Vastu Tips : ಹಣದ ಸುರಿಮಳೆಯಾಗ್ಬೇಕಂದ್ರೆ ಹೊಸ ವರ್ಷ ಮಾಡಿ ಈ ಕೆಲಸ

By Suvarna News  |  First Published Dec 25, 2021, 5:14 PM IST

ರಾತ್ರೋರಾತ್ರಿ ಚಮತ್ಕಾರ ನಡೆದು ಬಡವ ಶ್ರೀಮಂತನಾಗುವುದು ಅಷ್ಟು ಸುಲಭವಲ್ಲ. ಹಣದ ಸಮಸ್ಯೆ ನೀಗಲಿ ಎಂದು ಎಲ್ಲರೂ ಬಯಸುತ್ತಾರೆ. ಆದ್ರೆ ಅಂದುಕೊಂಡಿದ್ದೆಲ್ಲ ನಡೆಯುವುದಿಲ್ಲ. ಕೆಲವೊಂದು ವಾಸ್ತುದೋಷಗಳೂ ನಮ್ಮ ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಹೊಸ ವರ್ಷ ಅದೃಷ್ಟ ಬದಲಾಗಬೇಕೆಂದ್ರೆ ಈ ಟಿಪ್ಸ್ ಅನುಸರಿಸಿ.
 


ಹೊಸ ವರ್ಷ (New Year )ಶುರುವಾಗ್ತಿದೆ. ಹೊಸ ವರ್ಷ 2022 ಹೊಸತನ್ನು ತರಲಿ ಎಂದು ಎಲ್ಲರೂ ಬಯಸುತ್ತಾರೆ. ಆರ್ಥಿಕ ಮುಗ್ಗಟ್ಟು ಕಡಿಮೆಯಾಗಿ ಸದಾ ಮನೆಯಲ್ಲಿ ಸುಖ (Happy)-ಶಾಂತಿ(Peace )ನೆಲೆಸಿರಲಿ ಎಂಬ ಅಭಿಲಾಷೆ ಪ್ರತಿಯೊಬ್ಬರಿಗೂ ಇರುತ್ತದೆ. ವರ್ಷಾರಂಭದಲ್ಲಿ ಮನೆಗೆ ನೂತನ ವಸ್ತುಗಳನ್ನು ತರುವ ಪದ್ಧತಿಯನ್ನು ಅನೇಕರು ಬೆಳೆಸಿಕೊಂಡಿದ್ದಾರೆ. ಹೊಸ ಉಡುಪು  ವಸ್ತುಗಳ ಖರೀದಿ ಮಾಡುತ್ತಾರೆ. ಮನೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಪರಿಸರ ಸ್ನೇಹಿಗಳು ಮನೆ ಸುತ್ತ ಒಂದಿಷ್ಟು ಸಸಿಗಳನ್ನು ನೆಟ್ಟು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಮನೆಗೆ ಗಿಡಗಳನ್ನು ತರುವಾಗ ವಾಸ್ತು ಶಾಸ್ತ್ರವನ್ನು ತಿಳಿಯುವುದು ಒಳ್ಳೆಯದು. ಕೆಲ ಗಿಡಗಳು ಮನೆಯ ಶಾಂತಿ-ನೆಮ್ಮದಿಯನ್ನು ಹಾಳು ಮಾಡುತ್ತವೆ. ಮತ್ತೆ ಕೆಲ ಗಿಡಗಳು ಮನೆಯ ಉನ್ನತಿಗೆ ನೆರವಾಗುತ್ತವೆ. ಹಾಗಾಗಿ ಅದೃಷ್ಟದ ಗಿಡಗಳನ್ನು ಮನೆಗೆ ತರಬೇಕಾಗುತ್ತದೆ. ಇದನ್ನು ಗುಡ್ ಲಕ್ ಗಿಡಗಳೆಂದೇ ಕರೆಯುತ್ತಾರೆ. ಹೊಸ ವರ್ಷದ ಸಂದರ್ಭದಲ್ಲಿ ನೀವು ಯಾವ ಗಿಡಗಳನ್ನು ಮನೆಗೆ ತಂದರೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.   

ಅಶೋಕ ಗಿಡ (Ashoka Plant): ಅಶೋಕ ಗಿಡವನ್ನು ಹೆಚ್ಚಾಗಿ ಉದ್ಯಾನವನಗಳಲ್ಲಿ ಅಥವಾ ತೆರೆದ ಜಾಗದಲ್ಲಿ ನೆಡಲಾಗುತ್ತದೆ. ಅಶೋಕ ಗಿಡವು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಹೊಸ ವರ್ಷದಲ್ಲಿ ಮನೆಗೆ ಅಶೋಕ ಗಿಡ ತರುವುದು ಒಳ್ಳೆಯದು. ಅದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಬೆಳೆಸಿ. ಅಶೋಕ ಸಸಿ,ಮನೆಯ ಸುತ್ತಮುತ್ತ ಇರುವ,ನಕಾರಾತ್ಮಕ ಪ್ರಭಾವ ಬೀರುವ ಗಿಡಗಳ ಶಕ್ತಿಯನ್ನು ಕುಗ್ಗಿಸುತ್ತದೆ.

Latest Videos

undefined

ಮನಿ ಪ್ಲಾಂಟ್ (Money Plant): ಹೆಸರೇ ಸೂಚಿಸುವಂತೆ ಹಣ ಎಂದರೆ ಲಕ್ಷ್ಮಿಯ ಗಿಡ. ಇದನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ ಎಂದು ನಂಬಲಾಗಿದೆ. ಕುಟುಂಬಕ್ಕೆ ಹೊಸ ಆದಾಯದ ಮಾರ್ಗಗಳು ಸೃಷ್ಟಿಯಾಗುತ್ತವೆ. ವಾಸ್ತು ಪ್ರಕಾರ, ಮನಿ ಪ್ಲಾಂಟ್ ಹೆಚ್ಚು ಹಸಿರಾಗಿದ್ದರೆ ಅದು  ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದನ್ನು ಯಾವಾಗಲೂ ಅಗ್ನಿ ಕೋನದಲ್ಲಿ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬೇಕಾಗುತ್ತದೆ. ಇದು ಆರ್ಥಿಕ ವೃದ್ಧಿ ಜೊತೆಗೆ ಮನೆಯಲ್ಲಿರುವ ವಾಸ್ತು ದೋಷವನ್ನು ನಿವಾರಿಸುತ್ತದೆ.

Teachings Of Gods: ದೇವರ ಜೀವನಶೈಲಿಯಲ್ಲಿ ಅತ್ಯುತ್ತಮ ಜೀವನ ಪಾಠವಿದೆ..

ತುಳಸಿ ಗಿಡ( Tulsi Plant): ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪೂಜ್ಯವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಮನೆಯಲ್ಲಿ ತುಳಸಿ ಗಿಡವಿಲ್ಲವೆಂದರೆ ಹೊಸ ವರ್ಷಕ್ಕೆ ಇದನ್ನು ಮನೆಗೆ ತನ್ನಿ. ಇದನ್ನು ಮನೆಯ ಬಾಲ್ಕನಿ ಅಥವಾ ಕಿಟಕಿಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬೇಡಿ. ತುಳಸಿ ಗಿಡಕ್ಕೆ ಪ್ರತಿ ದಿನ ನೀರು ಹಾಕಿ. ಬೆಳಿಗ್ಗೆ ಹಾಗೂ ಸಂಜೆ ಸಾಧ್ಯವಾದಲ್ಲಿ ಪೂಜೆ ಮಾಡಿ. ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಿ. ತುಳಸಿ ಆರೋಗ್ಯ ವೃದ್ಧಿಸುವ ಜೊತೆಗೆ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.

ಈ ರಾಶಿಯ ಹುಡುಗರು good husband ಎನಿಸಿಕೊಳ್ಳಲಿದ್ದಾರೆ, ನಿಮ್ಮ ಪಾರ್ಟ್ನರ್‌ ಈ ರಾಶಿಯವರಾ ನೋಡಿ..

ಆಲದ ಗಿಡ: ಆಲದ ಗಿಡವನ್ನು  ಜನರು ಮನೆಗೆ ತಂದು ನೆಡುವುದಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಬೇಕಾದರೆ ಚಿಕ್ಕ ಕುಂಡದಲ್ಲಿ ಇದನ್ನು  ನೆಡಬಹುದು.ಮನೆಯಿಂದ ಸ್ವಲ್ಪ ದೂರದಲ್ಲಿ,ವಿಶಾಲ ಜಾಗದಲ್ಲಿ ಇದನ್ನು ನಡೆಬಹುದು. ಆಲದ ಗಿಡವನ್ನು ಯಾವಾಗಲೂ ಪೂರ್ವ ದಿಕ್ಕಿನಲ್ಲಿ ನೆಡಬೇಕು. ಈ ಸಸ್ಯವು ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸುತ್ತದೆ.  ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ ಈ ಗಿಡವನ್ನು ಪಶ್ಚಿಮ ದಿಕ್ಕಿನಲ್ಲಿ ನೆಡಬಾರದು.

ಬಿದಿರು ಗಿಡ :  ವಾಸ್ತು ಪ್ರಕಾರ, ಬಿದಿರಿನ ಗಿಡಕ್ಕೆ ಮಹತ್ವದ ಸ್ಥಾನವಿದೆ.  ಬಿದಿರಿನ ಗಿಡವನ್ನು ಮನೆಯ ಬಳಿ ನೆಡುವುದು ಶುಭಕರ. ಮನೆಯ   ದುರಾದೃಷ್ಟ ದೂರಮಾಡುವ ತಾಕತ್ತು ಇದಕ್ಕಿದೆ.  
 

click me!