The Simpsons: ಜನವರಿ 16ಕ್ಕೆ ನಿಜಕ್ಕೂ ಇಂಟರ್ನೆಟ್‌ ಬಂದ್‌ ಆಗಲಿದ್ಯಾ? ಏನಿದು ಸಿಂಪ್ಸನ್ಸ್‌ ಪ್ರೆಡಿಕ್ಷನ್‌!

By Santosh Naik  |  First Published Jan 14, 2025, 6:44 PM IST

ದಿ ಸಿಂಪ್ಸನ್ಸ್‌ ಕಾರ್ಟೂನ್‌ 2025ರ ಜನವರಿ 16 ರಂದು ವಿಶ್ವದಾದ್ಯಂತ ಇಂಟರ್ನೆಟ್‌ ಬಂದ್‌ ಆಗಲಿದೆ ಎಂದು ಭವಿಷ್ಯ ನುಡಿದಿದೆ. ಶಾರ್ಕ್‌ಗಳು ಇಂಟರ್ನೆಟ್‌ ಕೇಬಲ್‌ಗಳನ್ನು ಕಟ್‌ ಮಾಡುವುದರಿಂದ ಈ ಬಂದ್‌ ಉಂಟಾಗಲಿದೆ ಎನ್ನಲಾಗಿದೆ. ಈ ಭವಿಷ್ಯವಾಣಿ ನಿಜವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.


ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ವೈರಲ್‌ ಆಗುತ್ತಿರುವ ವಿಡಿಯೋ ಪ್ರಕಾರ, ದಿ ಸಿಂಪ್ಸನ್ಸ್‌ ಕಾರ್ಟೂನ್‌ ಪ್ರೆಡಿಕ್ಷನ್‌ ಮಾಡಿದ್ದು, 2025ರ ಜನವರಿ 16 ರಂದು ವಿಶ್ವದಾದ್ಯಂತ ಇಂಟರ್ನೆಟ್‌ ಬಂದ್‌ ಆಗಲಿದೆ. ಸಮುದ್ರದ ಆಳದಲ್ಲಿರುವ ಇಂಟರ್ನೆಟ್‌ ಕೇಬಲ್‌ಗಳನ್ನು ದೈತ್ಯ ಶಾರ್ಕ್‌ಗಳು ಕಟ್‌ ಮಾಡಲಿದ್ದು, ಇದರಿಂದ ಇಂಟರ್ನೆಟ್‌ ಬಂದ್‌ ಆಗಲಿದೆ ಎಂದು ಹೇಳಿರುವ ವಿಡಿಯೋ ಇದಾಗಿದೆ. ಈ ವಿಡಿಯೋಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ದಿನ ವಿಶ್ವದಾದ್ಯಂತ ಇಂಟರ್ನೆಟ್‌ ಬಂದ್‌ ಆಗಲಿದೆ ಅನ್ನೋದು ಸಿಂಪ್ಸನ್ಸ್‌ ಕಾರ್ಟೂನ್‌ನಲ್ಲಿ ಬಂದಿರುವ ಮಾಹಿತಿಯಾಗಿದೆ. ಆದರೆ, ಈ ಸುದ್ದಿ ನಂಬುವಂಥದ್ದಲ್ಲ ಅನ್ನೋದಕ್ಕೂ ಸಾಕ್ಷಿಗಳಿವೆ. ಏಕೆಂದರೆ, ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳೋದು ಜನವರಿ 20 ರಂದು. ಈ ಗೊಂದಲವು ಭವಿಷ್ಯವಾಣಿಯ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಗೊಂದಲದ ಹೊರತಾಗಿಯೂ, ವೀಡಿಯೊ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿದೆ, "ದಿ ಸಿಂಪ್ಸನ್ಸ್" ನಿಜವಾಗಿಯೂ ಈ ವಿಲಕ್ಷಣ ಸನ್ನಿವೇಶವನ್ನು ಮುನ್ಸೂಚಿಸಿತೇ ಎಂದು ಹಲವರು ಪ್ರಶ್ನಿಸುವಂತೆ ಮಾಡಿದೆ.

ಇಂಟರ್ನೆಟ್‌ ಬಂದ್‌ ಆಗೋದರಿಂದ ಆನ್‌ಲೈನ್ ವಹಿವಾಟು, ಕ್ರೆಡಿಟ್ ಕಾರ್ಡ್, ಸೂಪರ್‌ಮಾರ್ಕೆಟ್ ಮಾರಾಟ ಎಲ್ಲವೂ ಸ್ಥಗಿತಗೊಳ್ಳುತ್ತದೆ, ಎಲ್ಲೆಡೆ ಅವ್ಯವಸ್ಥೆ ಇರುತ್ತದೆ. ಜನರು ಹೊರಗೆ ಹೋಗಿ ಜನರನ್ನು ಭೇಟಿಯಾಗುತ್ತಿದ್ದಂತೆ ಜನರು ಮೊದಲಿನಂತೆಯೇ ಬದುಕಲು ಪ್ರಾರಂಭಿಸುತ್ತಾರೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಇಂಟರ್ನೆಟ್‌ನ ಮೊದಲ ಯುಗದಂತೆಯೇ ಇರುತ್ತದೆ ಎಂದು ಕಾರ್ಟೂನ್‌ನಲ್ಲಿ ತಿಳಿಸಲಾಗಿದೆ.
2015 ರಲ್ಲಿಯೂ ಸಹ, ಸಿಂಪ್ಸನ್ಸ್ ತಮ್ಮ ಕಾರ್ಟೂನ್ ಮೂಲಕ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು, ಅದು ನಿಜವಾಯಿತು. ಈ ಬಾರಿ ಸಿಂಪ್ಸನ್ಸ್‌ನ ಭವಿಷ್ಯವಾಣಿ ನಿಜವಾಗುತ್ತದೆಯೋ ಇಲ್ಲವೋ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಬಾಂಬೆ ಐಐಟಿಯಲ್ಲಿ ಏರೋಸ್ಪೇಸ್‌ ಇಂಜಿನಿಯರಿಂಗ್‌ ಮಾಡಿದ್ದ ವ್ಯಕ್ತಿ ಇಂದು ಮಹಾಸಾಧು!

Tap to resize

Latest Videos

ಡೊನಾಲ್ಡ್‌ ಟ್ರಂಪ್‌ ಚುನಾವಣೆ ಗೆಲ್ಲುತ್ತಾರೆ ಅನ್ನೋದು ಮಾತ್ರವಲ್ಲ, ಇತ್ತೀಚೆಗೆ ಲಾಸ್‌ ಏಂಜಲೀಸ್‌ ಕಾಡ್ಗಿಚ್ಚು ಪ್ರಕರಣವನ್ನೂ ಕೂಡ ದಿ ಸಿಂಪ್ಸನ್ಸ್‌ ಕಾರ್ಟೂನ್‌ನಲ್ಲಿ ಮೊದಲೇ ಬಿತ್ತರಿಸಲಾಗಿತ್ತು. ಈಗ ಅದೇ ರೀತಿಯಲ್ಲಿ ಲಾಸ್‌ ಏಂಜಲೀಸ್‌ ಕಾಡ್ಗಿಚ್ಚಿಗೆ ಬಲಿಯಾಗಿದೆ ಅನ್ನೋ ಮಾತುಗಳಿವೆ. ದಿ ಸಿಂಪ್ಸನ್ಸ್‌ ತನ್ನ ಕಾರ್ಟೂನ್‌ ಮೂಲಕ ಹೇಳಿರುವ 25ಕ್ಕೂ ಹೆಚ್ಚು ಭವಿಷ್ಯವಾಣಿಗಳು ನಿಜವಾಗಿರುವ ಕಾರಣ, ಈ ಬಾರಿಯ ಇಂಟರ್ನೆಟ್‌ ಬಂದ್‌ ಆಗಲಿರುವ ಭವಿಷ್ಯವಾಣಿಯ ಬಗ್ಗೆಯೂ ಕುತೂಹಲ ಎದ್ದಿದೆ.

ಗವಿಗಂಗಾಧರೇಶ್ವರ ಕ್ಷೇತ್ರಕ್ಕೆ ಬಾರದ ಸೂರ್ಯರಶ್ಮಿ, 2019ರಂತೆ ಈ ಬಾರಿ ಕಾದಿದ್ಯಾ ಗಂಡಾಂತರ?

 

click me!