ಕೆಲವೊಮ್ಮೆ ನಿಮ್ಮ ದುರ್ಗುಣಗಳು ನಿಮ್ಮ ಕಳೆದ ಜನ್ಮದಿಂದಲೇ ನಿಮ್ಮನ್ನು ಹಿಂಬಾಲಿಸಿಕೊಂಡು ಬಂದಿರಬಹುದು. ನಿಮ್ಮ ಜನ್ಮರಾಶಿಗೆ ತಕ್ಕಂತೆ ಯಾವುದು ನಿಮ್ಮ ಪೂರ್ವಜನ್ಮದ ದುರ್ಗುಣ ಎಂಬುದನ್ನು ನಾವಿಲ್ಲಿ ಹೇಳ್ತೀವಿ.
ಕರ್ಮಫಲಗಳು ನಮ್ಮ ಹಿಂದಿನ ಜನ್ಮದಿಂದಲೇ ನಮ್ಮನ್ನು ಹಿಂಬಾಲಿಸಿ ಬಂದಿರುತ್ತವೆ. ಹೀಗಾಗಿ ನಿಮ್ಮ ಗುಣಗಳಿಗೂ ನಿಮ್ಮ ಕರ್ಮಫಲಗಳಿಗೂ ಸಂಬಂದವಿರುತ್ತದೆ. ಹಾಗೆಯೇ ನಿಮ್ಮ ಕರ್ಮಫಲಗಳಿಗೂ ನಿಮ್ಮ ಜನ್ಮರಾಶಿಗೂ, ಅದರ ಮೂಲಕ ನಿಮ್ಮನ್ನು ಆಳುವ ಗ್ರಹಗಳಿಗೂ ಸಂಬಂಧವಿರುತ್ತದೆ. ಯಾವುದೋ ಒಂದು ಸದ್ಗುಣ ಅಥವಾ ದುರ್ಗುಣ ನಿಮ್ಮಲ್ಲಿದೆ ಎಂದರೆ, ಅದಕ್ಕೆ ನಿಮ್ಮ ಜೀವನದ ಅಭ್ಯಾಸಗಳು ಕಾರಣವಾಗಿರುವಂತೆ, ನಿಮ್ಮ ಹಿಂದಿನ ಕರ್ಮಫಲಗಳೂ ಕಾರಣವಿರಬಹುದು. ನಿಮ್ಮ ಜನ್ಮರಾಶಿ ಚಿಹ್ನೆಗಳಿಗೆ ತಕ್ಕಂತೆ ನಿಮ್ಮನ್ನು ಆಳುತ್ತಿರುವ ದುರ್ಗುಣಗಳು, ಅನ್ಯರ ಮುಂದೆ ನಿಮ್ಮನ್ನು ಕೀಳಾಗಿ ಮಾಡುವ ಕಳಪೆ ಗುಣಗಳು ಯಾವುವು ಎಂದು ಇಲ್ಲಿ ತಿಳಿಯಿರಿ. ಅದಕ್ಕೆ ಉತ್ತರವನ್ನೂ ಕಂಡುಕೊಳ್ಳಿ.
ಮೇಷ ರಾಶಿ (aries)
ನೀವು ನಿಮ್ಮ ವರ್ತನೆಯೇ ಸರಿ ಎಂದು ಸದಾ ಸಾಧಿಸುತ್ತಿರುತ್ತೀರಿ. ಎಲ್ಲದರಲ್ಲೂ ಪರ್‌ಫೆಕ್ಟ್ ಆಗಿರಬೇಕು ಎಂದು ನೀವು ವಿಧಿಸುವ ನಿಯಮ. ನೀವು ಬಾಸ್ ಆಗಿದ್ದರಂತೂ ನಿಮ್ಮ ಸಹೋದ್ಯೋಗಿಗಳನ್ನು ಗೋಳು ಹುಯ್ದುಕೊಳ್ಳುತ್ತೀರಿ. ಹಿಂದಿನ ಜನ್ಮದಲ್ಲಿ ನೀವು ಯಜಮಾನಿಕೆ ಮಾಡುತ್ತಾ ಇದ್ದುದರಿಂದ ಆ ಗುಣ ಮುಂದುವರಿದಿರಬಹುದು. ಆದರೆ ಇದನ್ನು ಇಂದು ಎಲ್ಲರೂ ಸಹಿಸಲಾರರು. ಕೆಲವರು ನಿಮ್ಮ ಜತೆಗಿನ ಸಂಬಂಧ ಕಡಿದುಕೊಳ್ಳಬಹುದು. ಆದ್ದರಿಂದ ಇಂಥ ನನ್ನದೇ ಸರಿ ಎಂಬ ನಿಲುವಿನಿಂದ ತುಸು ಹಿಂದೆ ಸರಿಯಿರಿ.
ವೃಷಭ ರಾಶಿ (taurus)
ಚಾಡಿ ಹೇಳುವುದು ಮತ್ತು ಚಾಡಿ ಆಲಿಸುವುದು ನಿಮ್ಮ ದುರ್ಗುಣ. ಇದು ನಿಮ್ಮನ್ನೂ ನಿಮ್ಮ ಸುತ್ತಮುತ್ತಲಿನವರನ್ನೂ ಹಾಳು ಮಾಡುತ್ತದೆ. ನಿಮ್ಮ ಸುತ್ತಮುತ್ತಲೂ ಇರುವವರ ಗುಣಗಳನ್ನು ನೀವಾಗಿ ನೋಡದೆ, ಪರಿಶೀಲಿಸದೆ ಅನ್ಯರು ಹೇಳುವುದನ್ನು ನಂಬುವುದು ಸರಿಯಲ್ಲ. ಅನ್ಯರ ಮಾತು ಕೇಳಿ ಪ್ರಾಮಾಣಿಕರನ್ನು ನೀವು ಹಿಂದಿನ ಜನ್ಮದಲ್ಲಿ ಶಿಕ್ಷಿಸಿದ್ದರಬಹುದು. ಇಂಥದೇ ಚಾಡಿಮಾತಿನಿಂದ ಅನ್ಯರು ನಿಮ್ಮನ್ನು ದೂರ ಮಾಡುವ ಕಾಲ ಬರುತ್ತದೆ. ಹೀಗಾಗಿ ಅದರ ಬಗ್ಗೆ ತುಂಬಾ ಎಚ್ಚರವಾಗಿರಿ.
ಮಿಥುನ ರಾಶಿ (gemini)
ದುಡುಕು ಪ್ರವೃತ್ತಿ ನಿಮ್ಮ ಸದ್ಗುಣವಲ್ಲ. ನೀವು ಅಭಿಮನ್ಯುವಿನಂತೆ, ಹಿಂದೆ ಮುಂದೆ ವಿಚಾರಿಸದೆ ಚಕ್ರವ್ಯೂಹದೊಳಗೆ ನುಗ್ಗಿಬಿಡುತ್ತೀರಿ. ಪೂರ್ವಾಪರಗಳನ್ನು ವಿವೇಚಿಸುವುದು ವಿವೇಕಿಗಳ ಲಕ್ಷಣ. ನೀವು ಹಿಂದಿನ ಜನ್ಮದಲ್ಲಿ ದುಡುಕಿನಿಂದ ತಪ್ಪು ಮಾಡದವರನ್ನು ದೂಷಿಸಿರಬಹುದು. ಈಗ ಅದೇ ದುಡುಕಿನಿಂದ ನಿಮ್ಮ ಸಂಗಾತಿಗಳನ್ನು ಕಳೆದುಕೊಳ್ಳಬೇಕಾದೀತು. ಹೀಗಾಗಿ ಮಾತು ಮತ್ತು ವರ್ತನೆಯ ಬಗ್ಗೆ ಎಚ್ಚರವಿರಬೇಕು.
ಕಟಕ ರಾಶಿ (cancer)
ನಿಮ್ಮ ಬಗ್ಗೆಯೇ ನಿಮಗೆ ನಂಬಿಕೆಯಿಲ್ಲ. ಹೀಗಾಗಿ ನೀವು ಯಾವ ಸಾಹಸವನ್ನೂ ಕೈಗೊಳ್ಳುವುದಿಲ್ಲ. ಯಾವುದೇ ಹೊಸ ರಿಸ್ಕ್ ಇರುವ ಸಂಗತಿಗಳಿಗೆ ಕೈ ಹಾಕುವುದಿಲ್ಲ. ಇದರಿಂದ ಒಳ್ಳೆಯ ಅವಕಾಶಗಳೂ ನಿಮ್ಮ ಕೈತಪ್ಪಿ ಹೋಗುತ್ತವೆ. ಹಿಂದಿನ ಜನ್ಮದಲ್ಲಿ ನೀವು ಯಾರದೋ ಆಸೆಗೆ, ಕನಸಿಗೆ ತಣ್ಣೀರು ಎರಚಿರಬಹುದು. ಇದರಿಂದಾಗಿ ಇಂದು ಬದುಕು ನಿಮಗೆ ಏನೇ ಹೊಸ ಅವಕಾಶ ಕೊಟ್ಟರೂ ಅದಕ್ಕೆ ಮುಂದಾಗುವುದು ಬೇಡ ಎಂದು ನಿಮ್ಮ ಬುದ್ಧಿ ನಿಮ್ಮನ್ನು ಹಿಂದಕ್ಕೆಳೆಯುತ್ತದೆ. ಧೈರ್ಯಶಾಲಿಗಳಾಗಿ.
ಸಿಂಹ ರಾಶಿ (leo)
ನಿಮ್ಮ ಸಂಬಂಧಗಳಲ್ಲಿ ಸದಾ ಅಸ್ಥಿರತೆ ನಿಮ್ಮನ್ನು ಕಾಡುತ್ತಿರುತ್ತದೆ. ಕೆಲವೊಮ್ಮೆ ಅತಿಯಾಗಿ ನಂಬಿ ಮೋಸ ಹೋಗುತ್ತೀರಿ. ಕೆಲವೊಮ್ಮೆ ಯಾರನ್ನೂ ನಂಬದೇ ಮೋಸ ಹೋಗುತ್ತೀರಿ. ಯಾರನ್ನು ನಂಬಬೇಕೋ ಅವರನ್ನು ನಂಬುವುದಿಲ್ಲ. ಯಾರನ್ನು ನಂಬಬಾರದೋ ಅವರನ್ನು ನಂಬುತ್ತೀರಿ. ಹಿಂದಿನ ಜನ್ಮದಲ್ಲಿ ನಂಬಿದವರಿಗೆ ವಂಚಿಸಿದ್ದರಿಂದ ಸ್ಥಿತಿ ನಿಮ್ಮದಾಗಿದೆ ಎಂದು ಸುಲಭವಾಗಿಯೇ ತಿಳಿಯಬಹುದು. ಸಂಬಂಧ ಬೆಳೆಸುವಾಗ ವಿವೇಕವನ್ನು ಬಳಸಿ.
ಕನ್ಯಾ ರಾಶಿ (virgo)
ಹಿಂದಿನ ತಪ್ಪುಗಳು ಮರುಕಳಿಸಬಹುದು ಎಂಬ ಬಗ್ಗೆ ನಿಮಗೆ ಸದಾ ಭಯ. ಹಿಂದಿನ ಸಂಬಂಧಗಳಲ್ಲಿ ಮಾಡಿದ ತಪ್ಪನ್ನು ಮಾಡಬಾರದು ಎಂದು ನಿರ್ಧರಿಸಿಕೊಂಡಿರುವುದರಿಂದ, ಹೊಸ ತಪ್ಪನ್ನು ಮಾಡುತ್ತೀರಿ ಎನ್ನಬಹುದು. ಆದರೆ ಸಂಬಂಧವಂತೂ ನಿಮ್ಮದಾಗಿ ಉಳಿಯುವುದಿಲ್ಲ ಎಂಬುದು ಖಾತ್ರಿ. ಯಾಕೆ ಹೀಗೆ? ಅಧಿಕಾರದ ಅಮಲಿನಿಂದ ನೀವು ಹಿಂದಿನ ಜನ್ಮದಲ್ಲಿ ಆಪ್ತ ಸಾಂಗತ್ಯವನ್ನು ದ್ರುಪದನಂತೆ ಧಿಕ್ಕರಿಸಿದ್ದೀರಿ. ಒಳ್ಳೆಯ ಗೆಳೆಯರನ್ನು ಉಳಿಸಿಕೊಳ್ಳಿ.
Money Dreams: ಈ ರೀತಿಯ ಕನಸು ಕೈ ತುಂಬಾ ಹಣ ಬರೋ ಮುನ್ಸೂಚನೆ!
ತುಲಾ ರಾಶಿ (libra)
ನಿಮ್ಮಲ್ಲಿ ಎಷ್ಟೊ ಐಡಿಯಾಗಳಿರುತ್ತವೆ. ಆದರೆ ಅವುಗಳನ್ನು ಅನುಷ್ಠಾನ ಮಾಡಲು ಬೇಕಾದ ಆತ್ಮವಿಶ್ವಾಸವೇ ಇಲ್ಲ. ಹೀಗಾಗಿ ಯಾವುದನ್ನೂ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹಿಂದಿನ ಜನ್ಮದಲ್ಲಿ ನೀವು ನಿಮ್ಮ ಒಡನಾಡಿಗಳು, ಕುಟುಂಬಸ್ಥರು, ನಿಮ್ಮ ಕೈಕೆಳಗಿನವರ ಆತ್ಮವಿಶ್ವಾಸವನ್ನು ತುಳಿದುಹಾಕಿದ್ದಿರಿ. ಅದರಿಂದಲೇ ಈ ಜನ್ಮದಲ್ಲಿ ಈ ಸ್ಥಿತಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ.
ವೃಶ್ಚಿಕ ರಾಶಿ (scorpio)
ಏಕಾಂತವನ್ನು ಬಯಸಿ ನೀವು ಒಂಟಿತನದ ಕಡೆಗೆ, ಡಿಪ್ರೆಶನ್‌ನ ಕಡೆಗೆ ಸಾಗುತ್ತಿದ್ದೀರಿ. ನೀವೇನೋ ಏಕಾಂತವನ್ನು ಬಯಸಬಹುದು, ಆದರೆ ಅದು ನಿಮಗೆ ಉಂಟುಮಾಡುವುದು ಖುಷಿಯನ್ನಲ್ಲ. ಬದಲಾಗಿ ಒಂಟಿತನವನ್ನು ಉಂಟುಮಾಡುತ್ತದೆ. ಎಂಥ ಒಳ್ಳೆಯ ಸ್ನೇಹಿತರೇ ಆಗಲಿ, ನಿಮ್ಮನ್ನು ನಿಮ್ಮ ಒಂಟಿತನದ ಕೂಪದಿಂದ ಪಾರು ಮಾಡಲಾರರು. ಹಿಂದಿನ ಜನ್ಮದಲ್ಲಿ ಅನ್ಯರನ್ನು ಚುಚ್ಚುಮಾತುಗಳಿಂದ ಹಿಂಸಿಸಿದ್ದಿರಬಹುದು ನೀವು. ಅದರ ಫಲವಿದು. ಸಾಮಾಜಿಕವಾಗಿ ಹೆಚ್ಚು ಹೆಚ್ಚು ಬೆರೆಯಿರಿ.
ಧನು ರಾಶಿ (sagittarius)
ಒಂದು ಸಮನ್ವಯ ನಿಮ್ಮಲ್ಲಿ ಇಲ್ಲ. ವೃತ್ತಿ ಹಾಗೂ ವೈಯಕ್ತಿಕ ಜೀವನ- ಇವೆರಡನ್ನೂ ಪ್ರತ್ಯೇಕೀಕರಿಸುವ ಗುಣ ನಿಮ್ಮಲ್ಲಿ ಇಲ್ಲ. ಹೀಗಾಗಿ ಎರಡನ್ನೂ ಕಳೆದುಕೊಳ್ಳುತ್ತಾ ಇರುತ್ತೀರಿ. ಹೋದ ಜನ್ಮದಲ್ಲಿ ನೀವು ಕೈಕೆಳಗಿನವರನ್ನು ಇಪ್ಪತ್ತನಾಲ್ಕು ಗಂಟೆಯೂ ಹಿಂಸಿಸುವ ಬಾಸ್ ಆಗಿದ್ದಿರಬಹುದು. ಅದರ ದುಷ್ಟ ಫಲವಿದು. ಕುಟುಂಬದಲ್ಲಿ ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಂಡು ಬ್ಯಾಲೆನ್ಸ್ ಮಾಡಿ.
ಮಕರ ರಾಶಿ (capricorn)
ಸಿಟ್ಟು ಹಾಗೂ ಕಿರಿಕಿರಿಗಳು ನಿಮ್ಮ ಎರಡು ಅತ್ಯಂತ ಕೆಟ್ಟ ಗುಣಗಳು. ಅದರಲ್ಲೂ ವಿನಾಕಾರಣ ಬರುವ ಸಿಟ್ಟು. ಎಲ್ಲದಕ್ಕೂ ಸಿಟ್ಟು ಮಾಡಿಕೊಂಡರೆ ಕೊನೆಗೊಂದು ದಿನ ಅದು ನಿಮ್ಮ ಬಾಳಿನ ಭಾರೀ ದುರಂತಕ್ಕೆ ಕಾರಣವಾಗುತ್ತದೆ. ಹಿಂದಿನ ಜನ್ಮದಲ್ಲಿ ನೀವು ಜಮದಗ್ನಿಯಂಥ ವ್ಯಕ್ತಿಯೇ ಆಗಿರಬೇಕು. ಈಗಲೂ ಅದು ನಿಮ್ಮ ಕೈಹಿಡಿದಿದೆ. ಯೋಗಾಭ್ಯಾಸ, ಧ್ಯಾನದಂಥ ಅಭ್ಯಾಸಗಳಿಂದ ಶಾಂತತೆಯನ್ನು ಕಲಿಯಿರಿ.
ಕುಂಭ ರಾಶಿ (aquarius)
ಅಳುಬುರುಕತನ ನಿಮ್ಮ ಅತಿ ದೊಡ್ಡ ಶತ್ರು. ಹೋದದ್ದಕ್ಕೆ ಬಂದದ್ದಕ್ಕೆ, ಅನ್ಯರು ಕೋಪ ಮಾಡಿಕೊಂಡರೂ ಮುದ್ದು ಮಾಡಿದರೂ ಅಳುತ್ತೀರಿ. ಬಡ್ತಿ ಸಿಕ್ಕಿದರೂ ಬಾಸ್ ಬೈದರೂ ಅಳುತ್ತೀರಿ. ಈ ಅತಿಯಾದ ಎಮೋಷನ್ಸ್ (Emotions) ಗುಣ ಒಳ್ಳೆಯದಲ್ಲಿ ಅಂತ ನಿಮಗೇ ಗೊತ್ತಿದೆ. ಹೀದ ಜನ್ಮದಲ್ಲಿ ನೀವು ಇನ್ನೊಬ್ಬರನ್ನು ಚುಚ್ಚುಮಾತಿನಿಂದ ನೋಯಿಸುವ ವ್ಯಕ್ತಿ ಆಗಿದ್ದಿರಬೇಕು. ಈಗ ಅದರ ಕೆಟ್ಟ ಫಲ ಸಿಕ್ಕಿದೆ. ಕೊಂಚ ದೃಢವಾಗಿ ನಿಲ್ಲಿ ಬದುಕಿನಲ್ಲಿ.
ಮೀನ ರಾಶಿ (pisces)
ಸೋಮಾರಿತನ (Laziness) ನಿಮ್ಮ ಜೀವನದ ಅತಿ ದೊಡ್ಡ ವೈರಿ (Enmity). ಇದು ನೀವು ದುಡಿದದ್ದನ್ನೆಲ್ಲಾ ಕಳೆದು ಹಾಕುತ್ತದೆ. ನಿಮ್ಮ ಸಂಪಾದನೆಯನ್ನು ಉಳಿಯಗೊಡುವುದಿಲ್ಲ. ದುಡಿಮೆ, ಭವಿಷ್ಯದ ಬದುಕು, ಹಣ ಉಳಿಸುವಿಕೆ, ಪ್ರೀತಿ ಗಳಿಸಲು ಸ್ವಲ್ಪ ಪ್ರಯತ್ನ, ಕಚೇರಿ ಕೆಲಸದಲ್ಲಿ ಶ್ರಮ, ಎಲ್ಲದರಲ್ಲೂ ಸೋಮಾರಿತನ ಮಾಡುತ್ತೀರಿ. ಇದು ಇನ್ನೊಬ್ಬನ ಶ್ರಮಕ್ಕೆ ಬೆಲೆ ಕೊಡದ ಹೋದ ಜನ್ಮದ ದುಷ್ಫಲ. ಸೋಮಾರಿತನ ಬಿಡದೇ ನಿಮ್ಮ ಉದ್ಧಾರವಾಗದು.
Vastu tips: ಈ 6 ವಸ್ತುಗಳನ್ನು ಮನೆಗೆ ತನ್ನಿ.. ಮತ್ತೆಂದೂ ಹಣದ ಸಮಸ್ಯೆ ಇರೋಲ್ಲ!