Zodiac signs: ಈ ರಾಶಿಯವರಿಗೆ ಬೇರೆಯವರಷ್ಟು ನಿಷ್ಠೆ ಇರೋಲ್ಲ!

By Suvarna News  |  First Published Feb 20, 2022, 12:32 PM IST

ಪ್ರತಿಯೊಂದೂ ಸಂಬಂಧದಲ್ಲಿಯೂ ನಂಬಿಕೆ, ನಿಷ್ಠೆ, ಪ್ರೀತಿ ಗೌರವ ಈ ಎಲ್ಲಾ ಅಂಶಗಳು ಪ್ರಮುಖವಾಗಿರುತ್ತದೆ. ಆದರೆ, ನೀವು ಗಮನಿಸಿರುವ ಹಾಗೆ ಕೆಲವು ಜನರಿಗೆ ನೀವು ಎಷ್ಟೇ ಒಳಿತನ್ನು ಬಯಸಿದರೂ ಅವರು ನಿಮಗೆ ನಿಷ್ಠೆ ತೋರುವುದಿಲ್ಲ. ಅದಕ್ಕೆ ಅವರ ರಾಶಿ ಕಾರಣವಾಗಿರಬಹುದು. 


ನಿಷ್ಠಾವಂತರಾಗಿ (Loyalty ) ಇರುವ ವ್ಯಕ್ತಿಗಳ ಮೇಲೆ ಬಹುಬೇಗ ನಂಬಿಕೆ (Trust ) ಇರಿಸಬಹುದು. ಆದರೆ, ಕೆಲವು ಜನರು ನೀವು ಅವರಿಗೆ ಎಷ್ಟು ಸಹಾಯ ಮಾಡಿದರು ಅದಕ್ಕೆ ಬದಲಾಗಿ ಅವರು ನಿಷ್ಠೆ ತೋರಿಸುವುದಿಲ್ಲ. ಅವರಿಗೆ ಬೇರೆಲ್ಲ ವಿಷಯಗಳಿಗಿಂತ ಅವರ ಸ್ವಾರ್ಥವೇ ಹೆಚ್ಚಾಗಿರುತ್ತದೆ ಈ ಕೆಲವು ರಾಶಿಯನ್ನು ಹೊಂದಿರುವ ಜನರಲ್ಲಿ ನಿಷ್ಠೆ ಬಹಳ ಕಡಿಮೆ ಇರುತ್ತದೆ. ಇಂತಹ ಜನರ ಸಹವಾಸ ಮಾಡುವಾಗ ಎಚ್ಚರವಹಿಸಿ. ಜ್ಯೋತಿಷ್ಯದ ಪ್ರಕಾರ ಈ ಕೆಲವು ರಾಶಿಯವರಲ್ಲಿ ನಿಷ್ಠೆ ಬಹಳ ಕಡಿಮೆ ಇರುತ್ತದೆ. ಅವರು ತಮ್ಮ ಕೆಲಸಗಳು ಸರಾಗವಾಗಿ ಮುಗಿಯಬೇಕು ಎಂಬುದನ್ನು ಮಾತ್ರ ಯೋಚಿಸುತ್ತಾರೆ. ನೀವು ಇವರಿಗೆ ಎಷ್ಟೇ ಒಳಿತು ಬಯಸಿದರು ಅವರಿಂದ ಏನನ್ನೂ ಅಪೇಕ್ಷಿಸಬೇಡಿ (Expectation)..

 ಮೇಷ ರಾಶಿ (Aries)
ಮೇಷ ರಾಶಿಯನ್ನು ಹೊಂದಿರುವ ಜನರು ಸ್ವಾರ್ಥ ಮನೋಭಾವವನ್ನು ಹೊಂದಿರುತ್ತಾರೆ. ತಾವಾಯಿತು ತಮ್ಮ ಕೆಲಸವಾಯಿತು ಎಂಬುದನ್ನು ಮಾತ್ರ ಯೋಚಿಸುತ್ತಾರೆ. ಇವರ ಕೆಲಸಗಳಿಂದ ಇತರರಿಗೆ ಹಾನಿಯಾಗಬಹುದು (Problem) ಎಂಬ ಯಾವುದೇ ಚಿಂತೆ ಇವರಿಗಿರುವುದಿಲ್ಲ. ನೀವು ಇವರಿಗಾಗಿ ಎಷ್ಟೇ ತೊಂದರೆಗಳನ್ನು ತೆಗೆದುಕೊಂಡು ಸಹಾಯ (Help) ಮಾಡಿದ್ದರೂ ಕೂಡ ಇವರು ಅದ್ಯಾವುದನ್ನೂ ನೆನಪಿಟ್ಟುಕೊಳ್ಳುವುದಿಲ್ಲ. ಇವರಿಗೆ ಯಾವುದೇ ಸಮಯದಲ್ಲಿ ನಿಮಗೆ ದ್ರೋಹ (Betray) ಮಾಡಬಹುದು.

ದುಷ್ಟ ಶಕ್ತಿಯಿಂದ ಪಾರಾಗುವುದಕ್ಕೆ ಇಲ್ಲಿದೆ ಉಪಾಯ!

Tap to resize

Latest Videos

undefined

 ಮಕರ ರಾಶಿ (Capricorn)
ಮಕರ ರಾಶಿಯ ಜನರು ಕೂಡ ಬೇರೆಯವರಿಗೆ ದ್ರೋಹ ಬಯಸುವ ಬಗ್ಗೆ ಯಾವುದೇ ಮರು ಯೋಚನೆ ಮಾಡುವುದಿಲ್ಲ.  ತಮಗೆ ಬೇಕಾದದ್ದನ್ನು ಸಾಧಿಸಲು ಎಂತಹ ದಾರಿಯನ್ನು ಬೇಕಾದರೂ ಹಿಡಿಯುತ್ತಾರೆ. ತಮ್ಮ ಕುಟುಂಬ (Family) ಹಾಗೂ ಸ್ನೇಹಿತರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಯ ಬಗ್ಗೆ ಇವರಿಗೆ ಯೋಚನೆ ಇರುವುದಿಲ್ಲ. ಇಂತಹ ಜನರೊಂದಿಗೆ ಸ್ನೇಹ (Friendship )ಬೆಳೆಸಿಕೊಂಡಿದ್ದರೆ ಇವರಿಂದ ಯಾವುದೇ ಸಹಾಯವನ್ನು ಅಪೇಕ್ಷಿಸಬೇಡಿ.

 ವೃಶ್ಚಿಕ ರಾಶಿ (Scorpio)
ಇವರು ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣಿಸಿಕೊಳ್ಳುತ್ತಾರೆ. ಆದರೆ, ಒಳಗೆ ಬೇರೆಯದೇ ವ್ಯಕ್ತಿತ್ವ ಹೊಂದಿರುತ್ತಾರೆ. ಇಂತಹ ಜನರ ಮೇಲೆ ನಂಬಿಕೆ (Trust ) ಇಡುವ ಮುನ್ನ ಸರಿಯಾಗಿ ಯೋಚನೆ ಮಾಡಿ ನಿರ್ಧರಿಸಿ. ತಮ್ಮ ಕೆಲಸಗಳಿಗೆ ಗೋಸ್ಕರ ಬೇರೆಯವರನ್ನು ಉಪಯೋಗಿಸಿಕೊಳ್ಳುತ್ತಾರೆ (Use). ಇವರು ಕೂಡ ತಮ್ಮ ಸ್ನೇಹ ಬಳಗ (Friends Group) ಹಾಗೂ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಯೊಂದಿಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಳ್ಳುವುದಿಲ್ಲ. ಇವರು ಯಾರನ್ನು ತಮ್ಮ ಸ್ನೇಹಿತರೆಂದು ಭಾವಿಸಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ.
Extramarital affair: ಈ ರಾಶಿಯವರು ದಾಂಪತ್ಯದಾಚೆಗೂ ಜಿಗಿಯಬಲ್ಲರು, ಹುಷಾರಾಗಿರಿ!

 ವೃಷಭ ರಾಶಿ (Taurus)
ಈ ರಾಶಿಯನ್ನು ಹೊಂದಿರುವ ಜನರು ಹುಚ್ಚು ದುಡ್ಡಿಗೆ (Money )ಆದ್ಯತೆ ನೀಡುತ್ತಾರೆ. ಇವರು ಕೂಡ ತಮ್ಮ ಇಚ್ಛೆಯಂತೆ ಬದುಕಲು (Live) ಬಯಸುತ್ತಾರೆ. ಇದರಿಂದಾಗಿ ಬೇರೆ ಯಾರಿಗೆ ಯಾವುದೇ ರೀತಿಯ ಹನಿಯಾದರೂ ಅದರ ಜವಾಬ್ದಾರಿ (Responsibility) ತೆಗೆದುಕೊಳ್ಳುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಇಂತಹ ಕೆಲಸಕ್ಕಾದರೂ ಸಿದ್ದರಿರುತ್ತಾರೆ. ಇವರು ಅವರಿಗೆ ನಿಷ್ಠೆಯಿಂದ ಇರಬೇಕು ಅನಿಸಿದಾಗ ಮಾತ್ರ ತೋರಿಸುತ್ತಾರೆ. ಇಲ್ಲವಾದರೆ ಎಂತಹದೇ ಸಂದರ್ಭವಾದರೂ ನಿಷ್ಠೆ ಕುರಿತು ಯೋಚಿಸುವುದಿಲ್ಲ.  

ನೀವು ಯಾವ ವ್ಯಕ್ತಿಯೊಂದಿಗೆ ಸ್ನೇಹ ಮಾಡುತ್ತಿದ್ದೀರಾ ಅವರ ಬಗ್ಗೆ ಸ್ವಲ್ಪ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿ. ಇಲ್ಲವಾದರೆ ನೀವು ಅವರ ಮೇಲೆ ಇರಿಸಿರುವ ನಂಬಿಕೆಗೆ ಮೋಸವಾಗಬಹುದು. ನೀನು ಒಬ್ಬರನ್ನು ನಂಬಿದ್ದೇವೆ ಎಂದ ಮಾತ್ರಕ್ಕೆ ಅವರು ಕೂಡ ನಿಮಗೆ ನಿಷ್ಠೆ ತೋರುತ್ತಾರೆ ಎಂಬ ಊಹೆ ಇಟ್ಟುಕೊಳ್ಳುವುದರಿಂದ ಮುಂದೆ ನಿಮಗೆ ನೋವಾಗಬಹುದು. ಹಾಗೂ ಈ ಎಲ್ಲಾ ಗುಣಗಳು ಅವರಿಗೆ ಅವರ ರಾಶಿಯಿಂದಾಗಿ ಬಂದಿರಬಹುದು.

click me!