Chankya Neeti: ಇವರನ್ನು ತುಳಿದ್ರೆ ಪಾಪ ಸುತ್ಕೊಳ್ಳುತ್ತೆ

By Suvarna NewsFirst Published Aug 12, 2022, 1:51 PM IST
Highlights

ಆಚಾರ್ಯ ಚಾಣಕ್ಯ 7 ವ್ಯಕ್ತಿಗಳ ಬಗ್ಗೆ ಹೇಳಿದ್ದಾರೆ. ಅವರನ್ನು ನಾವು ಅಪ್ಪಿತಪ್ಪಿ ತುಳಿದ್ರೂ ಸಮಸ್ಯೆ ತಪ್ಪಿದ್ದಲ್ಲ. ಅವರನ್ನು ಕಾಲಿನಿಂದ ಸ್ಪರ್ಶಿಸಿದ್ರೂ ಅದು ಅಪರಾಧವೆ. ಇದಕ್ಕೆ ನಾವು ಮಾತ್ರವಲ್ಲ ನಮ್ಮ 7 ತಲೆಮಾರಿನವರು ತೊಂದರೆ ಅನುಭವಿಸಬೇಕಾಗುತ್ತದೆ. 
 

ಆಚಾರ್ಯ ಚಾಣಕ್ಯರ ನೀತಿಗಳು ಮತ್ತು ತಂತ್ರಗಳು ಆಗಿನ ಜನರಿಗೆ ಸರಿಯಾದ ಮಾರ್ಗವನ್ನು ತೋರಿಸಿದ್ದವು. ಆ ನೀತಿಗಳು ಇಂದಿಗೂ  ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಚಾಣಕ್ಯರು ಬರೀ ರಾಜಕೀಯ, ಅರ್ಥಶಾಸ್ತ್ರವನ್ನು ಮಾತ್ರ ಹೇಳಿಲ್ಲ, ವ್ಯಕ್ತಿಯೊಬ್ಬನ ಏಳ್ಗೆವೆ ಅವಗತ್ಯವಾಗಿರುವ ಅನೇಕ ಸಂಗತಿಯನ್ನು ಹೇಳಿದ್ದಾರೆ. ಚಾಣಕ್ಯರು  ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾಗಲು ಏನೆಲ್ಲ ಮಾಡ್ಬೇಕು ಎಂಬುದನ್ನು ಹೇಳಿದ್ದಾರೆ. ಚಾಣಕ್ಯರ ಪ್ರಕಾರ, ಜೀವನದಲ್ಲಿ ಸುಖ, ಸಂತೋಷ ಪ್ರಾಪ್ತಿಯಾಗ್ಬೇಕೆಂದ್ರೆ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಕೆಲ ವಸ್ತುಗಳನ್ನು ತುಳಿಯಬಾರದು ಅಥವಾ ಅದನ್ನು ಕಾಲಿನಿಂದ ಸ್ಪರ್ಶಿಸಬಾರದು ಎಂದಿದ್ದಾರೆ. ಕೆಲ ವಸ್ತುಗಳನ್ನು ಕಾಲಿನಿಂದ ಸ್ಪರ್ಶಿಸಿದ್ರೆ ಪಾಪ ಸುತ್ತಿಕೊಳ್ಳುತ್ತದೆ. ಆ ಪಾಪವನ್ನು ಮುಂದಿನ 7 ತಲೆಮಾರುಗಳ ಜನರು ಅನುಭವಿಸಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಯಾವ ವಸ್ತುವನ್ನು ಪಾದದಿಂದ ತುಳಿಯಬಾರದು ಎಂದು ಚಾಣಕ್ಯ ಹೇಳಿದ್ದಾರೆ ಎಂಬುದನ್ನು ನಾವಿಂದು ಹೇಳ್ತೇವೆ. 

ಕಾಲಿ (Foot) ನಿಂದ ಇವನ್ನು ಅಪ್ಪಿತಪ್ಪಿಯೂ ಸ್ಪರ್ಶಿಸ್ಬೇಡಿ : 

ಅಗ್ನಿ (Fire) : ಅಗ್ನಿಗೆ ಹಿಂದೂ ಧರ್ಮದಲ್ಲಿ ದೇವರ ಸ್ಥಾನ ನೀಡಲಾಗಿದೆ. ಯಾವುದೇ ಶುಭ ಕಾರ್ಯದಲ್ಲೂ ಅಗ್ನಿ ಇರೋದು ಅವಶ್ಯಕ. ಹಿಂದೂ ಧರ್ಮ (Religion) ದಲ್ಲಿ, ಪ್ರತಿ ಕೆಲಸ ಪ್ರಾರಂಭವಾಗುವ ಮೊದಲು ದೀಪ ಬೆಳಗಲಾಗುತ್ತದೆ. ಹವನವನ್ನು ಮಾಡಲಾಗುತ್ತದೆ. ಅಗ್ನಿ ದೇವರಾಗಿರುವ ಕಾರಣ ಹಾಗೆ ಶುಭ (good luck) ಸಂಕೇತವಾಗಿರುವ ಕಾರಣ, ಯಾವುದೇ ವ್ಯಕ್ತಿ ಅಗ್ನಿಯನ್ನು ಕಾಲಿನಿಂದ ಸ್ಪರ್ಶಿಸಬಾರದು. ಇದನ್ನು ಪಾಪವೆಂದು ಪರಿಗಣಿಸಲಾಗುತ್ತದೆ.  

ಬ್ರಾಹ್ಮಣ (Brahmin) : ಬ್ರಾಹ್ಮಣರು ಅಥವಾ ಋಷಿಗಳು ಅಥವಾ ಸಂತರನ್ನು  ದೇವರ ಸಮಾನವೆಂದು ಪರಿಗಣಿಸಲಾಗುತ್ತದೆ. ಬ್ರಾಹ್ಮಣರಿಗೆ ಅನ್ನದಾನ ಮಾಡುವ ಮೂಲಕ ಎಲ್ಲಾ ಶುಭ ಕಾರ್ಯಗಳನ್ನು ಪ್ರಾರಂಭಿಸಲಾಗುತ್ತದೆ. ಹಾಗಾಗಿಯೇ ಅವರನ್ನು ಪ್ರತಿ ಶುಭ ಮುಹೂರ್ತದಲ್ಲಿಯೂ ಗೌರವಿಸಲಾಗುತ್ತದೆ. ಅವರ ಮೇಲೆ ಕಾಲಿಟ್ಟಾಗ ಅಥವಾ ಪಾದಗಳಿಂದ ಅವರನ್ನು ಸ್ಪರ್ಶಿಸಿದಾಗ ಅದು ಪಾಪವೆನ್ನುತ್ತಾರೆ ಚಾಣಕ್ಯರು.

ಇದನ್ನೂ ಓದಿ: Vaastu Tips for Bedroom: ಬೆಡ್‌ ರೂಮಿನಲ್ಲಿ ಧನಾತ್ಮಕ ವಾತಾವರಣ ಇರ್ಬೇಕು ಅಂದ್ರೆ ಹೀಗ್ಮಾಡಿ

ಗುರು : ಗುರುವಿನ ಸ್ಥಾನಮಾನ ನಮ್ಮ ಸಂಪ್ರದಾಯಗಳಲ್ಲಿ ಅಗ್ರಸ್ಥಾನದಲ್ಲಿದೆ. ಗುರುವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಹಾಗಾಗಿಯೇ ಗುರುವನ್ನು ಪರಮ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಗುರುಗಳ ಪಾದಗಳನ್ನು ಸ್ಪರ್ಶಿಸುವ ಮೂಲಕ ಅವರ ಆಶೀರ್ವಾದ (blessing) ವನ್ನು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಅವರನ್ನು ಕೂಡ ಕಾಲಿನಿಂದ ತುಳಿಯಬಾರದು. 

ಹುಡುಗಿ : ಹಿಂದೂ ಧರ್ಮದಲ್ಲಿ  ಹುಡುಗಿಯರನ್ನು ದೇವತೆ ಎಂದು  ಪೂಜಿಸಲಾಗುತ್ತದೆ. ಅವರನ್ನು ಮಾ ಭಗವತಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹೆಣ್ಣು ಮಗುವನ್ನು ದಾನ ಮಾಡಿದ ಪುಣ್ಯವನ್ನು ಹೆತ್ತವರು ಪಡೆಯಲು ಪ್ರತಿ ಮನೆಯಲ್ಲಿ ಕನಿಷ್ಠ ಒಂದು ಹೆಣ್ಣು ಮಗು ಇರಬೇಕು ಎಂಬ ನಂಬಿಕೆಯೂ ಇದೆ. ಆದ್ದರಿಂದ, ದೇವತೆಯಂತೆ ಪೂಜಿಸಲ್ಪಟ್ಟ ಹುಡುಗಿಯನ್ನು ಎಂದಿಗೂ ತುಳಿಯಬಾರದು. 

ವೃದ್ಧರು : ಮನೆಯ ಹಿರಿಯರನ್ನು ಗೌರವಿಸುವ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಪ್ರತಿಯೊಬ್ಬರು ತಮ್ಮ ಮನೆಯ ಹಿರಿಯರನ್ನು ಗೌರವದಿಂದ ಕಾಣಬೇಕು. ಹಿರಿಯರನ್ನು ಅಗೌರವಿಸಿದ ಮನೆಯನ್ನು ತಾಯಿ ಲಕ್ಷ್ಮಿ ಎಂದೂ ಪ್ರವೇಶಿಸುವುದಿಲ್ಲ. 

ಇದನ್ನೂ ಓದಿ: ಮದ್ವೆಯಾಗ್ತಿಲ್ವಾ? ಬಯಸಿದ ಸಂಗಾತಿ ಪಡೆಯಲು ಈ ಮಂತ್ರಗಳನ್ನು ಹೇಳಿಕೊಳ್ಳಿ..

ಹಸು : ಹಿಂದೂ ಧರ್ಮದಲ್ಲಿ ಹಸುವಿಗೂ ದೇವರ ಸ್ಥಾನವಿದೆ. ಎಲ್ಲಾ ಶುಭ ಕಾರ್ಯಗಳಿಗೆ ಹಸುವಿನ ಸಗಣಿ ಬಳಸಲಾಗುತ್ತದೆ. ಆದ್ದರಿಂದ ಹಸು ನಿಮ್ಮ ಮನೆ ಬಾಗಿಲಿಗೆ ಬಂದರೆ ಅದನ್ನು  ಹೊಡೆದು ಓಡಿಸಬಾರದು. ಅನೇಕರು ಅದನ್ನು ಕಾಲಿನಲ್ಲಿ ಒದ್ದು ಓಡಿಸುತ್ತಾರೆ. ಇದು ಮಹಾಪಾಪ.  

ಮಗು : ಆಚಾರ್ಯ ಚಾಣಕ್ಯ ಅವರು ಮಕ್ಕಳು ದೇವರ ಸ್ವರೂಪ ಎಂದಿದ್ದಾರೆ. ಮಗುವಿಗೆ ಎಂದಿಗೂ ಹೊಡೆಯಬಾರದು. ಚಿಕ್ಕ ಮಕ್ಕಳನ್ನು ಕಾಲಿನಿಂದ ಒದೆಯಬಾರದು. ಅಂಥವರನ್ನು ಎಂದಿಗೂ ದೇವರು ಕ್ಷಮಿಸುವುದಿಲ್ಲ ಎನ್ನುತ್ತಾರೆ ಚಾಣಕ್ಯ. 

click me!