Deepavali 2022: ದಾರಿದ್ರ್ಯಕ್ಕೆ ದಾರಿ ಮಾಡುತ್ತೆ ಈ ತಪ್ಪು

By Suvarna News  |  First Published Oct 18, 2022, 4:08 PM IST

ಧನ ತ್ರಯೋದಶಿ ಶಾಪಿಂಗ್ ಗೆ ಒಳ್ಳೆ ದಿನ. ಇದೇ ಕಾರಣಕ್ಕೆ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡ್ತಾರೆ. ಧನ ತ್ರಯೋದಶಿ ದಿನ ವಸ್ತುಗಳ ಖರೀದಿಗೂ ಒಂದು ನಿಯಮವಿದೆ. ಅದನ್ನು ಬಿಟ್ಟು ಬೇರೆ ವಸ್ತು ಖರೀದಿಸಿದ್ರೆ ನಿಮಗೆ ನಷ್ಟವಾಗುತ್ತೆ ಎಂಬುದು ನೆನಪಿರಲಿ.
 


ಅಕ್ಟೋಬರ್ 23 ರಂದು  ಬೆಳಕಿನ ಹಬ್ಬ ದೀಪಾವಳಿ ಧನ ತ್ರಯೋದಶಿ ಮೂಲಕ ಆರಂಭವಾಗ್ತಿದೆ. ಭಗವಂತ ವಿಷ್ಣುವಿನ ಅವತಾರವಾದ  ಧನ್ವಂತರಿಯನ್ನು ಧನ ತ್ರಯೋದಶಿ ಶಿನ ಪೂಜೆ ಮಾಡಲಾಗುತ್ತದೆ. ಧನ ತ್ರಯೋದಶಿ ಶಾಪಿಂಗ್ ಗೆ ಮಂಗಳಕರವೆಂದು ನಂಬಲಾಗಿದೆ. ಈ ದಿನ ಸಂಪತ್ತು, ಆಸ್ತಿ, ಸಮೃದ್ಧಿಗಾಗಿ ಆಭರಣಗಳು, ಪಾತ್ರೆಗಳು, ಭೂಮಿ, ವಾಹನಗಳನ್ನುಖರೀದಿಸಲಾಗುತ್ತದೆ. ಧನ ತ್ರಯೋದಶಿ ದಿನ ಖರೀದಿ ಮಾಡಿದ ವಸ್ತುಗಳು ದುಪ್ಪಟ್ಟಾಗುತ್ತವೆ, ಒಳ್ಳೆ ಫಲ ನೀಡುತ್ತವೆ ಎಂಬ ನಂಬಿಕೆಯಿದೆ. ಆದ್ರೆ ಧನ ತ್ರಯೋದಶಿ ದಿನ ಎಲ್ಲ ವಸ್ತುಗಳನ್ನು ಖರೀದಿ ಮಾಡುವುದು ಒಳ್ಳೆಯದಲ್ಲ. ಕೆಲ ವಸ್ತುಗಳನ್ನು ಈ ಶುಭ ಸಂದರ್ಭದಲ್ಲಿ ಮನೆಗೆ ತರಬಾರದು. ಧನ ತ್ರಯೋದಶಿ ದಿನ ನಾವು ತರುವ ಕೆಲ ವಸ್ತುಗಳು ತಾಯಿ ಲಕ್ಷ್ಮಿ ಕೋಪಕ್ಕೆ ಕಾರಣವಾಗುವ ಸಾಧ್ಯತೆಯಿರುತ್ತದೆ. ಇದ್ರಿಂದ ಬಡತನ ನಮ್ಮನ್ನು ಕಾಡಬಹುದು. ಧನ ತ್ರಯೋದಶಿ ದಿನ ನೀವು ಶಾಪಿಂಗ್ ಗೆ ಹೊರಟಿದ್ದರೆ ಕೆಲ ವಿಷ್ಯವನ್ನು ತಿಳಿದಿರಬೇಕು. ಈ ದಿನ ಯಾವ ವಸ್ತುಗಳನ್ನು ಖರೀದಿ ಮಾಡ್ಬೇಕು ಹಾಗೆ ಯಾವುದನ್ನು ಖರೀದಿ ಮಾಡಬಾರದು ಎಂಬುದು ನಿಮಗೆ ತಿಳಿದ್ರೆ ಲಕ್ಷ್ಮಿ ಒಲಿಸಿಕೊಳ್ಳುವುದು ಸುಲಭವಾಗುತ್ತದೆ.

ಧನ ತ್ರಯೋದಶಿ (Dhanteras) ದಿನ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಖರೀದಿಸಬೇಡಿ :  

Tap to resize

Latest Videos

ಉಕ್ಕು ಮತ್ತು ಅಲ್ಯೂಮಿನಿಯಂ (Steel Aluminum) ವಸ್ತುಗಳ ಸುದ್ದಿ ಬೇಡ : ಧನ ತ್ರಯೋದಶಿ ದಿನ ನೀವು ಲೋಹದ ವಸ್ತುಗಳನ್ನು ಖರೀದಿ ಮಾಡ್ತಿದ್ದರೆ ಯಾವುದೇ ಕಾರಣಕ್ಕೂ ಉಕ್ಕು ಮತ್ತು ಅಲ್ಯೂಮಿನಿಯಂ ವಸ್ತುವನ್ನು ಖರೀದಿ ಮಾಡಬೇಡಿ. ಉಕ್ಕು ಹಾಗೂ ಅಲ್ಯೂಮಿನಿಯಂ ವಸ್ತುಗಳನ್ನು  ಶುದ್ಧ ಲೋಹಗಳೆಂದು ಪರಿಗಣಿಸಲಾಗುವುದಿಲ್ಲ. ಅನೇಕರಿಗೆ ಈ ವಿಷ್ಯ ತಿಳಿದಿರುವುದಿಲ್ಲ. ಅವರು ಧನ ತ್ರಯೋದಶಿ ದಿನ ಈ  ವಸ್ತುಗಳನ್ನು ಖರೀದಿಸುತ್ತಾರೆ. ಹಾಗೆ ಮಾಡಿದ್ರೆ ಸಮಸ್ಯೆ ಸುಳಿಯಲ್ಲಿ ಸಿಕ್ಕಂತೆ. ಯಾಕೆಂದ್ರೆ ರಾಹು ಅಲ್ಯೂಮಿನಿಯಂಗೆ ಪ್ರಭಾವಿತನಾಗಿರುತ್ತಾನೆ. ಮನೆಗೆ ಅಲ್ಯೂಮಿನಿಯಂ ಖರೀದಿಸಿ ತಂದ್ರೆ ರಾಹುವನ್ನು ಮನೆಗೆ ಕರೆದಂತಾಗುತ್ತದೆ.  

Silver Vastu Tips: ಬೆಳ್ಳಿಯಿಂದ ಬಾಳೇ ಬಂಗಾರವಾಗಿಸಿ!

ಈ ಆಭರಣ (Imitation Jewelery) ಖರೀದಿಸ್ಬೇಡಿ : ಧನ ತ್ರಯೋದಶಿ ದಿನ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಖರೀದಿ ಮಾಡಬೇಕು. ಕೆಲವರಿಗೆ ಆರ್ಥಿಕ ಸಮಸ್ಯೆಯಿರುತ್ತದೆ. ಇಲ್ಲವೆ ಬೇರೆ ಕಾರಣಗಳಿಗೆ ಬಂಗಾರ, ಬೆಳ್ಳಿ ಆಭರಣ ಬದಲು ಕೃತಕ ಆಭರಣಗಳನ್ನು ಖರೀದಿಸುತ್ತಾರೆ.  ಆದರೆ ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ನೀವು ಈ ದಿನ ಕೃತಕ ಆಭರಣವನ್ನು ಖರೀದಿ ಮಾಡಿದ್ರೆ ಅದು ಬಡತನಕ್ಕೆ ಕಾರಣವಾಗುತ್ತದೆ.

ಗಾಜಿನ ವಸ್ತುಗಳನ್ನು ಮನೆಗೆ ತರಬೇಡಿ : ಧನ ತ್ರಯೋದಶಿ ದಿನ ಗಾಜಿನ ವಸ್ತು, ಪಾತ್ರೆಗಳನ್ನು ಕೂಡ ಖರೀದಿ ಮಾಡಿ ಮನೆಗೆ ತರಬೇಡಿ. ಗಾಜಿನಲ್ಲೂ ರಾಹು ವಾಸವಾಗಿರುತ್ತಾರೆ ಎನ್ನಲಾಗುತ್ತದೆ. ರಾಹುವಿನಿಂದ ಮುಕ್ತಿ ಬೇಕು ಎನ್ನುವವರು ಗಾಜಿನಿಂದ ದೂರವಿರಿ. 

Zodiac Compatibility: ಈ ರಾಶಿಗಳೆರ್ಡು ಮದ್ವೆಯಾದ್ರೆ ಹೊಂದಾಣಿಕೆ ಸಾಧ್ಯವೇ ಇಲ್ಲ!

ಖರ್ಚು ಹೆಚ್ಚು ಮಾಡುತ್ತೆ ಈ ವಸ್ತು ಖರೀದಿ : ಮೊದಲೇ ಹೇಳಿದಂತೆ ಲೋಹದಿಂದ ಮಾಡಿದ ವಸ್ತುಗಳನ್ನು ಧನ ತ್ರಯೋದಶಿ ದಿನ ಖರೀದಿಸಲಾಗುತ್ತದೆ. ಹಾಗಂತ ನೀವು ಕಬ್ಬಿಣ ಖರೀದಿ ಮಾಡಿದ್ರೆ ಒಳ್ಳೆಯದಲ್ಲ. ಧನ ತ್ರಯೋದಶಿ ದಿನ ಕಬ್ಬಿಣವನ್ನು ಮನೆಗೆ ತಂದರೆ ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಅದೃಷ್ಟ ದುರದೃಷ್ಟಕ್ಕೆ ತಿರುಗುತ್ತದೆ. ಖರ್ಚುಗಳು ಹೆಚ್ಚಾಗುವ ಜೊತೆಗೆ ಹಣ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ.

ಪ್ಲಾಸ್ಟಿಕ್ (Plastic) ಪೊರಕೆ ಖರೀದಿ ತಪ್ಪಿಸಿ : ಧನ ತ್ರಯೋದಶಿ ದಿನ ಪೊರಕೆ ಖರೀದಿ ಮಾಡಬೇಕು. ಅದನ್ನು ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಪೊರಕೆ ಖರೀದಿ ಮಾಡಬೇಡಿ. ಹಾಗೆಯೇ ಪ್ಲಾಸ್ಟಿಕ್ ಪಾತ್ರೆಗಳು (Plastic Vessels) ಮತ್ತು ಹೂಗುಚ್ಛಗಳಂತಹ ಇತರ ವಸ್ತುಗಳನ್ನು ಕೂಡ ಖರೀದಿಸಬೇಡಿ.  ಪ್ಲಾಸ್ಟಿಕ್ ನಿಂದ ಮನೆಯ ಅಭಿವೃದ್ಧಿ ಕುಂಠಿತವಾಗುತ್ತದೆ.

click me!