Astrology Tips : ಚಪ್ಪಲಿ ಕಳ್ಕೊಂಡ್ರೆ ಚಿಂತೆ ಬೇಡ, ದುಡ್ಡು ಕೈ ಸೇರೋದು ಗ್ಯಾರಂಟಿ

Published : Jun 22, 2022, 04:49 PM IST
Astrology Tips : ಚಪ್ಪಲಿ ಕಳ್ಕೊಂಡ್ರೆ ಚಿಂತೆ ಬೇಡ, ದುಡ್ಡು ಕೈ ಸೇರೋದು ಗ್ಯಾರಂಟಿ

ಸಾರಾಂಶ

ಶನಿ ಹೆಸರು ಕೇಳಿದ್ರೆ ಜನರು ನಿದ್ರೆಯಲ್ಲೂ ಎದ್ದು ಕುಳಿತುಕೊಳ್ತಾರೆ. ಶನಿ ಕೃಪೆ ಸಿಗೋದು ಕಷ್ಟ. ಇದಕ್ಕೆ ಜನರು ಸಾಕಷ್ಟು ಪ್ರಯತ್ನ ಮಾಡ್ತಾರೆ. ಕೆಲವೊಮ್ಮೆ ಶನಿ ನಮಗೆ ಕರುಣೆ ತೋರಿಸ್ತಾನೆ. ಶನಿ ನಮ್ಮ ಮೇಲೆ ಮೃದು ಧೋರಣೆ ತೋರಲು ನಾವು ಮಾಡುವ ಕೆಲಸಗಳೂ ಕಾರಣವಾಗುತ್ತವೆ.   

ನ್ಯಾಯ  ದೇವರು ಎಂದೇ ಶನಿ (Shani) ಪ್ರಸಿದ್ಧವಾಗಿದ್ದಾನೆ. ಶನಿ ದೇವರ (God) ಕೃಪೆ ಪಡೆಯುವುದು ಸುಲಭವಲ್ಲ. ಶನಿ ದೇವರ ಆಶೀರ್ವಾದ ಸಿಕ್ಕಿದ್ದರೆ ವ್ಯಕ್ತಿಯ ಜೀವನವು ಸಂತೋಷ (Happiness) ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಮತ್ತೊಂದೆಡೆ, ಶನಿದೇವನ ಅಸಮಾಧಾನವು ಜೀವನವನ್ನು ಹಾಳುಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಶನಿ ಅಂದ್ರೆ ಪ್ರತಿಯೊಬ್ಬರೂ ಭಯಪಡ್ತಾರೆ. ಶನಿವಾರ, ಶನಿಯ ಆಶೀರ್ವಾದ ಪಡೆಯಲು ಜನರು ದೇವಸ್ಥಾನಕ್ಕೆ ಹೋಗ್ತಾರೆ. ವಿಶೇಷ ಪೂಜೆಗಳನ್ನು ಮಾಡ್ತಾರೆ. ಆದ್ರೆ ಎಲ್ಲರಿಗೂ ಶನಿ ಒಲಿಯುವುದಿಲ್ಲ. ಜಾತಕದಲ್ಲಿ ಸಾಡೇ ಸಾತ್ ಶನಿಯಿದ್ದರೆ ಏಳು ವರ್ಷಗಳ ಕಾಲ ತೊಂದರೆ ಅನುಭವಿಸಬೇಕಾಗುತ್ತದೆ. ಅಂಥವರು  ಶನಿವಾರದಂದು ಶನಿ ದೇವರನ್ನು ಪೂಜಿಸಬೇಕು ಮತ್ತು ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಕೆಲವು ಬಾರಿ ಶನಿ ನಿಮಗೆ ಆಶೀರ್ವಾದ ನೀಡಿದ್ರೆ ಕೆಲ ಸಂಕೇತಗಳನ್ನು ನೀಡ್ತಾನೆ. ಶನಿಯ ಆಶೀರ್ವಾದ ಸಿಕ್ಕಿದ್ರೆ ಯಾವೆಲ್ಲ ಚಿಹ್ನೆ ಕಾಣಿಸಿಕೊಳ್ಳುತ್ತದೆ ಹಾಗೆ ಶನಿ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಇಂದು ಹೇಳ್ತೇವೆ.

ಶನಿ ಯಾರಿಗೆ ಒಲಿಯುತ್ತಾನೆ ಗೊತ್ತಾ ? :

ವ್ಯಸನದಿಂದ ದೂರ : ಶನಿ ಮದ್ಯಪಾನ, ಧೂಮಪಾನ ಸೇರಿದಂತೆ ವ್ಯಸನದಿಂದ ದೂರವಿರುವವರಿಗೆ ಒಲಿಯುತ್ತಾನೆ. ಹಾಗೆ ಬೆಳ್ಳುಳ್ಳಿ, ಈರುಳ್ಳಿ, ಮಾಂಸಾಹಾರ ಸೇವನೆ ಮಾಡದಿರುವವರಿಗೂ ಬೇಗ ಕೃಪೆ ತೋರಿಸ್ತಾನೆ ಎನ್ನಲಾಗುತ್ತದೆ. ನೀವು ಇವೆಲ್ಲವುಗಳಿಂದ ದೂರವಿದ್ದೀರಿ ಅಂದ್ರೆ ಶನಿ ನಿಮ್ಮ ಮೇಲೆ ಒಳ್ಳೆಯ ದೃಷ್ಟಿ ನೆಟ್ಟಿದ್ದಾನೆ ಎಂದರ್ಥ.

ನಿಮ್ಮ ರಾಶಿಗೆ ಯಾವ ಬಣ್ಣದ ವಾಹನ ಕೊಂಡ್ರೆ ಒಳ್ಳೇದು?

ಶಮಿ ವೃಕ್ಷ : ನಿಮ್ಮ ಮನೆಯ ಹೊರಗೆ ಅಥವಾ ಪಶ್ಚಿಮ ದಿಕ್ಕಿನಲ್ಲಿ ಶಮಿ ಮರವಿದ್ದರೆ ಶನಿ ನಿಮ್ಮ ಮೇಲೆ ಕರುಣೆ ತೋರಿಸುತ್ತಾನೆ. ಅಲ್ಲದೆ ದಕ್ಷಿಣ ದಿಕ್ಕಿಗೆ ನಿಂಬೆ ಗಿಡವಿದ್ದರೂ ಹನುಮಂತನ ಕೃಪೆ ನಿಮ್ಮ ಮೇಲೆ ಬೀಳುತ್ತದೆ. ಆಗ ನೀವು ಶನಿಗೆ ಹೆದರಬೇಕಾಗಿಲ್ಲ. 

ಹನುಮಂತನ ಪೂಜೆ : ನಿಯಮಿತವಾಗಿ ನೀವು ಹನುಮಾನ್ ಚಾಲೀಸ್ ಓದುತ್ತಿದ್ದರೆ ಹಾಗೂ ಭಕ್ತಿಯಿಂದ ಹನುಮಂತನ ಆರಾಧನೆ ಮಾಡ್ತಿದ್ದರೂ ಶನಿದೇವ ಪ್ರಸನ್ನನಾಗ್ತಾನೆ. ಯಾಕೆಂದ್ರೆ ಶನಿ ದೇವ, ನಿನ್ನ ಭಕ್ತರಿಗೆ ಕಷ್ಟ ನೀಡುವುದಿಲ್ಲವೆಂದು ಹನುಮಂತನಿಗೆ ಪ್ರಮಾಣ ಮಾಡಿದ್ದಾನೆ.

ಶನಿ ಒಲಿದ್ರೆ ಸಿಗುತ್ತೆ ಈ ಸಂಕೇತ : 

ಚಪ್ಪಲಿ ನಾಪತ್ತೆ : ಅನೇಕ ಬಾರಿ ನಾವು ದೇವಸ್ಥಾನಕ್ಕೆ ಹೋಗ್ತೇವೆ  ಅಥವಾ ಯಾವುದೇ ವಿಶೇಷ ಕಾರ್ಯಕ್ರಮಕ್ಕೆ ಹೋಗಿರ್ತೇವೆ. ಆಗ ಚಪ್ಪಲಿ ಕಳ್ಳತನವಾಗುವುದು ಮಾಮೂಲಿ. ಶನಿವಾರದಂದು ಬೂಟುಗಳು ಮತ್ತು ಚಪ್ಪಲಿಗಳು ಕಳ್ಳತನವಾದರೆ ಚಿಂತಿಸುವ ಅಗತ್ಯವಿಲ್ಲ. ಶನಿವಾರ ಚಪ್ಪಲಿ ಕಳ್ಳತನವಾದ್ರೆ ಖುಷಿಯಾಗಿ. ಅದು ತುಂಬಾ ಶುಭ ಸಂಕೇತವಾಗಿದೆ. ಶನಿದೇವನು ನಿಮ್ಮ ಮೇಲೆ ಸಂತೋಷಗೊಂಡಿದ್ದಾನೆ ಎಂದರ್ಥ. ಎಲ್ಲ ಶುಭ ಕೆಲಸಗಳು ನಿಮ್ಮ ಜೀವನದಲ್ಲಿ ನಡೆಯಲಿವೆ. ಸುಖ, ಶಾಂತಿ, ನೆಮ್ಮದಿ ಸಿಗಲಿದೆ. 

ದೇಹದಲ್ಲಿ ಬಲ : ಶನಿ ದೇವರ ಕೃಪೆ ನಿಮ್ಮ ಮೇಲಾಗಿದ್ದರೆ ಅಥವಾ ಶನಿಯ ಒಳ್ಳೆ ಪ್ರಭಾವ ನಿಮ್ಮ ಮೇಲಾಗಿದ್ದರೆ ದೇಹ ಬಲ ಪಡೆಯುತ್ತದೆ. ಮೂಳೆಗಳಿಗೆ ಶಕ್ತಿ ಬರುತ್ತದೆ. ಶ್ವಾಸಕೋಶಗಳು ಮೊದಲಿಗಿಂತ ಹೆಚ್ಚು ಶಕ್ತಿ ಪಡೆಯುತ್ತವೆ. ಕೆಲಸ ಮಾಡಲು ಚೈತನ್ಯ ಹೆಚ್ಚಾಗುತ್ತದೆ.

ಮನಸ್ಸಿನಿಂದ ಭಯ ದೂರ : ಸದಾ ನೀವು ನ್ಯಾಯದ ಪರವಾಗಿದ್ದರೆ ಹಾಗೂ ಸತ್ಯವನ್ನು ಮಾತನಾಡ್ತಿದ್ದರೆ ನಿಮಗೆ ಶನಿ ಕೃಪೆಯಿರುತ್ತದೆ. ಇದ್ರಿಂದ ಭಯ ಹಾಗೂ ಆತಂಕ ದೂರವಾಗುತ್ತದೆ. ಯಾವುದೇ ರೀತಿಯ ಆತಂಕ ನಿಮಗಿರೋದಿಲ್ಲ. ಜೀವನದ ಎಲ್ಲ ಕ್ಷಣವನ್ನು ನೀವು ಆನಂದಿಸುತ್ತೀರಿ.

Vastu Tips: ನಿಮ್ಮನ್ನ ಬೀದಿಗೆ ತಳ್ಬಹುದು ಮನಿ ಪ್ಲಾಂಟ್

ಪ್ರತಿಷ್ಠೆ : ಅನೇಕ ಬಾರಿ ನಿರೀಕ್ಷೆ ಮಾಡದೆ ಪ್ರತಿಷ್ಠೆ ಹೆಚ್ಚಾಗುತ್ತದೆ. ವೇಗವಾಗಿ ಗೌರವ, ಪ್ರತಿಷ್ಠೆ ಹೆಚ್ಚಾದ್ರೆ ಶನಿ ದಯೆ ತೋರಿದ್ದಾನೆ ಎಂದರ್ಥ. ಶನಿಯು ಪ್ರಸನ್ನನಾದಾಗ, ವ್ಯಕ್ತಿಯ ಖ್ಯಾತಿಯು ದೂರದವರೆಗೆ ಹರಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಶನಿದೇವನಿಗೆ ಧನ್ಯವಾದ ಸಲ್ಲಿಸಿ ಹಾಗೂ  ಪೂಜೆ ಮಾಡುವುದನ್ನು ಮರೆಯಬೇಡಿ.  

 

 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ