ಮಾರ್ಚ್‌ನಲ್ಲಿ ಜನಿಸಿದವರು ಹೀಗೆ ಇರ್ತಾರಂತೆ ....!

By Suvarna News  |  First Published Mar 18, 2021, 5:19 PM IST

ಮಾರ್ಚ್ ತಿಂಗಳಿನಲ್ಲಿ ಜನಿಸಿದವರು ಮಾತಿನ ಮಲ್ಲರಾಗಿರುತ್ತಾರಂತೆ. ಅದೇ ರೀತಿ ಪ್ರತಿ ತಿಂಗಳಿನಲ್ಲಿ ಜನಿಸಿದವರು ಆಯಾ ತಿಂಗಳಿನ ವಿಶೇಷ ಗುಣ- ಸ್ವಭಾವವನ್ನು ಹೊಂದಿರುತ್ತಾರೆ. ವ್ಯಕ್ತಿಯ ಸ್ವಭಾವವನ್ನು ತಿಳಿಯುವಲ್ಲಿ ಜನಿಸಿದ ಸ್ಥಳ, ಸಮಯ, ವಾರ ಎಲ್ಲವು ಎಷ್ಟು ಮುಖ್ಯವಾಗುತ್ತದೆಯೊ, ತಿಂಗಳು ಸಹ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ ಮಾರ್ಚ್ ತಿಂಗಳಿನಲ್ಲಿ ಜನಿಸಿದವರ ಗುಣಗಳ ಬಗ್ಗೆ ತಿಳಿಯೋಣ..


ಮಾರ್ಚ್ ತಿಂಗಳು ಕ್ಯಾಲೆಂಡರ್ ವರ್ಷದ ಮೂರನೇ ತಿಂಗಳು. ಈ ತಿಂಗಳಿನಲ್ಲಿ ಜನಿಸಿದವರು ಅನೇಕ ವಿಶೇಷತೆಗಳನ್ನು ಹೊಂದಿರುತ್ತಾರಂತೆ. ಆಯಾ ಮಾಸದಲ್ಲಿ ಜನಿಸಿದ ವ್ಯಕ್ತಿಗಳು ಅದಕ್ಕೆ  ಅನುಗುಣವಾಗಿ ವಿಶೇಷ ಗುಣ ಸ್ವಭಾವಗಳನ್ನು ಹೊಂದಿರುತ್ತಾರೆ. ಹುಟ್ಟಿದ  ತಿಂಗಳಿನ ಆಧಾರದ ಮೇಲೆ ವ್ಯಕ್ತಿಯ ಗುಣ ವಿಶೇಷಗಳನ್ನು ತಿಳಿಯಬಹುದಾಗಿದೆ. ಈಗ ಮಾರ್ಚ್ ನಲ್ಲಿ ಜನಿಸಿದವರ ಬಗ್ಗೆ ತಿಳಿಯೋಣ.... 

ಮೃದು ಮನಸ್ಸಿನವರು :
ಮಾರ್ಚ್ ನಲ್ಲಿ ಜನಿಸಿದವರು ಅನೇಕ ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಕೋಮಲ ಹೃದಯದವರು ಇವರಾಗಿದ್ದು, ಪರೋಪಕಾರದ ಗುಣವನ್ನು ಹೊಂದಿರುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ದಾನ - ಧರ್ಮಗಳಂಥ ಪುಣ್ಯ ಕಾರ್ಯಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ಅಪರಿಚಿತರನ್ನು ಬೇಗ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಗುಣ ಇವರಲ್ಲಿರುತ್ತದೆ. ಹಾಗಾಗಿ ಇವರಿಗೆ ಅನೇಕ ಜನ ಸ್ನೇಹಿತರಿರುತ್ತಾರೆ.

ಇದನ್ನು ಓದಿ: ಮಾನಸಿಕ ಒತ್ತಡ, ಕೋರ್ಟ್ ಕಲಹ ಮುಕ್ತಿಗೆ ಈ ಮಂತ್ರ ಜಪಿಸಿ! 

ಮಹತ್ವಾಕಾಂಕ್ಷೆ ಉಳ್ಳವರು :
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಮಾರ್ಚ್ ತಿಂಗಳಿನಲ್ಲಿ ಜನಿಸಿದವರು ಹೆಚ್ಚು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ನೋಡಲು ಸಾಮಾನ್ಯರಂತೆ ಕಂಡರೂ ಆಂತರ್ಯದಲ್ಲಿ ಹೆಚ್ಚು ಗಂಭೀರವಾಗಿದ್ದು ಗುರಿಯನ್ನು ಸಾಧಿಸುವಲ್ಲಿ ಪ್ರಯತ್ನ ಪಡುತ್ತಿರುತ್ತಾರೆ. 

Tap to resize

Latest Videos



ಜವಾಬ್ದಾರಿಯ ಬಗ್ಗೆ ಹೆಚ್ಚು ಅರಿವನ್ನು ಹೊಂದಿರುತ್ತಾರೆ :
ಮಾರ್ಚ್ ತಿಂಗಳಿನಲ್ಲಿ ಜನಿಸಿದವರು ತಮ್ಮ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಪೂರೈಸುತ್ತಾರೆ. ಈ ತಿಂಗಳಿನಲ್ಲಿ ಜನಿಸಿದವರು ಯಾವುದೇ ಕೆಲಸವನ್ನು ವಹಿಸಿದರು ಸಹ ಅದನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಾರೆ. ತಾವು ಮಾಡುವ ಕೆಲಸಕ್ಕೆ ಗೌರವವನ್ನು ಕೊಡುತ್ತಾರೆ. ಮಾರ್ಚ್‌ನಲ್ಲಿ ಜನಿಸಿದವರ ಈ ಗುಣವೇ ಅವರನ್ನು ಯಶಸ್ಸಿನ ಮೆಟ್ಟಿಲೇರುವಲ್ಲಿ ಸಹಾಯಕವಾಗುತ್ತದೆ. ಸಮಾಜದ ಹಿತಕ್ಕಾಗಿ ಮಾಡಿರುವ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವದರಲ್ಲಿ ಇವರು ಹೆಸರುವಾಸಿಯಾಗಿರುತ್ತಾರೆ. ಅಷ್ಟೇ ಅಲ್ಲದೆ ನೈತಿಕ ಮೌಲ್ಯಗಳನ್ನು ಗೌರವಿಸುತ್ತಾರೆ.

ಇದನ್ನು ಓದಿ: ಈ ಮೂರು ವಸ್ತುಗಳು ಮನೆಯಲ್ಲಿದ್ದರೆ ಹಣಕ್ಕೆ ಕೊರತೆನೇ ಆಗಲ್ವಂತೆ....! 

ಮಾತನಾಡುವ ಕಲೆಯನ್ನು ಚೆನ್ನಾಗಿ ಬಲ್ಲವರು
ಮಾರ್ಚ್ ತಿಂಗಳಿನಲ್ಲಿ ಜನಿಸಿದವರು ಮಾತಿನಲ್ಲಿ ಶೂರರು ಎಂದು ಹೇಳಲಾಗುತ್ತದೆ. ತಮ್ಮ ಮಾತನ್ನು ಎದುರಿನಲ್ಲಿರುವ ವ್ಯಕ್ತಿಯ ಮನಸ್ಸಿಗೆ ನಾಟುವಂತೆ ಹೇಳುವ ಪರಿಯನ್ನು ಅರಿತಿರುತ್ತಾರೆ. ಇದರಿಂದ ಎಲ್ಲರ ಗಮನ ಸೆಳೆಯುತ್ತಾರೆ. ಈ ವ್ಯಕ್ತಿಗಳು ಹೆಚ್ಚು ಮಾತನಾಡುವ ಸ್ವಭಾವವು ಇತರರಿಗೆ ಕಿರಿಕಿರಿ ಉಂಟುಮಾಡುತ್ತದೆ. ಮಾತನಾಡುವ ಕಲೆ ಗೊತ್ತಿದರೂ ಕೆಲವೊಮ್ಮೆ ನಿರ್ಣಯ ತೆಗೆದುಕೊಳ್ಳಲು ಹಿಂಜರಿಯುವ ಮನೋಭಾವವು ಇವರದ್ದಾಗಿರುತ್ತದೆ. ಮಾರ್ಚ್‌ನಲ್ಲಿ ಜನಿಸಿದವರ ಈ ರೀತಿಯ ಸ್ವಭಾವವು ಜನರಿಂದ ದೂರವಾಗುವಂತೆ ಮಾಡುತ್ತದೆ.

ಮಾತಿಗೆ ಬದ್ಧರು
ಈ ತಿಂಗಳಿನಲ್ಲಿ ಜನಿಸಿದವರು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ತಾವು ಹೇಳಿದ ಮಾತಿಗೆ ಎಂದಿಗೂ ಬದ್ಧರಾಗಿರುತ್ತಾರೆ. ಅದನ್ನು ನಡೆಸುವಲ್ಲಿ ಎಂಥ ಕಷ್ಟವನ್ನು ಎದುರಿಸಲು ಸನ್ನದ್ಧರಾಗಿರುತ್ತಾರೆ. ಹಾಗಾಗಿ ಇವರು ಗುರಿ ಸಾಧಿಸಲು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಇರುವ ವಿಷಯವನ್ನು ಇದ್ದ ರೀತಿ ಹೇಳದೆ ಅದಕ್ಕೆ ಇನ್ನಷ್ಟು ಸೇರಿಸಿ ಹೇಳುವ ಸ್ವಭಾವವನ್ನು ಇವರು ಹೊಂದಿರುತ್ತಾರೆ. ಹಾಗಾಗಿ ಈ ವ್ಯಕ್ತಿಗಳ ಮುಂದೆ ರಹಸ್ಯವಾಗಿರಬೇಕಾದ ವಿಷಯಗಳನ್ನು ಚರ್ಚಿಸುಲು ಹಿಂಜರಿಯುತ್ತಾರೆ.

ಈ ಬಗ್ಗೆ ಹೆಚ್ಚು ಆಸಕ್ತಿ
ಮಾರ್ಚ್ ತಿಂಗಳಿನಲ್ಲಿ  ಜನಿಸಿದ ಮಹಿಳೆಯರಿಗೆ ಅಲಂಕಾರ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಸಾಹಸ ಕಾರ್ಯಗಳನ್ನು ಮಾಡುವುದೆಂದರೆ ಅಚ್ಚುಮೆಚ್ಚು. ರಹಸ್ಯವಾದ ವಿಷಯಗಳನ್ನು ತಿಳಿದುಕೊಳ್ಳುವ ಕೂತುಹಲವನ್ನು ಹೆಚ್ಚು ಹೊಂದಿರುತ್ತಾರೆ. ಧರ್ಮ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಳ್ಳುವ ಅಭಿರುಚಿಯನ್ನು ಸಹ ಹೊಂದಿರುತ್ತಾರೆ.

ಇದನ್ನು ಓದಿ: ಈ ರಾಶಿಯವರು ಸ್ನೇಹಿತರಿಗೆ ಸಾಲ ಕೊಡುವುದಲ್ಲಿ ಎತ್ತಿದ ಕೈ; ನಿಮ್ಮ ರಾಶಿ ಇದ್ಯಾ? 

ಯಾವ ದೇವರನ್ನು ಪೂಜಿಸಬೇಕು?
ಮಾರ್ಚ್ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳು ಶ್ರೀ ಮಹಾವಿಷ್ಣುವನ್ನು ಪೂಜಿಸಬೇಕು. ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಠಿಸುವುದರಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದಾಗಿದೆ. ಅರ್ಧಕ್ಕೆ ನಿಂತಿರುವ ಕಾರ್ಯಗಳೆಲ್ಲ ಬಹುಬೇಗ ಪೂರ್ಣವಾಗುತ್ತವೆ. ಪ್ರತಿ ಭಾನುವಾರ ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದಕ್ಕೆ ಜೇನುತುಪ್ಪವನ್ನು ಬೆರಸಿ ಪ್ರಾತಃಕಾಲದಲ್ಲಿ ಸೂರ್ಯನಿಗೆ ಅರ್ಘ್ಯ ನೀಡಬೇಕು.

click me!