ನೀಲಮಣಿಯು ನಿಮ್ಮ ಜಾತಕಕ್ಕೆ ಹೊಂದಿದರೆ ರಾಜಯೋಗ ತರುತ್ತದೆ. ಆಗಿಬರುವುದಿಲ್ಲ ಎಂದರೆ ರಾಜನನ್ನೂ ರಾತ್ರಿ ಕಳೆದು ಬೆಳಕಾಗುವಷ್ಟರಲ್ಲಿ ಭಿಕ್ಷುಕನಾಗಿಸುತ್ತದೆ. ತಜ್ಞರ ಸಲಹೆ ಕೇಳದೆ ಈ ರತ್ನ ನೀವು ಧರಿಸಕೂಡದು.
ಪ್ರತಿಯೊಬ್ಬರ ಜಾತಕದಲ್ಲಿ ಗ್ರಹಗಳು ಎಲ್ಲಿವೆ ಎಂಬುದು ಅವರ ಜೀವನದ ಮೇಲೆ ನಿರಂತರ ಪರಿಣಾಮ ಬೀರುತ್ತಲೇ ಇರುತ್ತವೆ. ಗ್ರಹಗಳು ದುರ್ಬಲವಿದ್ದಾಗ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮತ್ತೆ ಕೆಲ ಗ್ರಹಗಳು ಸಬಲವಾಗಿದ್ದಾಗ ಅವುಗಳ ಅನುಗ್ರಹ ದೊರೆಯುತ್ತದೆ. ಹೀಗೆ ಜಾತಕದಲ್ಲಿ ದುರ್ಬಲವಾಗಿರುವ ಗ್ರಹಗಳಿಗೆ ಬಲ ತುಂಬಲು ಜ್ಯೋತಿಷ್ಯ ತಜ್ಞರು ಅದಕ್ಕೆ ಸಂಬಂಧಿಸಿದ ರತ್ನಗಳನ್ನು ಧರಿಸಲು ಸಲಹೆ ಮಾಡುತ್ತಾರೆ.
ಕೆಲ ರತ್ನಗಳೇ ಹಾಗೆ, ಅವು ಕೆಲ ಗ್ರಹಗಳನ್ನು ಬಲಪಡಿಸಲು ಶಕ್ಯವಾಗಿದ್ದರೆ, ಮತ್ತೆ ಕಲ ಗ್ರಹಗಳ ಕೆಟ್ಟ ಪರಿಣಾಮಗಳನ್ನು ತಗ್ಗಿಸಲೂ ಶಕ್ತವಾಗಿರುತ್ತವೆ. ಅದರಂತೆ ಶನಿ(Saturn)ಗೆ ಸಂಬಧಿಸಿದ ರತ್ನ ನೀಲಮಣಿ(sapphire)ಯಾಗಿದೆ. ಜ್ಯೋತಿಷಿಗಳ ಪ್ರಕಾರ, ಅತಿ ವೇಗವಾಗಿ ಪರಿಣಾಮ ತೋರಿಸುವ ರತ್ನ ಇದಾಗಿದೆ. ಇದು ವ್ಯಕ್ತಿಗೆ ಹೊಂದಿಕೆಯಾದರೆ ಬಿಕಾರಿಯನ್ನೂ ರಾಜನನ್ನಾಗಿಸುತ್ತದೆ. ಅದೇ, ಹೊಂದಿಕೆಯಾಗದಿದ್ದರೆ ರಾತ್ರೋರಾತ್ರಿ ರಾಜನನ್ನೇ ಬೀದಿಗೆ ತರುವಷ್ಟು ಶಕ್ತವಾಗಿದೆ. ಆಗುವುದೇ ಇಲ್ಲ ಎಂದರೆ, ಸಾವನ್ನೂ ತರುತ್ತದಂತೆ ನೀಲಮಣಿ. ಹಾಗಾಗಿ, ನೀಲಮಣಿ ಧರಿಸುವ ಮೊದಲು ಯಾವಾಗಲೂ ಜ್ಯೋತಿಷ್ಯ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆದೇ ಮುಂದುವರಿಯಬೇಕು. ಹಾಗಾದರೆ ಯಾರಿಗೆಲ್ಲ ನೀಲಮಣಿ ಲಾಭಕಾರಿಯಾಗಿರಲಿದೆ ನೋಡೋಣ.
ಇವರು ಧರಿಸಬೇಕು
ಹೀಗೆ ಪರೀಕ್ಷಿಸಿ
ಆದರೆ, ಯಾವುದೇ ಕಾರಣಕ್ಕೂ ತಜ್ಞರನ್ನು ಸಂಪರ್ಕಿಸದೆ ನೀಲಮಣಿ ಧರಿಸಬೇಡಿ. ಏಕೆಂದರೆ ಕೇವಲ 24 ಗಂಟೆಯೊಳಗೆ ಇದು ಬಹಳ ಸ್ಟ್ರಾಂಗ್ ಫಲಿತಾಂಶ ನೀಡುತ್ತದೆ. ಇದು ಶುಭವೋ, ಅಶುಭವೋ ಎಂಬುದನ್ನು ಇನ್ನೊಂದು ರೀತಿಯಲ್ಲಿ ಪತ್ತೆ ಹಚ್ಚಬಹುದು. ನೀಲಮಣಿಯನ್ನು ನೀಲಿ ಬಟ್ಟೆಯೊಳಗೆ ಸುತ್ತಿ ಮಲಗುವಾಗ ದಿಂಬಿನ ಅಡಿ ಇಟ್ಟುಕೊಳ್ಳಿ. ರಾತ್ರಿ ಒಳ್ಳೆಯ ಕನಸು ಬಿದ್ದರೆ ನೀಲಮಣಿ ನಿಮಗೆ ಆಗಿಬರುತ್ತದೆ ಎಂದು ತಿಳಿಯಬಹುದು. ಕೆಟ್ಟ ಕನಸು ಬಿದ್ದರೆ ಅದು ನಿಮಗೆ ಆಗುವುದಿಲ್ಲ ಎಂದರ್ಥ. ಇದರ ಹೊರತಾಗಿ ಅದು ಇಟ್ಟ ಜಾಗದಿಂದ ಮತ್ತೆಲ್ಲೋ ಉರುಳಿ ಹೋಗಿದ್ದರೂ ಆಗ ಧರಿಸಬಾರದು.
ಈ ರಾಶಿಯವರು ಮಕ್ಕಳೊಂದಿಗೆ ಮಕ್ಕಳಾಗಿ ಮಾತಾಡೋದ್ರಲ್ಲಿ ನಿಸ್ಸೀಮರು
ಚಿನ್ನದೊಂದಿಗೆ ತೊಡಬೇಕು
ನೀಲಮಣಿಯನ್ನು ಯಾವಾಗಲೂ ಚಿನ್ನ(gold)ದ ರಿಂಗ್ ಜೊತೆ ಧರಿಸಬೇಕು. ಅದರ ಹೊರತಾಗಿ ಪಂಚಲೋಹದೊಂದಿಗೆ ಧರಿಸಬಹುದು. ಶನಿವಾರ(Saturday)ದ ದಿನ ಕಪ್ಪು ಬಟ್ಟೆಯೊಳಗೆ ನೀಲಮಣಿ ಇರಿಸಿ, ದೇವರೆದುರು ಇಟ್ಟು ಪೂಜೆ ಮಾಡಿ ನಂತರ ಧರಿಸಬೇಕು.
ಇಲ್ಲದಿದ್ದಲ್ಲಿ, ಶನಿವಾರದ ದಿನ ಎಳ್ಳೆಣ್ಣೆಯೊಳಗೆ ನೀಲಮಣಿ ಹಾಕಿ, ಪೂಜಿಸಿ, ನೀಲಮಣಿ ತೆಗೆದುಕೊಂಡು ಆ ಎಣ್ಣೆಯನ್ನು ದಾನ ಮಾಡಿ. ಯುವಕನಿಗೆ ಕೈಲಾದಷ್ಟು ಹಣ ನೀಡಿ. ನಂತರ ನೀಲಮಣಿಯಿಂದ ನಿಮಗೆ ಒಳಿತಾಗಲೆಂದು ಪ್ರಾರ್ಥಿಸಿ ಕೈಗೆ ಧರಿಸಿಕೊಳ್ಳಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.