
ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳಿವೆ ಮತ್ತು ಎಲ್ಲಕ್ಕೂ ಅವುಗಳದೇ ಆದ ಪ್ರಾಮುಖ್ಯತೆ ಇದೆ. ಅವುಗಳಲ್ಲಿ ವಿಶೇಷವಾದ ಹಬ್ಬ ನಾಗ ಪಂಚಮಿ. ಇದನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ, ನಾಗ ಪಂಚಮಿ ಹಬ್ಬವು ಶ್ರಾವಣ ಮಾಸದಲ್ಲಿ ಬರುತ್ತದೆ, ಇದನ್ನು ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಜನರು ನಾಗ ದೇವರನ್ನು ಯಥಾವತ್ತಾಗಿ ಪೂಜಿಸುತ್ತಾರೆ ಮತ್ತು ಹಾಲು ನೀಡುತ್ತಾರೆ.
ನಾಗ ಪಂಚಮಿ 2023
ನಾಗ ಪಂಚಮಿ ಬಹಳ ಮುಖ್ಯವಾದ ಹಬ್ಬ. ಈ ದಿನ ನಾಗದೇವತೆಯನ್ನು ಪೂಜಿಸಲಾಗುತ್ತದೆ. ಈ ವರ್ಷ ನಾಗ ಪಂಚಮಿಯನ್ನು ಯಾವಾಗ ಆಚರಿಸಲಾಗುತ್ತದೆ, ಈ ದಿನದ ಮಹತ್ವ ಮತ್ತು ಮಂಗಳಕರ ಸಮಯವೇನು ನೋಡೋಣ.
ಈ ವರ್ಷ ನಾಗ ಪಂಚಮಿ 21 ಆಗಸ್ಟ್ 2023, ಸೋಮವಾರ ಬರುತ್ತದೆ. ನಾಗದೇವತೆಯನ್ನು ಪ್ರತಿ ತಿಂಗಳು ಪಂಚಮಿ ತಿಥಿಯಂದು ಪೂಜಿಸಲಾಗುತ್ತದೆ, ಆದರೆ ಶ್ರಾವಣ ಮಾಸದಲ್ಲಿ ಬರುವ ಶುಕ್ಲ ಪಕ್ಷದ ನಾಗಪಂಚಮಿಯು ನಾಗದೇವತೆಯ ಆರಾಧನೆಗೆ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಹಾವನ್ನು ಪೂಜಿಸಲಾಗುತ್ತದೆ ಮತ್ತು ಅವುಗಳಿಗೆ ಹಾಲೆರೆಯಲಾಗುತ್ತದೆ. ನಾಗ ಪಂಚಮಿಯ ದಿನದಂದು ಹಾವುಗಳನ್ನು ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಹಾವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
Guru Pushya Nakshatra 2023: ಈ ವಸ್ತುಗಳನ್ನು ಖರೀದಿಸಿದ್ರೆ ಸಂಪತ್ತು ದುಪ್ಪಟ್ಟಾಗುತ್ತೆ!
ನಾಗ ಪಂಚಮಿಯ ಶುಭ ಸಮಯ
ಪಂಚಮಿ ತಿಥಿ ಪ್ರಾರಂಭ: 21 ಆಗಸ್ಟ್ 2023 ರಾತ್ರಿ 12:20 ನಿಮಿಷಗಳು
ಪಂಚಮಿ ತಿಥಿ ಅಂತ್ಯ: 22 ಆಗಸ್ಟ್ 2023 2.00 ನಿಮಿಷದವರೆಗೆ
ಶ್ರಾವಣ ಮಾಸವನ್ನು ಶಿವನ ಆರಾಧನೆಗೆ ವಿಶೇಷವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಭೋಲೆನಾಥನನ್ನು ಪೂಜಿಸುವುದು ಉತ್ತಮ. ಈ ಮಾಸದಲ್ಲಿ ನಾಗ ದೇವರನ್ನು ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ನಾಗಪಂಚಮಿ ಮಹತ್ವ
ಶ್ರಾವಣ ಮಾಸದಲ್ಲಿ ನಾಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರಾವಣದಲ್ಲಿ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ, ಇದರಿಂದಾಗಿ ಹಾವುಗಳು ಭೂ ಗರ್ಭದಿಂದ ಹೊರ ಬರುತ್ತವೆ. ಈ ಹಾವುಗಳು ಯಾರಿಗೂ ತೊಂದರೆ ನೀಡಬಾರದು ಅಥವಾ ಯಾರಿಗೂ ಹಾನಿ ಮಾಡಬಾರದು ಎಂದು ಪ್ರಾರ್ಥಿಸಿ ನಾಗ ಪಂಚಮಿಯಂದು ಅವುಗಳನ್ನು ಪೂಜಿಸಲಾಗುತ್ತದೆ. ಈ ದಿನದಂದು ಹಾವುಗಳನ್ನು ಪೂಜಿಸುವುದರಿಂದ ಬಯಸಿದ ಫಲ, ಸಂಪತ್ತು ಮತ್ತು ಅಧಿಕಾರ ದೊರೆಯುತ್ತದೆ. ಜೊತೆಗೆ ಹಾವಿನ ಭಯದಿಂದ ಮುಕ್ತರಾಗುತ್ತಾರೆ.
Guruwar Importance: ನವಗ್ರಹಗಳಲ್ಲಿ ಶ್ರೇಷ್ಠ ಗುರು, ಆತನಿಲ್ಲದೆ ಶುಭಕಾರ್ಯವಿಲ್ಲ!
ಕಾಳ ಸರ್ಪ ದೋಷದಿಂದ ಮುಕ್ತಿ
ಈ ದಿನ ರುದ್ರಾಭಿಷೇಕ ಮಾಡುವುದರಿಂದ ಕಾಳಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ.
ಜಾತಕದಲ್ಲಿ ಕಾಳ ಸರ್ಪದೋಷ ಇರುವವರಿಗೆ ಈ ದಿನ ಪೂಜೆ ಮಾಡುವುದು ಬಹಳ ಮುಖ್ಯ.
ಕಾಳಸರ್ಪ ದೋಷವಿದ್ದಾಗ ಅನೇಕ ಜನರು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುವುದಿಲ್ಲ. ಇಂಥ ದೋಷವಿರುವವರು ಈ ದಿನ ಬೆಳ್ಳಿಯ ನಾಗವನ್ನು ನದಿಯಲ್ಲಿ ಹರಿಬಿಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.