Teachings Of Gods: ದೇವರ ಜೀವನಶೈಲಿಯಲ್ಲಿ ಅತ್ಯುತ್ತಮ ಜೀವನ ಪಾಠವಿದೆ..

By Suvarna News  |  First Published Dec 25, 2021, 4:55 PM IST

ಹಿಂದೂಗಳಲ್ಲಿ ದೇವರ ಸಂಖ್ಯೆಗೆ ಮಿತಿಯಿಲ್ಲ. ಆದರೆ, ಅಷ್ಟೂ ದೇವರ ಜೀವನಶೈಲಿಯೂ ಒಂದಿಲ್ಲೊಂದು ಜೀವನ ಪಾಠವನ್ನು ಕಲಿಸುತ್ತದೆ. ಹಾಗಿದ್ದರೆ, ಈ ಕೆಲ ಹಿಂದೂ ದೇವರ ಜೀವನಶೈಲಿಯಿಂದ ನಾವೇನು ಕಲಿಯಬೇಕು ನೋಡೋಣ..


ದೇವರ ಎಲ್ಲ ಕೆಲಸಗಳೂ, ಮಾತು- ಪ್ರತಿಯೊಂದೂ ಪ್ರತಿಯೊಬ್ಬರಿಗೂ ಮಾದರಿಯೇ. ಆದರೆ, ಅವರ ಜೀವನಶೈಲಿಯಲ್ಲಿ ಕೂಡಾ ನಾವು ಅಳವಡಿಸಿಕೊಳ್ಳಬಹುದಾದ ಅದ್ಭುತ ಜೀವನ ಪಾಠಗಳಿವೆ. ಅವನ್ನು ಅರಿತರೆ ಬದುಕು ಸಾಕಷ್ಟು ಸರಳವೂ, ಸುಖದ ಹಾದಿಯೂ ಆಗುತ್ತದೆ. 

ಶಿವ(Lord Shiva)
ಶಿವನ ಹೆಸರಲ್ಲಿ ಭಂಗಿ ಸೇದುವುದನ್ನು ಸಮರ್ಥಿಸಿಕೊಳ್ಳುವವರಿಗೆ ಶಿವನಂತೆ ಬದುಕಲು ಹೇಳಿ. ಏಕೆಂದರೆ ಶಿವ ಅತಿ ಕಡಿಮೆ ವಸ್ತುಗಳಲ್ಲೇ ಶಾಂತಿಯ ಜೀವನ ನಡೆಸುವುದು ಹೇಗೆಂದು ನಮಗೆ ಹೇಳಿಕೊಟ್ಟಿದ್ದಾನೆ. ಸುತ್ತ ಮುತ್ತ ದೊರೆತಿದ್ದನ್ನೇ ಆಭರಣವಾಗಿ ಹಾಕಿಕೊಳ್ಳುವ ಶಿವನಿಗೆ ಭಸ್ಮವೊಂದಿದ್ದರೆ ಸಾಕು ಅಲಂಕಾರಕ್ಕೆ. ನಮ್ಮಲ್ಲಿ ಏನಿದೆಯೋ ಅದರಲ್ಲೇ ಸರಳ ಜೀವನ ನಡೆಸುವ ಬಗೆ ಶಿವನಿಂದ ಕಲಿಯಬೇಕು.

Tap to resize

Latest Videos

ಪಾರ್ವತಿ(Parvati)
ಪಾರ್ವತಿಯನ್ನು ಶಕ್ತಿ(POWER) ಎಂದೂ ಕರೆಯುತ್ತೇವೆ. ಮಹಿಳಾ ಸಬಲೀಕರಣಕ್ಕೆ ಅತ್ಯುತ್ತಮ ಉದಾಹರಣೆ ಆಕೆ. ಮಹಿಳೆ ಅಬಲೆಯಾಗಿರಕೂಡದು ಎಂಬುದನ್ನು ಆಕೆ ಹೇಳಿಕೊಟ್ಟಿದ್ದಾಳೆ. ಶಿವ ಹಾಗೂ ಶಕ್ತಿ ಒಬ್ಬರಿಲ್ಲದೆ ಮತ್ತೊಬ್ಬರಿಲ್ಲ ಎಂಬುದನ್ನು ನೋಡುವಾಗ ಆದರ್ಶ ದಂಪತಿ ಹೇಗಿರಬೇಕೆಂಬ ಕಲ್ಪನೆಯೂ ದೊರೆಯುತ್ತದೆ. ಇಬ್ಬರೂ ಪರಸ್ಪರ ಒಬ್ಬರ ಶಕ್ತಿ ಮತ್ತೊಬ್ಬರಾಗಿ ಬದುಕುತ್ತಾರೆ. 

ಸರಸ್ವತಿ(Saraswati)
ಸರಸ್ವತಿ ಶಿಕ್ಷಣದ ಮಹತ್ವ ಹೇಳುತ್ತಾಳೆ. ಶಿಕ್ಷಣವಿಲ್ಲದೆ ನಾವು ಹಾಳೂರ ಹದ್ದೇ ಸೈ ಎಂದು ದಾಸರೆಂದದ್ದು ನೆನಪಿದೆಯಷ್ಟೇ. ಕಲಿಯಬೇಕು, ಕಲಿಸಬೇಕು, ದುಡಿಯಬೇಕು ಹಾಗೂ ವಿದ್ಯೆಯ ಘನತೆಯಿಂದ ಬದುಕಬೇಕೆಂಬ ಪಾಠ ಸರಸ್ವತಿಯದು. 

ಈ ರಾಶಿಯ ಹುಡುಗರು good husband ಎನಿಸಿಕೊಳ್ಳಲಿದ್ದಾರೆ, ನಿಮ್ಮ ಪಾರ್ಟ್ನರ್‌ ಈ ರಾಶಿಯವರಾ ನೋಡಿ..

undefined

ಗಣೇಶ(Ganesha)
ಗಣೇಶ ನೋಡಲು ಹೇಗಿದ್ದಾನೆ ನೋಡಿದ್ದೀರಲ್ಲ, ಮನುಷ್ಯನ ದೇಹಕ್ಕೆ ಆನೆಯ ಮುಖ. ಅವನೆಂದಿಗೂ ತನ್ನ ಈ ಲುಕ್ಸ್ ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಅದೆಲ್ಲದರ ಹೊರತಾಗಿ ವಿದ್ಯೆ, ಬುದ್ಧಿಗೆ ಹೆಸರಾದವನು. ನಾವು ಕೂಡಾ ನಮ್ಮ ರೂಪಕ್ಕಾಗಿ ಕೊರಗುವುದು ಬಿಟ್ಟು ಜ್ಞಾನಿಗಳಾಗಿ ಹೆಸರು, ಗೌರವ ಸಂಪಾದಿಸಬೇಕು ಎಂಬುದನ್ನು ಗಣೇಶನಿಂದ ಕಲಿಯಬೇಕು. 

ಕೃಷ್ಣ(Krishna)
ಕೃಷ್ಣ ಹೇಗೆ ಬದುಕಿದನೆಂಬುದು ನಮಗೆಲ್ಲ ಗೊತ್ತು. ಅವನ ಪತ್ನಿಯರ ಬಗ್ಗೆ ಎಷ್ಟೇ ಚರ್ಚೆಯಾಗಲಿ, ತುಂಟಾಟ ಎಷ್ಟೇ ಇರಲಿ, ಹೆಣ್ಣಿಗೆ ಅಗೌರವ ತೋರಿದ್ದು ಎಂದಿಗೂ ಇಲ್ಲ. ಯಾವುದೇ ಹೆಣ್ಣಿಗೆ ಅವಮಾನವಾಗುತ್ತಿದೆ ಎಂದರೆ ಆಕೆಯನ್ನು ರಕ್ಷಿಸಲು ಅವನು ನಿಂತು ಬಿಡುತ್ತಾನೆ. ಇದನ್ನು ಜಗತ್ತಿನ ಎಲ್ಲ ಹುಡುಗರೂ ಅಳವಡಿಸಿಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ?

Kitchen Vastu : ಕಿಚನ್ ಸರಿ ಮಾಡಿಲ್ಲಾಂದ್ರೆ ಮನೆಮಂದಿಗೆಲ್ಲಾ ತೊಂದ್ರೆ

ಲಕ್ಷ್ಮೀ(Lakshmi)
ಹಣ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಲಕ್ಷ್ಮಿಯು ಒಳ್ಳೆ ಕೆಲಸ ಮಾಡುವವರ ಬಳಿ, ಪರಿಶ್ರಮ ಹಾಕುವವರ ಜೊತೆ ಮಾತ್ರ ತಾನಿರುತ್ತೇನೆ, ಇಲ್ಲದಿದ್ದಲ್ಲಿ ತಕ್ಕ ಶಾಸ್ತಿ ಮಾಡುತ್ತೇನೆ ಎಂದು ಮಾಡಿ ತೋರಿಸುವವಳು. ಕಷ್ಟ ಪಟ್ಟು ದುಡಿಯಲು ಹೇಳಿ ಕೊಟ್ಟವಳು. 

ಆಂಜನೇಯ(Hanuman)
ಆತ ನಮಗೆ ನಿಷ್ಠೆಯ ಬಗ್ಗೆ ಹೇಳಿಕೊಟ್ಟಿದ್ದಾನೆ. ರಾಮನಿಗೆ ಹನುಮಂತ ಇದ್ದಷ್ಟು ನಿಷ್ಠೆ(Loyalty)ಯಿಂದ ನಾವೂ ನಮ್ಮ ಪ್ರೀತಿಪಾತ್ರರಿಗೆ ಇರಬೇಕು ಎಂಬುದನ್ನು ಹನುಮಂತನ ಜೀವನ ನೋಡಿ ಕಲಿಯಬೇಕು. ನಮ್ಮ ಆಪ್ತರಿಗಾಗಿ ಎಂಥ ಸನ್ನಿವೇಶವನ್ನೂ ಎದುರಿಸಬೇಕು, ಅವರ ಜೊತೆಗಿರಬೇಕು ಎಂಬುದನ್ನು ಆಂಜನೇಯ ಹೇಳಿ ಕೊಟ್ಟಿದ್ದಾನೆ. 

ರಾಮ(Rama)
ತಂದೆ ತಾಯಿಗೆ ಹೇಗೆ ಉತ್ತಮ ಮಗನಾಗಿರಬೇಕು ಎಂಬುದನ್ನು ರಾಮನ ಜೀವನ ನೋಡಿ ಕಲಿಯಬೇಕು. ಸದಾ ತಂದೆ ತಾಯಿಯನ್ನು ಗೌರವಿಸುವ ಜೊತೆಗೆ ಅವರ ಆಸೆಗಳನ್ನು ಈಡೇರಿಸುವುದು ಮಕ್ಕಳ ಕರ್ತವ್ಯ ಎಂಬುದನ್ನು ರಾಮ ಹೇಳಿಕೊಟ್ಟಿದ್ದಾನೆ. ಕುಟುಂಬ ಯಾವಾಗಲೂ ಮೊದಲು ಎಂಬುದನ್ನು ಅವನನ್ನು ನೋಡಿ ತಿಳಿಯಬೇಕು. 

ವಿಷ್ಣು(Vishnu)
ಯಾವ ಸನ್ನಿವೇಶಕ್ಕೆ ಹೇಗೆ ಬದಲಾಗಬೇಕು, ಯಾರಿಗೆ ದೇವರಾಗಬೇಕು, ಯಾರಿಗೆ ಬುದ್ಧಿ ಕಲಿಸಬೇಕು ಎಂಬುದನ್ನು ವಿಷ್ಣುವನ್ನು ನೋಡಿ ಕಲಿಯಬೇಕು. ಸತ್ಯ, ಪ್ರಾಮಾಣಿಕತೆ, ಧರ್ಮಕ್ಕೆ ಎಂದಿಗೂ ಸೋಲಿಲ್ಲ ಎಂಬುದನ್ನು ಆತನ ಎಲ್ಲ ಅವತಾರಗಳೂ, ಜೀವನವೂ ಹೇಳಿಕೊಡುತ್ತವೆ.

 

 

click me!