ಇಂಥ ತಪ್ಪು ಮಾಡಿದರೆ ಪೂರ್ವಿಕರು ಸಿಟ್ಟಾಗೋದು ಗ್ಯಾರಂಟಿ!

By Suvarna News  |  First Published Sep 13, 2022, 4:24 PM IST

ಪೂರ್ವಜರ ಆಶೀರ್ವಾದ ಯಾವಾಗ್ಲೂ ಇರಬೇಕು. ದೇವರ ಜೊತೆ ಅವರ ಆಶೀರ್ವಾದ ಸೇರಿದ್ರೆ ಕೆಲಸ ಸುಲಭವಾಗುತ್ತದೆ. ಆದ್ರೆ ಅನೇಕರು ಪಿತೃಗಳನ್ನು ಮರೆತಿರ್ತಾರೆ. ಸರಿಯಾದ ಕ್ರಮದಲ್ಲಿ ಶ್ರಾದ್ಧ,ಪಿಂಡದಾನ ಮಾಡದೆ ಸಮಸ್ಯೆ ಮೈಮೇಲೆ ಎಳೆದುಕೊಂಡಿರ್ತಾರೆ. 
 


ಪಿತೃ ಪಕ್ಷದಲ್ಲಿ ಪಿತೃಗಳನ್ನು ನೆನೆಯುವುದು ಬಹಳ ಮಹತ್ವ ಪಡೆಯುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಗೌರವ ನೀಡಲಾಗುತ್ತದೆ. ಪಿತೃ ಪಕ್ಷದ ಅಮವಾಸ್ಯೆಯಂದು ಪಿಂಡ ದಾನ ಹಾಗೂ ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದ ಪ್ರತಿ ದಿನವೂ ಪಿತೃಗಳಿಗೆ ಅರ್ಪಿತವಾಗಿದೆ. ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸದಾ ಸುಖ, ಸಂತೋಷ, ಸಮೃದ್ಧಿ ನೆಲೆಸಿರುತ್ತದೆ. ಆದರೆ ಪೂರ್ವಜರು ಕೋಪಗೊಂಡರೆ ಸಮಸ್ಯೆ ಎದುರಾಗುತ್ತದೆ. ಪಿತೃ ದೋಷ ಉಂಟಾದ್ರೆ ವಂಶದ ಎಲ್ಲ ಪೀಳಿಗೆ  ಜನರು ನರಳಬೇಕಾಗುತ್ತದೆ. ಪಿತೃ ದೋಷವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಪಿತೃ ಪಕ್ಷದಲ್ಲಿ ಭೂಮಿಗೆ ಬರುವ ಪೂರ್ವಜರು ಕೋಪಗೊಂಡಿರುವ ಬಗ್ಗೆ ಕೆಲ ಸೂಚನೆಯನ್ನು ನೀಡ್ತಾರೆ. ನಾವಿಂದು ಪಿತೃ ದೋಷವನ್ನು ಹೇಗೆ ಪತ್ತೆ ಹಚ್ಚಬೇಕು ಹಾಗೆ ಅದನ್ನು ಹೇಗೆ ಕಡಿಮೆ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ. 

ಪಿತೃ ದೋಷ (Pitru Dosh ) ಕ್ಕೆ ಕಾರಣಗಳು : 
1. ಮರಣ (Death) ದ ನಂತರ ಪೂರ್ಣ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ (Funeral) ಯ ಪ್ರಕ್ರಿಯೆಯನ್ನು ಮಾಡದಿದ್ದರೆ ಕುಟುಂಬಸ್ಥರು ಪಿತೃ ದೋಷಕ್ಕೆ ಒಳಗಾಗಬೇಕಾಗುತ್ತದೆ.
2. ಅಕಾಲಿಕ ಮರಣದಿಂದಲೂ  ಕುಟುಂಬದ ಜನರು ಅನೇಕ ತಲೆಮಾರುಗಳವರೆಗೆ ಪಿತೃ ದೋಷವನ್ನು ಅನುಭವಿಸಬೇಕಾಗುತ್ತದೆ. 
3. ತಂದೆ-ತಾಯಿ (Parents) ಗಳಿಗೆ ಅಗೌರವ ತೋರಿದರೆ, ಕುಟುಂಬ (Family) ಸ್ಥರ ಮರಣದ ನಂತರ ಪಿಂಡ ದಾನ ಮಾಡದಿದ್ದರೂ, ಶ್ರಾದ್ಧ ಮಾಡದಿದ್ದರೂ, ಪಿತೃ ದೋಷ ಉಂಟಾಗಬಹುದು.
4. ಪೂರ್ವಜರನ್ನು ಅವಮಾನಿಸುವುದು, ಅಸಹಾಯಕರನ್ನು ಕೊಲ್ಲುವುದು,ಬೇವು ಮತ್ತು ಆಲದ ಮರಗಳನ್ನು ಕತ್ತರಿಸುವುದು, ಆಕಸ್ಮಿಕವಾಗಿ ಹಾವನ್ನು ಕೊಲ್ಲುವುದು ಸಹ ಪಿತೃ ದೋಷಕ್ಕೆ ಕಾರಣವಾಗುತ್ತದೆ.

Tap to resize

Latest Videos

ಮನೆಯಲ್ಲಿ ಪಿತೃ ದೋಷವನ್ನು ಹೀಗೆ ಪತ್ತೆ ಮಾಡಿ : 
1. ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಉಂಟಾಗುತ್ತಿದ್ದರೆ ಜೀವನದಲ್ಲಿ ಪಿತೃ ದೋಷವಿದೆ ಎಂದರ್ಥ. ಪತಿ-ಪತ್ನಿ ಸದಾ ಜಗಳವಾಡ್ತಿದ್ದರೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ ಇಲ್ಲವೆಂದಾದ್ರೆ ಪಿತೃದೋಷವಿದೆ ಎಂದರ್ಥ.
2. ಕುಟುಂಬದ ಸದಸ್ಯರಲ್ಲಿ ಸದಾ ಗಲಾಟೆ, ಜಗಳವಾಗ್ತಿದ್ದರೆ, ಮನೆಯಲ್ಲಿ ನೆಮ್ಮದಿ ಇಲ್ಲವೆಂದಾದ್ರೆ ಇದು ಕೂಡ ಪಿತೃ ದೋಷದ ಸೂಚನೆಯಾಗಿದೆ. ಪಿತೃ ದೋಷವಿದ್ದರೆ ಮನೆಯಲ್ಲಿ ವೈಮನಸ್ಸು ಉಂಟಾಗಬಹುದು. ಮನಸ್ಸು ಚಂಚಲಗೊಳ್ಳುತ್ತದೆ. ಮನೆಯಲ್ಲಿ ಸದಾ ಮೌನ ಇಲ್ಲವೆ ಜಗಳವಿದ್ರೆ ಅದು ಕೂಡ ಪೂರ್ವಜರು ಮುನಿಸಿಕೊಂಡಿದ್ದಾರೆ ಎಂಬ ಸೂಚನೆಯಾಗಿದೆ.  
3. ವಂಶಾಭಿವೃದ್ಧಿ ಆಗದೆ ಇರುವುದು ಕೂಡ ಪಿತೃ ದೋಷದ ಒಂದು ಕಾರಣವೆಂದು ಹೇಳಲಾಗುತ್ತದೆ. ಅಂಗವೈಕಲ್ಯ ಅಥವಾ ಹುಟ್ಟುವ ಮೊದಲೇ ಮಗುವಿನ ಸಾವು ಕೂಡ  ಪಿತೃ ದೋಷದ ಕಾರಣವಾಗಿದೆ. 
4. ಸದಾ ಒಂದಿಲ್ಲೊಂದು ಕಾಯಿಲೆ, ಕುಟುಂಬದ ಸದಸ್ಯರಲ್ಲಿ  ಅಸ್ವಸ್ಥತೆ, ಕೆಲಸದ ಸ್ಥಳದಲ್ಲಿ ಆರ್ಥಿಕ ಮತ್ತು ಮಾನಸಿಕ ಸಮಸ್ಯೆ, ಉದ್ಯೋಗದಲ್ಲಿ ಪ್ರಗತಿ ಇಲ್ಲದಿರುವುದು, ಆಗಾಗ ನಡೆಯುವ ಅಪಘಾತ ಹಾಗೂ ಕುಟುಂಬಸ್ಥರ ಸಾವು ಕೂಡ ಪಿತೃ ದೋಷದ ಕಾರಣವೆಂದು ಹೇಳಲಾಗುತ್ತದೆ. 

ಈ ದುರ್ಗುಣ ನಿಮ್ಮ ಹಿಂದಿನ ಜನ್ಮದಿಂದ ಬಂದಿರಬಹುದು! ನಿಮ್ಮ ಜನ್ಮರಾಶಿಗೆ ತಕ್ಕಂತೆ ನೋಡಿ

ಪಿತೃ ದೋಷ ನಿವಾರಣೆಗೆ ಕ್ರಮ :
ನಿಮ್ಮ ಮನೆಯಲ್ಲೂ ಈ ಎಲ್ಲ ಸಮಸ್ಯೆಯಿದ್ದು, ಜಾತಕದಲ್ಲಿ ಪಿತೃ ದೋಷವಿದ್ದರೆ ಅದರ ಪರಿಹಾರಕ್ಕೆ ಕೆಲ ಉಪಾಯ ಮಾಡಬಹುದು.
1. ಪಿತೃ ದೋಷವನ್ನು ತೊಡೆದು ಹಾಕಲು, ಪಿತೃ ಪಕ್ಷದಲ್ಲಿ ಪೂರ್ವಜರ ಶ್ರಾದ್ಧವನ್ನು ಪದ್ಧತಿಯಂತೆ ಮಾಡಬೇಕು.  ಬ್ರಾಹ್ಮಣರಿಗೆ ಅನ್ನದಾನ ಮಾಡಬೇಕು. ಇಲ್ಲವೆ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕು.
2. ಪ್ರತಿ ಏಕಾದಶಿ, ಚತುರ್ದಶಿ, ಅಮವಾಸ್ಯೆಯಂದು ಪೂರ್ವಜರಿಗೆ ಜಲವನ್ನು ಅರ್ಪಿಸಲು ಮರೆಯಬಾರದು.

Sibling Jealousy: ಈ 4 ರಾಶಿಗಳಿಗೆ ಒಡಹುಟ್ಟಿದವರ ಮೇಲೆ ಸಿಕ್ಕಾಪಟ್ಟೆ ಅಸೂಯೆ

3. ಪ್ರತಿದಿನ ಮಧ್ಯಾಹ್ನ ಅಶ್ವತ್ಥ ಮರಕ್ಕೆ ಪೂಜೆ ಮಾಡಬೇಕು. 
4. ಮನೆಯ ದಕ್ಷಿಣ ದಿಕ್ಕಿನಲ್ಲಿ ಎಣ್ಣೆಯ ದೀಪವನ್ನು ಹಚ್ಚಬೇಕು.  ಪ್ರತಿ ದಿನ ದೀಪ  ಬೆಳಗುವುದ್ರಿಂದ ಸಮಸ್ಯೆ ದೂರವಾಗುತ್ತದೆ.  

click me!