ಜೀವನದಲ್ಲಿ ಯಶಸ್ಸನ್ನು ಕಂಡು ಹೊಟ್ಟೆ ಉರಿದುಕೊಂಡು, ಅವರ ಏಳಿಗೆಯನ್ನು ನಾಶ ಮಾಡುವ ಸಲುವಾಗಿ ಮಾಟ ಮಂತ್ರಗಳನ್ನು ಮಾಡುತ್ತಾರೆ. ಅಂತಹ ದೃಷ್ಟ ಶಕ್ತಿಯಿಂದ ಪಾರಾಗಲು ಶಾಸ್ತ್ರ ಹೇಳುವ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ. ಅದರ ಬಗ್ಗೆ ಇನ್ನಷ್ಟು ತಿಳಿಯೋಣ...
ದೈವೀಕ ಶಕ್ತಿ ಎಲ್ಲರನ್ನು ಕಾಯುವುದು (Safeguard) ಎಷ್ಟುಎಷ್ಟು ಸತ್ಯವೋ, ಹಾಗೆಯೇ ದುಷ್ಟ ಶಕ್ತಿಯು (Evil power) ಪ್ರಭಾವ ಜನರ ಜೀವನದ (Life) ಮೇಲಾಗುವುದು ಸಹ ಅಷ್ಟೇ ಸತ್ಯ (True). ಮನೆಗೆ ದುಷ್ಟ ಶಕ್ತಿಯ ಪ್ರವೇಶವಾಗಿದೆ ಎಂಬುದನ್ನು ತಿಳಿಸುವ ಕೆಲವು ಸಂಕೇತಗಳ ಬಗ್ಗೆ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಯಶಸ್ಸಿನ (Success) ಮೆಟ್ಟಿಲು ಹತ್ತುತ್ತಾ ಹೋದಂತೆ, ಅದನ್ನು ಕಂಡು ಹೊಟ್ಟೆ ಉರಿದುಕೊಳ್ಳುವ ಜನರೂ ಹೆಚ್ಚುತ್ತಾ ಹೋಗುತ್ತಾರೆ. ಹಾಗಾಗಿ ಕೆಲವೊಮ್ಮೆ ಯಾವುದೇ ಕಾರಣವಿಲ್ಲದೇ ಸಿಟ್ಟು (Angry) ಮಾಡಿಕೊಳ್ಳುವುದು, ಪ್ರೀತಿ ಪಾತ್ರರೊಡನೆ ಭಿನ್ನಾಭಿಪ್ರಾಯಕ್ಕೆ ಗುರಿಯಾಗುವುದು, ಎಷ್ಟೇ ಬುದ್ಧಿವಂತರಾಗಿದ್ದರೂ ಓದಿನಲ್ಲಿ ಹಿಂದೆ ಬೀಳುವುದು ಹೀಗೆ ಜೀವನದಲ್ಲಿ ಮುಂದೆ ಬರಲಾಗದೆ ನಾನಾ ರೀತಿಯ ತೊಂದರೆ (Problems) ತಾಪತ್ರಯಗಳನ್ನು ಅನುಭವಿಸುವಂತಾಗುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲದೆ ಕಲಹಗಳು ಹೆಚ್ಚುವ ಪರಿಸ್ಥಿತಿ ಎದುರಾಗುತ್ತದೆ.
ಮನೆಯಲ್ಲಿ ಇಂಥ ಸ್ಥಿತಿ ನಿರ್ಮಾಣವಾಗಿದೆ ಎಂದಾದರೆ ಅದು ಕೆಟ್ಟ ದೃಷ್ಟಿ ಅಥವಾ ದುಷ್ಟ ಶಕ್ತಿಯ ಪ್ರಭಾವವಾಗಿರುತ್ತದೆ. ವ್ಯಕ್ತಿಯ ಏಳಿಗೆಯನ್ನು ಸಹಿಸದ ಕೆಲವರು ಅವರು ಜೀವನದಲ್ಲಿ ಯಶಸ್ಸಿನ ಶಿಖರವೇರಿ ಬಿಡುತ್ತಾರೆ ಎಂಬ ಹೊಟ್ಟೆ ಕಿಚ್ಚಿನಿಂದ ಮಾಟ ಮಂತ್ರದ (witchcraft) ಮೊರೆ ಹೋಗುತ್ತಾರೆ. ಅದರ ಮೂಲಕ ವ್ಯಕ್ತಿಯ ಏಳಿಗೆಯನ್ನು ಕುಂಠಿತಗೊಳಿಸಿ, ಅವರ ಸಮಸ್ಯೆಯನ್ನು ಸಂಭ್ರಮಿಸುವ ಮನಸ್ಥಿತಿ ಹೊಂದಿರುತ್ತಾರೆ.
ದುಷ್ಟ ಶಕ್ತಿಯ ಪ್ರಭಾವ (Effect) ನಿಮ್ಮ ಮೇಲಾಗುತ್ತಿದೆ ಎಂದಾದರೆ, ಸಾಲ ಬಾಧೆ, ವಿನಾಕಾರಣ ಅಸ್ವಸ್ಥರಾಗುವುದು, ಕಣ್ಣಿನ ಸಮಸ್ಯೆ ಎದುರಾಗುವುದು, ಆರೋಗ್ಯ (Health) ಸದಾ ಹದಗೆಡುವುದು, ಮನೆಯಲ್ಲಿ ಯಾವುದೇ ರೀತಿಯ ಏಳಿಗೆಯಾಗದೇ, ಯಶಸ್ಸು ಸಿಗದಿರುವುದು ಇಂಥ ಸಮಸ್ಯೆಗಳಿವೆ ಎಂದರ್ಥ.
ಇದನ್ನು ಓದಿ : Aries Character Traits: ಮೇಷ ರಾಶಿಯ ಹುಡುಗ ನಿಮ್ಮವನಾದರೆ ಅವನ ಕುರಿತ ಈ 9 ವಿಷಯಗಳು ತಿಳಿದಿರಲಿ..
ದೃಷ್ಟ ಶಕ್ತಿತಾಗುವುದು ಎಂದರೇನು?
ದೃಷ್ಟ ಶಕ್ತಿಯು ನಿಮ್ಮನ್ನು ಮಾನಸಿಕವಾಗಿ (Mentaly), ಶಾರೀರಿಕವಾಗಿ (Physicaly), ಆಧ್ಯಾತ್ಮಿಕವಾಗಿ (Spritual) ತಳಮಟ್ಟಕ್ಕೆ ದೂಡುತ್ತದೆ. ಇಂಥ ಸ್ಥಿತಿ ಎದುರಾಗಿದ್ದು ಹೆಚ್ಚಿನ ಸಮಯದವರೆಗೆ ಹಾಗೆಯೇ ಇದ್ದರೆ ಅದು ದೃಷ್ಟ ಶಕ್ತಿಯ ಪ್ರಭಾವವಾಗಿರುತ್ತದೆ ಎಂದು ಹೇಳಲಾಗುತ್ತದೆ. ಯಾವುದೋ ಶಾಪಕ್ಕೆ (Curse) ತುತ್ತಾದರೆ ಅವರ ಜೀವನ ಹೇಗೆ ಹೀನ ಸ್ಥಿತಿಗೆ ತಲುಪುತ್ತದೆಯೋ, ಹಾಗೆಯೇ ದೃಷ್ಟ ಶಕ್ತಿಯ ಪ್ರಭಾವ ವ್ಯಕ್ತಿಯ ಮೇಲೆ ಅಥವಾ ಮನೆಯ ಮೇಲೆ ಆಗಿದ್ದರೆ ಅಂತವರು ಸಂತೋಷವಾಗಿರುವುದು (Happiness) ಅಸಾಧ್ಯವಾಗುತ್ತದೆ. ಯಶಸ್ಸನ್ನು ಕಂಡು ಸಹಿಸಲಾಗದ ಜನರು ಮಾಟಮಂತ್ರವನ್ನು ಮಾಡಿಸಿ ಏಳಿಗೆ ಹೊಂದುತ್ತಿರುವವರ ಖುಷಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಾರೆ.
ಇದು ಯಾರಿಂದ ಸಾಧ್ಯವಾಗುತ್ತದೆ?
ವಾರದ ವಿಶೇಷ ದಿನಗಳಂದು ಜನಿಸಿದವರು, ಯಾರ ಮೇಲಾದರೂ ಕೆಟ್ಟದೃಷ್ಟಿ ಬೀರಿದರೆ. ಅದು ಬೇಗ ತಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಅವರಿಗೆ ಅವರ ಈ ಶಕ್ತಿಯ ಬಗ್ಗೆ ಅರಿವಿಲ್ಲದೆಯೇ ಈ ರೀತಿ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಇವರ ಕೆಟ್ಟ ಕಣ್ಣಿಗೆ ಜನರು ಬಲಿಯಾಗುತ್ತಾರೆ. ಆದರೆ ಹಲವರಿಗೆ ತಮ್ಮ ಈ ಶಕ್ತಿಯ ಬಗ್ಗೆ ಅರಿವಿರುತ್ತದೆ. ಅಂತಹವರು ಉದ್ದೇಶ ಪೂರ್ವಕವಾಗಿ ಇತರರಿಗೆ ಕೇಡನ್ನು ಉಂಟುಮಾಡಲು ಅವರ ಮೇಲೆ ಮೇಲೆ ಕೆಟ್ಟ ದೃಷ್ಟಿ ಬೀರುತ್ತಾರೆ.
ದೃಷ್ಟಶಕ್ತಿಯ ಪ್ರಭಾವದ ಬಗ್ಗೆ ಅರಿಯುವುದು ಹೇಗೆ...?
ಪ್ರಾರ್ಥನೆ (Prayer) ಮಾಡಿಕೊಂಡು ಎಣ್ಣೆಯನ್ನು (oil) ನೀರಿಗೆ (Water) ಹಾಕಿದಾಗ ಅದು ನೀರಿನೊಂದಿಗೆ ಸರಿಯಾಗಿ ಹೊಂದಿಕೊಂಡರೆ ಅದು ದೃಷ್ಟ ಶಕ್ತಿಯ ಪ್ರಭಾವ ವ್ಯಕ್ತಿಯ ಮೇಲಾಗಿದೆ ಎಂಬುದನ್ನು ತೋರಿಸುತ್ತದೆ. ಅದೇ ನೀರಿನೊಂದಿಗೆ ಎಣ್ಣೆ ಸೇರದೆ ಇದ್ದರೆ ಯಾವುದೇ ಕೆಟ್ಟ ದೃಷ್ಟಿ ತಾಗಿಲ್ಲವೆಂಬುದನ್ನು ಅರಿಯಬಹುದಾಗಿದೆ.
ಅದರಿಂದ ಪಾರಾಗುವ (safe) ಬಗೆ ಹೇಗೆ?
ದೃಷ್ಟ ಶಕ್ತಿಯ ಪ್ರಭಾವದಿಂದ ಪಾರಾಗುವುದು ಕಷ್ಟದ ವಿಷಯ. ಇದೊಂದು ಶಾಪವಿದ್ದಂತೆ. ಇದರ ಪ್ರಭಾವ ವ್ಯಕ್ತಿಯ ಮೇಲಾಗಿದೆ ಎಂಬ ವಿಚಾರ ತಿಳಿದರೆ, ತಕ್ಷಣ ಅದನ್ನು ಬಗೆಹರಿಸಿಕೊಳ್ಳುವುದು ಅವಶ್ಯಕ. ನಿರ್ಲಕ್ಷ್ಯ ಮಾಡಿದರೆ ಅದರಿಂದ ಅನೇಕ ಸಮಸ್ಯೆಗಳು, ಆರೋಗ್ಯ ತೊಂದರೆಗಳು ಎದುರಾಗುತ್ತವೆ.