ಯಾವ ವಾರ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ? 

By Suvarna NewsFirst Published Sep 28, 2022, 4:42 PM IST
Highlights

ಮಂಗಳವಾರ ಅಮಂಗಳ, ಶನಿವಾರ ಕೆಟ್ಟದ್ದು...ಹೀಗೆ ವಾರಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಒಂದು ವಾರ ಒಂದು ದೇವರಿಗೆ ಪ್ರಿಯವಾದರೆ, ಮತ್ತೊಂದು ವಾರ ಮತ್ತೊಂದು ದೇವರಿಗೆ ಪ್ರಿಯಕರ ಎನಿಸಿದೆ. ಅದಕ್ಕೆ ತಕ್ಕಂತೆ ಆ ವಾರದಲ್ಲಿ ಹುಟ್ಟಿದವರ ವ್ಯಕ್ತಿತ್ವವೂ ವಿಭಿನ್ನವಾಗಿರುತ್ತಾ? ಯಾವ ವಾರದಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ? 

ಜನ್ಮರಾಶಿ ಹಾಗೂ ಜಾತಕ ನೋಡಿ ಭವಿಷ್ಯ ಹೇಳುತ್ತಾರೆ. ಜನ್ಮಕುಂಡಲಿಯಲ್ಲಿ ಇಲ್ಲದ ಗುಣ ಅಥವಾ ದೋಷ, ನಕ್ಷತ್ರ ಅಥವಾ ಹುಟ್ಟಿದ ದಿನದ ಆಧಾರದ ಮೇಲೆ ಮನುಷ್ಯನ ವ್ಯಕ್ತಿತ್ವವೂ ರೂಪಿತವಾಗಿರುತ್ತದೆ. ಯಾವ ವಾರದಲ್ಲಿ ಮಗು ಹುಟ್ಟಿದೆ ಎನ್ನುವ ಆಧಾರದಲ್ಲಿ ಆ ಮಗುವಿನ ಜೀವನ ಹೇಗೆ ಸಾಗುತ್ತದೆ ಎಂಬುದನ್ನು ತಿಳಿದು ಕೊಳ್ಳಬಹುದು. ಅದಕ್ಕೆ ತಕ್ಕಂತೆ ಜನ್ಮಕುಂಡಲಿಯೂ ಇರುತ್ತೆ. ಹಾಗಾದರೆ ನೀವು ಹುಟ್ಟಿದ ವಾರ, ವ್ಯಕ್ತಿತ್ವ ತಾಳೆ ಆಗುತ್ತಾ ನೋಡಿಕೊಳ್ಳಿ. 

ಭಾನುವಾರ (Sunday)
ಅಯ್ಯೋ ಭಾನುವಾರ ಹುಟ್ಟಿದ್ದಾ? ಎಲ್ಲರೂ ರಜೆ ಮೂಡಲ್ಲಿರುವಾಗ ಹುಟ್ಟಿದ ಮಕ್ಕಳು. ಸೂರ್ಯ ದೇವನಿಗೂ ಪ್ರೀತಿಯ ವಾರ. ಈ ದಿನ ಹುಟ್ಟಿದವರು ಸುತ್ತಮುತ್ತಲಿನವರಿಗೆಲ್ಲ ಬೆಳಕು ಕೊಡುವ ಸ್ವಭಾವ ಹೊಂದಿರುತ್ತಾರೆ. ನೀವೂ ಉತ್ತಮವಾಗಿ ಬದುಕುವುದಲ್ಲದೆ ಕುಟುಂಬವನ್ನೂ ಚೆನ್ನಾಗಿ ನೋಡಿಕೊಳ್ಳುವುದು ಇವರಿಗೆ ಸಾಧ್ಯ.
 
ಸೋಮವಾರ (Monday)
ಚಂದ್ರನ (Moon) ಇನ್ನೊಂದು ಹೆಸರೇ ಸೋಮ. ಚಂದ್ರನೆಂದರೆ ತಂಪು (Cool) ನೀಡೋನು. ಎಲ್ಲವನ್ನೂ ಶಾಂತವಾಗಿ (Peace) ಗ್ರಹಿಸುವ ಗುಣ ಈ ವಾರದಲ್ಲಿ ಹುಟ್ಟಿದವರ ವಿಶೇಷ. ವೃತ್ತಿಜೀವನವೂ (Career) ಉತ್ತಮವಾಗಿರುತ್ತೆ. ಉತ್ತಮ ಫಲಗಳನ್ನು ಕೊಡುತ್ತದೆ. ಈ ವಾರದಲ್ಲಿ ಹುಟ್ಟಿವದವರಿಗೆ ಹುಣ್ಣಿಮೆಯಂತೆ ತುಂಬಾ ವೃದ್ಧಿಯ ಕ್ಷಣಗಳೂ, ಕೆಲವೊಮ್ಮೆ ಅಮಾವಾಸ್ಯೆಯಂತೆ ಕತ್ತಲಿನ ಕ್ಷಣಗಳೂ ಎದುರಾಗಬಹುದು. ಇದಕ್ಕೆಲ್ಲಾ ಹೆದರುವುದೇಕೆ? ಜೀವನವೆಂದರೆ ಅಪ್ಸ್ ಡೌನ್ ಸಹಜ ಅಲ್ಲವೇ?

ಅಬ್ಬಾ, ಎಷ್ಟು ಸುಳ್ಳು ಹೇಳ್ತಾರಪ್ಪ ಅಂತೆನಿಸಿದರೆ ಅವರು ಈ ರಾಶಿಯವರೇ ಎಂದರ್ಥ!

ಮಂಗಳವಾರ (Tuesday)
ಈ ವಾರದಲ್ಲಿ ಶುಭ ಕಾರ್ಯಕ್ರಮಗಳು ನಡೆಯೋಲ್ಲ. ಆದರೆ, ಇವರ ಮೇಲೆ ಮಂಗಳನ ಅನುಗ್ರಹವಿರುತ್ತದೆ. ಕೆಂಪು ಗ್ರಹವಿದು (Red Planet). ಧನ ಧಾನ್ಯ ಸಂಗ್ರಹಕ್ಕೆ ಇವರಿಗೆ ಜೀವನದಲ್ಲಿ (Life) ಏನೂ ತೊಂದರೆ ಆಗುವುದಿಲ್ಲ. ಬದುಕಿನ ಯಾವುದೇ ಶುಭ ಗಳಿಗೆ ಮಂಗಳವಾರವೇ ಆರಂಭವಾದರೆ, ಆಶ್ಚರ್ಯ ಬೇಡ. ಪ್ರೀತಿ (Love) ಪ್ರೇಮದ ವಿಷಯದಲ್ಲಿ ಇವರ ಸಾಮರ್ಥ್ಯ ಅಳೆಯೋದೇ ಕಷ್ಟ. ಅಷ್ಟು ಭಾಗ್ಯವಂತರು (Luck) ಇವರು.

ಬುಧವಾರ (Wednesday)
ಸ್ವಂತ ಸ್ವಭಾವವಿಲ್ಲದ ಗ್ರಹ ಬುಧ. ಈ ವಾರದಲ್ಲಿ ಜನಿಸಿದವರಿಗೆ ಸ್ವಂತ ಜಾಗ, ಮನೆ, ಆಸ್ತಿ ಮಾಡಲು ತುಂಬಾ ಕಷ್ಟ. ಒಮ್ಮೆ ಜೀವನದಲ್ಲಿ ಸ್ಥಿರವಾಗಿ ನಿಂತರೆ ಸಾಕು, ಆಮೇಲೆ ಇವರನ್ನು ಅಲುಗಾಡಿಸುವುದು ಅಸಾಧ್ಯ. ಅಷ್ಟು ದೃಢವಾದ ಸಾಧನೆ ನಿಮ್ಮದಾಗುತ್ತೆ. ನಿಧಾನವಾಗಿ ಒಂದೊಂದು ಇಟ್ಟಿಗೆ ಕಟ್ಟುತ್ತಾ ಮನೆ ಕಟ್ಟಬೇಕು ಇವರು. ಆದರೆ ಪಡೆದ ಹಣಕಾಸು ಅಥವಾ ಶ್ರೀಮಂತಿಕೆ ಜೀವಮಾನ ಪೂರ್ತಿ ಇವರನ್ನು ಪೊರೆಯಬಲ್ಲದು.

ಗುರುವಾರ (Thursday)
ದೇವ ಗುರುವಾದ ಬ್ರಹಸ್ಪತಿ ಗುರು. ಇದರ ಸಾನಿಧ್ಯ ನಿಮ್ಮ ಜನ್ಮದಲ್ಲಿಯೇ ಇರುವುದರಿಂದ ವಿದ್ಯಾ ದೇವತೆಗಳಾದ ಸರಸ್ವತಿ ಹಾಗೂ ಗಣಪತಿಯರ ಆಶೀರ್ವಾದ ಸದಾ ಇರುತ್ತೆ. ಉನ್ನತ ಕಲಿಕೆ ಮಾಡುತ್ತಾರೆ ಈ ದಿನದಲ್ಲಿ ಹುಟ್ಟಿದವರು. ಕಲಿಕೆಯಿಂದ ಪಡೆದ ಸಂಪನ್ನತೆ ಇವರನ್ನು ಆಯಾ ಕ್ಷೇತ್ರದ ದಿಗ್ಗಜರನ್ನಾಗಿ ಮಾಡುತ್ತದೆ. ಆ ಮೂಲಕ ಸಿರಿವಂತಿಕೆಯೂ ಇವರ ಪಾಲಾಗುತ್ತದೆ. ವಿದ್ಯೆ ಮೂಲಕವೇ ದೊರೆಯುವ ನ್ಯಾಯವಾದ ಆಸ್ತಿ ಹಾಗೂ ಸಂಪತ್ತು ಇವರದ್ದು. ಬೇರೆಯವರಿಗೆ ದಾರಿ ತೋರುವ ಸ್ಥಾನವನ್ನೂ ಇವರು ಪಡೆಯುತ್ತಾರೆ. 

ತಾವೂ ನಕ್ಕು, ಎಲ್ಲರನ್ನೂ ನಗಿಸಿಕೊಂಡಿರುವ ರಾಶಿ ಚಕ್ರಗಳಿವು!

ಶುಕ್ರವಾರ (Friday)
ದೈಹಿಕ ಸಂಪತ್ತು, ಸೌಂದರ್ಯ, ಪೌರುಷ, ಸ್ತ್ರೀ ಸಾಮರ್ಥ್ಯ ಇತ್ಯಾದಿಗಳ ದೊರೆ ಶುಕ್ರ. ಪುರುಷನ ವೀರ್ಯವಂತಿಕೆಗೆ ಇನ್ನೊಂದು ಹೆಸರಿದು. ಈ ವಾರದಲ್ಲಿ ಹುಟ್ಟಿದ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಸಹಜವಾಗಿಯೇ ಆಕರ್ಷಿತರಾಗುತ್ತಾರೆ. ಕುಟುಂಬ ಸುಖ ಇವರಿಗೆ ಸಿಗುತ್ತದೆ. ಮಕ್ಕಳು ಸಂತೋಷ ನೀಡುತ್ತಾರೆ. ಸಾಯುವವರಿಗೂ ದೈಹಿಕ ಶಕ್ತಿ ಇವರಿಗೆ ಅದ್ಭುತವಾಗಿರುತ್ತದೆ.

ಶನಿವಾರ (Saturday)
ಉಗ್ರ ಸ್ವರೂಪದ ಗ್ರಹ ಶನಿ. ಈತ ಕಾಪಾಡುವವನೂ ಹೌದು. ಕುಟುಂಬದವರಿಗೆ ಇವರು ಶಿಸ್ತನ್ನು ಕಾಪಾಡಿಕೊಳ್ಳುವುದು ಕಷ್ಟ ಆಗಬಹುದು. ಆದರೆ ಅದರಿಂದ ಮುಂದೆ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಸಂಪತ್ತಿನ ವಿಷಯದಲ್ಲಿ ಶನಿವಾರ ಹುಟ್ಟಿದವರು ಭಾಗ್ಯಶಾಲಿಗಳು. ಬೇಡ ಬೇಡವೆಂದರೂ ಸಿರಿವಂತಿಕೆ ಇವರನ್ನು ಅರಸಿ ಬರುತ್ತದೆ. ಬೇರೆ ಗ್ರಹಗಳ ಆಶೀರ್ವಾದ ಇವರ ಮೇಲಿದ್ದರೆ, ದೇಶವನ್ನಾಳುವ ಸಾಧ್ಯತೆಯೂ ಇರುತ್ತದೆ.

 

 

click me!