ಸೀರಿಯಲ್ ಕಿಲ್ಲರ್‌ಗಳು, ಸೈಕೋಪಾತ್‌ಗಳ ಜಾತಕ ಪರಿಶೀಲಿಸಿದರೆ ಅವರಲ್ಲಿ ಹೆಚ್ಚಿನವರು ಈ ಕೆಳಗಿನ ರಾಶಿಯಲ್ಲಿ ಇರುವುದನ್ನು ನೀವು ಕಾಣಬಹುದು.
ನಾವು ಎಷ್ಟೇ ಸಮಚಿತ್ತದಿಂದ ವರ್ತಿಸಿದರೂ ನಮ್ಮೆಲ್ಲರಲ್ಲಿ ಒಂದು ಹುಚ್ಚುತನ ಹಾಗೂ ಅಪರಾಧದ ಅಂಶ ಆಳದಲ್ಲಿ ಇರುತ್ತದೆ. ಕೆಲವರು ಅದನ್ನು ಚೆನ್ನಾಗಿ ಪಳಗಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಜಗತ್ತಿನಲ್ಲಿ ಅನೇಕ ಸರಣಿ ಕೊಲೆಗಾರರು(Serial killers) ಮತ್ತು ಸೈಕೋಪಾತ್‌ಗಳಿದ್ದಾರೆ. (ಮನೋರೋಗಿಗಳೆಲ್ಲರೂ ಅಪರಾಧಿಗಳಲ್ಲ, ಅಪರಾಧಿಗಳೆಲ್ಲ ಮನೋರೋಗಿಗಳೂ ಅಲ್ಲ ಎಂಬುದು ನೆನಪಿನಲ್ಲಿರಲಿ.). ಆದರೆ ಅಂತಹ ಕೆಲವು ತಿರುಚಿದ ಮನಸ್ಸುಗಳು ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ ಮತ್ತು ಅವುಗಳನ್ನು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ವರ್ಗೀಕರಿಸಬಹುದು. ಕ್ರೇಜಿಯೆಸ್ಟ್‌ನಿಂದ ಕಡಿಮೆ ಅಪಾಯಕಾರಿಯವರೆಗೆ 5 ರಾಶಿಚಕ್ರ ಚಿಹ್ನೆಗಳು ಇಲ್ಲಿವೆ.
ಕಟಕ ರಾಶಿ (Cancer)
ಈ ರಾಶಿಚಕ್ರದವರನ್ನು ಕೆಲವು ಸನ್ನಿವೇಶಗಳಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಬಹುದು. ಇವರು ಭಾವನಾತ್ಮಕವಾಗಿ ಸಿಕ್ಕಿ ಹಾಕಿಕೊಂಡ, ತಿರುಚಿದ ಮತ್ತು ತುಂಬಾ ಕರಾಳವಾದ ಭಾಗವನ್ನು ಹೊಂದಿರುತ್ತಾರೆ. ಅವರು ಅದಕ್ಕೆ ಅನುಮತಿ ನೀಡಿದಾಗ ಮಾತ್ರ ಅದು ಮೇಲುಗೈಯಾಗುತ್ತದೆ. ಇವರು ಕೆಲವೊಮ್ಮೆ ತುಂಬಾ ಹತಾಶರಾಗುತ್ತಾರೆ. ಇವರು ಅಪರಾಧದ ತೀರ್ಮಾನವನ್ನು ಮನೋಲೋಕದಲ್ಲಿ ಮಾಡಬಹುದು. ಆದರೆ ಅವರ ಮುಖ ಸಿಹಿಯಾಗಿರುವುದನ್ನು ನೀವು ನೋಡುತ್ತೀರಿ. ಇವರು ಕೊಲೆ ನಡೆಸಿದರೆ ಅದು ಸಾಮಾನ್ಯವಾಗಿ ಅಸೂಯೆಯಿಂದ ಉಂಟಾದುದು ಆಗಿರುತ್ತದೆ. ಹೀಗಾಗಿ ಇವರ ಗೆಳತಿಯರು, ಪ್ರೇಮಿಗಳು ಹುಷಾರಾಗಿರಬೇಕು.
ವೃಶ್ಚಿಕ ರಾಶಿ (Scorpio)
ಇವರು ಮನದಲ್ಲಿ ತುಂಬಾ ಕರಾಳ ನೆನಪುಗಳನ್ನು- ಭಾಗಗಳನ್ನು ಹೊಂದಿರುತ್ತಾರೆ. ಕತ್ತಲೆಯಿಂದ ಹೊರಬರಲು ಯತ್ನಿಸುತ್ತಿರುತ್ತಾರೆ. ನಿಯಂತ್ರಣ ಮತ್ತು ಕುಶಲತೆಗೆ ಬಂದಾಗ ಇವರು ಧೈರ್ಯಶಾಲಿ, ಅತ್ಯಂತ ಶಕ್ತಿಶಾಲಿ ಮತ್ತು ಬೆಕ್ಕಿನಂತಿರುತ್ತಾರೆ. ಇವರು ಕೊಲೆ ಮಾಡಿದರೆ ನೀವು ಇವರಲ್ಲಿ ಸ್ಯಾಡಿಸಂ ಮನೋಭಾವ ಕಾಣಬಹುದು. ಹಾಗೆಯೇ ಇವರು ಘಟನೆಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದರಲ್ಲಿ ನಿಪುಣರು. 1960ರ ದಶಕದಲ್ಲಿ ತನ್ನ ಅನುಯಾಯಿಗಳನ್ನು ಕುಖ್ಯಾತ ಕೊಲೆಗಳನ್ನು ಮಾಡುವಂತೆ ಮಾಡಿದ ಅಮೇರಿಕನ್ ಕೊಲೆಗಾರ ಮತ್ತು ಕಲ್ಟ್ ಹೀರೋ ಚಾರ್ಲ್ಸ್ ಮ್ಯಾನ್ಸನ್ ಈ ಜನ್ಮರಾಶಿಯವನಾಗಿದ್ದ.
Traits Of Scorpio: ವೃಶ್ಚಿಕ ರಾಶಿಯ ಪುರುಷರ ಸ್ವಭಾವಗಳೇನೇನು ಗೊತ್ತಾ?
ಧನು ರಾಶಿ (Sagittarius)
ಇದು ರಾಶಿಚಕ್ರದಲ್ಲಿ ಮೂರನೇ ಅತ್ಯಂತ ಅಪಾಯಕಾರಿ ರಾಶಿಚಿಹ್ನೆಯಾಗಿದೆ. ಕೊಲೆಗಾರರಿಗಿಂತ ಹೆಚ್ಚಾಗಿ ಇವರು ಕಳ್ಳತನದ ಮನೋಭಾವದವರು. ಆದರೂ ಇವರು ತುಂಬಾ ಪ್ರಾಮಾಣಿಕರಂತೆ ಕಾಣಿಸಿಕೊಳ್ಳಬಲ್ಲರು ಹಾಗೂ ಇವರನ್ನು ಹಿಡಿಯುವುದು ತುಂಬಾ ಕಷ್ಟ. ಎಷ್ಟೇ ಕಳ್ಳತನ ಮಾಡಿದರೂ ಸಿಕ್ಕಿಹಾಕಿಕೊಳ್ಳದ ಕಲೆಯನ್ನು ಇವರು ಕಲಿಯಬಲ್ಲರು. ತಮಗೆ ಯಾರಾದರೂ ಮೋಸ ಮಾಡಿದಾಗ ಇವರು ಹೆಚ್ಚು ತೀವ್ರವಾದ ಅಪರಾಧಕ್ಕೆ ಇಳಿಯಬಹುದು.
ವೃಷಭ ರಾಶಿ (Taurus)
ಹಣ, ಐಷಾರಾಮಿ ವಸ್ತುಗಳು, ಬೆಲೆಬಾಳುವ ಮತ್ತು ಪುರಾತನ ವಸ್ತುಗಳ ಮೇಲಿನ ಇವರ ಪ್ರೀತಿ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ಇವರು ದೊಡ್ಡ ದೊಡ್ಡ ವಂಚನೆಗಳನ್ನು ಮಾಡಬಹುದು. ಅವರ ಕುಖ್ಯಾತಿಯನ್ನು ಕೊಲೆಗಳಿಗಿಂತಲೂ ಹೆಚ್ಚಾಗಿ ಬಹುಕೋಟಿ ಹಗರಣಗಳನ್ನು ಮಾಡುವುದರಲ್ಲಿ ಹೆಚ್ಚು ಕಾಣಬಹುದು. ಇವರ ಕೈಯಲ್ಲಿ ಹಣಕಾಸಿನ ನಿರ್ವಹಣೆಯನ್ನು ಕೊಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ.
Gemology: ಸಿಂಹ, ಮೇಷ ರಾಶಿಗೆ ಮಂಗಳಕರ ಮಾಣಿಕ್ಯ, ಆದರೆ ಈ ರಾಶಿಯವರು ಮಾತ್ರ ಧರಿಸಲೇಬಾರದು!
ಮೇಷ ರಾಶಿ (Aries)
ಮೇಷ ರಾಶಿಯವರು ನಿಖರವಾಗಿ ಹೇಳಬೇಕೆಂದರೆ ಮಾನಸಿಕ ಕ್ಷೋಭೆ ಹೊಂದಿದವರು. ಇವರು ಹಠಾತ್ ಪ್ರವೃತ್ತಿ, ಅಸಹನೆ ಮತ್ತು ಆಕ್ರಮಣಶೀಲತೆ ಉಳ್ಳವರು, ಇದು ಅವರನ್ನು ಅಪರಾಧಗಳ ಸಾಲಿನಲ್ಲಿ ಅಚಾನಕ್ಕಾಗಿ ನಿಲ್ಲಿಸಬಹುದು. ಇಲ್ಲಿ ಕಾಣುವ ಒಂದು ದೊಡ್ಡ ಉದಾಹರಣೆ ಅಡಾಲ್ಫ್ ಹಿಟ್ಲರ್. ಇವರನ್ನು ಎಂದಿಗೂ ಕೋಪಗೊಳಿಸಬೇಡಿ. ಕೋಪಗೊಳಿಸುವ ಮೊದಲು ಪರಿಣಾಮಗಳ ಬಗ್ಗೆ ಯೋಚಿಸಿ.
ಈ 5 ರಾಶಿಯವರು ಸಂಗಾತಿಯಾಗಿ ಸಿಕ್ಕರೆ ನಿಮ್ಮ ಅದೃಷ್ಟ ಎಂದುಕೊಳ್ಳಿ..
ಮಕರ ರಾಶಿ (Capricorn)
ಹೆಚ್ಚಿನ ಸರಣಿ ಕೊಲೆಗಾರರು ಮತ್ತು ಮನೋರೋಗಿಗಳು ಮಕರ ರಾಶಿಯವರು ಎಂದು ನಿಮಗೆ ತಿಳಿದಿದೆಯೇ? ಅವರನ್ನು ಸ್ವಯಂ ನಿಯಂತ್ರಣದ ಮಾಸ್ಟರ್ಸ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇವರು ತಮ್ಮ ಭಾವನೆಗಳ ಬಗ್ಗೆ ಅಪಾರವಾದ ಹತೋಟಿಯನ್ನು ಹೊಂದಿರುತ್ತಾರೆ. ಯಾವುದೇ ವಿಷಯದಿಂದಲೂ ಇವರು ಅಂತರವನ್ನು ಕಾಯ್ದುಕೊಳ್ಳಬಲ್ಲರು. ಹೀಗಾಗಿ ಅಪರಾಧವನ್ನು ಮಾಡಿಯೂ ಅದರ ಬಗ್ಗೆ ಪಾಪಪ್ರಜ್ಞೆ ಅಂಟಿಸಿಕೊಳ್ಳದೆ ದೂರವಿರಬಲ್ಲರು.