ಇಂದು ಶುಕ್ರವಾರ; ನೀವು 'ಹೀಗೆ' ಮಾಡಿದರೆ ಲಕ್ಷ್ಮಿಯೇ ನಿಮ್ಮ ಮನೆಗೆ ಬರುತ್ತಾಳೆ..!

By Sushma Hegde  |  First Published Jul 14, 2023, 9:48 AM IST

ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಹಾಗೆಯೇ ಶುಕ್ರವಾರವು ಲಕ್ಷ್ಮಿ ದೇವಿಯ ದಿನವಾಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.


ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಹಾಗೆಯೇ ಶುಕ್ರವಾರವು ಲಕ್ಷ್ಮಿ ದೇವಿಯ ದಿನವಾಗಿದೆ. ಈ ದಿನ ಲಕ್ಷ್ಮಿ ದೇವಿ (lakshmi ) ಯನ್ನು ಮೆಚ್ಚಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಶುಕ್ರವಾರ (friday) ದಂದು ಲಕ್ಷ್ಮಿ ದೇವಿಯನ್ನು ಆಚರಣೆಗಳೊಂದಿಗೆ ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಹಾಗೂ ಎಲ್ಲಾ ರೀತಿಯ ಅಡೆತಡೆಗಳು ದೂರಾಗುತ್ತವೆ ಎಂಬ ನಂಬಿಕೆ ಇದೆ. 

Tap to resize

Latest Videos

ಧಾರ್ಮಿಕ ನಂಬಿಕೆ (Religious belief) ಯ ಪ್ರಕಾರ ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ವಿಧಿ ವಿಧಾನ (Ritual method) ಗಳ ಮೂಲಕ ಪೂಜಿಸಬೇಕು. ಲಕ್ಷ್ಮಿಯನ್ನು ಸಂಪತ್ತಿನ ದೇವತೆ  (Goddess of wealth) ಎಂದೂ ಕರೆಯುತ್ತಾರೆ. ಲಕ್ಷ್ಮಿಯ ಆಶೀರ್ವಾದ ಪಡೆದವನು ತನ್ನ ಜೀವನದಲ್ಲಿ ಯಾವುದೇ ಆರ್ಥಿಕ ಸಮಸ್ಯೆ (Financial problem) ಯನ್ನು ಎದುರಿಸಬೇಕಾಗಿಲ್ಲ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶುಕ್ರವಾರದಂದು ಈ 4 ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಪರಿಹಾರವನ್ನು ಮಾಡುವುದರಿಂದ ಲಕ್ಷ್ಮಿಯ ವಿಶೇಷ ಕೃಪೆ ಸಿಗಲಿದೆ.

ದೇವಿಗೆ ಕೆಂಪು ಬಟ್ಟೆಯನ್ನು ಅರ್ಪಿಸಿ

ಧಾರ್ಮಿಕ ನಂಬಿಕೆಯ ಪ್ರಕಾರ ಶುಕ್ರವಾರದಂದು ದೇವಿಗೆ ಕೆಂಪು ಬಣ್ಣದ ವಸ್ತ್ರ (Red dress) ಗಳನ್ನು ಅರ್ಪಿಸಬೇಕು. ಹಾಗೂ ನೀವು ದೇವಿಗೆ ಧೂಪವನ್ನು ಸಹ ಅರ್ಪಿಸಬಹುದು. ಹೀಗೆ ಮಾಡುವುದರಿಂದ ಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಿ ಆರ್ಥಿಕ ಸಮಸ್ಯೆ (Financial problem) ಗಳು ದೂರವಾಗುತ್ತವೆ.
 
ಲಕ್ಷ್ಮಿಗೆ ಹೂವುಗಳನ್ನು ಅರ್ಪಿಸಿ

ಶುಕ್ರವಾರದಂದು ಲಕ್ಷ್ಮಿ ದೇವಿಗೆ ಹೂವುಗಳನ್ನು ಅರ್ಪಿಸಬೇಕು . ಸಾಧ್ಯವಾದರೆ, ದೇವಿಗೆ ಕೆಂಪು ಹೂವು (red flower) ಗಳನ್ನು ಅರ್ಪಿಸಬೇಕು. ಮತ್ತು ವಿಷ್ಣುವಿನ ಪೂಜೆ ಮಾಡಬೇಕು. ಶುಕ್ರವಾರದಂದು ಸಂಪತ್ತಿಗಾಗಿ ವಿಷ್ಣು (Vishnu) ವನ್ನು ಪೂಜಿಸಬೇಕು. ವಿಷ್ಣುವನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಪ್ರತಿ ಶುಕ್ರವಾರದಂದು ಲಕ್ಷ್ಮಿ ಮತ್ತು ವಿಷ್ಣು ದೇವಿಯನ್ನು ಪೂಜಿಸಬೇಕು.

ದೇವರಾಗಿಬಿಟ್ಟರು ಬಾಲಿವುಡ್ ನಟ-ನಟಿಯರು;ಕೋಟಿಯಲ್ಲಿ ಹಣ ಪಡೆದರೂ ಫ್ಲಾಪ್ ಯಾಕೆ?

ಪಾಯಸ ಮಾಡಿ ಅರ್ಪಿಸಿ

ಶುಕ್ರವಾರದಂದು ಭಗವಾನ್ ಲಕ್ಷ್ಮೀನಾರಾಯಣ ಮತ್ತು ಲಕ್ಷ್ಮಿ ದೇವಿಗೆ ಪಾಯಸ (Payas) ವನ್ನು ಅರ್ಪಿಸಿ. ಈ ಪರಿಹಾರವನ್ನು ಮಾಡುವುದರಿಂದ ಮಂಗಳಕರ ಫಲಿತಾಂಶಗಳು ಮತ್ತು ಲಾಭ (profit) ಗಳು ಸಿಗುತ್ತವೆ.

ಉಪವಾಸ ಮಾಡಿ 

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ನೀವು ಶುಕ್ರವಾರದಂದು ಉಪವಾಸ  (fasting) ಮಾಡಬಹುದು. ನೀವು ಸತತ 21 ಶುಕ್ರವಾರದವರೆಗೆ ಈ ಪರಿಹಾರವನ್ನು ಮಾಡಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ (ಜ್ಯೋತಿಷ್ಯ ಶಾಸ್ತ್ರ) . ಇದನ್ನು ಮಾಡುವುದರಿಂದ ಎಲ್ಲಾ ಕಷ್ಟಗಳು ದೂರಾಗಿ, ಇಷ್ಟಾರ್ಥಗಳು ಈಡೇರುತ್ತವೆ.

ಇದು ಫ್ಯಾಷನ್ ಅಲ್ಲ; ಈ 2 ರಾಶಿಯವರು ಕಪ್ಪು ದಾರ ಕಟ್ಟಿಕೊಂಡ್ರೆ ಡೇಂಜರ್..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!