ವ್ಯಕ್ತಿಯ ಮರಣಾ ನಂತರ 10 ರೀತಿಯ ದಾನಗಳನ್ನು ಮಾಡಲು ಸಲಹೆ ನೀಡಲಾಗುತ್ತದೆ. ಪಿತೃದೋಷ ನಿವಾರಣೆಗ ಕೂಡಾ ದಶದಾನ ಮಾಡಲಾಗುತ್ತದೆ. ಈ ದಶ ದಾನಗಳು ಯಾವೆಲ್ಲ, ಅವುಗಳ ಪ್ರಯೋಜನವೇನು?
ಎಲ್ಲ ಧರ್ಮಗಳಲ್ಲೂ ದಾನಕ್ಕೆ ಪ್ರಾಮುಖ್ಯತೆ ಇದೆ. ಅಗತ್ಯ ಇರುವವರಿಗೆ, ನಿರ್ಗತಿಕರಿಗೆ ದಾನ ಮಾಡುವುದರಿಂದ ಸಾಕಷ್ಟು ಪುಣ್ಯಫಲಗಳನ್ನು ಕಾಣಬಹುದಾಗಿದೆ. ದಾನ ಎಂದರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶಕ್ತ್ಯಾನುಸಾರ ಮತ್ತೊಬ್ಬರಿಗೆ ಉಪಯೋಗವಾಗುವ ವಸ್ತುವನ್ನು ಇತರರಿಗೆ ನೀಡುವುದು. ಈ ರೀತಿ ದಾನ ಮಾಡುವುದರಿಂದ ಭಗವಂತನ (God) ಕೃಪೆ ಸಿಗುತ್ತದೆ. ದಾನ(donate) ಮಾಡುವುದರಿಂದ ಭೂಲೋಕದಲ್ಲಿ ಅಷ್ಟೇ ಅಲ್ಲದೆ, ಮರಣದ ನಂತರ ಪರಲೋಕದಲ್ಲಿಯೂ ಮೋಕ್ಷ ಪ್ರಾಪ್ತಿಗೆ ಅನುಕೂಲವಾಗುತ್ತದೆ.
ವ್ಯಕ್ತಿಯ ಮರಣದ ನಂತರ ದಶ ದಾನ (Dasha Dhanam)ವನ್ನು ಮಾಡಲಾಗುತ್ತದೆ. ಯಾವುದೇ ಪಿತೃದೋಷ(Pithru dosha)ವನ್ನು ಹೊಂದಿದ್ದರೆ ಎಲ್ಲ ಪಾಪಗಳನ್ನು ತೊಡೆದುಹಾಕಲು ಇದು ವ್ಯಕ್ತಿಗೆ ಸಹಾಯ ಮಾಡುತ್ತದೆ.
ನಮ್ಮ ವೇದಗಳ ಪ್ರಕಾರ ದಾನವನ್ನು ನೀಡುವುದು ಒಂದು ಮಹತ್ವದ ಕಾರ್ಯ ವಿಧಾನವಾಗಿದೆ. ಮರಣಾನಂತರ, ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಮಾಡಿದ ಕರ್ಮದ ಪ್ರಕಾರ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಮಹಾಭಾರತದಲ್ಲಿ, ಪ್ರಯಾಣ ಮಾಡುವಾಗ ಜ್ಞಾನವು ಸ್ನೇಹಿತ; ಹೆಂಡತಿ ಮನೆಯಲ್ಲಿ ಸ್ನೇಹಿತೆ; ಔಷಧವು ರೋಗಿಗಳ ಸ್ನೇಹಿತ ಮತ್ತು ದಾನಂ ಸಾಯುವವನ ಸ್ನೇಹಿತ ಎಂದು ಸೂಚಿಸಲಾಗುತ್ತದೆ. ಅಂದರೆ, ದಾನವು ವ್ಯಕ್ತಿಯ ಸ್ವರ್ಗಾರೋಹಣಕ್ಕೆ ಇಲ್ಲವೇ ಮೋಕ್ಷಕ್ಕೆ ಸಹಾಯ ಮಾಡುತ್ತದೆ. ಹೀಗಾಗಿ, ಪಿತೃದೋಷ ನಿವಾರಣೆಗೆ ಮತ್ತು ಆಯಸ್ಸು ತೀರಿದವರ ಸುಖಕರ ಪರಲೋಕ ಪ್ರಯಾಣಕ್ಕಾಗಿ ದಶ ದಾನಗಳನ್ನು ಸೂಚಿಸಲಾಗಿದೆ.
ಇದು ಬಡ ವಿಪ್ರರಿಗೆ ದಾನ ಮಾಡುವ 10 ವಸ್ತುಗಳನ್ನು ಸೂಚಿಸುತ್ತದೆ. ಆ 10 ವಸ್ತುಗಳು ಈ ಕೆಳಗಿನಂತಿವೆ.
1. ಭೂಮಿ ಅಥವಾ ಚಂದನ (Land or Chandanam)
ಇದನ್ನು ಮಾಡುವುದರಿಂದ, ಒಬ್ಬ ವ್ಯಕ್ತಿಯು ಬ್ರಹ್ಮಹತ್ಯೆಯಂಥ ಮಹಾಪಾಪಗಳಿಂದ ಮುಕ್ತನಾಗುತ್ತಾನೆ. ಭೂಮಿ ನೀಡುವಷ್ಟು ಶಕ್ತರಾಗಿಲ್ಲದಾಗ ಭೂಮಿಯನ್ನು ದಾನವಾಗಿ ನೀಡುವ ಬದಲು ಚಂದನ (ಗಂಧ) ಮರದ ತುಂಡನ್ನು ಅರ್ಪಿಸಲಾಗುತ್ತದೆ ಎಂದು ನಂಬಲಾಗಿದೆ. ಚಂದನವು ಅದರ ಪರಿಮಳದಿಂದಾಗಿ ಭೂಮಿಯ ಅಂಶದೊಂದಿಗೆ ಸಂಬಂಧಿಸಿದೆ.
ಜೂ.26ರಂದು ಕುಜ- ರಾಹು ಸಂಧಿ: ಶನಿಯ ದೃಷ್ಟಿಯಲ್ಲಿ ಮೇಷ, ಕುಜ -ರಾಹು ಸೇರಿರುವುದೂ ಅಪಾಯಕಾರಿ!
2. ತಿಲ(Tila)
ತಿಲವು ಕಪ್ಪು ಎಳ್ಳಿನ ಬೀಜವನ್ನು ಸೂಚಿಸುತ್ತದೆ, ಅದು ಆಲೋಚನೆ, ಮಾತು ಮತ್ತು ಕ್ರಿಯೆಯಲ್ಲಿನ ಪಾಪವನ್ನು ತೆಗೆದು ಹಾಕುತ್ತದೆ.
3. ಚಿನ್ನ (Gold)
ಇದು ಎಲ್ಲ ದೇವರನ್ನು ತೃಪ್ತಿಪಡಿಸುತ್ತದೆ ಮತ್ತು ಯಮ ಲೋಕದ ದುಃಖಗಳಲ್ಲಿ ಒಂದರಿಂದ ವಿನಾಯತಿ ಕೊಡಿಸುತ್ತದೆ.
4. ತುಪ್ಪ(Ghee)
ದೇವತೆಗಳನ್ನು ಮೆಚ್ಚಿಸಲು ತುಪ್ಪ ದಾನ ನೀಡಲಾಗುತ್ತದೆ.
5. ವಸ್ತ್ರ(Vastra)
ಯಮದೂತರಿಂದ ತೊಂದರೆಯನ್ನು ತಪ್ಪಿಸಲು ಬಟ್ಟೆಬರೆಯನ್ನು ದಾನವಾಗಿ ನೀಡಲಾಗುತ್ತದೆ.
6. ಧಾನ್ಯ(Dhanyam)
ಯಮ ಲೋಕದ ದ್ವಾರಪಾಲಕರಿಂದ ತೊಂದರೆಯನ್ನು ತಪ್ಪಿಸಲು ಧಾನ್ಯ ದಾನ ನೀಡಲಾಗುತ್ತದೆ.
7. ಬೆಲ್ಲ(Jaggery)
ಒಬ್ಬ ವ್ಯಕ್ತಿಯನ್ನು ಉತ್ತಮ ಲೋಕಕ್ಕೆ ಕರೆದೊಯ್ಯಲು ಬೆಲ್ಲ ದಾನ ಸಹಾಯ ಮಾಡುತ್ತದೆ.
8. ಬೆಳ್ಳಿ (Silver)
ಪಾಪಗಳಿಂದ ವಿನಾಯಿತಿ ಪಡೆಯುವುದು ಮತ್ತು ಸ್ವರ್ಗವನ್ನು ಆನಂದಿಸಲು ಬೆಳ್ಳಿಯನ್ನು ದಾನ ಮಾಡಲಾಗುತ್ತದೆ.
Astrology Tips: ಕಾಲ ಮೇಲೆ ಕಾಲಾಕಿ ಕೂತ್ಕೊಂಡು ಹಣ ಕಳ್ಕೊಳ್ಬೇಡಿ!
9. ಉಪ್ಪು(Salt)
ಯಮನ ಭಯವನ್ನು ನಿವಾರಿಸಲು ಉಪ್ಪನ್ನು ದಾನ ನೀಡಲಾಗುತ್ತದೆ.
10. ಗೋವು(Cow)
ಗೋವಿನ ದಾನವು ಒಬ್ಬನನ್ನು ಎಲ್ಲ ರೀತಿಯ ನರಕಗಳ ಆಚೆಗೆ ಕರೆದೊಯ್ಯುತ್ತದೆ ಮತ್ತು ಮುಕ್ತಿಯನ್ನು ನೀಡುತ್ತದೆ ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.