ಸೇರಿದ ಮನೆಗೆ ಅದೃಷ್ಟ ತರೋ Lucky Girls ಹೆಸರು ಈ ಅಕ್ಷರದಿಂದ ಶುರುವಾಗುತ್ತೆ!

By Suvarna News  |  First Published Mar 21, 2022, 12:08 PM IST

ತಾವು ಮದುವೆಯಾಗಿ ಹೋದ ಮನೆಯ ಅದೃಷ್ಟವನ್ನೇ ಬದಲಿಸಿ, ಅಲ್ಲಿನ ವಾತಾವರಣವನ್ನು ಸಂಭ್ರಮವಾಗಿಸುವ ಹುಡುಗಿಯರ ಹೆಸರು ಯಾವೆಲ್ಲ ಅಕ್ಷರಗಳಿಂದ ಆರಂಭವಾಗುತ್ತೆ ಗೊತ್ತಾ?


ಒಂದು ವಿವಾಹ(marriage)ವಾದರೆ ಅದರಿಂದ ಎರಡು ಕುಟುಂಬ(family)ಗಳಿಗೆ ಸೇರಿದ ಹಲವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳು(changes) ಕೆಲವೊಮ್ಮೆ ಉತ್ತಮವಾಗಿದ್ದರೆ, ಮತ್ತೆ ಕೆಲವೊಮ್ಮೆ ಕಷ್ಟಕರವಾಗಿರುತ್ತವೆ. ಹೀಗೆ ಯಾವ ರೀತಿಯ ಬದಲಾವಣೆಯಾದರೂ ಅದಕ್ಕೆ ವಧು(bride)ವಿನ ಕಾಲ್ಗುಣ ಕಾರಣ ಎಂಬ ಮಾತು ನಾವು ಸಾಕಷ್ಟು ಬಾರಿ ಕೇಳುತ್ತೇವೆ. ಕೆಲ ಹುಡುಗಿಯರು ಸೇರಿದ ಮನೆಗೆ ಸಲೀಸಾಗಿ ಹೊಂದಿಕೊಂಡರೆ ಮತ್ತೆ ಕೆಲ ಹುಡುಗಿಯರು ಹಾಗೆ ಅಡ್ಜಸ್ಟ್ ಆಗಲು ಸಾಕಷ್ಟು ಹೆಣಗುತ್ತಾರೆ. ಈ ಎಲ್ಲ ಬದಲಾವಣೆಗಳ ಹೊರತಾಗಿಯೂ, ಕೆಲವೊಮ್ಮೆ ಸೊಸೆಯ ಕಾಲ್ಗುಣದಿಂದಾಗಿ ಆಕೆ ಬಂದ ಮೇಲೆ ಅತ್ತೆ ಮಾವ(in laws)ನ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು(finance problems) ತೀರುವುದು, ಬಹಳ ಸಮಯದಿಂದ ಕಂಗೆಡಿಸಿದ್ದ ಸಮಸ್ಯೆಗಳು ಪರಿಹಾರವಾಗುವುದು, ನೆಮ್ಮದಿಯೇ ಇಲ್ಲದ ಜೀವನದಲ್ಲಿ ಸಂತೋಷ ತುಂಬುವುದು ಇಂಥವೆಲ್ಲ ಆಗುತ್ತವೆ. ಇವರನ್ನೇ ಅದೃಷ್ಟ(luck) ತರುವ ಹೆಣ್ಮಕ್ಕಳೆಂದು ಭಾವಿಸುವುದು. 

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಹುಟ್ಟಿದ ಸಮಯಕ್ಕೆ ಅನುಗುಣವಾಗಿ ಮಕ್ಕಳಿಗೆ ಯಾವ ಅಕ್ಷರದಿಂದ ಹೆಸರಿಡಬೇಕು ಎಂಬುದನ್ನು ಹೇಳಲಾಗುತ್ತದೆ. ಆ ಲೆಕ್ಕದಲ್ಲಿ ಯಾವ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ಸೇರಿದ ಮನೆಗೆ ಇಂಥ ಅದೃಷ್ಟ ತರುತ್ತಾರೆ ಗೊತ್ತಾ? 

Tap to resize

Latest Videos

ಡಿ(D)
ಡಿ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ಅದೃಷ್ಟವಂತೆಯರು. ಈ ಅಕ್ಷರದ ಹೆಸರಿನ ಹುಡುಗಿಯರನ್ನು ಮದುವೆ ಮಾಡಿಕೊಟ್ಟಾಗ, ಸೇರಿದ ಮನೆಯಲ್ಲಿ ಇರುವ ಹಣಕಾಸಿನ ವಿಚಾರದ ಸಂಕಷ್ಟಗಳೆಲ್ಲ ಸುಲಭವಾಗಿ ತೀರುವುವು. ಅತ್ತೆ- ಮಾವನಿಗೆ ಈಕೆ ಅದೃಷ್ಟವಾಗಲಿದ್ದಾಳೆ. 

ಜಿ(G)
ಜಿ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ಸ್ವತಃ ಅದೃಷ್ಟ ಅನುಭವಿಸುವುದಕ್ಕಿಂತಾ, ಇವರಿಂದಾಗಿ ಪತಿ, ಹಾಗೂ ಪತಿಯ ಕುಟುಂಬದ ಅದೃಷ್ಟಕ್ಕೆ ಕಾರಣರಾಗುತ್ತಾರೆ. ಗಂಡನ ಮನೆಯಲ್ಲಿ ಸಂತೋಷ ತುಂಬುತ್ತಾರೆ. 

ಜೆ(J)
ಜೆ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ಯಾರೊಂದಿಗಾದರೂ ಸುಲಭವಾಗಿ ಬೆರೆಯಬಲ್ಲರು. ಹೊಂದಿಕೊಳ್ಳುವ ಗುಣ ಇವರಲ್ಲಿ ಹೆಚ್ಚು. ಹಾಗಾಗಿ, ಆಕೆ, ತನ್ನ ಅತ್ತೆ- ಮಾವಂದಿರಿಗೆ ಅದೃಷ್ಟದ ದೇವತೆಯಾಗಬಲ್ಲಳು. ಈಕೆ ಸೇರಿದ ಮನೆಯಲ್ಲಿ ಹಣಕ್ಕೆ ಯಾವತ್ತೂ ಕೊರತೆಯಾಗುವುದಿಲ್ಲ. ಜೊತೆಗೆ ಆಹಾರ ಸಮೃದ್ಧಿಯೂ ಚೆನ್ನಾಗಿರುತ್ತದೆ. ಮನೆಯನ್ನು ಅನ್ನಪೂರ್ಣೇಶ್ವರಿಯ ಹಾಗೆ ಪೊರೆಯಬಲ್ಲಳು. 

ಈ ರಾಶಿಯವರು ಮಕ್ಕಳೊಂದಿಗೆ ಮಕ್ಕಳಾಗಿ ಮಾತಾಡೋದ್ರಲ್ಲಿ ನಿಸ್ಸೀಮರು

ಎಸ್(S)
ಎಸ್ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ತಮ್ಮ ಪತಿಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ. ಅದರ ಜೊತೆಗೆ, ಅತ್ತೆ ಮಾವಂದಿರಿಗೆ ಬಹಳ ಗೌರವ ನೀಡುತ್ತಾರೆ. ಇವರು ಮನೆಯಲ್ಲಿದ್ದರೆ ಸಾಕು, ಮನೆಯ ವಾತಾವರಣದಲ್ಲಿ ಸಂಭ್ರಮ ಬೆರೆತಿರುತ್ತದೆ. ಇಂತ ಸೊಸೆ ಈ ಕಾಲದಲ್ಲಿ ಸಿಗುವುದು ಅಪರೂಪವೇ ಸರಿ. 

ಎಲ್(L)
ಎಲ್ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ತಮ್ಮ ಪತಿಗೂ, ಅತ್ತೆ ಮಾವನಿಗೂ ಅದೃಷ್ಟ ತರುವವರು. ತನ್ನ ಸುತ್ತಲಿರುವವರ ಸಂತೋಷದ ಬಗ್ಗೆ ಯೋಚಿಸುವವಳೀಕೆ. ಹಾಗಾಗಿ, ಈಕೆಯೊಂದಿಗೆ ಇರುವವರು ಸದಾ ನೆಮ್ಮದಿ, ಶಾಂತಿಯಿಂದ ಇರುತ್ತಾರೆ. ಆಕೆಯ ಹೆಸರಿನ ಎಲ್‌ ಎಂದರೆ ಲಕ್ ಎಂದುಕೊಳ್ಳಬಹುದು.

ರಾಶಿಫಲದ ಪರಿಣಾಮ ಹೋಳಿಯ ಬಳಿಕ ಬದುಕು ಬದಲಾಯ್ತೇ?

ಪಿ(P)
ಪಿ ಇಂದ ಹೆಸರು ಆರಂಭವಾಗುವ ಹುಡುಗಿಯರು ತಮ್ಮ ಪತಿ ಹಾಗೂ ಕುಟುಂಬದ ಸುರಕ್ಷತೆಗಾಗಿ ತಮ್ಮಿಂದಾಗುವುದೆಲ್ಲವನ್ನೂ ಮಾಡುತ್ತಾರೆ. ಈ ಹುಡುಗಿಯರು ಕಾಲಿಟ್ಟ ಮನೆಗೆ ಯಾವುದೇ ಕೆಡುಕು ಎದುರಾಗುವುದು ಸಾಧ್ಯವಿಲ್ಲ. ಸಾಕಷ್ಟು ತಾಳ್ಮೆ, ಸಂಯಮ ಇರುವ ಈ ಹುಡುಗಿಯರು ಅದರಿಂದಲೇ ಹೋದ ಮನೆಯ ಸದಸ್ಯರ ಮನ ಗೆಲ್ಲುತ್ತಾರೆ. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!