ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಮನೆಯ ವಸ್ತುಗಳನ್ನು ಜೋಡಿಸಿರ್ತೇವೆ. ಅಡುಗೆ ಮನೆಯಲ್ಲಿಯೂ ಕೈಗೆ ಸಿಗುವಂತೆ ಎಲ್ಲ ಪಾತ್ರೆಗಳನ್ನು ಇಟ್ಟಿರ್ತೇವೆ. ಆದ್ರೆ ನಮ್ಮನೆಯ ತವಾ ಬೇರೆಯವರ ಕಣ್ಣಿಗೆ ಬಿದ್ರೆ ದುರಾದೃಷ್ಟ ಬೆನ್ನು ಹತ್ತುತ್ತದೆ.
ತವಾ (Tawa) ಅಥವಾ ಕಾವಲಿ, ಪ್ರತಿಯೊಬ್ಬರ ಅಡುಗೆ ಮನೆ (Kitchen)ಯಲ್ಲೂ ಇದ್ದೇ ಇರುತ್ತದೆ. ಬಿಸಿ ಬಿಸಿ ದೋಸೆ,ರೊಟ್ಟಿ ಬೇಯಿಸಲು ಇದನ್ನು ಎಲ್ಲರೂ ಬಳಸ್ತಾರೆ. ಉಬ್ಬಿದ್ದ,ರುಚಿಯಾದ ರೊಟ್ಟಿ ತಯಾರಿಸಲು ಬಳಸುವ ಕಾವಲಿನ್ನು ನಾವು ಕೇವಲ ಕಾವಲಿ ರೂಪದಲ್ಲಿ ನೋಡ್ತೆವೆ. ಅದಕ್ಕೆ ವಿಶೇಷ ಮಹತ್ವವನ್ನು ನೀಡುವುದಿಲ್ಲ. ಅದರ ಕೆಲಸ ಮುಗಿದ ಮೇಲೆ ಅದು ಮೂಲೆ ಸೇರುತ್ತದೆ. ಆದ್ರೆ ವಾಸ್ತುಶಾಸ್ತ್ರದಲ್ಲಿ ನಾವು ಬಳಸುವ ತವಾಕ್ಕೂ ಮಹತ್ವದ ಸ್ಥಾನವಿದೆ. ತವಾ ಹಾಗೂ ನಮ್ಮ ಜೀವನಕ್ಕೆ ಕನೆಕ್ಷನ್ ಇದೆ. ವಾಸ್ತು (vastu) ಶಾಸ್ತ್ರದಲ್ಲಿ ಮನೆಯಲ್ಲಿರುವ ಪ್ರತಿಯೊಂದು ವಸ್ತುವಿನ ಒಳಿತು ಕೆಡುಕುಗಳ ಬಗ್ಗೆ ಹೇಳಲಾಗಿದೆ. ಹಾಗೆಯೇ ತವಾ ಬಗ್ಗೆಯೂ ಹೇಳಲಾಗಿದೆ. ಅದರ ಬಳಕೆಯನ್ನು ನಾವು ವಾಸ್ತುವಿಗೆ ವಿರುದ್ಧವಾಗಿ ಮಾಡಿದರೆ ನಮ್ಮ ಜೀವನದ ಮೇಲೆ ಅದರ ನೇರ ಪರಿಣಾಮ ಬೀರುತ್ತದೆ. ಇಂದು ನಮ್ಮ ಮನೆಯಲ್ಲಿರುವ ಕಾವಲಿ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಏನು ಹೇಳಲಾಗಿದೆ ಎಂಬುದನ್ನು ಹೇಳ್ತೆವೆ. ಆರ್ಥಿಕ ನಷ್ಟ (Financial loss )ಕ್ಕೆ ನಾವು ಮಾಡ್ತಿರುವ ತಪ್ಪು ಕಾರಣ ಎಂಬುದನ್ನು ಹೇಳ್ತೆವೆ.
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕಾವಲಿ ಬಳಸುವ ನಿಯಮಗಳು :
1. ಮೊದಲ ನಿಯಮವೆಂದರೆ ನೀವು ತವಾವನ್ನು ಬಳಸಿದಾಗ ಅದನ್ನು ಚೆನ್ನಾಗಿ ಸ್ವಚ್ಛ (Clean)ಗೊಳಿಸಿ ಇಡಬೇಕು. ಅನೇಕರು ಮತ್ತೆ ರಾತ್ರಿಗೆ ಬಳಸಬೇಕೆಂಬ ಕಾರಣಕ್ಕೆ ಸ್ವಚ್ಛಗೊಳಿಸದೆ ಹಾಗೆ ಇಡುತ್ತಾರೆ. ಇದು ಒಳ್ಳೆಯದಲ್ಲ. ತವಾ ಜೊತೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೊಳಕು ತುಂಬಿದ ಅಡುಗೆ ಮನೆಯು ನಿಮ್ಮ ಕುಟುಂಬದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ತವಾ ಕೊಳಕಾಗಿದ್ದರೆ ರಾಹುವಿನ ದುಷ್ಪರಿಣಾಮವು ಗೃಹಿಣಿಯ ಗಂಡನ ಮೇಲೆ ಬೀಳುತ್ತದೆ. ಪ್ರಗತಿಯ ಹಾದಿ ಮುಚ್ಚುತ್ತದೆ. ರಾತ್ರಿ ಅಪ್ಪಿತಪ್ಪಿಯೂ ತವಾ ತೊಳೆಯದೆ ಇಡಬಾರದು. ಇದು ತಾಯಿ ಅನ್ನಪೂರ್ಣೆ ಹಾಗೂ ಲಕ್ಷ್ಮಿಯ ಕೋಪಕ್ಕೆ ಕಾರಣವಾಗುತ್ತದೆ.
2. ಅಡುಗೆ ಮನೆಯಲ್ಲಿ ಕಾವಲಿಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಇದು ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ. ಜೊತೆಗೆ ಹೊರಗಿನವರ ಕಣ್ಣುಗಳಿಗೆ ಬೀಳದಂತೆ ಕಾವಲಿಯನ್ನು ಇಡಬೇಕು. ಹೊರಗಿನ ಜನರು ಇದನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗಿದೆ.
Key to Success: ಚಾಣಕ್ಯನ ಪ್ರಕಾರ ತಾಯಿ ಮಹಾಲಕ್ಷ್ಮೀಯನ್ನು ಒಲಿಸಲು ನಾವು ಮಾಡಬೇಕಾದ್ದಿಷ್ಟು..
3. ನೀವು ಕಾವಲಿ ಬಳಸಿದಾಗ, ಮೊದಲು ಅದರ ಮೇಲೆ ಉಪ್ಪನ್ನು ಸಿಂಪಡಿಸಿ. ಹೀಗೆ ಮಾಡಿದಲ್ಲಿ ಮನೆಯಲ್ಲಿ ಸದಾ ಆಹಾರ ಮತ್ತು ಸಂಪತ್ತು ಇರುತ್ತದೆ ಎಂದು ನಂಬಲಾಗಿದೆ.
4. ತವಾಕ್ಕೆ ನೀರನ್ನು ಸುರಿಯಬೇಡಿ. ಹಾಗೆಯೇ ಬಿಸಿ ತವಾ ಮೇಲೆ ನೀರನ್ನು ಸುರಿಯಬೇಡಿ. ಬಿಸಿಯಾದ ಬಾಣಲೆಯ ಮೇಲೆ ನೀರು ಬೀಳುವುದರಿಂದ ಬರುವ ಶಬ್ದವು ನಿಮ್ಮ ಜೀವನದಲ್ಲಿ ತೊಂದರೆಗಳನ್ನು ತರುತ್ತದೆ.
5. ತವಾ ಮತ್ತು ಕಡಾಯಿ ಖಾಲಿಯಾಗಿದ್ದರೆ, ಅದನ್ನು ನೇರವಾಗಿ ಇಡಬೇಡಿ. ಏಕೆಂದರೆ ಖಾಲಿ ಪಾತ್ರೆಯು ನಷ್ಟವನ್ನುಂಟು ಮಾಡುತ್ತದೆ. ಕಾವಲಿಯನ್ನು ಯಾವಾಗಲೂ ಗ್ಯಾಸ್ ಬಲಭಾಗದಲ್ಲಿ ಇರಿಸಿ.
6. ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ, ಹಸು, ನಾಯಿ ಅಥವಾ ಪಕ್ಷಿಯಂತಹ ಯಾವುದೇ ಪ್ರಾಣಿಗಳಿಗೆ ಮೊದಲ ಆಹಾರ ನೀಡಬೇಕು. ವಾಸ್ತು ದೋಷದಿಂದ ಮನೆಯಲ್ಲಿ ಘರ್ಷಣೆಯಾಗ್ತಿದ್ದರೆ ತವಾವನ್ನು ತೊಳೆಯದೆ ಎರಡು ಅಥವಾ ಮೂರು ಇಂಚು ರೊಟ್ಟಿ ತಯಾರಿಸಿ. ಅದನ್ನು ಯಾವುದಾದರೂ ಪ್ರಾಣಿ ಅಥವಾ ಪಕ್ಷಿಗೆ ನೀಡಿ. ಹೀಗೆ ಮಾಡಿದಲ್ಲಿ ಮನೆಯಲ್ಲಿ ಗಲಾಟೆ ಕಡಿಮೆಯಾಗಿ,ಶಾಂತಿ ನೆಲೆಸುತ್ತದೆ.
Astrology Tips : ಮದುವೆಯಾಗ್ತಿಲ್ವ? ಕಂಕಣ ಭಾಗ್ಯ ಕೂಡಿ ಬರಲು ಮಾಡಿ ಈ ಕೆಲಸ
7. ನಿಂಬೆಹಣ್ಣು ಮತ್ತು ಉಪ್ಪನ್ನು ಸೇರಿಸಿ ತವಾ ಸ್ವಚ್ಛಗೊಳಿಸಿ.ತವಾ ಹೊಳೆಯುವಂತೆ ನಿಮ್ಮ ಅದೃಷ್ಟ ಹೊಳೆಯುತ್ತದೆ ಎನ್ನಲಾಗುತ್ತದೆ. ಹಾಗಂತ ಯಾವುದೇ ಹರಿತವಾದ ವಸ್ತುವಿನಿಂದ ತವಾವನ್ನು ಉಜ್ಜಬೇಡಿ.
8. ತವಾ ಮೇಲೆ ಮಾಡಿದ ರೊಟ್ಟಿ ಅಥವಾ ಯಾವುದೇ ಆಹಾರವನ್ನು ನೇರವಾಗಿ ಸೇವನೆ ಮಾಡಬೇಡಿ. ಮೊದಲು ಕಾವಲಿಯಿಂದ ತೆಗೆದು ಅದನ್ನು ಪ್ಲೇಟ್ ಗೆ ಹಾಕಿ. ನಂತ್ರ ಪ್ಲೇಟ್ ನಿಂದ ಆಹಾರವನ್ನು ಸೇವಿಸಿ.