ಜಗತ್ತಿನ ಮೊದಲ ಸಸ್ಯಾಹಾರಿ ನಗರ ಹೊಂದಿರುವ ಹೆಗ್ಗಳಿಕೆ ಭಾರತದ್ದು. ಈ ಸಸ್ಯಾಹಾರಿ ನಗರದ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ತಿಳಿಯೋಣ.
ಪ್ರಪಂಚದಲ್ಲಿ ವಿವಿಧ ಗುಣಲಕ್ಷಣಗಳನ್ನು ಹೊಂದಿರುವ ಅನೇಕ ನಗರಗಳಿವೆ. ಇಲ್ಲಿನ ಜನರು ವಿಭಿನ್ನ ಆಹಾರ ಪದ್ಧತಿಗಳನ್ನು ಹೊಂದಿದ್ದಾರೆ, ಅವರಲ್ಲಿ ಹೆಚ್ಚಿನ ಸಂಖ್ಯೆಯವರು ಮಾಂಸಾಹಾರಿಗಳು. ಆದರೆ ಸಂಪೂರ್ಣ ಸಸ್ಯಾಹಾರಿ ನಗರವೂ ಇದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಜಗತ್ತಿನ ಮೊದಲ ಸಸ್ಯಾಹಾರಿ ನಗರ ಹೊಂದಿರುವ ಹೆಗ್ಗಳಿಕೆ ಭಾರತದ್ದು. ಈ ಸಸ್ಯಾಹಾರಿ ನಗರದ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ತಿಳಿಯೋಣ.
ವಿಶ್ವದ ಸಂಪೂರ್ಣ ಸಸ್ಯಾಹಾರಿ ನಗರ ಗುಜರಾತ್‌ನಲ್ಲಿದೆ. ಅದನ್ನು ಪಾಲಿಟಾನಾ ಎಂದು ಕರೆಯಲಾಗುತ್ತದೆ. ಇದು ಜೈನ ಧರ್ಮದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಜೈನರ ರಕ್ಷಕನಾದ ಆದಿನಾಥನು ಒಮ್ಮೆ ಅದರ ಬೆಟ್ಟಗಳ ಮೇಲೆ ನಡೆದಾಡಿದನು ಮತ್ತು ಅಂದಿನಿಂದ ಈ ಸ್ಥಳವು ಅನುಯಾಯಿಗಳಿಗೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ. ಎಷ್ಟು ಜನರು ಜೈನ ಧರ್ಮವನ್ನು ಅನುಸರಿಸುತ್ತಾರೆ ಎಂಬುದರ ಬಗ್ಗೆ ಯಾವುದೇ ಖಚಿತವಾದ ಅಂಕಿ ಅಂಶವಿಲ್ಲ ಆದರೆ ಪ್ರಪಂಚದಾದ್ಯಂತ ಈ ಸಂಖ್ಯೆಯು ನಾಲ್ಕರಿಂದ ಐದು ಮಿಲಿಯನ್ ನಡುವೆ ಇರುತ್ತದೆ!
ಈ ನಗರವು ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿದ್ದು, ಜೈನ ಸಮುದಾಯದವರು ಇಲ್ಲಿ ವಾಸಿಸುತ್ತಾರೆ. ಈ ನಗರದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿದೆ ಮತ್ತು ಹಾಗೆ ಮಾಡಿದರೆ ಕಠಿಣ ಶಿಕ್ಷೆಯ ನಿಬಂಧನೆ ಇದೆ. ಇಲ್ಲಿನ ದೇವಾಲಯಗಳು ಜೈನ ಸಮುದಾಯದ ಯಾತ್ರಾ ಸ್ಥಳಗಳಾಗಿವೆ. ಚೌಮುಖ ದೇವಾಲಯವು ಇಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.
ಮೊಟ್ಟೆ ಮತ್ತು ಮಾಂಸ ಮಾರಾಟ ನಿಷೇಧ: ವಿಶ್ವದ ಏಕೈಕ ಸಸ್ಯಾಹಾರಿ ನಗರದಲ್ಲಿ ಮೊಟ್ಟೆ ಅಥವಾ ಮಾಂಸ ಮಾರಾಟಕ್ಕೆ ನಿಷೇಧವಿದೆ. ಈ ನಗರದ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿರುವ ಪರ್ವತದ ಮೇಲೆ 900ಕ್ಕೂ ಹೆಚ್ಚು ದೇವಾಲಯಗಳಿವೆ. ಇದು ಜೈನ ಧರ್ಮದ ಮೊದಲ ತೀರ್ಥಂಕರ ರಿಷಭದೇವನ ದೇವಾಲಯವನ್ನು ಸಹ ಹೊಂದಿದೆ. ಇದಲ್ಲದೆ ಕುಮಾರಪಾಲ, ವಿಮಲಶ, ಸಂಪ್ರತಿರಾಜ ಮೊದಲಾದವರ ದೇವಾಲಯಗಳಿವೆ. ಅದರ ಕೆತ್ತನೆಗಳು ಮತ್ತು ಶಿಲ್ಪಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ.
ಪಾಲಿಟಾನಾ ಜೈನ ಧರ್ಮದ ಅನುಯಾಯಿಗಳಿಗೆ ಅತ್ಯಂತ ಪೂಜ್ಯ ಮತ್ತು ಶುದ್ಧ ತಾಣವಾಗಿದೆ. ಇದು ಜೈನ ಧರ್ಮದ ಐದು ಪ್ರಮುಖ ತೀರ್ಥಯಾತ್ರೆ ಸ್ಥಳಗಳಲ್ಲಿ ಒಂದಾಗಿದೆ, ಪ್ರತಿ ಜೈನ ಸಮುದಾಯದ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಲು ಬಯಸುತ್ತಾನೆ.
ಶತ್ರುಂಜಯ ಬೆಟ್ಟ: ಈ ಒಂಬೈನೂರು ದೇವಾಲಯಗಳು ಶತ್ರುಂಜಯ ಬೆಟ್ಟದ ಮೇಲೆ ನೆಲೆಗೊಂಡಿದ್ದು, ಭಕ್ತರು ಇಲ್ಲಿಗೆ ತಲುಪಲು 3950 ಮೆಟ್ಟಿಲುಗಳನ್ನು ಹತ್ತಬೇಕು. ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟ ಈ ದೇವಾಲಯಗಳು 3.5 ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿವೆ. ಇಲ್ಲಿರುವ ಅತ್ಯಂತ ಹಳೆಯ ದೇವಾಲಯವನ್ನು 11 ಅಥವಾ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಗಳನ್ನು 16 ಬಾರಿ ಪುನರ್ನಿರ್ಮಿಸಲಾಯಿತು.
2014ರಲ್ಲಿ ಮಾಡಿದ ಕಾನೂನು: ಇಲ್ಲಿ 200 ಜೈನ ಸನ್ಯಾಸಿಗಳು 250 ಕಸಾಯಿ ಖಾನೆಗಳನ್ನು ವಿರೋಧಿಸಿ ಮುಷ್ಕರ ನಡೆಸಿದರು. ಇದಾದ ನಂತರ ಸರ್ಕಾರ ತಲೆ ಬಾಗಬೇಕಾಯಿತು. ಈ ನಗರವನ್ನು ಮಾಂಸ ಮುಕ್ತ ವಲಯ ಎಂದು ಘೋಷಿಸಲಾಯಿತು. ಇದಕ್ಕಾಗಿ 2014ರಲ್ಲಿ ಇಲ್ಲಿ ಕಾನೂನು ರೂಪಿಸಲಾಗಿದೆ. ಹಾಲಿನ ಉತ್ಪನ್ನಗಳು ಇಲ್ಲಿ ಲಭ್ಯ.
Ramayan: ಪ್ರಿಯ ಭಂಟ ಹನುಮನ ಮೇಲೆಯೇ ಬ್ರಹ್ಮಾಸ್ತ್ರ ಪ್ರಯೋಗಿಸಿದ ಶ್ರೀರಾಮ! ಕಾರಣ ಏನ್ ಗೊತ್ತಾ?
ರಾತ್ರಿ ಇಲ್ಲಿ ತಂಗಲು ಅವಕಾಶವಿಲ್ಲ: ಜೈನರ ನಂಬಿಕೆಯ ಪ್ರಕಾರ, ಈ ದೇವಾಲಯಗಳನ್ನು ಪರ್ವತಗಳ ಮೇಲೆ ದೇವರ ವಾಸಸ್ಥಾನವಾಗಿ ನಿರ್ಮಿಸಲಾಗಿದೆ. ರಾತ್ರಿ ವೇಳೆ ಇಲ್ಲಿ ತಂಗಲು ಅವಕಾಶವಿಲ್ಲ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.