀವು ಅವರಿಗೆ ಸಹಾಯ ಮಾಡಿ. ಬಡವರಿಗೆ ಆಹಾರ ನೀಡಿ. ಇದು ಪೂರ್ವಜರನ್ನು ತಲುಪುತ್ತದೆ. ಇದ್ರಿಂದ ಯಶಸ್ಸು, ಸಂತೋಷ ನಿಮ್ಮದಾಗುತ್ತದೆ.
ಇದನ್ನೂ ಓದಿ: Feng Shui Tips: ಮನೆಯ ಕಿಟಕಿ ಹೀಗಿದ್ದರೆ ಒಳ್ಳೇದು
ಹಸು : ಪೂರ್ವಜರು ಹಸುವಿನ ರೂಪದಲ್ಲಿ ಮನೆಗೆ ಬರ್ತಾರೆ ಎಂಬ ನಂಬಿಕೆಯೂ ಇದೆ. ಶ್ರಾದ್ಧ ಮಾಡಿದ ನಂತ್ರ ಗೋಗ್ರಾಸ ನೀಡುವ ಪದ್ಧತಿಯಿದೆ. ಹಸುವಿಗೆ ಆಹಾರ ನೀಡಿದ ನಂತ್ರ ಮನೆಯವರು ಆಹಾರ ಸೇವನೆ ಮಾಡ್ತಾರೆ. ಹಸುವಿಗೆ ಪಿತೃ ಪಕ್ಷದಲ್ಲಿ ಆಹಾರ ನೀಡಿದ್ರೆ ಪಿತೃ ದೋಷ ನಿವಾರಣೆಯಾಗುತ್ತದೆ.