Love horoscpe: ಫೆಬ್ರವರಿಯ ಪ್ರಣಯ ಪ್ರಸಂಗ- ನಿಮ್ಮ ರಾಶಿಗೆ ಮುಂದಿನ ತಿಂಗಳು ಏನು‌ ಫಲ?

By Suvarna News  |  First Published Jan 27, 2022, 4:07 PM IST

ಪ್ರೇಮಿಗಳ ದಿನ ಇರುವ ಫೆಬ್ರವರಿಯಲ್ಲಿ ನಿಮ್ಮ ಪ್ರೀತಿ ಪ್ರೇಮ ಪ್ರಣಯ ಹೇಗಿರುತ್ತೆ? ನಿಮ್ಮ ಜನ್ಮರಾಶಿ ಆಧಾರದಲ್ಲಿ ತಿಳಿಯೋಣ ಬನ್ನಿ.
 


ನೀವು ಈ ತಿಂಗಳು (February) ನಿಮ್ಮ‌ ಸಂಗಾತಿ (Spouse) ಅಥವಾ ಬಾಯ್‌ಫ್ರೆಂಡ್/ಗರ್ಲ್‌ಫ್ರೆಂಡ್ ಜೊತೆ ಹೇಗಿರ್ತೀರಾ ಅನ್ನುವುದು ನಿಮ್ಮ ಜಾತಕದಲ್ಲಿ ಚಂದ್ರನು (Moon) ಯಾವ ಮನೆಯಲ್ಲಿದ್ದಾನೆ ಎಂಬುದನ್ನು ಆಧರಿಸಿದೆ. ಚಂದ್ರನು ಪ್ರಣಯಕ್ಕೆ (Romance) ಅಧಿಪತಿ. ಚಂದ್ರನ ಲೆಕ್ಕಾಚಾರದ ಮೇಲೆ ಪ್ರೇಮ ಜೀವನ (Love life) ಮತ್ತು ವೈವಾಹಿಕ (Married life) ಜೀವನ ವಿವರಣ ನೀಡಲಾಗುವುದು. ಇದರ ಆಧಾರದ ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ದೈನಂದಿನ ಮಾತುಕತೆ, ಪ್ರೇಮಿಗಳೊಂದಿಗೆ ಒಡನಾಟ ತಿಳಿಯಬಹುದಾಗಿದೆ. ವೈವಾಹಿಕ ಜೀವನದಲ್ಲಿರುವವರಿಗೆ ಈ ತಿಂಗಳು ಸಂಗಾತಿಯೊಂದಿಗಿನ ಸಂಬಂಧದಲ್ಲಿ  ಸರಸವೋ ವಿರಸವೋ ಎಂಬ ಮಾಹಿತಿ ಇಲ್ಲಿದೆ

ಮೇಷ ರಾಶಿ (Aries)
ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ವಿವಾಹಿತರ ಮನೆಯ ಜೀವನದಲ್ಲಿ ಹೆಚ್ಚಿನ ಹೊಂದಾಣಿಕೆ ಇರಲಿದೆ. ಸಂಗಾತಿಯು ನಿಮ್ಮ ಕೆಲಸಕ್ಕೆ ನೆರವಾಗಲಿದ್ದಾರೆ

Tap to resize

Latest Videos

undefined

ವೃಷಭ ರಾಶಿ (Taurus) 
ಈ ಮಾಸದಲ್ಲಿ ನೀವು ಪ್ರಣಯ ಸಂಬಂಧಿಯಾದ ಕೆಲವು ಸಾಹಸಗಳನ್ನು ಕೈಗೊಳ್ಳಬಹುದು. ವಿವಾಹಿತರಿಗೂ ಅನ್ಯ ಸಂಗಾತಿಗಳು ಒದಗಬಹುದು. ಇದರಲ್ಲಿ ಮುಂದುವರಿಯುವ ಮುನ್ನ ನಿಮ್ಮ ಸಂಸಾರ ಹಾಗೂ ಪ್ರೀತಿಪಾತ್ರರ ಬಗೆಗೂ ಎಚ್ಚರಿಕೆಯಿಂದ ಯೋಚಿಸಿ.

Mythology: ಶ್ರೀಕೃಷ್ಣನಿಗೆ ಎಷ್ಟು ಶಾಪಗಳಿದ್ದವು ನಿಮಗೆ ಗೊತ್ತೆ?

ಮಿಥುನ ರಾಶಿ (Gemini)
ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆಯ ನಡುವೆ, ಪ್ರೀತಿಯ ಸಿಹಿ ಮಾತುಕತೆ ಇರಲಿದೆ. ನಿಮ್ಮ ಸಂಬಂಧದಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ. ಪ್ರೀತಿಯ ಜೀವನಕ್ಕೆ ಈ ತಿಂಗಳು ಬಹಳ ಉತ್ತಮವಾಗಿದೆ.

ಕಟಕ ರಾಶಿ (Cancer)
ಪ್ರೀತಿಯ ಅನುಭವಕ್ಕೆ ಈ ತಿಂಗಳು ದುರ್ಬಲವಾಗಿದೆ. ಆದ್ದರಿಂದ, ಪ್ರಿಯತಮೆ ಅಥವಾ ಪ್ರಿಯಕರನ ಜೊತೆ ಸಂಭಾಷಣೆಯ ವಿಚಾರದಲ್ಲಿ ಎಚ್ಚರವಹಿಸಿ. ವಿವಾಹಿತರಿಗೆ ಈ ಮಾದ ಸಾಮಾನ್ಯವಾಗಿರುತ್ತದೆ.

ಸಿಂಹ ರಾಶಿ (Leo)
ನಿಮ್ಮ ಆತ್ಮೀಯ ಸಂಗಾತಿಯೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶವನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲೂ ಶಾಂತಿ ನೆಲೆಸಲಿದೆ. ಆದಾಗ್ಯೂ, ನಿಮ್ಮ ಸಂಗಾತಿಯು ನಿಮ್ಮ ಯಾವುದೇ ಕೆಟ್ಟ ಅಭ್ಯಾಸದಿಂದ ಕಿರಿಕಿರಿಗೆ ಒಳಗಾಗುತ್ತಾರೆ.

Energy Centers: ನಾವೇಕೆ ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡಬೇಕು?

ಕನ್ಯಾ ರಾಶಿ (Virgo)
ನೀವು ತುಂಬಾ ರೋಮ್ಯಾಂಟಿಕ್ ಮೂಡ್‌ನಲ್ಲಿರುತ್ತೀರಿ. ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಚಲನಚಿತ್ರವನ್ನು ನೋಡುವ ಅವಕಾಶ ಬರಬಹುದು.

ತುಲಾ ರಾಶಿ (Libra) 
ಪ್ರೀತಿಯ ವಿಷಯದಲ್ಲಿ, ಈ ಮಾಸ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ದೈಹಿಕ ಸಮಸ್ಯೆಗಳು ವೈವಾಹಿಕ ಜೀವನದಲ್ಲಿ ಜೀವನ ಸಂಗಾತಿಯನ್ನು ತೊಂದರೆಗೊಳಿಸಬಹುದು. ನಿಮ್ಮ ಜೀವನ ಸಂಗಾತಿಯ ಮೂಲಕ ನೀವು ಸ್ವಲ್ಪ ಲಾಭವನ್ನು ಪಡೆಯಬಹುದು.

ವೃಶ್ಚಿಕ ರಾಶಿ (Scorpio)
ನಿಮ್ಮ ಅತ್ತೆ-ಮಾವಂದಿರಿಂದ ನೀವು ಕೆಲವು ಉತ್ತಮ ಮಾಹಿತಿ ಪಡೆಯುತ್ತೀರಿ, ಅದು ನಿಮ್ಮ ಮನಸ್ಸನ್ನು ಸಂತೋಷಪಡಿಸುತ್ತದೆ. ಈ ಮಾಸ ವೈವಾಹಿಕ ಜೀವನದಲ್ಲಿ ಅನುಕೂಲಕರವಾಗಲಿದೆ. ಪ್ರೀತಿ ಅಭಿವ್ಯಕ್ತಿಗೆ ಈ ಮಾಸ ಉತ್ತಮ.

ಧನು ರಾಶಿ (Sagttarius)
ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಸುಧಾರಿಸುತ್ತವೆ. ದೂರದ ದಂಪತಿಗಳು ಪರಸ್ಪರ ಹತ್ತಿರವಾಗುತ್ತೀರಿ. ಪ್ರೇಮ ಜೀವನದಲ್ಲಿ ಸ್ವಲ್ಪ ಕಹಿ ಇರಬಹುದು.

ಮಕರ ರಾಶಿ (Capricorn)
ವಿವಾಹಿತರು ಸಂಗಾತಿಯೊಡನೆ ಮಾತನಾಡುವುದರಿಂದ ಸಂಬಂಧದಲ್ಲಿ ಸುಧಾರಣೆ ಕಾಣಲಿದೆ. ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಮೂಲಕ ಅವರ ಸಂತೋಷಗೊಳಿಸಬಹುದು

ಕುಂಭ ರಾಶಿ (Aquarius)
ಪ್ರೀತಿಯ ವಿಷಯದಲ್ಲಿ, ನೀವು ಅದೃಷ್ಟವಂತರು. ನೀವು ಪೂರ್ಣ ಪ್ರೀತಿಯನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಜೀವನ ಸಂಗಾತಿಯ ಮೂಲಕ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ.

ಮೀನ ರಾಶಿ (Pisces)
ಇದು ಪ್ರೀತಿ ತುಂಬಿದ ಮಾಸವಾಗಿರಲಿದೆ. ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಒತ್ತಡ ಉಂಟಾಗಬಹುದು.

click me!