Daily Horoscope: ಈ ರಾಶಿಗಿಂದು ಧನನಷ್ಟ

Published : Dec 14, 2021, 05:09 AM IST
Daily Horoscope: ಈ ರಾಶಿಗಿಂದು ಧನನಷ್ಟ

ಸಾರಾಂಶ

14 ಡಿಸೆಂಬರ್ 2021, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ?  ತುಲಾ ರಾಶಿಗೆ ಅನಾರೋಗ್ಯದ ಕಿರಿಕಿರಿ, ಕುಂಭ ರಾಶಿಗೆ ಲಾಭ, ನಿಮ್ಮ ರಾಶಿಯ ಭವಿಷ್ಯವೇನು ನೋಡಿ.  

ಮೇಷ(Aries): ಲೇವಾದೇವಿಗಳಲ್ಲಿ ಒತ್ತಡದ ಜೊತೆಗೆ ನಷ್ಟ. ದಿನದ ಆರಂಭದಲ್ಲಿ ಧನ ನಷ್ಟವಾಗಿ ಮನಸ್ಸು ಹಾಳಾಗುವುದು. ಚಿಂತಿಸಿ ಫಲವಿಲ್ಲ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಸಾಧಿಸಿ ಪರಿಶ್ರಮ ಹಾಕಿದರೆ ದಿನಾಂತ್ಯಕ್ಕೆ ನಷ್ಟ ತುಂಬಿಕೊಳ್ಳಬಹುದು. ದುರ್ಗಾ ಅಷ್ಟೋತ್ತರ ಪಠಿಸಿ.

ವೃಷಭ(Taurus): ಉದ್ಯೋಗ ಸ್ಥಳದಲ್ಲಿ ಗೌರವ ಪ್ರಾಪ್ತಿಯಾಗುವುದು. ಮನೋಬಲ ಹೆಚ್ಚಿರುವುದರಿಂದ ಅಲ್ಪ ಶ್ರಮದಿಂದ ಕಾರ್ಯ ಸಾಧನೆಯಾಗುವುದು. ಷೇರು ವ್ಯವಹಾರಗಳಲ್ಲಿ ಲಾಭ. ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಗಣಪತಿ, ಸರಸ್ವತಿ ಅಷ್ಟೋತ್ತರ ಪಠಿಸಿ. 

ಮಿಥುನ(Gemini): ವ್ಯಾಪಾರದಲ್ಲಿ ಅಲ್ಪ ಲಾಭ. ಸಾಲ ಮಾಡಬೇಕಾದ ಸನ್ನಿವೇಶ. ಬಹಳ ಸಮಯದಿಂದ ಮುಂದೂಡಿಕೊಂಡು ಬಂದಿದ್ದ ಗೃಹ ನವೀಕರಣ ಕಾರ್ಯಗಳು ನಡೆಯುವುವು. ಮಕ್ಕಳಿಗೆ ಅನಾರೋಗ್ಯ ಕಾಡಬಹುದು. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವಿಷ್ಣು ಸಹಸ್ರನಾಮ ಪಠಿಸಿ. 

ಕಟಕ(Cancer): ಉದ್ಯೋಗದಲ್ಲಿ ತಪ್ಪುಗಳಾಗುವ ಸಾಧ್ಯತೆ. ಆಪ್ತರೊಂದಿಗೆ ಮಹತ್ತರ ವಿಚಾರಗಳ ಚರ್ಚೆ, ಮಾತೃವಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಕಡೆಗಣಿಸದಿರಿ. ನಿರುದ್ಯೋಗಿಗಳು ಹೆಚ್ಚಿನ ಪ್ರಯತ್ನ ಹಾಕಬೇಕು. ವಾಹನಗಳಿಂದ ತೊಂದರೆಗಳಾಗಬಹುದು. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಸಿಂಹ(Leo): ಕೆಲಸ ಕಾರ್ಯ ಮಾಡಲು ನಿರಾಸಕ್ತಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ. ಉದಾಸೀನವಾಗಿ ದಿನ ದೂಡುವ ಸಾಧ್ಯತೆ. ಆಪ್ತರೊಡನೆ ಹರಟೆಯಲ್ಲಿ ಸಮಯ ಕಳೆಯುವಿರಿ. ಉದ್ಯೋಗದಲ್ಲಿ ಏರುಪೇರಿಲ್ಲ. ವ್ಯಾಪಾರದಲ್ಲಿ ಸಾಮಾನ್ಯ ಲಾಭ. ಗಣಪತಿಗೆ 21 ದೂರ್ವೆ ಏರಿಸಿ. 

ಕನ್ಯಾ(Virgo): ವ್ಯಾಪಾರದಲ್ಲಿ ಒತ್ತಡವಾದರೂ ಲಾಭ. ಕೋರ್ಟ್ ವ್ಯಾಜ್ಯಗಳಲ್ಲಿ ಯಶಸ್ಸು. ಹೊಸ ವಾಹನ ಖರೀದಿ ಯೋಗ. ಮಕ್ಕಳಿಂದ ಸಂತಸ. ಆಪ್ತರೊಂದಿಗೆ ಮಹತ್ತರ ವಿಚಾರಗಳ ಚರ್ಚೆ ನಡೆಸುವುದರಿಂದ ಕೆಲ ನಿರ್ಧಾರಗಳು ಬಲವಾಗುವುವು. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ. 

ತುಲಾ(Libra): ವಾಹನಗಳು ದುರಸ್ಥಿಗೆ ಬರುವ ಸಾಧ್ಯತೆ. ಅನಾರೋಗ್ಯದಿಂದ ಕಿರಿಕಿರಿ. ಕಚೇರಿ ಕಾರ್ಯಾಲಯಗಳ ಕೆಲಸಗಳಿಂದ ತಾಳ್ಮೆಗೆಡುವಂತಾಗಬಹುದು. ಮಂದಗತಿಯಲ್ಲಿ ಸಾಗುವ ಕೆಲಸಗಳು. ಅಧಿಕಾರಿ ವರ್ಗದವರಿಂದ ಮಾತು ಕೇಳಬೇಕಾಗಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Weekly Horoscope: ಸಿಂಹ ರಾಶಿಗೆ ಪ್ರೇಮ ಸಾಫಲ್ಯ, ಉಳಿದ ರಾಶಿಗಳ ಭವಿಷ್ಯವೇನು?

ವೃಶ್ಚಿಕ(Scorpio): ಉದ್ಯೋಗಸ್ಥರಿಗೆ ಬಡ್ತಿ, ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಸ್ನೇಹಿತವರ್ಗದವರ ಆಮಿಷಗಳಿಗೆ ಬಲಿಯಾಗಿ ಬೇಡದ ಚಟ ರೂಢಿಸಿಕೊಳ್ಳಬೇಡಿ. ಎಣಿಸಿದ ಕಾರ್ಯ ವಿಧಾನಗಳಿಂದ ಹಣದ ಆದಾಯ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ವ್ಯಯ ಮಾಡುವಿರಿ. ಸರಸ್ವತಿ ಸ್ಮರಣೆ ಮಾಡಿ. 

ಧನುಸ್ಸು(Sagittarius): ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಹಣ ಬಾರದೇ ಹೋಗಬಹುದು. ಅನಿರೀಕ್ಷಿತ ಧನ ವ್ಯಯವಾಗುವುದು. ಪತ್ನಿ- ಪುತ್ರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು ತೋರಿಬಂದಾವು. ಮನೆದೇವರಿಗೆ ತುಪ್ಪದ ದೀಪ ಹಚ್ಚಿ. 

ಮಕರ(Capricorn): ವರಮಾನಕ್ಕೆ ತಕ್ಕ ಖರ್ಚುವೆಚ್ಚಗಳಿರುತ್ತವೆ. ಪ್ರಯತ್ನಬಲದಿಂದ ಯೋಜಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ತೋರಿಬರುವುದು. ಹಿರಿಯರೊಡನೆ ಯಾವುದೇ ವಿಷಯ ವಾದಿಸಲು ಹೋಗದಿರಿ. ವಿವಾಹಾದಿ ಯತ್ನಕ್ಕೆ ಫಲ ಸಿಗಲಿದೆ. ಶಿವ- ಪಾರ್ವತಿಯ ಸ್ಮರಣೆ ಮಾಡಿ. 

Trustworthy Zodiac Signs: ಈ ರಾಶಿಯವರನ್ನು ನೀವು ಕಣ್ಣು ಮುಚ್ಚಿ ನಂಬಬಹುದು

ಕುಂಭ(Aquarius): ಅಲಂಕಾರಿಕ ವಸ್ತುಗಳು, ಕೃಷಿ, ಪಶು, ಹೈನು ವ್ಯವಹಾರಗಳಿಂದ ಅಧಿಕ ಲಾಭ. ಗೌರವ ವೃದ್ಧಿಯಾಗಲಿದೆ. ಕುಟುಂಬವರ್ಗದವರಿಂದ ಕಾರ್ಯವೈಖರಿಗೆ ಟೀಕೆಗಳು ಬರಬಹುದು. ಸರಿತಪ್ಪುಗಳನ್ನು ಪರಾಮರ್ಶಿಸಿ ಮುಂದುವರಿಯಿರಿ. ಹಸುವಿಗೆ ಹುಲ್ಲು ತಿನ್ನಿಸಿ. 

ಮೀನ(Pisces): ಬಾಕಿ ಉಳಿದ ಗೃಹ ಕಾರ್ಯಗಳು ಪೂರ್ಣಗೊಳ್ಳಲಿವೆ. ಈ ದಿನ ಬರುವ ಉತ್ತಮ ಅವಕಾಶಗಳನ್ನು ಬಳಸಿಕೊಂಡಲ್ಲಿ ಮುಂದೆ ಒಳಿತಾಗುವುದು. ದಾಂಪತ್ಯ ಜೀವನದಲ್ಲಿ ಸಂಯಮ ಅಗತ್ಯ. ಆರೋಗ್ಯದ ಬಗ್ಗೆ ಗಮನ ಹೆಚ್ಚಿಸಿ. ಕುಲದೇವರ ಸ್ಮರಣೆ ಮಾಡಿ. 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ