Zodiac signs: ಇವರಿಗೆ ಸಂಬಂಧಗಳಲ್ಲಿ ಆತಂಕ, ಒತ್ತಡ ಹೆಚ್ಚು

By Suvarna News  |  First Published Jun 24, 2022, 5:56 PM IST

ಪ್ರತಿಯೊಂದು ಸಂಬಂಧದಲ್ಲಿಯೂ ಒತ್ತಡ ಮತ್ತು ಆತಂಕಗಳು ಇರುವುದು ಸಾಮಾನ್ಯ ವಿಷಯ. ಆದರೆ, ಕೆಲವೊಮ್ಮೆ ಆತಂಕವು ನಿಮ್ಮ ಸಂಬಂಧಗಳಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅದಕ್ಕೂ ನಿಮ್ಮ ರಾಶಿಗೂ ಸಂಬಂಧವಿದೆ. ಅದೇನು ಎಂದು ಇಲ್ಲಿ ತಿಳಿಯಿರಿ..


ಕೆಲಸದಲ್ಲಿ, ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಮಸ್ಯೆಗಳು, ಜಗಳಗಳು ಉಂಟಾಗುವುದು. ದಂಪತಿಗಳ ನಡುವೆ ವಾದ, ವಿವಾದಗಳಾಗುವುದು. ಅಥವಾ ನಿರ್ಲಕ್ಷ್ಯದ ಭಾವನೆಗಳು ಒತ್ತಡ (Stress) ಮತ್ತು ಚಿಂತೆಗೆ ಕಾರಣವಾಗಬಹುದು. ಸಂಬಂಧದಲ್ಲಿ ಆತಂಕವನ್ನು ಅನುಭವಿಸುವ ಜನರು ತಮ್ಮ ಸಂಗಾತಿಯನ್ನು (Partner) ದೂರವಿಡುವ ರೀತಿಯಲ್ಲಿ ವರ್ತಿಸಬಹುದು. ಹೀಗೆ ಇಂತಹ ಸಣ್ಣ ಪುಟ್ಟ ವಿಷಯಗಳು ಸಂಬಂಧದಲ್ಲಿ ಬಹಳ ದೊಡ್ಡ ವ್ಯತ್ಯಾಸಗಳನ್ನು ಮಾಡಿಬಿಡುತ್ತವೆ. ಸಂಬಂಧದ ಆತಂಕದಿಂದ (Anxiety) ಬಳಲುತ್ತಿರುವ 4 ರಾಶಿಚಕ್ರದ ಚಿಹ್ನೆಗಳನ್ನು ಕೆಳಗೆ ನೀಡಲಾಗಿದೆ.

1. ವೃಶ್ಚಿಕ ರಾಶಿ (Cancer)
ವೃಶ್ಚಿಕ ರಾಶಿಯ ಜನರಿಗೆ ಸಂಬಂಧಗಳು ಬಹಳ ಮುಖ್ಯ, ಮತ್ತು ಅವರು ಯಾರೊಂದಿಗಾದರೂ ಇರುವಾಗ, ಸಾಕಷ್ಟು ಭಾವನಾತ್ಮಕವಾಗುತ್ತಾರೆ. ಅವರು ಮೃದುವಾದ ಹೃದಯವನ್ನು (Heart) ಹೊಂದಿರುತ್ತಾರೆ. ಹೀಗೆ ಎಲ್ಲಾ ಭಾವನೆಗಳನ್ನು ನಿರಂತರವಾಗಿ ಅನುಭವಿಸುತ್ತಾರೆ. ಅವರು ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಯೋಚನೆಯಿಂದ ಚಿಂತಿತರಾಗುತ್ತಾರೆ. ಮತ್ತು ಹಾಗಾಗಿದ್ದರೆ ಏನಾಗುತ್ತಿತ್ತು ಅಥವಾ ಹೀಗಾದರೆ ಏನಾಗುತ್ತಿತ್ತು ಎಂಬುದಾಗಿ ಸದಾ ಕಾಲ ಕಾಲ್ಪನಿಕ (Imaginary) ಸಾಧ್ಯತೆಗಳ ಮೇಲೆ ಗೀಳನ್ನು ಹೊಂದಿರುತ್ತಾರೆ.

Tap to resize

Latest Videos

ಇದನ್ನೂ ಓದಿ: ಯಾವ ರಾಶಿಯವರಿಗೆ ಎಷ್ಟು ಮಕ್ಕಳ ಭಾಗ್ಯ?

2. ಮಿಥುನ ರಾಶಿ (Gemini)
ಮಿಥುನ ರಾಶಿಯವರು ಉಭಯ (Dual) ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ತಮ್ಮ ಸ್ವಂತ ನಂಬಿಕೆಗಳನ್ನು ಒಪ್ಪುವುದಿಲ್ಲ. ವಿಶೇಷವಾಗಿ ಅವರು ವಿನೋದ (Entertainment) ಇಷ್ಟಪಡುವ ವ್ಯಕ್ತಿಗಳಾಗಿದ್ದರೂ, ಅವರ ಆತಂಕದ ಹೆಚ್ಚಿನ ಭಾಗವು ಅವರ ಪ್ರಣಯ ಸಂಬಂಧಗಳಲ್ಲಿಯೂ ಸಹ ಮನರಂಜನೆ ಹುಡುಕುವ ಅವರ ನಿರಂತರ ಬಯಕೆಯಿಂದ ಉಂಟಾಗುತ್ತದೆ. ತಮ್ಮ ಸಂಗಾತಿಯ ನಿರೀಕ್ಷೆಗಳಿಗೆ (Expectation) ತಕ್ಕಂತೆ ಬದುಕಬೇಕು ಎಂಬುದಕ್ಕೆ ಪ್ರಯತ್ನಿಸುವ ಮೂಲಕ ಅವರು ತಮ್ಮ ಮೇಲೆ ಹೆಚ್ಚು ಒತ್ತಡವನ್ನು ಹಾಕಿಕೊಳ್ಳುತ್ತಾರೆ. ಇದು ಆತಂಕದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

3. ಕನ್ಯಾರಾಶಿ (Virgo)
ಕನ್ಯಾ ರಾಶಿಯವರು ತುಂಬಾ ಭಾವುಕರಾಗಿರುತ್ತಾರೆ (Emotional). ಎಲ್ಲವನ್ನೂ ತಮ್ಮ ನಿಯಮಗಳ ರೀತಿಯಲ್ಲಿ ಅರ್ಥೈಸುವ ಅವರ ಪ್ರವೃತ್ತಿಯ ಕಾರಣದಿಂದ ಕೆಲವೊಂದು ಚಿಂತೆಗಳನ್ನು (Tension) ಸೃಷ್ಟಿಸಿಕೊಳ್ಳುತ್ತಾರೆ. ಕನ್ಯಾ ರಾಶಿಯವರು ಭಾವನಾತ್ಮಕವಾಗಿ ದೂರವಿರುತ್ತಾರೆ ಇದರಿಂದಾಗಿ, ಜನರು ಅವರನ್ನು ಅಪರಾಧಿಗಳ ಹಾಗೆ ನೋಡಬಹುದು. ಅವರಿಂದ ದೂರ ಉಳಿಯಬಹುದು. ಆದರೆ ವಾಸ್ತವವಾಗಿ (Reality) ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸದಿರಬಹುದು ಆದರೆ ಅದು ಅವರು ಸೂಕ್ಷ್ಮವಾಗಿಲ್ಲ ಎಂದು ಅರ್ಥವಲ್ಲ. ತಮ್ಮ ಸಂಗಾತಿಯೊಂದಿಗಿನ ಘರ್ಷಣೆಯ ನಂತರ, ಕನ್ಯಾರಾಶಿಯ ಜನರು ತಮ್ಮ ನೋವನ್ನು ನುಂಗಿಕೊಂಡು ದಣಿದಿರಬಹುದು, ಇದು ಅವರಲ್ಲಿ ಆತಂಕವನ್ನು ಉಂಟುಮಾಡುತ್ತದೆ.

ಇದನ್ನೂ ಓದಿ:ಈ ಐದು ರಾಶಿಗಳು ಎಲ್ಲರನ್ನೂ ಖುಷಿಯಾಗಿಡುತ್ತವೆ!

4. ಮೀನ ರಾಶಿ (Pisces)
ಮೀನ ರಾಶಿಯವರು ಬೇರೆ ಜನರನ್ನು ಪೋಷಿಸುತ್ತಿದ್ದಾರೆ (Nurture). ಅವರು ತಮ್ಮ ಅಗತ್ಯಗಳಿಗಿಂತ ಇತರರ ಅಗತ್ಯಗಳನ್ನು ಪೂರೈಸುವ ಕುರಿತು ಯೋಚಿಸುತ್ತಾರೆ. ಇದು ಅದ್ಭುತವಾದ ಸಂಗತಿಯಾಗಿದ್ದರೂ, ಕೆಲವೊಂದು ಸಾಂದರ್ಭದಲ್ಲಿ ಇದು ಅವರ ಮಾನಸಿಕ  ಆರೋಗ್ಯದ ಮೇಲೆ ನಕಾರಾತ್ಮಕ (Negative) ಪರಿಣಾಮ ಬೀರುತ್ತದೆ. ಅವರ ಪ್ರಣಯ ಸಂಬಂಧಗಳಲ್ಲಿ ಅವರು ಉದ್ವಿಗ್ನತೆ ಮತ್ತು ಆತಂಕವನ್ನು ಉಂಟುಮಾಡಬಹುದು. ಅವರ ಹೊಂದಾಣಿಕೆಯ (Adjustment) ಸ್ವಭಾವ ಮತ್ತು ತಮ್ಮ ಸಂಗಾತಿಯ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯದಿಂದಾಗಿ, ಅವರು ಆತಂಕಕ್ಕೆ ಒಳಗಾಗುತ್ತಾರೆ. ತಮ್ಮ ಸಂಬಂಧದಲ್ಲಿ ಉದ್ಭವಿಸುವ ಸಮಸ್ಯೆಯ ಬಗ್ಗೆ ಅವರ ಸಂಗಾತಿಗೆ ತಿಳಿದಿಲ್ಲದಿದ್ದರೂ ಸಹ, ಅವರು ನಿರಂತರವಾಗಿ ಕಾಲ್ಪನಿಕ ಸವಾಲಿನ ಮತ್ತು ರಾಜಿ ಪರಿಸ್ಥಿತಿಯಿಂದ ತಮಗೆ ತಾವೇ ಚಿಂತೆಗೆ ಒಳಗಾಗುತ್ತಾರೆ.

ಸಂಬಂಧಗಳಲ್ಲಿ ಸಾಧ್ಯವಾದಷ್ಟು ಒತ್ತಡ ಹಾಗೂ ಆತಂಕಗಳನ್ನು ನಿಭಾಯಿಸಲು ಸಾಮಾರ್ಥ್ಯ ಹೊಂದಿರಬೇಕು. ಇಲ್ಲವಾದರೆ ಇದು ಇಬ್ಬರ ಜೀವನದ ಮೇಲೆಯೂ ನಕಾರಾತ್ಮಕ ಪರಿಣಾಮವನ್ನು ಬೀರಬಹುದು..

click me!