Mysuru Dasara: ಇಂದಿನಿಂದ ಗಜಪಡೆಗಳ ನಡಿಗೆ ತಾಲೀಮು ಶುರು

By Ravi Nayak  |  First Published Aug 12, 2022, 4:34 PM IST

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭದಲ್ಲೇ ಬಿರುಸಾಗಿದೆ‌. ಹಬ್ಬದಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ನಿನ್ನೆಯಷ್ಟೇ ತೂಕ ಮಾಡಿಸಲಾಗಿದ್ದು, ಇಂದಿನಿಂದ ನಡಿಗೆ ತಾಲೀಮು ಶುರು ಮಾಡಿವೆ.


ಮೈಸೂರು (ಆ.12): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭದಲ್ಲೇ ಬಿರುಸಾಗಿದೆ‌. ಹಬ್ಬದಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ನಿನ್ನೆಯಷ್ಟೇ ತೂಕ ಮಾಡಿಸಲಾಗಿದ್ದು, ಇಂದಿನಿಂದ ನಡಿಗೆ ತಾಲೀಮು ಶುರುವಾಗಿದೆ. ಆರಂಭ ದಿನವಾದ ಇಂದು ಮೈಸೂರು ಅರಮನೆ ಸುತ್ತ ವಿಹಾರ ನಡೆಸುವ ಮೂಲಕ ಗಜಪಡೆ ತನ್ನ ತಾಲೀಮು ಆರಂಭಿಸಿತು. ಗಜಪಡೆಯ ಮೊದಲ ದಿನದ ತಾಲೀಮು ಹೇಗಿತ್ತು ನೀವೆ ನೋಡಿ. ಹೌದು, ದಸರಾ ಹಬ್ಬ(Dasara Festival) ಮನೆ ಬಾಗಿಲಿಗೆ ಬಂದು ನಿಂತಿದೆ. ಕೊರೊನಾ(Corona)_ ಕಾರಣಕ್ಕೆ ಎರಡು ವರ್ಷ ಸರಳವಾಗಿದ್ದ ಆಚರಣೆಯಾಗಿದ್ದ ದಸರಾ ಈ ವರ್ಷ ವಿಜೃಂಭಣೆ ಪಡೆದುಕೊಂಡಿದೆ. ನಾಡ ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಂಡಿರುವ ಜಿಲ್ಲಾಡಳಿತ 16 ಉಪ ಸಮಿತಿ ರಚಿಸಿ ಕಾರ್ಯಾಚರಣೆ ಮಾಡುತ್ತಿದೆ‌.

ಜಿಟಿ ಜಿಟಿ ಮಳೆಯಲ್ಲಿ ಕಾಡಿನಿಂದ ನಾಡಿಗೆ ದಸರಾ ಗಜ ಪಯಣ

Tap to resize

Latest Videos

ಮತ್ತೊಂದೆಡೆ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗಳು ಅರಮನೆ ಅಂಗಳದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿವೆ. ಆನೆಗಳ ತೂಕ ಪ್ರಕ್ರಿಯೆ ಮುಗಿಸಿರುವ ಅರಣ್ಯ ಸಿಬ್ಬಂದಿ, ಇಂದಿನಿಂದ ಅವುಗಳಿಗೆ ನಡಿಗೆ ತಾಲೀಮು ಶುರು ಮಾಡಿದ್ದಾರೆ.  ಮೊದಲ ದಿನ ಆನೆಗಳು ಅರಮನೆ ಒಳಾಂಗಣದಲ್ಲಿ ತಮ್ಮ ತಾಲೀಮು ಶುರು ಮಾಡಿವೆ. ಅಂಬಾರಿ ಹೊರುವ ಅಭಿಮನ್ಯು ಆನೆಯ ಮುಂದಾಳತ್ವದಲ್ಲಿ ಎಲ್ಲಾ 9 ಆನೆಗಳು ತಾಲೀಮೀನಲ್ಲಿ‌ ಪಾಲ್ಗೊಂಡಿದ್ದವು. ಜಯಮಾರ್ತಾಂಡ ದ್ವಾರ, ಬಲರಾಮ, ಕರಿಕಲ್ಲು ತೊಟ್ಟಿ ಗೇಟ್ ಸೇರಿದಂತೆ ವರಹಾ ದ್ವಾರದ ಮಾರ್ಗವಾಗಿ ಆನೆಗಳನ್ನು ನಡೆಸುವ ಮೂಲಕ ತಾಲೀಮು ನಡೆಸಲಾಯಿತು.  ಇನ್ನೂ ಎರಡು ದಿನಗಳ ಕಾಲ ಅರಮನೆಯಲ್ಲಿ ತಾಲೀಮು ನಡೆಸುವ ಗಜಪಡೆ, ಭಾನುವಾರದಿಂದ ರಾಜಪಥದಲ್ಲಿ ಸಂಪೂರ್ಣ ತಾಲೀಮು ಶುರು ಮಾಡಲಿದೆ.

ವಾಟ್ಸಾಪ್‌ಗೆ ಬರಲಿದೆ ಕರ್ನಾಟಕ ಮುಕ್ತ ವಿವಿ ಪರೀಕ್ಷಾ ಫಲಿತಾಂಶ

 ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಫಲಿಶಾಂಶವನ್ನು ವಿದ್ಯಾರ್ಥಿಗಳ ವಾಟ್ಸಾಪ್‌ಗೆ ನೇರವಾಗಿ ಕಳುಹಿಸುವ ಯೋಜನೆ ರೂಪಿಸಿದೆ. ಸಾಮಾನ್ಯವಾಗಿ ಪರೀಕ್ಷಾ ಫಲಿತಾಂಶವನ್ನೂ ಕಾಲೇಜಿನ ನೋಟಿಸ್‌ ಬೋರ್ಡ್‌ನಲ್ಲಿ ಅಥವಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ವಾಡಿಕೆ. ಆದರೆ, ಕರಾಮುವಿವಿ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳ ಮೊಬೈಲ… ಸಂಖ್ಯೆಗೆ ಫಲಿತಾಂಶದ ಶೀಚ್‌ ಕಳುಹಿಸಲು ಕ್ರಮ ಕೈಗೊಂಡಿದೆ. ಇದು ವಿದ್ಯಾರ್ಥಿಗಳ ಸಮೂಹದಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದು, ಕರಾಮುವಿವಿ ನೂತನ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

ದಸರಾ ಬಹಿಷ್ಕರಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧಾರ

ಮದುವೆ ಕರೆಯೋಲೆಯಿಂದ ಹಿಡಿದು ಕಚೇರಿಯ ಪ್ರಮುಖ ಮಾಹಿತಿ ವಾಟ್ಸಾಪ್‌ನಲ್ಲೇ ಹಂಚಿಕೆ ಆಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಪರೀಕ್ಷೆ ಫಲಿತಾಂಶ ಕೂಡ ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪುವಂತೆ ಮಾಡಲು ಮುಕ್ತ ವಿವಿ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ವಿಧಾನ ಅಳವಡಿಸಿಕೊಳ್ಳುತ್ತಿದೆ. ವಾಟ್ಸಪ್‌ನಲ್ಲಿ ಫಲಿತಾಂಶ ನೀಡಲು ಕಾರಣ ಕರಾಮುವಿವಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಈ ಮೊದಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿತ್ತು. ಅಲ್ಲದೆ, ವಿದ್ಯಾರ್ಥಿಗಳ ಮೇಲ… ಐಡಿಗೂ ರಿಸಲ್ಟ… ಶೀಚ್‌ ಕಳುಹಿಸುತ್ತಿತ್ತು. ಆದರೆ, ಮುಕ್ತ ವಿವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳ ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಬಹುತೇಕರು ಉದ್ಯೋಗದಲ್ಲಿರುವ ಕಾರಣ ಅವರಿಗೆ ಸಕಾಲದಲ್ಲಿ ಮೇಲ… ಚೆಕ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ತಾಂತ್ರಿಕ ಕಾರಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಫಲಿತಾಂಶವೂ ಲಭ್ಯವಾಗುತ್ತಿರಲಿಲ್ಲ. ಇವನ್ನೆಲ್ಲಾ ಮನಗಂಡ ವಿವಿ ವಿದ್ಯಾರ್ಥಿಗಳ ವಾಟ್ಸಾಪ್‌ಗೆ ನೇರವಾಗಿ ಫಲಿತಾಂಶ ನೀಡಲು ಮುಂದಾಗಿದೆ.

click me!