
ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣನ್ಯೂಸ್
ಉಡುಪಿ (ಆ.17): ಹೊಸದಾಗಿ ಮದುವೆಯಾದವರೇ ಹೆಚ್ಚಾಗಿ ಭಾಗವಹಿಸುವ ಜಾತ್ರೆಯೊಂದು ಕರಾವಳಿ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಸಿಂಹ ಸಂಕ್ರಮಣದ ದಿನವಾದ ಇಂದು ಪೆರ್ಡೂರು ಅನಂತಪದ್ಮನಾಭ ಕ್ಷೇತ್ರದಲ್ಲಿ ನಡೆಯುವ ಮದುಮಕ್ಕಳ ಜಾತ್ರೆಯಲ್ಲಿ ನವದಂಪತಿಗಳದ್ದೇ ಕಲರವ. ಶ್ರಾವಣ ಮಾಸ ಬಂದಾಗ ಆನಂದ ತಂದಾಗ’ ಈ ಸುಮಧುರ ಗೀತೆ ಯಾರು ಕೇಳಿಲ್ಲ ಹೇಳಿ. ನವದಂಪತಿಗಳ ಮಧುರ ಬಾಂಧವ್ಯಕ್ಕೆ ಶ್ರಾವಣ ಮಾಸ ಹೇಳಿ ಮಾಡಿಸಿದ ತಿಂಗಳು. ಇಂದು ಸಿಂಹ ಸಂಕ್ರಮಣ. ಕರಾವಳಿಗರು ಆಷಾಡ ಕಳೆದು ಶ್ರಾವಣವನ್ನು ಬರಮಾಡಿಕೊಳ್ಳುವ ಸುದಿನ. ಅನಾದಿ ಕಾಲದಿಂದಲೂ ಈ ಭಾಗದಲ್ಲಿ ಒಂದು ಸಂಪ್ರದಾಯವಿದೆ. ಈ ವಸಂತದಲ್ಲಿ ಮದುವೆಯಾದ ನವ ದಂಪತಿಗಳು ಆಷಾಡದಲ್ಲಿ ತವರಿಗೆ ಹೋಗುತ್ತಾರೆ. ಸಿಂಹ ಸಂಕ್ರಮಣದ ದಿನ ಪತಿಯ ಮನೆಗೆ ವಾಪಾಸಾಗುತ್ತಾರೆ. ಆದರೆ ಪತಿ ಮನೆಗೆ ಹೋಗುವ ಮುನ್ನ ಪೆರ್ಡೂರು ಅನಂತ ಪದ್ಮನಾಭ ದೇವರ ದರ್ಶನ ಮಾಡಬೇಕು ಅನ್ನೋದು ಶೃದ್ಧಾಳುಗಳ ನಂಬಿಕೆ. ಹಾಗಂತಲೇ ಇಂದು ನಸುಕಿನಿಂದಲೇ ಸಾವಿರಾರು ನವದಂಪತಿಗಳು ಸಂಕ್ರಮಣ ಜಾತ್ರೆಯಲ್ಲಿ ಭಾಗವಹಿಸಿದರು. ಪೆರ್ಡೂರು ಕ್ಷೇತ್ರದ ಅನಂತ ಪದ್ಮನಾಭ ದೇವರಿಗೆ ಬಾಳೆ ಹಣ್ಣು ಅಂದ್ರೆ ಅತಿಯಾದ ಪ್ರೀತಿ. ಹರಕೆ ಹೊತ್ತ ನವದಂಪತಿಗಳು ಬುಟ್ಟಿಗಟ್ಟಲೆ ಬಾಳೆ ಹಣ್ಣನ್ನು ದೇವರಿಗೆ ಅರ್ಪಿಸುತ್ತಾರೆ.
ತಿರುಪತಿ ತಿಮ್ಮಪ್ಪನ ದರ್ಶನ ಮಾಡಲಾಗದವರು, ಪೆರ್ಡೂರು ಅನಂತ ಪದ್ಮನಾಭನಿಗೆ ಹರಿಕೆ ತೀರಿಸುವ ಸಂಪ್ರದಾಯವೂ ಇಲ್ಲಿದೆ. ಪರಸ್ಪರ ಪ್ರೀತಿಯ ಸಂಬಂಧಕ್ಕೆ ದೇವರ ಆಶೀರ್ವಾದದ ರಕ್ಷೆಯಿದೆ ಎಂಬ ವಿಶ್ವಾಸವೇ ಲಕ್ಷಾಂತರ ದಾಂಪತ್ಯವನ್ನು ಸುಖವಾಗಿಟ್ಟಿದೆ. ಸುಖ ದಾಂಪತ್ಯಕ್ಕೆ ದೇವರ ಸನ್ನಿಧಿಯಲ್ಲಿ ನಾಂದಿ ಹಾಡುವ ಈ ಆಚರಣೆ ನಿಜ್ಕಕೂ ಅರ್ಥಪೂರ್ಣ.
ಸಂಗೀತ ಸೇವೆ ದೇವರಿಗೆ ಅತ್ಯಂತ ಪ್ರಿಯವಾದ ಕಲಾಸೇವೆ: ಡಾ.ಹೆಗ್ಗಡೆ
ಉಜಿರೆ(ಆ.17): ಪುರಾಣವಾಚನ, ವೇದಘೋಷ, ಸಂಗೀತ ನೃತ್ಯ, ಸ್ತುತಿ ಮೊದಲಾದ ಸೇವೆಗಳಿಂದ ನಾವು ದೇವರನ್ನು ಸಾಕ್ಷಾತ್ಕರಿಸಿ ಆರಾಧನೆ ಮಾಡಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಸುರತ್ಕಲ್‌ನ ಮಣಿಕೃಷ್ಣ ಅಕಾಡೆಮಿ ಆಶ್ರಯದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ರಚಿಸಿ ಪ್ರಕಟಿಸಿದ ‘ಮಂಜುನಾದ’ ಕೃತಿಗಳನ್ನು ಭಾನುವಾರ ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
Panchanga: ಇಂದು ಮಂಗಳಗೌರಿ ಪ್ರಾರ್ಥನೆಯಿಂದ ಒಳಿತಾಗುವುದು
ಸುಶ್ರಾವ್ಯವಾಗಿ ಶಾಸ್ತ್ರೀಯ ಸಂಗೀತ ಹಾಡಿದ ಎಲ್ಲ ಕಲಾವಿದರನ್ನು ಹೆಗ್ಗಡೆಯವರು ಅಭಿನಂದಿಸಿ ಗೌರವಿಸಿದರು.ಉಡುಪಿಯ ಪ್ರೊ.ಅರವಿಂದ ಹೆಬ್ಬಾರ್ ಮತ್ತು ಡಾ.ರಾಜಕುಮಾರ್ ಭಾರತಿ ಶುಭಾಶಂಸನೆ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.
Panchanga: ಸೂರ್ಯ ಸಿಂಹ ಸಂಕ್ರಮಣ ಇಂದು, ಆತನ ಆರಾಧನೆ ಮಾಡಿ..
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು. ಮಣಿಕೃಷ್ಣ ಅಕಾಡೆಮಿ ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಕಾರ್ಕಳದ ಡಾ. ಎಸ್.ಆರ್. ಅರುಣ ಕುಮಾರ್ ವಂದಿಸಿದರು. ಉಡುಪಿಯ ರಾಮಾಂಜನೇಯ ಮತ್ತು ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.