ಈ ರಾಶಿ- ನಕ್ಷತ್ರದಲ್ಲಿ ಜನಿಸಿದವರು ಮಾತಿಗೆ ಬದ್ಧ – ಎಲ್ಲದಕ್ಕೂ ಸಿದ್ಧ..!

By Suvarna NewsFirst Published Jul 10, 2021, 12:23 PM IST
Highlights

ಜ್ಯೋತಿಷ್ಯ ಶಾಸ್ತ್ರದ 27 ನಕ್ಷತ್ರಗಳ ಪಟ್ಟಿಯಲ್ಲಿ ಭರಣಿ ನಕ್ಷತ್ರವು ಎರಡನೇ ನಕ್ಷತ್ರವಾಗಿದೆ. “ಭರಣಿ ನಕ್ಷತ್ರದಲ್ಲಿ ಜನಿಸಿದವರು ಧರಣಿ ಆಳುತ್ತಾರೆ” ಎಂಬ ಮಾತಿದೆ. ಹಾಗೆಯೇ ಮೇಷ ರಾಶಿ-ಭರಣಿ ನಕ್ಷತ್ರದಲ್ಲಿ ಜನಿಸಿದವರು ಉತ್ತಮ ರಾಜಕಾರಣಿ ಆಗಬಹುದೆಂದು ಹೇಳಲಾಗುತ್ತದೆ. ಹಾಗಾದರೆ ಮೇಷ ರಾಶಿ - ಭರಣಿ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವಗಳ ಬಗ್ಗೆ ತಿಳಿಯೋಣ..

ವ್ಯಕ್ತಿಯ ರಾಶಿ- ನಕ್ಷತ್ರವು ಗುಣ-ಸ್ವಭಾವ ಮತ್ತು ವ್ಯಕ್ತಿತ್ವವನ್ನು ತಿಳಿಸುವಲ್ಲಿ ಸಹಕಾರಿಯಾಗಿರುತ್ತದೆ. ಒಂದು ನಕ್ಷತ್ರಕ್ಕೆ ನಾಲ್ಕು ರಾಶಿಗಳು ಬರುತ್ತವೆ. ನಕ್ಷತ್ರದ ನಾಲ್ಕು ಚರಣಗಳು ನಾಲ್ಕು ಬೇರೆ ಬೇರೆ ರಾಶಿಗಳನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಈ ರಾಶಿ ಚರಣಗಳ ಆಧಾರದ ಮೇಲೆ ಆಯಾ ವ್ಯಕ್ತಿಗಳು ಏನು-ಎತ್ತ..? ಅವರ ಮನೋಭಾವ ಏನು..? ಸಾಹಿಸಿಗಳೇ..? ಛಲವಾದಿಗಳೇ..? ಮಾತಿಗೆ ತಕ್ಕಂತೆ ನಿಲ್ಲುವವರೇ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಳ್ಳಬಹುದು.

ನಾವೀಗ ಮೇಷ ರಾಶಿ –ಭರಣಿ ನಕ್ಷತ್ರದವರ ಬಗ್ಗೆ ತಿಳಿದುಕೊಳ್ಳೋಣ. ಈ ರಾಶಿ-ನಕ್ಷತ್ರದಲ್ಲಿ ಜನಿಸಿದವರು ಸಾಧಾರಣರಲ್ಲ ಎಂಬುದನ್ನ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಂತ ಎಲ್ಲರಿಗೂ ಒಂದೇ ರೀತಿಯ ಸ್ಥಾನಮಾನ ಲಭ್ಯವಾಗುತ್ತದೆ ಎಂದಲ್ಲ. ರಾಶಿ ಫಲ, ನಕ್ಷತ್ರದ ಪಾದಗಳು ಹೀಗೆ ಹಲವಾರು ಅಂಶಗಳು ಕಾರಣವಾಗುತ್ತವೆ. 

ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರು ಆಸ್ತಿ-ಜಮೀನಿನ ವಿಷಯದಲ್ಲಿ ತುಂಬಾ ಲಕ್ಕಿ..! 

ಮೇಷ ರಾಶಿ –ಭರಣಿ ನಕ್ಷತ್ರದಲ್ಲಿ ಜನಿಸಿದವರು ಮಾತಿಗೆ ಬದ್ಧರಾಗಿರುತ್ತಾರೆ. ಕಾರ್ಯ ನಿರ್ವಹಣೆಯಲ್ಲಿ ಅತ್ಯುತ್ತಮರಾಗಿರುತ್ತಾರೆ. ರಾಶಿ – ನಕ್ಷತ್ರಗಳ ಅಧಿಪತಿಗಳಾದ ಮಂಗಳ ಮತ್ತು ಶುಕ್ರ ಈ ಎರಡು ಗ್ರಹಗಳ ಪ್ರಭಾವದಿಂದ ಇದರಲ್ಲಿ ಜನಿಸಿದ ವ್ಯಕ್ತಿಗಳು ಮತ್ತಷ್ಟು ಬಲವನ್ನು ಪಡೆದುಕೊಳ್ಳುತ್ತಾರೆ.

ಗುಣ-ಸ್ವಭಾವಗಳು ಹೀಗಿವೆ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭರಣಿ ನಕ್ಷತ್ರ-ಮೇಷ ರಾಶಿಯಲ್ಲಿ ಜನಿಸಿದವರು  ಸಾಹಸಿಗಳು, ಸ್ವಾಭಿಮಾನಿಗಳು ಮತ್ತು ದೃಢ ನಿಶ್ಚಯವನ್ನು ಉಳ್ಳವರಾಗಿರುತ್ತಾರೆ. ಯಾವುದೇ ಕೆಲಸವನ್ನು ನೀಡಿದರೂ ಅದನ್ನು ಸರಿಯಾದ ರೀತಿಯಲ್ಲಿ  ಪೂರೈಸದೇ ಬಿಡುವುದಿಲ್ಲ ಈ ನಕ್ಷತ್ರದಲ್ಲಿ ಜನಿಸಿದವರು. ಪ್ರಾಮಾಣಿಕತೆ, ನಿಷ್ಠೆ ಮತ್ತು ವರ್ಚಸ್ಸಿನಿಂದಲೇ ಎಲ್ಲರ ಗಮನ ಸೆಳೆಯುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.

ಇದನ್ನು ಓದಿ: ಮನೆಯಲ್ಲಿ ಮನಿಪ್ಲಾಂಟ್ ಇದ್ದರೆ ಈ ನಿಯಮ ಪಾಲಿಸಿ – ಅದೃಷ್ಟ ನಿಮ್ಮದಾಗಲಿದೆ..!! 

ಮಂಗಳ ಮತ್ತು ಶುಕ್ರ ಗ್ರಹಗಳ ಪ್ರಭಾವ
ಭರಣಿ ನಕ್ಷತ್ರ ಮೇಷ ರಾಶಿಯಲ್ಲಿ ಜನಿಸಿದವರು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆಡಿದ ಮಾತನ್ನು ಉಳಿಸಿಕೊಳ್ಳುವ ಬದ್ಧತೆ ಇವರಲ್ಲಿರುತ್ತದೆ. ಅಷ್ಟೇ ಅಲ್ಲದೆ, ಕರ್ತವ್ಯ ನಿಷ್ಠರು ಇವರಾಗಿರುತ್ತಾರೆ. ಮಾಡುವ ಕೆಲಸದ ಮೇಲೆ ಪೂರ್ಣ ಲಕ್ಷ್ಯವನ್ನಿಡುವ ಈ ವ್ಯಕ್ತಿಗಳು ಕೆಲಸದಿಂದಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. 

ಈ ನಕ್ಷತ್ರದಲ್ಲಿ ಜನಿಸಿದವರಿಗೆ ರಾಶ್ಯಾಧಿಪತಿ ಮಂಗಳನ ಕೃಪೆ ಮತ್ತು ನಕ್ಷತ್ರದ ಅಧಿಪತಿ ಶುಕ್ರನ ಅನುಗ್ರಹವು ಇರುತ್ತದೆ. ಹಾಗಾಗಿ ಮಂಗಳ ಗ್ರಹದಿಂದ ಶಕ್ತಿ -ತೇಜಸ್ಸು, ಶುಕ್ರ ಗ್ರಹದಿಂದ ಸುಖ-ಸಮೃದ್ಧಿಯು ಒದಗಿ ಬರುತ್ತದೆ. ಕೆಲಸವನ್ನು ಸಮಯಕ್ಕಿಂತ ಮೊದಲೇ ಮುಗಿಸುವ ವಿಶೇಷ ಗುಣ ಇವರಲ್ಲಿರುತ್ತದೆ. ಯಶಸ್ಸನ್ನು ಗಳಿಸುವ ಉತ್ಸಾಹ ಮತ್ತು ಆಸಕ್ತಿ ಇವರ ಲಕ್ಷ್ಯಕ್ಕೆ ಮಾರ್ಗವಾಗಿರುತ್ತದೆ.

Latest Videos


ಶತ್ರುಗಳೂ ಮಿತ್ರರಾಗುತ್ತಾರೆ..!
ವ್ಯವಹಾರದ ವಿಷಯದಲ್ಲಿ ಪಕ್ಕಾ ಲೆಕ್ಕ ಹಾಕುವ ಭರಣಿ ನಕ್ಷತ್ರದವರು, ತಮ್ಮ ವ್ಯವಹಾರಕ್ಕಾಗಿ ಶತ್ರುಗಳನ್ನು ಸಹ ಮಿತ್ರರನ್ನಾಗಿಸಿಕೊಳ್ಳುವ ಚಾಕಚಕ್ಯತೆ ಇವರಲ್ಲಿರುತ್ತದೆ. ಇತರರಿಂದ ಕೆಲಸವನ್ನು ಮಾಡಿಸಿಕೊಳ್ಳುವ ಪರಿ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಸತ್ಯವನ್ನು ನುಡಿಯುವುದರಲ್ಲಿ ನಂಬಿಕೆ ಇಡುವ ಈ ವ್ಯಕ್ತಿಗಳು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಹಣವನ್ನು ಸರಿಯಾಗಿ ಯೋಚಿಸಿ ಖರ್ಚು ಮಾಡುವ ಸ್ವಭಾವ ಇವರದ್ದಾಗಿರುತ್ತದೆ. ಅವಕಾಶಗಳು ತಾವಾಗಿಯೇ ಬರಲಿ ಎಂದು ಕಾಯುತ್ತಾ ಕೂರುವ ಜಾಯಮಾನ ಈ ನಕ್ಷತ್ರದವರದ್ದಲ್ಲ, ಬದಲಾಗಿ ತಾವೇ ಅವಕಾಶವನ್ನು ಸೃಷ್ಟಿಸಿಕೊಳ್ಳುವ ವ್ಯಕ್ತಿತ್ವ ಇವರದ್ದಾಗಿರುತ್ತಾರೆ.

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು – ಸರ್ಕಾರಿ ಉದ್ಯೋಗ ಸಿಗುವ ಸಂಭವ ಹೆಚ್ಚು...! 

ಗ್ರಹಗಳ ಸ್ಥಿತಿ-ಗತಿ ಮೇಲೆ ನಿರ್ಧಾರ
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಭರಣಿ ನಕ್ಷತ್ರದಲ್ಲಿ ಜನಿಸಿದವರ ಜಾತಕದಲ್ಲಿ ಶುಕ್ರ ಮತ್ತು ಮಂಗಳ ಗ್ರಹದ ಸ್ಥಿತಿ ನೀಚವಾಗಿದ್ದರೆ ಅಂತಹ ವ್ಯಕ್ತಿಗಳು ಕ್ರೂರ ಸ್ವಭಾವವನ್ನು ಹೊಂದಿರುತ್ತಾರೆ. ಅದೇ ಶುಕ್ರ ಮತ್ತು ಮಂಗಳ ಗ್ರಹದ ಸ್ಥಿತಿ ಉಚ್ಛವಾಗಿದ್ದರೆ ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ.

ನಕ್ಷತ್ರದ ಅಧಿಪತಿ ಶುಕ್ರ ಗ್ರಹ
ಭರಣಿ ನಕ್ಷತ್ರದ ಅಧಿಪತಿ ಶುಕ್ರಗ್ರಹವಾಗಿರುವ ಕಾರಣ ಈ ನಕ್ಷತ್ರದಲ್ಲಿ ಜನಿಸಿದವರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಸದಾ ಆರಾಮವಾಗಿ ಇರಲು ಬಯಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಅತ್ಯಂತ ಆಕರ್ಷಕವಾಗಿ ಮತ್ತು ಸುಂದರವಾಗಿ ಇರುತ್ತಾರೆ. ಅಷ್ಟೇ ಅಲ್ಲದೆ, ಈ ವ್ಯಕ್ತಿಗಳ ಸ್ವಭಾವವು ಸಹ ಅತ್ಯಂತ ಆಕರ್ಷಕವಾಗಿರುವ ಕಾರಣ ಜನರ ಗಮನ ಸೆಳೆಯುತ್ತದೆ. ಈ ವ್ಯಕ್ತಿಗಳ ಜೀವನದಲ್ಲಿ ಎಲ್ಲರಿಗೂ ಎಲ್ಲದಕ್ಕೂ ಪ್ರೀತಿಯನ್ನು ಕೊಡುವ, ಪಡೆಯುವ ಸ್ವಭಾವದವರಾಗಿರುತ್ತಾರೆ. ಇವರು ಪ್ರೇಮಕ್ಕೆ ಪ್ರಮುಖ ಆದ್ಯತೆಯನ್ನು ಕೊಡುತ್ತಾರೆ. ಹಿಡಿದಿರುವ ಕೆಲಸವನ್ನು ಪೂರ್ತಿ ಮಾಡಿಯೇ ಮುಂದಡಿ ಇಡುವ ಸ್ವಭಾವ ಇವರದ್ದಾಗಿರುತ್ತದೆ. ಸಮಾಜದಲ್ಲಿ ಉತ್ತಮ ಗೌರವಾದರಗಳನ್ನು ಗಳಿಸಿರುತ್ತಾರೆ. ಸಾಮಾಜಿಕ ಪ್ರತಿಷ್ಠೆ ಸದಾ ಉತ್ತಮವಾಗಿರುತ್ತದೆ. 

ಅಮಿತ್ ಷಾ ರಾಶಿ-ನಕ್ಷತ್ರವಿದು..! 
ಭರಣಿ ನಕ್ಷತ್ರ, ಮೇಷ ರಾಶಿಯಲ್ಲಿ ಜನಿಸಿದವರ ಸಾಲಿಗೆ ನಮ್ಮ ದೇಶದ ಗೃಹ ಮಂತ್ರಿಗಳಾದ ಅಮಿತ್ ಷಾ ಅವರು ಸಹ ಒಬ್ಬರಾಗಿದ್ದಾರೆ. ಈ ರಾಶಿ –ನಕ್ಷತ್ರದಲ್ಲಿ ಜನಿಸಿದವರು ರಾಜಕಾರಣಿಗಳಾಗುವ ಆಗುವ ಸಂಭವ ಹೆಚ್ಚಿರುತ್ತದೆ. ಅಲ್ಲದೆ, ಬಹುಬೇಗ ಉತ್ತಮ ಸ್ಥಾನಮಾನಕ್ಕೇರುವ ಸಾಧ್ಯತೆಗಳು, ಪೂರಕ ವಾತಾವರಣಗಳೂ ಸಹ ನಿರ್ಮಾಣಗೊಳ್ಳಲಿದೆ. 

click me!