ದಾರಿ ಮಧ್ಯೆ ಬಿದ್ದ ಈ ವಸ್ತುವನ್ನು ಅಪ್ಪಿ ತಪ್ಪಿಯೂ ತುಳೀಬೇಡಿ

By Suvarna NewsFirst Published Oct 18, 2022, 3:12 PM IST
Highlights

ದಾರಿ ಮಧ್ಯೆ ನಾವು ಅನೇಕ ವಸ್ತುಗಳನ್ನು ನೋಡ್ತೇವೆ. ನಿಂಬೆ ಹಣ್ಣು, ಆಹಾರದ ಚೂರುಗಳು, ಬಟ್ಟೆ ಇವೆಲ್ಲವೂ ಆಗಾಗ ಕಾಣ್ತಿರುತ್ತವೆ. ಅದನ್ನು ತುಳಿಯದೆ ಬದಿಯಿಂದ ಹೋದ್ರೆ ನಮಗೆ ಒಳ್ಳೆಯದು. ನೋಡ್ದೆ ಈ ವಸ್ತುಗಳ ಮೇಲೆ ಕಾಲಿಟ್ಟರೆ ಗ್ರಹಚಾರ ಕೆಟ್ಟಂತೆ.
 

ರಸ್ತೆ ಮೇಲೆ ಓಡಾಡುವಾಗ ಕಣ್ಣು ಕೆಳಗಿರಬೇಕೆಂದು ದೊಡ್ಡವರು ಹೇಳ್ತಿರುತ್ತಾರೆ. ಮೇಲೆ ನೋಡ್ತಾ ನಡೆದ್ರೆ ರಸ್ತೆ ಮೇಲಿರುವ ಮುಳ್ಳು, ಕಲ್ಲು, ಕೊಳಕು ಕಾಲಿಗೆ ತಾಗುವ ಸಾಧ್ಯತೆಯಿರುತ್ತದೆ. ಎಡವಿ ಬೀಳುವ ಅಪಾಯವಿರುತ್ತದೆ. ಬರೀ ಇದಕ್ಕೆ ಮಾತ್ರವಲ್ಲ, ಮಾಟ – ಮಂತ್ರದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೂಡ ಇದು ನೆರವಾಗುತ್ತದೆ. ದಾರಿಯಲ್ಲಿ ಕೆಲ ವಸ್ತುಗಳನ್ನು ಎಸೆಯಲಾಗುತ್ತದೆ. ಅದನ್ನು ಮೆಟ್ಟಿದ್ರೆ ಸಮಸ್ಯೆ ನಮಗೆ ಅಂಟಿಕೊಳ್ಳುತ್ತದೆ. ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶಾಸ್ತ್ರಗಳ ಪ್ರಕಾರ, ದಾರಿಯಲ್ಲಿ ಹೋಗುವ ವೇಳೆ ಯಾವ ವಸ್ತುಗಳನ್ನು ತುಳಿಯಬಾರದು ಎಂಬುದನ್ನು ನಾವಿಂದು ಹೇಳ್ತೇವೆ. 

ರಸ್ತೆ (Road) ಯಲ್ಲಿ ಹೋಗುವಾಗ ಈ ವಸ್ತು ತುಳಿಯಬೇಡಿ : 

Latest Videos

ನಿಂಬೆ (Lemon) ಹಣ್ಣು ಮತ್ತು ಹಸಿರು ಮೆಣಸಿನಕಾಯಿ (Green Chillies) : ದುಷ್ಟ ಶಕ್ತಿಯಿಂದ ನಮ್ಮನ್ನು ನಿಂಬೆ ಹಣ್ಣು ರಕ್ಷಿಸುತ್ತದೆ ಎಂದು ಅನೇಕರು ನಂಬಿದ್ದಾರೆ. ಅಂಗಡಿಗಳು ಮತ್ತು ಮನೆಗಳನ್ನು ದುಷ್ಟ ಕಣ್ಣಿನಿಂದ ರಕ್ಷಿಸಲು ಅನೇಕ ಜನರು ನಿಂಬೆ ಹಣ್ಣು ಮತ್ತು ಹಸಿರು ಮೆಣಸಿನಕಾಯಿಗಳನ್ನು ನೇತುಹಾಕುತ್ತಾರೆ. ಇನ್ನು ಕೆಲವರು ಮನೆ ಅಥವಾ ಕಚೇರಿಗೆ ನಿಂಬೆ ಹಣ್ಣು ಮತ್ತು ಹಸಿರು ಮೆಣಸಿನ ಕಾಯಿಯನ್ನು ತೋರಿಸಿ, ಅದನ್ನು ರಸ್ತೆಯಲ್ಲಿ ಎಸೆಯುತ್ತಾರೆ. ನೋಡದೆ ಜನರು ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿ ಮೇಲೆ ಕಾಲಿಡುತ್ತಾರೆ. ಮನೆ ಅಥವಾ ಕಚೇರಿಯಲ್ಲಿರುವ ದುಷ್ಟ ಶಕ್ತಿ ನಿಂಬೆ ಹಣ್ಣು ಹಾಗೂ ಮೆಣಸಿನ ಕಾಯಿಯಲ್ಲಿರುತ್ತದೆ ಎಂದು ನಂಬಲಾಗಿದೆ. ನೀವು ಅದನ್ನು ತುಳಿದಾಗ  ಆ ದುಷ್ಟ ಶಕ್ತಿ ನಿಮ್ಮ ಮೇಲೆ ಪ್ರಭಾವ ಬೀರಲು ಶುರು ಮಾಡುತ್ತದೆ. ಇದ್ರಿಂದ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ. 

ಶ್ರಾದ್ಧದ ವಸ್ತುವನ್ನು ತುಳಿಯಬೇಡಿ : ಪೂರ್ವಜರ ಆತ್ಮ (Soul) ಕ್ಕೆ ಶಾಂತಿ ಕೋರಿ, ಅವರ ಆಶೀರ್ವಾದ ಪಡೆಯಲು ಶ್ರಾದ್ಧ ಮಾಡಲಾಗುತ್ತದೆ. ಶ್ರಾದ್ಧಕ್ಕೆ ಎಡೆ ಇಡಲಾಗುತ್ತದೆ. ಅಂದ್ರೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮೊದಲು ಪಿತೃಗಳಿಗೆ ನೀಡಲಾಗುತ್ತದೆ. ಬಹುತೇಕರು ಶ್ರಾದ್ಧದಲ್ಲಿ ಪೂರ್ವಜರಿಗೆ ಮಾಡಿದ ಆಹಾರವನ್ನು ದಾರಿ ಮಧ್ಯೆಯಲ್ಲಿ ಇಡುವ ಮೂಲಕ ಪೂರ್ವಜರನ್ನು ಆಹ್ವಾನಿಸುತ್ತಾರೆ. ಇದನ್ನು ತಿಳಿಯದೆ ಆಹಾರವನ್ನು ತುಳಿಯುವುದು ತಪ್ಪು. ಇದ್ರಿಂದ ಕೂಡ ಜೀವನದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ ಎಂದು ಶಾಸ್ತ್ರ ಹೇಳುತ್ತದೆ.

Negative Stress: ಋಣಾತ್ಮಕ ಒತ್ತಡಕ್ಕೂ, ಇವರಿಗೂ ಭಾರೀ ನಂಟು!

ಮೂರು ದಾರಿ ಸೇರುವ ಛೇದಕದ ಬಗ್ಗೆ ಇರಲಿ ಗಮನ : ಸಾಮಾನ್ಯವಾಗಿ ಮೂರು ದಾರಿ ಸೇರುವ ಜಾಗದ ಅಕ್ಕಪಕ್ಕ ಮನೆ ನಿರ್ಮಾಣ ಮಾಡಬಾರದು ಎಂಬ ನಂಬಿಕೆಯಿದೆ. ಅದ್ರ ಜೊತೆ ಛೇದಕದ ಬಳಿ ನೀವು ಓಡಾಡ್ತಿದ್ದರೆ ಕಣ್ಣು ಸೂಕ್ಷ್ಮವಾಗಿರಲಿ. ಯಾವುದೇ ಕಾರಣಕ್ಕೂ ಅಲ್ಲಿಟ್ಟ ವಸ್ತುವನ್ನು ತುಳಿಯಬೇಡಿ. ಅನೇಕರು ದುಷ್ಟ ಶಕ್ತಿ ಹೋಗಲಾಡಿಸಲು, ದೃಷ್ಟಿ ದೋಷ ನಿವಾರಣೆಗೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಂತ್ರಿಸಿದ ವಸ್ತುಗಳನ್ನು ಮೂರು ರಸ್ತೆ ಸೇರುವ ಜಾಗದಲ್ಲಿ ಇಡ್ತಾರೆ. ಅದನ್ನು ನೀವು ತುಳಿದ್ರೆ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. 

ಕೂದಲಿನ ಗಂಟು: ಕೂದಲಿನ ಗಂಟನ್ನು ತಾಂತ್ರಿಕ ವಿದ್ಯೆಗೆ ಬಳಸ್ತಾಳೆ. ಕೂದಲಿನ ಪಿಂಡಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದನ್ನು ದಾರಿಗೆ ಎಸೆಯಬಾರದು. ಸದಾ ಕಸದ ಬುಟ್ಟಿಗೆ ಹಾಕಬೇಕು. ನಿಮ್ಮ ಶತ್ರುಗಳು ನಿಮ್ಮ ಕೂದಲು ಬಳಸಿ ಜೀವನ ಹಾಳು ಮಾಡುವ ಸಾಧ್ಯತೆಯಿರುತ್ತದೆ. ಅದೇ ರೀತಿ ದಾರಿ ಮಧ್ಯೆಯಲ್ಲಿ ಕೂದಲ ಗಂಟು ಬಿದ್ದಿದ್ದರೆ ಅದನ್ನು ತುಳಿಯಬೇಡಿ. ಇದು ಕೂಡ ನಷ್ಟಕ್ಕೆ ಕಾರಣವಾಗುತ್ತದೆ.

Spices and Astrology: ಮಸಾಲೆ ಬಳಸಿ ಗ್ರಹದೋಷ ಮುಕ್ತರಾಗಿ

ಈ ವಸ್ತುಗಳಿಂದಲೂ ದೂರವಿರಿ : ರಸ್ತೆಯಲ್ಲಿ ಏನೇ ಬಿದ್ರೂ ಅದನ್ನು ತುಳಿಯುವುದು ಅಥವಾ ಕೈನಲ್ಲಿ ಮುಟ್ಟುವುದು ಒಳ್ಳೆಯದಲ್ಲ. ಮೇಲಿನ ವಸ್ತುಗಳನ್ನು ಹೊರತುಪಡಿಸಿ ಬಟ್ಟೆ, ಮೇಕಪ್ ವಸ್ತು ಸೇರಿದಂತೆ ಯಾವುದೇ ವಸ್ತು ಬಿದ್ದರೂ ಅದನ್ನು ತುಳಿಯಬೇಡಿ. 

click me!