ಹೋಳಿ ಎಂದರೆ ಕೆಟ್ಟದ್ದರ ವಿರುದ್ಧ ಒಳಿತಿನ ಜಯ. ಈ ದಿನವನ್ನು ಭಾರತದಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ.
ಹೋಳಿ(Holi) ಹಬ್ಬದ ಬಗ್ಗೆ ಹಲವು ಪೌರಾಣಿಕ ಕತೆಗಳಿವೆ. ವಿಷ್ಣುವಿನ ಕತೆಯಿಂದ ನರಸಿಂಹನ ಕತೆಯವರೆಗೆ, ಕಾಮದೇವನ ಕತೆಯಿಂದ ರಾಧಾಕೃಷ್ಣರ ಕತೆಯವರೆಗೆ- ಸಾಕಷ್ಟು ಕತೆಗಳು ಹೋಳಿಗೆ ಸಂಬಂಧಿಸಿರುವುದನ್ನು ಕಾಣಬಗುದು. ಈ ಎಲ್ಲ ಕತೆಗಳ ಕಡೆಯ ಸಾರ- ಕೆಡುಕಿನ ವಿರುದ್ಧ ಒಳಿತಿನ ಗೆಲುವು. ಈ ಬಾರಿ ಹೋಳಿ ಮಾರ್ಚ್ 18ರಂದು ಹೋಳಿ ಆಚರಣೆ ನಡೆಯುತ್ತಿದೆ. ಮಾರ್ಚ್ 17ರಂದೇ ಕಾಮದಹನ ನಡೆಯುತ್ತದೆ. ಇದಕ್ಕೆ ಚೋಟಿ ಹೋಳಿ ಅಥವಾ ಹೋಲಿಕಾ ದಹನ(Holika Dahan) ಎಂದೂ ಕರೆಯಲಾಗುತ್ತದೆ. ಭಾರತ(India)ದಾದ್ಯಂತ ಹೋಳಿ ಸಂಭ್ರಮ ಹೆಚ್ಚೇ ಇದ್ದರೂ ಪ್ರತಿಯೊಂದು ರಾಜ್ಯ ಕೂಡಾ ತನ್ನದೇ ಆದ ರೀತಿಯಲ್ಲಿ ಇದನ್ನು ಆಚರಿಸುತ್ತದೆ. ಯಾವೆಲ್ಲ ರಾಜ್ಯದಲ್ಲಿ ಹೇಗೆಲ್ಲ ಹೋಳಿ ಆಚರಿಸಲಾಗುತ್ತದೆ ನೋಡೋಣ.
ಬಿಹಾರ(Bihar)
ಬಿಹಾರದ ಪ್ರಮುಖ ಹಬ್ಬ ಹೋಳಿ. ಹಬ್ಬದ ಹಿಂದಿನ ರಾತ್ರಿ ಹಿರಣ್ಯಕಶಿಪುವಿನ ಸಹೋದರಿ ಹೋಳಿಕಾಳನ್ನು ಬೆಂಕಿ(bonfire)ಯಲ್ಲಿ ದಹನ ಮಾಡಿ ಜನರು ಹಬ್ಬ ಆಚರಿಸುತ್ತಾರೆ. ಈ ಹಬ್ಬವನ್ನು ಭೋಜ್‌ಪುರಿ ಉಪಭಾಷೆಯಲ್ಲಿ ಫಗುವಾ(Phaguwa) ಎಂದು ಕರೆಯಲಾಗುತ್ತದೆ ಮತ್ತು ಹೋಳಿ ಹಿಂದಿನ ದಿನವನ್ನು ಫಲ್ಗುಣ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಸಂಪ್ರದಾಯದಂತೆ, ಜನರು ಹೋಲಿಕಾ ದಹನಕ್ಕೆ ಬೆರಣಿ, ಮರಗಳು, ಹೊಸ ಸುಗ್ಗಿಯ ಧಾನ್ಯಗಳನ್ನು ಸೇರಿಸುತ್ತಾರೆ.
ಮರುದಿನ ಹೋಳಿಯನ್ನು ಬಣ್ಣಗಳ ನೀರನ್ನು ಒಬ್ಬರಿಗೊಬ್ಬರು ಎರಚಿಕೊಂಡು ಬೆಳಿಗ್ಗೆ/ಮಧ್ಯಾಹ್ನದಲ್ಲಿ ಆಡಲಾಗುತ್ತದೆ. ನಂತರ ಹೋಳಿ ಮಿಲನ್ ಅನ್ನು ಪ್ರದರ್ಶಿಸಲಾಗುತ್ತದೆ. ಇಲ್ಲಿ ಜನರು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ ಮತ್ತು ಪರಸ್ಪರರ ಮುಖಕ್ಕೆ ಒಣ ಬಣ್ಣಗಳನ್ನು(dry colours) ಲೇಪಿಸುತ್ತಾರೆ.
ಕರ್ನಾಟಕ(Karnataka)
ಕರ್ನಾಟಕದಲ್ಲಿ ಹೋಳಿ ಉತ್ಸವವು ಎರಡು ದಿನಗಳ ಕಾರ್ಯಕ್ರಮವಾಗಿದ್ದು, ಜನರು ಹಬ್ಬಕ್ಕೆ ಕೆಲವು ದಿನಗಳ ಮೊದಲು ಸೌದೆಯನ್ನು ಸಂಗ್ರಹಿಸಿ 'ಕಾಮದಹನ' ರಾತ್ರಿಯಲ್ಲಿ ಸುಡುತ್ತಾರೆ. ಅನೇಕ ಮನೆಗಳು ಈ ದಿನದಂದು ವಿಶೇಷ ಭಕ್ಷ್ಯಗಳನ್ನು ಸಹ ತಯಾರಿಸುತ್ತವೆ. ರಾಜ್ಯದ ಶಿರಸಿ(Sirsi) ಭಾಗದಲ್ಲಿ ಜನರು ಹಬ್ಬಕ್ಕೆ ಐದು ದಿನಗಳ ಮೊದಲು 'ಬೇಡರ ವೇಷ' ಎಂಬ ಜಾನಪದ ನೃತ್ಯವನ್ನು ಮಾಡುತ್ತಾರೆ.
ಹೋಳಿಯನ್ನು ಯಾವ ರಾಶಿ ಹೇಗೆ ಆಚರಿಸುತ್ತದೆ ನೋಡಿ..
ಮಹಾರಾಷ್ಟ್ರ(Maharashtra)
ಮಹಾರಾಷ್ಟ್ರದಲ್ಲಿ ಹೋಳಿ ಹಬ್ಬವು ಒಂದು ವಾರದವರೆಗೆ ಇರುತ್ತದೆ. ಸಮುದಾಯದ ಯುವಕರು ಉರುವಲುಗಳನ್ನು ಸಂಗ್ರಹಿಸುತ್ತಾರೆ ಮತ್ತು 'ಶಿಮ್ಗಾ' ರಾತ್ರಿಯಂದು ನೆರೆಹೊರೆಯವರೆಲ್ಲ ಒಂದೆಡೆ ಸೇರಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹಬ್ಬಕ್ಕೆಂದು ಪ್ರತಿ ಕುಟುಂಬವೂ ಊಟ, ತಿಂಡಿ ತರುವುದು ಆಚರಣೆ. ಹೆಚ್ಚಿನವರು ಈ ದಿನ ಪುರನ್ ಪೊಲಿ(Puran Poli) ತಯಾರಿಸುತ್ತಾರೆ.
ತೆಲಂಗಾಣ(Telangana)
ಇಲ್ಲ, ಹೋಳಿ ಹಬ್ಬವನ್ನು ಕಾಮದೇವನ ದಂತಕಥೆಯೊಂದಿಗೆ ಬೆರೆಸುತ್ತಾರೆ. ಹಾಗಾಗಿ ಇದಕ್ಕೆ ಕಾಮುನಿ ಪುನ್ನಮಿ ಅಥವಾ ಕಾಮ ಪೂರ್ಣಿಮಾ ಅಥವಾ ಜಾಜಿರಿ ಎಂದೂ ಕರೆಯುತ್ತಾರೆ. ಈ ರಾಜ್ಯದಲ್ಲಿ 10 ದಿನಗಳ ಸುದೀರ್ಘ ಹಬ್ಬ ಇದಾಗಿದ್ದು, ಕೊನೆಯ ದಿನವು ಮುಖ್ಯ ಹೋಳಿ ಹಬ್ಬವಾಗಿದೆ. ಇದಕ್ಕೂ ಮುನ್ನಾದ 9 ದಿನಗಳ ಕಾಲ ಮಕ್ಕಳು ಹೋಲಿಕಾ ದಹನಕ್ಕಾಗಿ ಜನಪದ ಗೀತೆಗಳನ್ನು ಹಾಡುತ್ತಾ, ಕೋಲಾಟ ಆಡುತ್ತಾ ಹಣ(money), ಅಕ್ಕಿ, ಕಟ್ಟಿಗೆ ಸಂಗ್ರಹಿಸುತ್ತಾರೆ.
ಈ 5 ರಾಶಿಯವರು ಸಂಗಾತಿಯಾಗಿ ಸಿಕ್ಕರೆ ನಿಮ್ಮ ಅದೃಷ್ಟ ಎಂದುಕೊಳ್ಳಿ..
ಪಶ್ಚಿಮ ಬಂಗಾಳ(West Bengal)
ಪಶ್ಚಿಮ ಬಂಗಾಳದಲ್ಲಿ, ಹೋಳಿ ಹಬ್ಬವನ್ನು 'ಡೋಲ್ ಜಾತ್ರೆ' ಅಥವಾ 'ಡೋಲ್ ಪೂರ್ಣಿಮಾ' ಎಂದು ಕರೆಯಲಾಗುತ್ತದೆ. ಜನರು ಪಲ್ಲಕ್ಕಿಯ ಮೇಲೆ ರಾಧಾ ಕೃಷ್ಣನ ಪ್ರತಿಮೆಗಳನ್ನು ಇರಿಸಿ ಊರೆಲ್ಲ ಮೆರವಣಿಗೆ ಮಾಡುತ್ತಾರೆ. ಈ ಪಲ್ಲಕ್ಕಿಯ ಎದುರು ಕುಣಿಯುತ್ತಾ, ಹಾಡುತ್ತಾ ಹಬ್ಬವನ್ನು ಸಂಭ್ರಮಿಸಲಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.