ಎಸ್, ಸ ಅಕ್ಷರದಿಂದ ಆರಂಭವಾಗುವ ಹೆಸರಿನವರು ಪ್ರಣಯ ಪ್ರಿಯರಂತೆ!

By Suvarna News  |  First Published Mar 16, 2021, 5:10 PM IST

ಎಸ್ ಅಥವಾ ಕನ್ನಡದ ಸ ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳು ನಿಜಕ್ಕೂ ಪ್ರಣಯಪ್ರಿಯರಾಗಿರುವರಂತೆ. ನೀವು ಅದಾ?


ಎಸ್ ಅಥವಾ ಸ ಅಕ್ಷರದಿಂದ ಶುರುವಾಗುವ ಹೆಸರಿನವರು ಸ್ವಾಭಾವಿಕವಾಗಿ ಪ್ರಾಮಾಣಿಕರಾಗಿರುತ್ತಾರೆ. ಶ್ರಮಜೀವಿಗಳು ಹಾಗೂ ರಕ್ಷಣಾತ್ಮಕವಾಗಿ ಬದುಕುವವರೂ ಆಗಿದ್ದಾರೆ. ಜೊತೆಗೆ ಪ್ರಾಯೋಗಿಕವಾಗಿ ಯಾವಾಗಲೂ ಆಲೋಚನೆ ಮಾಡುತ್ತಾರೆ.

ಭವಿಷ್ಯದ ಬಗ್ಗೆ ಗುರಿ ಹೊಂದಿರುತ್ತಾರೆ. ಬದುಕಿನ ಬಗ್ಗೆ ಸ್ಪಷ್ಟ ಚಿತ್ರಣ ಹೊಂದಿರುವ ಈ ವ್ಯಕ್ತಿಗಳು ಮುಂದೇನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿರುತ್ತಾರೆ. ಹೊಸ ವಿಷಯಗಳು, ಹೊಸ ವಸ್ತುಗಳನ್ನು ಅನುಭವಿಸುವ ವಿಚಾರದಲ್ಲಿ ಯಾವುದೇ ಮುಲಾಜು ತೋರುವುದಿಲ್ಲ.

Latest Videos

undefined

ಸಿದ್ಧಾಂತ, ಮೌಲ್ಯಗಳೇ ಜೀವವಾಗಿರುತ್ತದೆ. ಒಂದು ಗಟ್ಟಿಯಾದ ವ್ಯಕ್ತಿತ್ವ ಹೊಂದಿರುತ್ತಾರೆ. ಸೂಕ್ಷ್ಮ ಮನಸ್ಸಿನವರೂ ಹೌದು. ನೈತಿಕತೆ ಹಾಗೂ ಸಿದ್ಧಾಂತವೇ ಎಲ್ಲವೂ ಆಗಿರುತ್ತದೆ. ನೈತಿಕತೆಗೆ ಅವರು ಪ್ರಾಮುಖ್ಯತೆ ನೀಡುತ್ತಾರೆ. ಇದು ಅವರನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯುತ್ತದೆ.

ಈ ರಾಶಿಗಳ ಹುಡುಗಿಯನ್ನು ಮದುವೆಯಾದರೆ ಜೀವನವಿಡೀ ಬಡತನವಿಲ್ಲ! ...

ಈ ವ್ಯಕ್ತಿಗಳು ಅತಿ ಹೆಚ್ಚು ಆತ್ಮವಿಶ್ವಾಸ ಹೊಂದಿರುವ ಕಾರಣ ಬದುಕಿನಲ್ಲಿ ಅತಿ ಬೇಗನೆ ಯಶಸ್ಸು ಕಾಣುತ್ತಾರೆ. ಕೆಲಸದ ಬಗ್ಗೆ ಹೆಚ್ಚು ಆಸ್ಥೆ ಹೊಂದಿರುವ ಸ್ವಭಾವದವರಾಗಿರುತ್ತಾರೆ. ಜೀವನದಲ್ಲಿ ಈ ರೀತಿಯಾದರೆ, ಇಂತಹ ಸವಾಲುಗಳು ಎದುರಾದರೆ ಇದೇ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವ ಯೋಜನೆಯನ್ನು ಹೊಂದಿರುತ್ತಾರೆ.

ಈ ವ್ಯಕ್ತಿಗಳು ಪ್ರಾಮಾಣಿಕತೆಗೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಇವರ ವಿಶ್ವಾಸಾರ್ಹತೆಯನ್ನು ನೀವು ಅಳೆದು ತೂಗಲು ಸಾಧ್ಯತೆಯೇ ಇಲ್ಲ. ಸ್ವಲ್ಪ ಗಂಭೀರ ಸ್ವಭಾವದವರೂ ಆಗಿರುತ್ತಾರೆ. ಬದುಕಿನಲ್ಲಿ ಪ್ರಾಯೋಗಿಕ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.

ಈ ಜನರು ತಮ್ಮ ಕೆಲಸಕ್ಕೆ ತಕ್ಕ ಗೌರವ, ತಮ್ಮ ಶ್ರಮಕ್ಕೆ ತಕ್ಕ ಫಲ ಸಿಗದೆ ಇದ್ದಲ್ಲಿ ಅಲ್ಲಿಂದ ಹೇಳದೆ ಕೇಳದೆ ಮಾಯವಾಗುತ್ತಾರೆ. ಅವರ ತಾಳ್ಮೆಯನ್ನು ಪರೀಕ್ಷಿಸಿ ನೋಡಿ. ಒಮ್ಮೆ ತಾಳ್ಮೆ ಮೀರಿದರೆ ಅವರು ಆಕ್ರಮಣಕಾರಿಯಾಗಿರಬಹುದು.

ಈ ಮೂರು ವಸ್ತುಗಳು ಮನೆಯಲ್ಲಿದ್ದರೆ ಹಣಕ್ಕೆ ಕೊರತೆನೇ ಆಗಲ್ವಂತೆ....! ...

ಕಾದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಹಠಾತ್ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಜೊತೆಗೆ ತಾಳ್ಮೆ ಕಳೆದುಕೊಂಡು ವರ್ತಿಸುವುದಿಲ್ಲ. ಒಂದು ವಿಷಯದ ಬಗ್ಗೆ ವಿವರವಾಗಿ ಯೋಚಿಸುತ್ತಾರೆ ಆ ನಂತರವೇ ತಮ್ಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ರೀತಿ ಆಲೋಚನೆ ಮಾಡಲು ಗುಣಮಟ್ಟದ ಸಮಯವನ್ನು ಮೀಸಲಿಡುತ್ತಾರೆ.

ಈ ಜನರು ಸುಲಭವಾಗಿ ಪ್ರೀತಿಯಲ್ಲಿ ಬೀಳುವುದಿಲ್ಲ. ಅವರು ತಮ್ಮ ಬಳಿ ಬೇರೆಯವರು ಪ್ರೇಮ ನಿವೇದನೆ ಮಾಡಿಕೊಳ್ಳಲಿ ಎಂದು ಬಯಸುತ್ತಾರೆ. ತಮ್ಮನ್ನು ಪ್ರೀತಿಸುವವರು ಮುಕ್ತವಾಗಿ ಮಾತನಾಡಬೇಕೆಂದು ಆಸೆಪಡುತ್ತಾರೆ. ಆದರೆ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಲು ಸಮಯ ತೆಗೆದುಕೊಳ್ಳುತ್ತಾರೆ. ಕೆಲವು ಸಾರಿ ತಮ್ಮ ನಿರ್ಧಾರಗಳನ್ನು ಸರಿ ಎಂದು ಒಪ್ಪಿಕೊಳ್ಳುವವರನ್ನು ಸ್ವಾರ್ಥಿಗಳೆಂದು ಪರಿಗಣಿಸುತ್ತಾರೆ.

ಈ ಜನರು ಪ್ರಣಯ ಪ್ರಿಯರು ಎಂದು ಪರಿಗಣಿಸಲಾಗುತ್ತದೆ. ಕೆಲ ವಿಷಯಗಳಲ್ಲಿ ನಾಚಿಕೆ ಸ್ವಭಾವದವರಾದರೂ ನೇರ ಸ್ವಭಾವದವರು. ಸ್ವಭಾವದಲ್ಲಿ ಕಲಾಪ್ರಿಯರು ಮತ್ತು ಜೀವನದಲ್ಲಿ ಉತ್ತಮ ಅನುಭವ ಹೊಂದಿರುತ್ತಾರೆ. ಆರಾಮದಾಯಕ ಮನಸ್ಥಿತಿಯವರಾಗಿರುತ್ತಾರೆ.

ಈ ಜನರು ತಮ್ಮನ್ನು ಪ್ರೀತಿಸುವವರನ್ನು ಎಂದಿಗೂ ಮರೆಯುವುದಿಲ್ಲ. ಕಷ್ಟದ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲುತ್ತಾರೆ. ತಮ್ಮನ್ನು ನಂಬಿರುವವರಿಗೆ ಯಾವುದೇ ಕಾರಣಕ್ಕೂ ಬೆನ್ನಿಗೆ ಚೂರಿ ಹಾಕುವುದಿಲ್ಲ. ಸುಲಭವಾಗಿ ಇಂಥವರ ಮೇಲೆ ನಂಬಿಕೆ ಇಡಬಹುದು.

ಈ ರಾಶಿಯವರು ಸ್ನೇಹಿತರಿಗೆ ಸಾಲ ಕೊಡುವುದಲ್ಲಿ ಎತ್ತಿದ ಕೈ; ನಿಮ್ಮ ರಾಶಿ ಇದ್ಯಾ? ...

 

click me!