Chitradurga: ದೀಪಾವಳಿ ಪ್ರಯುಕ್ತ ಕೋಟೆನಾಡಲ್ಲಿ ಪಂಚಪದಿ ಉತ್ಸವ: ದೇವರ ಎತ್ತುಗಳ ಭವ್ಯ ಮೆರವಣಿಗೆ

By Govindaraj S  |  First Published Oct 26, 2022, 11:15 PM IST

ಆಯಾ ಪ್ರದೇಶಗಳಲ್ಲಿ ಅಲ್ಲಿನ ಜನಜೀವನಕ್ಕೆ ಅನುಗುಣವಾಗಿ ವಿಶೇಷ ಆಚರಣೆಗಳು‌ ಆಚರಿಸಲ್ಪಡುತ್ತವೆ. ಕೋಟೆನಾಡು ಚಿತ್ರದುರ್ಗದಲ್ಲಿ ದೀಪಾವಳಿ ಸಂದರ್ಭದಲ್ಲಿ ಪಂಚಪದಿ ಉತ್ಸವ ಆಚರಣೆ ನಡೆಯುತ್ತದೆ. ದೇವರ ಎತ್ತುಗಳ ಭವ್ಯ ಮೆರವಣಿಗೆ ಬುಡಕಟ್ಟು ಸಮುದಾಯದ ಸಂಸ್ಕೃತಿ ಅನಾವರಣಗೊಳಿಸುತ್ತದೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಅ.26): ಆಯಾ ಪ್ರದೇಶಗಳಲ್ಲಿ ಅಲ್ಲಿನ ಜನಜೀವನಕ್ಕೆ ಅನುಗುಣವಾಗಿ ವಿಶೇಷ ಆಚರಣೆಗಳು‌ ಆಚರಿಸಲ್ಪಡುತ್ತವೆ. ಕೋಟೆನಾಡು ಚಿತ್ರದುರ್ಗದಲ್ಲಿ ದೀಪಾವಳಿ ಸಂದರ್ಭದಲ್ಲಿ ಪಂಚಪದಿ ಉತ್ಸವ ಆಚರಣೆ ನಡೆಯುತ್ತದೆ. ದೇವರ ಎತ್ತುಗಳ ಭವ್ಯ ಮೆರವಣಿಗೆ ಬುಡಕಟ್ಟು ಸಮುದಾಯದ ಸಂಸ್ಕೃತಿ ಅನಾವರಣಗೊಳಿಸುತ್ತದೆ. ಈ ಕುರಿತು ವರದಿ ಇಲ್ಲಿದೆ. ಸಾಂಪ್ರದಾಯಿಕ ದೇವರ ಎತ್ತುಗಳ ಭವ್ಯ ಮೆರವಣಿಗೆ. ಪಂಚಪದಿಗಳಲ್ಲು ಪಂಚ ಬುಡಕಟ್ಟು ದೈವ ಸ್ಥಾಪಿಸಿ ವಿಶೇಷ ಪೂಜೆ. 

Latest Videos

undefined

ದೀಪಾವಳಿ ದಿನ ದೇವರ ಎತ್ತುಗಳ ದರ್ಶನಕ್ಕೆ ಸೇರಿದ ಭಕ್ತಗಣ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಂಗಾರದೇವರಹಟ್ಟಿ ಬಳಿ. ಹೌದು! ದೀಪಾವಳಿ ಹಬ್ಬದ ಅಂಗವಾಗಿ ಬುಡಕಟ್ಟು ಸಂಸ್ಕೃತಿಯ ಮ್ಯಾಸ ಬೇಡ ಸಮುದಾಯದ ಜನರು ವಿಶೇಷ ದೀಪಾವಳಿ ಆಚರಿಸುತ್ತಾರೆ. ಗ್ರಾಮದ ಹೊರವಲಯದಲ್ಲಿ ಪರಿಸರದ‌ ಮಧ್ಯೆ ಗಿಡಬಳ್ಳಿಗಳ ನಡುವೆ ಪಂಚಪದಿ (ತಾತ್ಕಾಲಿಕ ಪುಟ್ಟ ದೇಗುಲ) ನಿರ್ಮಿಸುತ್ತಾರೆ. ಬೊಮ್ಮದೇವರು, ಗಾದ್ರಿ ದೇವರು, ಓಬಳದೇವರು, ಬಂಗಾರದೇವರು ಮತ್ತು ಮುತ್ತೈಗಳು ಆ ಪುಟ್ಟ ದೇಗುಲಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. 

Udupi: ಕರಾವಳಿಯಲ್ಲಿ ಸತ್ತವರೂ ಸಂಭ್ರಮಿಸುವ ಹಬ್ಬ ದೀಪಾವಳಿ

ಬಳಿಕ ಸುಮಾರು 300ಕ್ಕೂ ಹೆಚ್ಚು ಸಾಂಪ್ರದಾಯಿಕ ದೆಡವರ ಎತ್ತುಗಳನ್ನು ಕರೆತಂದು ಪೂಜಿಸಿ ನೈವೇದ್ಯ ಅರ್ಪಿಸುತ್ತಾರೆ. ದೇವರ ಎತ್ತುಗಳ ಮೆರವಣಿಗೆ (ದೇವರ ಎತ್ತು ಓಡಿಸುವುದು) ನಡೆಸುತ್ತಾರೆ. ಆ ಮೂಲಕ ನಾಡು ರೋಗ ರೂಜಿನಿಗಳಿಂದ ಮುಕ್ತವಾಗಿದ್ದ ಸಮೃದ್ಧ ಮಳೆ,‌ಬೆಳೆ ಇರುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ ಆಗಿದೆ. ಇನ್ನು ಈ ವಿಶೇಷ ಪಂಚ ಪದಿ ಉತ್ಸವಕ್ಕೆ ನನ್ನಿವಾಳ ಕಟ್ಟೆ ಮನೆಯ ಮ್ಯಾಸಬೇಡ ಸಮುದಾಯದ ಜನರು ಸೇರಿರುತ್ತಾರೆ. ಅಲ್ಲದೆ ಸಂಬಂಧಿಕರು, ದೇವರ ಎತ್ತುಗಳ ಆರಾಧಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ. 

Bengaluru: ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ಮತ್ತು ದೀಪಾವಳಿಯ ಸಂಭ್ರಮ

ಪಂಚ‌ಪದಿ ಉತ್ಸವದ ಬಳಿಕ ಸಾಮೂಹಿಕ ಪ್ರಸಾದ ಸ್ವೀಕರಿಸುತ್ತಾರೆ. ಆ ಮೂಲಕ ಪಶುಪಾಲನೆ, ಪ್ರಕೃತಿ ಆರಾಧನೆ ಜತೆಗೆ ವಿಶೇಷ ಧಾರ್ಮಿಕ ಆಚರಣೆ ನಡೆಯುವುದು ದೇಶದಲ್ಲೇ ಅಪರೂಪ ಅಂತಾರೆ ಸ್ಥಳೀಯ ಮುಖಂಡರು. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಬುಡಕಟ್ಟು ಸಂಸ್ಕೃತಿಯ ಅನಾವರಣ ಆಗಿದೆ. ದೇವರ ಎತ್ತುಗಳ ಮೆರವಣಿಗೆ, ಪಂಚಪದಿ ಉತ್ಸವ ತನ್ನದೇ ಆದ ವಿಶೇಷ ಆಕರ್ಷಣೆ ಪಡೆದಿದೆ. ಆಧುನಿಕ ಯುಗದಲ್ಲೂ ಅಪರೂಪದ ಈ ವಿಶಿಷ್ಟ ಸಂಪ್ರದಾಯ ಇಂದಿಗೂ ಆಚರಿಸಿಕೊಂಡು ಸಾಗಿದ್ದು ರಿಯಲಿ‌ ಗ್ರೇಟ್.

click me!