Astro Planet: ನಿಮ್ಮ ಗುಣ ಸ್ವಭಾವದ ಮೇಲಿದೆ ಚಂದ್ರನ ಪ್ರಭಾವ!

By Suvarna NewsFirst Published Feb 20, 2022, 1:19 PM IST
Highlights

ಗ್ರಹಗಳಲ್ಲಿ ಚಂದ್ರಗ್ರಹವು ಅತ್ಯಂತ ಮಹತ್ವದ್ದಾಗಿದೆ. ಚಂದ್ರ ಗ್ರಹದ ಸ್ಥಿತಿಯು ಮನುಷ್ಯನ ಜೀವನದ ಮೇಲೆ ಅನೇಕ ಪ್ರಭಾವಗಳನ್ನು ಬೀರುತ್ತದೆ. ವ್ಯಕ್ತಿಯ ಜಾತಕದಲ್ಲಿ ಚಂದ್ರನ ಸ್ಥಿತಿ ಬಲವಾಗಿದ್ದರೆ, ಜೀವನದಲ್ಲಿ ಸಕಲ ಸುಖ ಸಂತೋಷಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಚಂದ್ರನ ಸ್ಥಿತಿಯಿಂದ ವ್ಯಕ್ತಿಯ ಕ್ಯಾರೆಕ್ಟರ್ ಕೂಡಾ ತಿಳಿಯಬಹುದಾಗಿದೆ.

ಒಂಭತ್ತು ಗ್ರಹಗಳಲ್ಲಿ (Planet) ಚಂದ್ರಗ್ರಹವು ಅತ್ಯಂತ ಮಹತ್ವದ ಗ್ರಹವಾಗಿದೆ. ಮನಸ್ಸಿಗೆ ಕಾರಕವಾದ ಚಂದ್ರಗ್ರಹಣ ವ್ಯಕ್ತಿಯ ಭಾವನೆಗಳ (Feeling) ನಿಯಂತ್ರಣದ (Control) ಅಧಿಪತ್ಯವನ್ನು ಹೊಂದಿದೆ. ಚಂದ್ರ (Moon) ಗ್ರಹವು ಮನಸ್ಸು, ತಾಯಿ (Mother),  ಮಾನಸಿಕ ಸ್ಥಿತಿ, ಮನೋಬಲ, ದ್ರವ್ಯ, ಯಾತ್ರೆ, ಸುಖ, ಶಾಂತಿ, ರಕ್ತ (Blood), ಎಡಗಣ್ಣು (Left eye) ಇವುಗಳ ಕಾರಕ ಗ್ರಹವಾಗಿದೆ. ರಾಶಿಯಲ್ಲಿ ನೋಡುವುದಾದರೆ ಕರ್ಕಾಟಕ ರಾಶಿಗೆ (Cancer) ಚಂದ್ರ ಗ್ರಹವೇ ಅಧಿಪತಿ ದೇವರಾಗಿದ್ದು, ನಕ್ಷತ್ರಗಳಿಗೂ ಇದೇ ಗ್ರಹ ಅಧಿಪತಿಯಾಗಿದೆ. ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ (Astrology) ವ್ಯಕ್ತಿಯ ರಾಶಿ ಭವಿಷ್ಯವನ್ನು ತಿಳಿಯಲು ವ್ಯಕ್ತಿಯ ಚಂದ್ರ ರಾಶಿಯನ್ನು ಆಧಾರವಾಗಿ ಇಟ್ಟುಕೊಳ್ಳುತ್ತಾರೆ. ಮಗುವಿನ ಜನನದ ಸಮಯದಲ್ಲಿ ಚಂದ್ರನು ಯಾವ ರಾಶಿಯಲ್ಲಿ ಸ್ಥಿತನಾಗಿರುತ್ತಾನೋ ಅದೇ ಆ ವ್ಯಕ್ತಿಯ ಚಂದ್ರ ರಾಶಿಯಾಗಿರುತ್ತದೆ. ಇದು ಆ ವ್ಯಕ್ತಿಯ ಭವಿಷ್ಯದ (Future) ಮೇಲೆ ಪರಿಣಾಮವನ್ನು (Effect) ಬೀರುತ್ತದೆ. 

ಚಂದ್ರ ಶುಭಗ್ರಹ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಒಂದು ಶುಭಗ್ರಹವಾಗಿದ್ದಾನೆ. ಸೌಮ್ಯ ಮತ್ತು ಶಾಂತಿಯುತ ಸ್ವಭಾವವನ್ನು ಚಂದ್ರಗ್ರಹ ಹೊಂದಿರುತ್ತದೆ. ಚಂದ್ರಗ್ರಹವನ್ನು ಸ್ತ್ರೀ (Women) ಗ್ರಹವೆಂದು ಸಹ ಹೇಳುತ್ತಾರೆ.

ಇದನ್ನು ಓದಿ : Aries Character Traits: ಮೇಷ ರಾಶಿಯ ಹುಡುಗ ನಿಮ್ಮವನಾದರೆ ಅವನ ಕುರಿತ ಈ 9 ವಿಷಯಗಳು ತಿಳಿದಿರಲಿ..

ಜಾತಕದಲ್ಲಿ ಚಂದ್ರನ ಸ್ಥಿತಿ ಮಹತ್ವಪೂರ್ಣ
ಯಾವುದೇ ವ್ಯಕ್ತಿಯ ಜಾತಕವನ್ನು (Horoscope) ನೋಡಿ ಚರಿತ್ರೆಯನ್ನು ತಿಳಿಯಬೇಕಾದಾಗ, ಜಾತಕದಲ್ಲಿ ಚಂದ್ರನ ಸ್ಥಿತಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚಂದ್ರಗ್ರಹವು ವ್ಯಕ್ತಿಯ ಭಾವನೆಗಳನ್ನು ಮತ್ತು ಮನಸ್ಸನ್ನು ನಿಯಂತ್ರಿಸುವ ಗ್ರಹವಾಗಿದೆ. ಚಂದ್ರಗ್ರಹವು ವೃಷಭ (Taurus) ರಾಶಿಯಲ್ಲಿ ಸ್ಥಿತವಾಗಿದ್ದರೆ ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ (Influence). ಅಷ್ಟೇ ಅಲ್ಲದೆ, ಈ ರಾಶಿಯಲ್ಲಿ ಸ್ಥಿತನಾದ ಚಂದ್ರಗ್ರಹವನ್ನು ಉಚ್ಛ ರಾಶಿಯ ಚಂದ್ರನೆಂದು ಸಹ ಕರೆಯುತ್ತಾರೆ. ವೃಷಭ ರಾಶಿಯ ಹೊರತಾಗಿ ಚಂದ್ರ ಗ್ರಹವು ಕರ್ಕಾಟಕ ರಾಶಿಯಲ್ಲಿ ಸ್ಥಿತನಾಗಿದ್ದರೂ ಸಹ ಹೆಚ್ಚು ಬಲಶಾಲಿಯಾಗಿರುತ್ತದೆ. ಏಕೆಂದರೆ ಕರ್ಕಾಟಕ ರಾಶಿಯು ಚಂದ್ರಗ್ರಹದ ಸ್ವರಾಶಿಯಾಗಿದೆ. 

ಜಾತಕದಲ್ಲಿ ಚಂದ್ರಗ್ರಹವು ಬಲವಾಗಿದ್ದರೆ, ಗ್ರಹ ಸ್ವಭಾವದಂತೆ ಮೃದು, ಸಂವೇದನಾಶೀಲತೆ, ಭಾವುಕತೆ, ಸುತ್ತ ಮುತ್ತಲಿನವರ ಜೊತೆ ಸ್ನೇಹಪೂರ್ಣ ಆಗಿರುವಂಥ (Friendship) ಸ್ವಭಾವಗಳು ಹೆಚ್ಚಿರುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸುಖ – ಸಂತೋಷಗಳನ್ನು (Happiness) ಪಡೆಯಲು ಹೆಚ್ಚಿನ ಪ್ರಯಾಸವನ್ನು ಮಾಡಬೇಕಾದ ಸ್ಥಿತಿ ಎದುರಾಗುವುದಿಲ್ಲ. ಹೇಗೆ ರಾಜನ ಹೆಂಡತಿಯಾದ ಕಾರಣಕ್ಕೆ ರಾಣಿಗೆ ಎಲ್ಲಾ ಐಶ್ವರ್ಯಗಳು ಪ್ರಾಪ್ತವಾಗುತ್ತವೆಯೋ ಹಾಗೆಯೇ ಜಗತ್ತಿನ ಸಮಸ್ತ ಐಶ್ವರ್ಯವೂ ಪ್ರಾಪ್ತವಾಗುತ್ತದೆ.

ಚಂದ್ರ ಮನಸ್ಸಿನ ಕಾರಕ ಗ್ರಹ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನನ್ನು ಮನಸ್ಸಿನ ಕಾರಕ ಗ್ರಹವೆಂದು ಹೇಳಲು ಕಾರಣವಿದೆ. ಚಂದ್ರಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ. ಚಂದ್ರನು ಕೇವಲ ಮಾನಸಿಕ ಸ್ವಾಸ್ಥ್ಯವನ್ನಷ್ಟೇ ಅಲ್ಲದೆ ಶಾರೀರಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತಾನೆ. ಚಂದ್ರನು ನೀಚ ಸ್ಥಿತಿಯಲ್ಲಿದ್ದಾಗ ಕಣ್ಣಿಗೆ ಸಂಬಂಧಿಸಿದ (Eye related) ಸಮಸ್ಯೆಗಳು ಎದುರಾಗುತ್ತದೆ. 

ಚಂದ್ರನ ಜೊತೆಯಲ್ಲಿ ಹಣವು ಜೊತೆಯಾಗಿರುತ್ತದೆ. ಯಾವ ಜಾತಕದಲ್ಲಿ ಚಂದ್ರ ಗ್ರಹವು ಉಚ್ಛ ಸ್ಥಿತಿಯಲ್ಲಿ ಇರುತ್ತದೆಯೋ ಅಂತಹ ವ್ಯಕ್ತಿಗಳಿಗೆ ಯಾವುದೇ ಮಹಾನ್ ಯೋಗವಿಲ್ಲದಿದ್ದರೂ, ಹಣಕ್ಕೆ (Money) ಯಾವುದೇ ರೀತಿಯ ಕೊರತೆಯಾಗುವುದಿಲ್ಲ. ಹಾಗಾಗಿ ಅಂತಹ ವ್ಯಕ್ತಿಗಳಿಗೆ ಬಡತನ ಕಾಡುವುದಿಲ್ಲ.

ಇದನ್ನು ಓದಿ : Relationship Tips: ಹೀಗಿದ್ದರೆ ಸತಿ ಪತಿ, ಸಂಬಂಧ ಅಧೋಗತಿ; ಇದು ಚಾಣಕ್ಯ ನೀತಿ

ನೀಚಸ್ಥಿತಿಯಲ್ಲಿದ್ದರೆ ಪರಿಹಾರವಿದು
ಚಂದ್ರನು ಬಲಗೊಳ್ಳಲು ಚಂದ್ರನಿಗೆ ಸಂಬಂಧಿಸಿದ ಸ್ಟೋನ್ (Stone), ಪರ್ಲ್ (Pearl) ಅಥವಾ ಯಂತ್ರವನ್ನು ಧರಿಸಬೇಕು. ಅಲ್ಲದೇ ತಾಯಿಯ ಸೇವೆ ಮಾಡಬೇಕು. ಅಷ್ಟೇ ಅಲ್ಲದೆ ಶ್ವೇತ ವರ್ಣದ ವಸ್ತುಗಳನ್ನು ದಾನವಾಗಿ ನೀಡಬೇಕು. ಚಂದ್ರನು ಮನಸ್ಸಿನ ಕಾರಕನಾಗಿರುವ ಕಾರಣ ವ್ಯಕ್ತಿಯ ಮನೋಭಾವನೆಗಳನ್ನು ಜಾತಕದಲ್ಲಿ ಚಂದ್ರನ ಸ್ಥಿತಿಯನ್ನು ನೋಡಿ ಹೇಳಲಾಗುತ್ತದೆ.

click me!