ಚಂದ್ರ-ಬುಧ ಸಂಯೋಗ: ಜುಲೈನಲ್ಲಿ ಈ ಮೂರು ರಾಶಿಯವರಿಗೆ ಸಂಕಷ್ಟ..!

By Sushma Hegde  |  First Published Jul 14, 2023, 12:13 PM IST

ಬುಧ-ಚಂದ್ರ ಸಂಯೋಗಕ್ಕೆ ವಿಶೇಷ ಮಹತ್ವವಿದ್ದು, ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾಗಿ ಕೆಲವು ರಾಶಿಯವರು ತುಂಬಾ ಜಾಗರೂಕರಾಗಿರಬೇಕು. ಈ ಕುರಿತು ಇಲ್ಲಿದೆ ಮಾಹಿತಿ.


ಬುಧ-ಚಂದ್ರ ಸಂಯೋಗಕ್ಕೆ ವಿಶೇಷ ಮಹತ್ವವಿದ್ದು, ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ನಕಾರಾತ್ಮಕ (Negative)  ಪರಿಣಾಮ ಬೀರಬಹುದು. ಹಾಗಾಗಿ ಕೆಲವು ರಾಶಿಯವರು ತುಂಬಾ ಜಾಗರೂಕರಾಗಿರಬೇಕು. ಈ ಕುರಿತು ಇಲ್ಲಿದೆ ಮಾಹಿತಿ.

ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಇತರ ಗ್ರಹಗಳೊಂದಿಗೆ ಬುಧನ ಸಂಯೋಗವು ಶುಭ- ಅಶುಭಫಲಗಳನ್ನು ನೀಡುತ್ತದೆ. ಅದೇ ರೀತಿ ಜುಲೈ 17ರಂದು ಚಂದ್ರ ಮತ್ತು ಬುಧದ ಸಂಯೋಗ ಆಗಲಿದ್ದು, ಈ ಎರಡು ಗ್ರಹಗಳ ಸಂಯೋಗವು ಎಲ್ಲಾ 12 ರಾಶಿಚಕ್ರ (12 Zodiac) ಗಳ ಮೇಲೆ ಪರಿಣಾಮ ಬೀರುತ್ತದೆ. 

Tap to resize

Latest Videos

ಬುಧವು ಪ್ರಸ್ತುತ ಕಟಕ ರಾಶಿಯಲ್ಲಿ ಸಾಗುತ್ತಿದೆ. ಮತ್ತು ಚಂದ್ರನು 17 ಜುಲೈ 2023 ರಂದು ಅದೇ ರಾಶಿಗೆ ಚಲಿಸುತ್ತಾನೆ. ಚಂದ್ರನು ಕಟಕ ರಾಶಿಗೆ ಪ್ರವೇಶಿಸಿದ ತಕ್ಷಣ, ರಾತ್ರಿ 10.31ಕ್ಕೆ ಈ ಎರಡು ಗ್ರಹಗಳ ಸಂಯೋಗವು ರೂಪಗೊಳ್ಳುತ್ತದೆ. ಬುಧ-ಚಂದ್ರ ಸಂಯೋಗದ ಸಮಯದಲ್ಲಿ ಯಾವ ರಾಶಿಚಕ್ರದ ಚಿಹ್ನೆಗಳು ಎಚ್ಚರವಾಗಿರಬೇಕು ಎಂದು ತಿಳಿಯಿರಿ. 

ಮೇಷ ರಾಶಿ ( Aries ) 

ಚಂದ್ರ ಮತ್ತು ಬುಧ ಸಂಯೋಗದ ಪ್ರಭಾವದಿಂದ ಮೇಷ ರಾಶಿಯ ವ್ಯಕ್ತಿಗಳು ಸುಂದರವಾಗಬಹುದು. ಈ ರಾಶಿಯವರು ಸ್ವಭಾವತಹ ಸೌಮ್ಯವಾಗಿರಬಹುದು, ಇವರು ಉತ್ತಮ ಶಿಕ್ಷಣ ಮತ್ತು ಉತ್ತಮ ಮೌಖಿಕ ಸಾಮರ್ಥ್ಯವನ್ನು ಹೊಂದಿರಬಹುದು. ಹಾಗೇ ಈ ರಾಶಿಯವರು ಆರೋಪ (Accusation) ಗಳಿಂದ ಬಳಲುವ ಸಾಧ್ಯತೆ ಇದೆ. ಇವರು ಚಂದ್ರ ಮತ್ತು ಬುಧ ಸಂಯೋಗದ ಪ್ರಭಾವದಿಂದ ಮೋಸ ಹೋಗಬಹುದು.

ಇಸ್ಕಾನ್‌ನಿಂದ ಅಮೋಘ್ ಲೀಲಾ ದಾಸ್ ನಿಷೇಧ? ಯಾರು ಈ 'ಹರೇ ಕೃಷ್ಣ ಬ್ರಹ್ಮಚಾರಿ'?

 

ಮಿಥುನ ರಾಶಿ (Gemini  ) 

ಮಿಥುನ ರಾಶಿಯವರಿಗೆ ಚಂದ್ರ ಎರಡನೇ ಮನೆಯ ಅಧಿಪತಿ ಮತ್ತು ಬುಧ ಮೊದಲ ಮನೆ ಮತ್ತು ನಾಲ್ಕನೇ ಮನೆಯ ಅಧಿಪತಿ. 2 ನೇ ಮನೆಯಲ್ಲಿ ಚಂದ್ರ ಮತ್ತು ಬುಧ ಸಂಗೋಗವು  ಇವರಿಗೆ ಮಾತಿನಲ್ಲಿ ಬುದ್ಧಿವಂತಿಕೆ ತರಬಹುದು. ಈ ಸಮಯದಲ್ಲಿ, ವ್ಯಕ್ತಿಯು ಸೃಜನಾತ್ಮಕವಾಗಿರಬಹುದು. ಆದರೆ ಅವರ ಆರ್ಥಿಕ ಸ್ಥಿತಿ  (Financial status) ಅಸ್ಥಿರವಾಗಿರಬಹುದು. ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ಸಹಾಯ ಪಡೆಯಬಹುದು. ಮಾನಸಿಕ ಒತ್ತಡ ಮತ್ತು ಚಂಚಲ ಮನಸ್ಸಿನಿಂದ ಬಳಲಬಹುದು.

ಸಿಂಹ ರಾಶಿ (Leo) 

ಸಿಂಹ ರಾಶಿಯವರಿಗೆ 12ನೇ ಮನೆಯ ಅಧಿಪತಿ ಚಂದ್ರ ಮತ್ತು 2ನೇ ಮತ್ತು 11ನೇ ಮನೆಯ ಅಧಿಪತಿ ಬುಧ. 12ನೇ ಮನೆಯಲ್ಲಿ ಚಂದ್ರ ಮತ್ತು ಬುಧ ಸಂಯೋಗವು ಇವರಿಗೆ ನಗುವನ್ನು ನೀಡುತ್ತದೆ. ಈ ಅವಧಿಯಲ್ಲಿ ಇವರು ಉತ್ತಮ ಭಾಷಣಕಾರರಾಗಬಹುದು. ನಿಮ್ಮ ಅಧ್ಯಯನದಲ್ಲಿ ನೀವು ತೊಂದರೆಗಳನ್ನು ಎದುರಿಸಬಹುದು. ಮತ್ತು ನಿಮ್ಮ ಖರ್ಚುಗಳು ನಿಮ್ಮ ಗಳಿಕೆಯನ್ನು ಮೀರಬಹುದು. ನೀವು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಈ ರಾಶಿಯವರು ವ್ಯವಹಾರದಲ್ಲಿ ಆರ್ಥಿಕ ಸಮಸ್ಯೆ (Financial problem) ಗಳನ್ನು ಎದುರಿಸಬೇಕಾಗಬಹುದು.

ಇದು ಫ್ಯಾಷನ್ ಅಲ್ಲ; ಈ 2 ರಾಶಿಯವರು ಕಪ್ಪು ದಾರ ಕಟ್ಟಿಕೊಂಡ್ರೆ ಡೇಂಜರ್..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!