ಅಯೋಧ್ಯೆ ಎಂದರೆ ರಾಮನ ನಗರ. ಇಲ್ಲಿನ ದೇವಸ್ಥಾನಕ್ಕೆ ಪ್ರತಿದಿನ ಯಾರೂ ಇಲ್ಲದಾಗ ಭೇಟಿ ನೀಡುವ ಕೋತಿಯೊಂದು ದೇವರಿಗೆ ಅಡ್ಡ ಬಿದ್ದು ನಮಸ್ಕರಿಸುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಪ್ರಾಣಿ ಪ್ರಪಂಚದ ಅತ್ಯಂತ ಆಕರ್ಷಕ ಜೀವಿಗಳಲ್ಲಿ ಕೋತಿಗಳು ಪ್ರಮುಖ ಸ್ಥಾನ ಹೊಂದಿವೆ. ಸಂಶೋಧಕರು ಮತ್ತು ಪ್ರಾಣಿ ಉತ್ಸಾಹಿಗಳು ಮಂಗಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ ಏಕೆಂದರೆ ಅವುಗಳು ಸುಧಾರಿತ ಸಾಮಾಜಿಕ ಸಂವಹನ ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರುವ ಬುದ್ಧಿವಂತ ಪ್ರಾಣಿಗಳಾಗಿವೆ. ಮನುಷ್ಯರಿಗೆ ಹಲವು ಹೋಲಿಕೆಯುಳ್ಳ ಕೋತಿಗೆ ದೇವರ ಸ್ಥಾನವೂ ಇದೆ. ರಾಮಭಕ್ತನಾಗಿ ಮೆರೆದ ಹನುಮಂತನಿಗೆ ಜಗತ್ತಿನಾದ್ಯಂತ ಹಲವು ಭಕ್ತರಿದ್ದಾರೆ.
ಅಯೋಧ್ಯೆ ಎಂದರೆ ರಾಮನಗರಿ. ರಾಮ ಎಂದರೆ ಜೊತೆಗೆಯೇ ಆಂಜನೇಯನೂ ನೆನಪಾಗುತ್ತಾನೆ. ರಾಮನ ಮೇಲೆ ಅಪರಿಮಿತ ಭಕ್ತಿಯುಳ್ಳವನು ಹನುಮಂತ. ಭಕ್ತಿಗೆ ಇನ್ನೊಂದು ಹೆಸರು ಆತ. ಇದೀಗ ಇಂಥಾ ಅಯೋಧ್ಯೆಯಲ್ಲಿ ಅಚ್ಚರಿ ಹುಟ್ಟಿಸುವ ವಿದ್ಯಮಾನವೊಂದು ನಡೆಯುತ್ತಿದೆ. ಕೋತಿಯೊಂದು ಪವಿತ್ರ ನಗರವಾದ ಅಯೋಧ್ಯೆಯ ದೇವಸ್ಥಾನವೊಂದಕ್ಕೆ ಪ್ರತಿ ದಿನ ಯಾರೂ ಇಲ್ಲದಾಗ ಭೇಟಿ ನೀಡಿ ದೇವರಿಗೆ ನಮಸ್ಕರಿಸುವ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಇದು ಹಳೆಯ ವಿಡಿಯೋವಾಗಿದ್ದರೆ ಮತ್ತೆ ಓಡುತ್ತಿದ್ದು, ನೆಟ್ಟಿಗರ ಹೃದಯ ಗೆಲ್ಲುತ್ತಿದೆ.
ಈ ಕ್ಲಿಪ್ ಅನ್ನು ಸಾಮಾಜಿಕ ಬಳಕೆದಾರ ಸಾತ್ವಿಕ್ ಸೋಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು ಇಲ್ಲಿಯವರೆಗೆ 316,000 ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋದಲ್ಲಿ ಕೋತಿಯು ರಾತ್ರಿ ವೇಳೆ ದೇವಾಲಯಕ್ಕೆ ಬರುತ್ತದೆ. ಕೋತಿಯು ಮೆಟ್ಟಿಲು ಏರುವಾಗ ಒಮ್ಮೆ ನಮಸ್ಕರಿಸುತ್ತದೆ. ನಂತರ ದೇವರ ಗುಡಿಯ ಎದುರು ಹೋಗಿ ಭಕ್ತಿಯಿಂದ ನಮಸ್ಕರಿಸುವುದನ್ನು ಕಾಣಬಹುದಾಗಿದೆ.
This happens in Ayodhya every night when nobody is around pic.twitter.com/mTczR3Xx6S
— Satviksoul 🇮🇳I stand with Modiji (@satviksoul)ವಿಡಿಯೋ ಮಾಡಿದ ವ್ಯಕ್ತಿಯ ಪ್ರಕಾರ, ಕೋತಿ ಪ್ರತಿದಿನ ತಡರಾತ್ರಿ ದೇವಸ್ಥಾನಕ್ಕೆ ಬರುತ್ತದೆ. ಕೋತಿಯು ದೇವರ ಆಶೀರ್ವಾದವನ್ನು ಪಡೆಯಲು ಮೆಟ್ಟಿಲುಗಳನ್ನು ಏರುತ್ತದೆ ಮತ್ತು ನಮಸ್ಕರಿಸುವುದನ್ನು ನೋಡುವುದು ನಿಜವಾಗಿಯೂ ಅದ್ಭುತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೋಗೆ ನೆಟಿಜನ್‌ಗಳು ತಮ್ಮ ಸಿಹಿ ಪ್ರತಿಕ್ರಿಯೆಯೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ.
Ugadi 2023: ನವವರ್ಷವು ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಡಿಪಿ ಮಹಾಪಾತ್ರ ಎಂಬವರು ಈ ವಿಡಿಯೋಗೆ ಪ್ರತಿಕ್ರಿಯಿಸಿ, 'ಅದ್ಭುತ್!! 🙏🏼 ಜೈ ಶ್ರೀ ರಾಮ್ 🙏🏼 ಹರ ಹರ ಮಹಾದೇವ್ 🙏🏼 ಓಡಿಯಾ ಮತ್ತು ಜಗನ್ನಾಥನ ಕಟ್ಟಾ ಅನುಯಾಯಿಯಾಗಿರುವುದರಿಂದ .. ನಾನು ಈ ರೀತಿಯ ಅನನ್ಯ ಬಾಂಧವ್ಯವನ್ನು ಬಲ್ಲೆ. ಭಗವಾನ್ ಹನುಮಂತನು ಸ್ವತಃ ದೇವಸ್ಥಾನಕ್ಕೆ ಭೇಟಿ ನೀಡಿ ಜಗನ್ನಾಥನನ್ನು ಭೇಟಿಯಾಗುವುದರಿಂದ ರಾತ್ರಿಯಲ್ಲಿ ಪುರಿ ಎಲ್ಲರಿಗೂ ಹತ್ತಿರವಾಗಿರುತ್ತದೆ ಎಂದು ಹೇಳಲಾಗುತ್ತದೆ,' ಎಂದು ಪ್ರತಿಕ್ರಿಯಿಸಿದ್ದಾರೆ.
ಉಳಿದಂತೆ ನೆಟಿಜನ್‌ಗಳು, ಅತಿ ಅತಿ ಸುಂದರ್, ಅತ್ಯದ್ಭುತ, ಭಕ್ತಿಯ ರೂಪ ಎಂದೆಲ್ಲ ವಿಡಿಯೋವನ್ನು ಬಣ್ಣಿಸಿದ್ದಾರೆ.