ಹನುಮಂತನ ಭಕ್ತರಿಗೆ ಶನಿಯ ಮಹಾದಶಾ ಅಥವಾ ಶನಿಯ ಸಾಡೇಸಾತಿ ದುಷ್ಪರಿಣಾಮಗಳು ತಟ್ಟುವುದಿಲ್ಲ. ಹಾಗಾಗಿ ಶನಿ ದೋಷವನ್ನು ತೊಡೆದುಹಾಕಲು ಹನುಮ ಜಯಂತಿಯ ದಿನವನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ.
ಹನುಮ ಜಯಂತಿಯನ್ನು ಪ್ರತಿ ವರ್ಷ ಚೈತ್ರ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಈ ಬಾರಿ ಈ ಮಂಗಳಕರ ದಿನಾಂಕವು ಏಪ್ರಿಲ್ 6ರಂದು ಗುರುವಾರ ಬರುತ್ತಿದೆ. ಹನುಮನ ಭಕ್ತರನ್ನು ಶನಿ ಕಾಡುವುದಿಲ್ಲ ಎಂಬ ವಿಷಯ ತಿಳಿದದ್ದೇ. ಹನುಮನ ಪೂಜೆ ಮಾಡುವುದರಿಂದ ಶನಿ ದೋಷ ತಗ್ಗುತ್ತದೆ ಎಂಬ ಸಂಗತಿಯನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗಾಗಿ, ಈ ಹನುಮ ಜಯಂತಿಯು ಶನಿ ಸಾಡೇಸಾತಿ, ಮಹಾದಶಾ ದೋಷಗಳಿಂದ ಮುಕ್ತರಾಗಲು ಅತ್ಯುತ್ತಮ ದಿನವಾಗಿದೆ. ಹನುಮ ಜಯಂತಿಯ ದಿನದಂದು ಯಾವ ಜ್ಯೋತಿಷ್ಯ ಪರಿಹಾರಗಳು ನಿಮಗೆ ಪ್ರಯೋಜನವನ್ನು ನೀಡಬಲ್ಲವು ಎಂಬುದನ್ನು ತಿಳಿಯಿರಿ.
ಶನಿ ಮಹಾದಶಾ ದೂರವಾಗಲು ಈ ಪರಿಹಾರ ಮಾಡಿ
ಹನುಮಂತನಿಗೆ ಬೇಳೆ ಮತ್ತು ಬೂಂದಿ ತಿನ್ನಲು ತುಂಬಾ ಇಷ್ಟ. ಹನುಮ ಜಯಂತಿಯ ದಿನದಂದು ಉಪವಾಸವನ್ನುವಿದ್ದು ದೇವಸ್ಥಾನಕ್ಕೆ ಹೋಗಿ ಬೂಂದಿ, ಬೇಳೆಯನ್ನು ಅರ್ಪಿಸಿ. ಹಾಗೆಯೇ ಸುಂದರಕಾಂಡವನ್ನು ಪಠಿಸಿ. ಇದಾದ ನಂತರ ಎಲ್ಲೆಡೆ ಪ್ರಸಾದ ವಿತರಿಸಿ. ಈ ರೀತಿ ಮಾಡುವುದರಿಂದ ಭಜರಂಗಬಲಿ ಸಂತಸಗೊಂಡು ಶನಿ ದೋಷ ನಿವಾರಣೆಯಾಗುತ್ತದೆ. ಹೀಗೆ ಮಾಡುವುದರಿಂದ ಆರೋಗ್ಯದ ಆಶೀರ್ವಾದವೂ ಸಿಗುತ್ತದೆ.
Hanuman Jayantiಯಂದಿನಿಂದ ಈ ರಾಶಿಗಳಿಗೆ ಮಹಾ 'ಲಕ್'ಶ್ಮಿ ಯೋಗ!
ಹನುಮ ಜಯಂತಿಯ ದಿನದಂದು ಉಪವಾಸವಿದ್ದು ಶನಿಯ ಮಹಾದಶಾದಿಂದ ಮುಕ್ತಿ ಹೊಂದಲು ಕೆಂಪು ಬಟ್ಟೆ ಧರಿಸಿ ಹನುಮಂತನ ದೇವಸ್ಥಾನಕ್ಕೆ ತೆರಳಿ. ಇದರ ನಂತರ, ಆಂಜನೇಯನ ಮುಂದೆ ಕುಳಿತು ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ. ನಂತರ ಹನುಮಾನ್ ಚಾಲೀಸಾವನ್ನು 11 ಬಾರಿ ಪಠಿಸಿ. ಹೀಗೆ ಮಾಡುವುದರಿಂದ ಶನಿಯ ಅರ್ಧಾರ್ಧ ಮತ್ತು ಧೈಯ್ಯದ ಅಶುಭ ಪರಿಣಾಮ ಕಡಿಮೆಯಾಗುತ್ತದೆ.
ಶನಿ ಅರ್ಧಾರ್ಧ ಪರಿಹಾರ
ಶನಿಯ ಅರ್ಧಾರ್ಧ ಮತ್ತು ಧೈಯ್ಯಾ ಹೋಗಲಾಡಿಸಲು ಹನುಮ ಜಯಂತಿಯ ದಿನದಂದು ಹನುಮಂತನಿಗೆ ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಅರ್ಪಿಸಬೇಕು. ಇದಲ್ಲದೆ, ಎಂಟು ಆಲದ ಎಲೆಗಳನ್ನು ತೆಗೆದುಕೊಂಡು, ಕಪ್ಪು ದಾರದಲ್ಲಿ ದಾರದಲ್ಲಿ ಕಟ್ಟಿ ಅವುಗಳ ಮೇಲೆ ಸಿಂಧೂರದಿಂದ ರಾಮ್-ರಾಮ್ ಎಂದು ಬರೆಯಿರಿ. ನಂತರ ಆಂಜನೇಯನ ಮೂರ್ತಿಗೆ ಅರ್ಪಿಸಿ.
ಸಾಡೇ ಸಾತಿಯ ದೋಷಗಳನ್ನು ತೆಗೆದು ಹಾಕಲು
ಹನುಮ ಜಯಂತಿಯ ದಿನದಂದು ಹನುಮನ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಮತ್ತು ಅದರಲ್ಲಿ ಎರಡು ಲವಂಗವನ್ನು ಇಟ್ಟುಕೊಳ್ಳಿ. ಇದಾದ ಬಳಿಕ ಆಂಜನೇಯಗೆ ಆರತಿ ಎತ್ತಿ.
ಇದರ ನಂತರ ಹನುಮನಾಷ್ಟಕವನ್ನು ಪಠಿಸಿ. ಈಗ ಹನುಮಾನ್‌ಗೆ ಗುಲಾಬಿ ಹಾರ, ಕೆಂಪು ಹೂವುಗಳು, ಕೆಂಪು ಚಂದನ ಇತ್ಯಾದಿ ವಸ್ತುಗಳನ್ನು ಅರ್ಪಿಸಿ.
Lucky Zodiac Till 2025: 3 ವರ್ಷಗಳ ಕಾಲ ಈ ರಾಶಿಗಳಿಗಿದೆ ಶನಿ ಆಶೀರ್ವಾದ!
ಹನುಮಾನ್ ಜಯಂತಿಯ ದಿನ, ಆಂಜನೇಯನ ದೇವಸ್ಥಾನಕ್ಕೆ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಿ ಹನುಮಂತನ ತಲೆಯಿಂದ ಕಾಲ್ಬೆರಳವರೆಗೆ ಸುತ್ತುಬರಿಸಿ ಒಡೆಯಿರಿ. ಈಗ ತುಪ್ಪದ ದೀಪವನ್ನು ಬೆಳಗಿಸಿ 'ಓಂ ಹನುಮತೇ ನಮಃ' ಮಂತ್ರವನ್ನು 108 ಬಾರಿ ಜಪಿಸಿ. ಇದರ ನಂತರ ಸುಂದರಕಾಂಡವನ್ನು ಪಠಿಸಿ.
ಹನುಮ ಜಯಂತಿಯ ದಿನದಂದು ಮಂಗಗಳು ಮತ್ತು ಕಪ್ಪು ನಾಯಿಗಳಿಗೆ ಬೂಂದಿ ಲಡ್ಡುಗಳನ್ನು ತಿನ್ನಿಸುವುದರಿಂದ ಶನಿ ದೋಷವೂ ಕಡಿಮೆಯಾಗುತ್ತದೆ.
ಹನುಮ ಜಯಂತಿಯ ದಿನದಂದು ಶನಿದೇವನನ್ನು ಮೆಚ್ಚಿಸಲು ಕಪ್ಪು ಉಂಡೆ, 1.25 ಕೆಜಿ ಧಾನ್ಯಗಳು, ಎರಡು ಲಡ್ಡುಗಳು, ಹಣ್ಣುಗಳು, ಕಪ್ಪು ಕಲ್ಲಿದ್ದಲು ಮತ್ತು ಕಬ್ಬಿಣದ ಮೊಳೆಯನ್ನು ಕಪ್ಪು ಬಟ್ಟೆಯಲ್ಲಿ ದಾನ ಮಾಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.