Neem Karoli Baba ಅವರ ಲೀಲೆ ಪ್ರತ್ಯಕ್ಷ ಕಂಡು ಮಂತ್ರಮುಗ್ಧಳಾದ ಮಹಿಳೆ!

Published : May 28, 2023, 01:55 PM IST
Neem Karoli Baba ಅವರ ಲೀಲೆ ಪ್ರತ್ಯಕ್ಷ ಕಂಡು ಮಂತ್ರಮುಗ್ಧಳಾದ ಮಹಿಳೆ!

ಸಾರಾಂಶ

ನೀಮ್ ಕರೋಲಿ ಬಾಬಾ ಲೀಲೆಗಳು ಅನನ್ಯ. ಅಂಥದೊಂದು ಲೀಲೆಯನ್ನು ಅನುಭವಿಸಿ ಹೇಳಿದವರು ಗುಜರಾತಿ ಮಹಿಳೆ ವಿಧಾ ಶಾ. ಈ ಅನುಭವ ಬಹಳ ವಿಶಿಷ್ಠವಾಗಿದೆ. 

ನೀಮ್ ಕರೋಲಿ ಬಾಬಾನ ಲೀಲೆ ಅನನ್ಯ. ಬಾಬಾ ಭಕ್ತರ ಬಳಿ ಇಂಥ ಅನೇಕ ಪವಾಡಗಳ ಕತೆಗಳಿವೆ. ನೀಮ್ ಕರೋಲಿ ಬಾಬಾ ಅವರ ಅಂಥದೊಂದು ಪವಾಡದ ವಿಶಿಷ್ಠ ಅನುಭವವನ್ನು ತೆರೆದಿಟ್ಟಿದ್ದಾರೆ ನೈನಿತಾಲ್ ನಿವಾಸಿಯಾದ ಶ್ರೀಮತಿ ವಿಧಾ ಶಾ. 

ನೈನಿತಾಲ್ ನಿವಾಸಿಯಾದ ಶ್ರೀಮತಿ ವಿಧಾ ಶಾ ಅವರು ಬಾಬಾ ನೀಮ್ ಕರೋಲಿ ಬಾಬಾರ ಭಕ್ತರಾಗಿದ್ದರು. ಬಾಬಾರ ಭಕ್ತರ ಪ್ರಕಾರ, ಒಂದು ದಿನ ವಿಧಾ ಷಾ ಆಶ್ರಮದಲ್ಲಿ ಕುಳಿತಾಗ ಮನಸ್ಸಿನಲ್ಲಿ ಯೋಚಿಸುತ್ತಿದ್ದರಂತೆ, 'ಬಾಬಾಜಿ ಎಲ್ಲರ ಬಳಿಗೆ ಹೋಗುವಿರಿ, ನೀವು ನಮ್ಮ ಮನೆಗೆ ಕೂಡಾ ಬನ್ನಿ. ಹವನ ಮಾಡುತ್ತಿದ್ದೇವೆ, ಕರೆಯಲು ನಂಗೆ ಹಿಂಜರಿಕೆಯಾಗುತ್ತಿದೆಯಲ್ಲ..' ಎಂದು.
ಆಗ ಬಾಬಾ, ಜೋರಾಗಿ ವಿಧಾ ಶಾ ಕಡೆ ತಿರುಗಿ ಹೇಳಿದರಂತೆ, 'ನಾವು ನಿಮ್ಮ ಮನೆಗೆ ಬರುತ್ತೇವೆ, ನೀವು ದೇವಸ್ಥಾನದಲ್ಲಿ ಹವನ ಮಾಡಿ.' ಇದು ವಿಧಾ ಶಾಗೆ ಬಹಳ ಆಶ್ಚರ್ಯ ತಂದಿತಂತೆ. ಜೊತೆಗೆ ಸಂತೋಷವೂ ಆಯಿತು. 

ಇದರ ಬಳಿಕ ವಿಧಾ ಶಾ ದೇವಸ್ಥಾನದ ಅರ್ಚಕರೊಂದಿಗೆ ಹವನದ ವಿಧಿವಿಧಾನವನ್ನು ನೆರವೇರಿಸಿದರು. ಪೂರ್ಣಾಹುತಿಯ ದಿನ ಆಕೆ ಪ್ರಸಾದದೊಂದಿಗೆ ಮನೆಗೆ ಬರುತ್ತಿದ್ದಾಗ ಒಬ್ಬ ಕೃಶ ಸನ್ಯಾಸಿ ಆಕೆಯನ್ನು ಹಿಂಬಾಲಿಸುತ್ತಿರುವುದನ್ನು ಷಾ ನೋಡಿದರು. ಅವರು ವೇಗವಾಗಿ ನಡೆದರೆ ಸಾಧು ಕೂಡಾ ವೇಗವಾಗಿ ಬರುತ್ತಿದ್ದರು. ಅವರು ನಿಧಾನವಾಗಿ ನಡೆದರೆ, ಸಾಧು ಕೂಡಾ ನಿಧಾನಗತಿಯಲ್ಲಿ ನಡೆಯತೊಡಗುತ್ತಿದ್ದರು. ಸಾಧು ತನ್ನನ್ನು ಹಿಂಬಾಲಿಸುತ್ತಿರುವುದು ನೋಡಿದ ಷಾಗೆ ಬೇಸರವಾಯಿತು. 

Shani Vakri 2023: 4 ರಾಶಿಗಳ ಬದುಕನ್ನು ಕಷ್ಟವಾಗಿಸುವ ಶನಿ

ಸಾಧುವಾಗಿ ಹೀಗೆ ಹಿಂಬಾಲಿಸಬಹುದೇ ಎಂದುಕೊಂಡರು. ವಿಧಾ ಶಾ ಅವರ ಮನೆ ಮಾರುಕಟ್ಟೆಯಲ್ಲಿತ್ತು, ಮತ್ತು ಮನೆಗೆ ಹೋಗುವ ಮಾರ್ಗವು ಪಂಜಾಬಿ ಕುಟುಂಬದ ಮನೆಯ ಮೂಲಕ ಹಾದು ಹೋಯಿತು. ವಿಧಾ ಶಾ ಬಾಬಾನನ್ನು ಗುರುತಿಸದೆ ಬೇಗನೆ ಮನೆಯ ಕಿರಿದಾದ ಮೆಟ್ಟಿಲುಗಳನ್ನು ಹತ್ತಿ ಮನೆಯೊಳಗೆ ಹೋದರು. ಆಗ ಪಂಜಾಬಿ ಕುಟುಂಬದ ಮಹಿಳೆ ಮನೆಯಿಂದ ಹೊರಬಂದು ಸಾಧುವನ್ನು ನಿಂದಿಸಿ ಅಲ್ಲಿಂದ ಹೋಗುವಂತೆ ವಾಚಾಮಗೋಚಾರವಾಗಿ ಬೈದಳು. ಸನ್ಯಾಸಿ ಅಲ್ಲಿಂದ ದೂರ ಹೋದರು. 

ಈ ಘಟನೆಯ ಸ್ವಲ್ಪ ಸಮಯದ ನಂತರ, ವಿಧಾ ಶಾ ಬಾಬಾರ ಆಶ್ರಮಕ್ಕೆ ಹೋಗಿ ಬಳಿಯಲ್ಲಿ ಕುಳಿತಿದ್ದಾಗ, ಯಾಗವನ್ನು ಸಹ ಮಾಡಲಾಯಿತು, ಆದರೆ ಬಾಬಾ ಬರಲಿಲ್ಲ ಎಂದು ಬೇಸರಿಸಿಕೊಂಡರು. 

ಆಗ ಬಾಬಾ ನೀಮ್ ಕರೋಲಿ, 'ನಾವು ಅಲ್ಲಿಗೆ ಬಂದಿದ್ದೆವು. ನಿಮ್ಮ ಮನೆಯತ್ತಲೇ ಬರುತ್ತಿದ್ದೆವು. ಆಗ ನಿಮ್ಮ ಪಕ್ಕದ ಮನೆಯ ಪಂಜಾಬಿ ಮಹಿಳೆ ನಮ್ಮನ್ನು ಅಲ್ಲಿಂದ ಹೋಗುವಂತೆ ಬೈದರು' ಎಂದರು.

ಈ ರೀತಿಯಾಗಿ ವಿಧಾ ಶಾ ಬಾಬಾನನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ವಿಧಾಗೆ ಈ ಬಗ್ಗೆ ತುಂಬಾ ತಪ್ಪಿತಸ್ಥ ಭಾವನೆ ಇತ್ತು. ವಿಧಾ ನಂತರ ಬಾಬಾ ಭಕ್ತರಿಗೆ ಹೇಳಿದರು, 'ನೀವು ಬಾಬಾರನ್ನು ಯಾವುದೇ ರೂಪದಲ್ಲಿ ಭೇಟಿಯಾಗಬಹುದು, ಅವರನ್ನು ಗುರುತಿಸುವ ಸಾಮರ್ಥ್ಯ ಇರಬೇಕಷ್ಟೇ' ಎಂದು. 

ಅಕಾಲಿಕ ಹೃದಯಾಘಾತ ತಡೆಯಲು 'ಅಷ್ಟಾಂಗ ಹೃದಯಂ'ನಲ್ಲಿದೆ ಪರಿಹಾರ

ಕೆಲವು ಭಕ್ತರು 1968ರಲ್ಲಿ ಬಾಬಾನ ಪವಾಡವನ್ನು ಹೇಳುತ್ತಾರೆ. ಭಕ್ತರ ಪ್ರಕಾರ, ಬಾಬಾ ಅವರ ಭಕ್ತರೊಬ್ಬರ ಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು ಮತ್ತು ಅವಳು ನರಳುತ್ತಿದ್ದಳು. ಇದರಿಂದ ಭಕ್ತ ಕುಟುಂಬಸ್ಥರು ಆತಂಕಗೊಂಡಿದ್ದರು. ವೈದ್ಯರೂ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು. ಹೆರಿಗೆಯ ನಂತರ ಗರ್ಭಿಣಿ ಮಹಿಳೆಯ ಜೀವ ಉಳಿಯುತ್ತದೆಯೇ ಅಥವಾ ಇಲ್ಲವೇ ಎಂದು ಕುಟುಂಬ ಸದಸ್ಯರಿಗೆ ಯಾವುದೇ ರೀತಿಯ ಭರವಸೆ ನೀಡಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಅದೇ ಸಮಯಕ್ಕೆ ಥಟ್ಟನೆ ಅಲ್ಲಿಗೆ ಬಂದ ಮಹಾರಾಜ್‌ಜಿ ಸೀದಾ ಮಗಳ ಕೋಣೆಗೆ ಹೋಗಿ ಕುಳಿತರು.
ಇಲ್ಲಿ ಬಾಬಾ ನೀಮ್ ಕರೋಲಿ ಅವರು ಹೆರಿಗೆ ಸಂತ್ರಸ್ತೆಗೆ ಹೂವನ್ನು ನೀಡಿ ಆಶೀರ್ವಾದ ಮಾಡಿ ಸ್ವಲ್ಪ ಸಮಯದ ನಂತರ ಅಲ್ಲಿಂದ ತೆರಳಿದರು. ಇದರ ನಂತರ, ಮಗಳಿಗೆ ಸುಲಭವಾಗಿ ಹೆರಿಗೆಯಾಯಿತು. ಅವಳು ರತ್ನದಂಥ ಮಗನನ್ನು ಹೊಂದಿದಳು. ಈ ಘಟನೆ ಅಲ್ಲಿದ್ದ ಎಲ್ಲ ಭಕ್ತರ ಮುಖದಲ್ಲಿ ಮಂದಹಾಸ ಮೂಡಿಸಿತು.

PREV
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ