ವಾರಂಗಲ್ ಭದ್ರಕಾಳಿಗೆ ಮೋದಿ ಪೂಜೆ; ಆ ಶಕ್ತಿದೇವಿಯ ಮಹತ್ವ ಗೊತ್ತಾ..?

By Sushma HegdeFirst Published Jul 8, 2023, 5:34 PM IST
Highlights

ತೆಲಂಗಾಣದ ವಾರಂಗಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಅಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಹಾಗೂ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹಸುವಿಗೆ ಹುಲ್ಲು ತಿನ್ನಿಸಿದ್ದಾರೆ. ಮೋದಿ ಭೇಟಿ ನೀಡಿದ ಭದ್ರಕಾಳಿ ದೇವಸ್ಥಾನವು ತುಂಬಾ ಪ್ರಸಿದ್ಧಿ ಹಾಗೂ ಪುರಾತನ ದೇಗುಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ತೆಲಂಗಾಣದ ವಾರಂಗಲ್‌ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದ್ದು, ಅಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಹಾಗೂ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹಸುವಿಗೆ ಹುಲ್ಲು ತಿನ್ನಿಸಿದ್ದಾರೆ. ಮೋದಿ ಭೇಟಿ ನೀಡಿದ ಭದ್ರಕಾಳಿ ದೇವಸ್ಥಾನವು ತುಂಬಾ ಪ್ರಸಿದ್ಧಿ ಹಾಗೂ ಪುರಾತನ ದೇಗುಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ವಾರಂಗಲ್‌ ( Warangal)  ಭದ್ರಕಾಳಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಮೋ ಭೇಟಿ ನೀಡಿದ ಈ ದೇವಸ್ಥಾನವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದ್ದು, ಇಲ್ಲಿ ಭದ್ರಕಾಳಿಯು ಶಕ್ತಿ ದೇವತೆಯಾಗಿ ನೆಲೆ ನಿಂತಿದ್ದಾಳೆ. ಈ ದೇವಾಲಯ (Temple) ದ ಇತಿಹಾಸ ಹಾಗೂ ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

Latest Videos

ಚಾಲುಕ್ಯರ ಕಾಲದ ಪುರಾತನ ದೇವಾಲಯ

ವಾರಂಗಲ್‌ ಭದ್ರಕಾಳಿ ದೇವಸ್ಥಾನವು ಭಾರತದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ವಾರಂಗಲ್ ಮತ್ತು ಹನಮಕೊಂಡ ನಗರಗಳ ನಡುವೆ ಸರೋವರ (lake) ದ ಪಕ್ಕದಲ್ಲಿ ಬೆಟ್ಟದ ಮೇಲೆ ಭದ್ರಕಾಳಿ ನೆಲೆನಿಂತಿದ್ದಾಳೆ. ಇದು ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾದ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಅತ್ಯಂತ ಜನಪ್ರಿಯ (popular) ದೇವಾಲಯಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.

ಐತಿಹಾಸಿಕ ಪ್ರಾಮುಖ್ಯತೆ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ದೇವಾಲಯದ ಸುತ್ತಲಿನ ನೈಸರ್ಗಿಕ ಬಂಡೆಗಳ ರಚನೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ದೇವಾಲಯದಲ್ಲಿ ಮುಖ್ಯ ದೇವತೆ ಭದ್ರಕಾಳಿಯು ಕುಳಿತಿರುವ ಭಂಗಿಯಲ್ಲಿ  ಇದ್ದಾಳೆ. ಉಗ್ರವಾದ ಸಿಂಹದ ಪ್ರತಿಮೆಯನ್ನು ದೇವಾಲಯದ ಗರ್ಭಗುಡಿ (sanctum sanctorum) ಯ ಎದುರು ಇರಿಸಲಾಗಿದೆ. ದೇವಾಲಯದ ಒಳಗೆ ಇನ್ನೂ ಅನೇಕ ದೇವಾಲಯಗಳಿವೆ. 

ಯಾರನ್ನೂ ಬಿಡದ ಶನಿದೇವ; ಜೀವನದಲ್ಲಿ ಎಷ್ಟು ಬಾರಿ ಸಾಡೇಸಾತಿ ಬರಲಿದೆ..?

 

ಬೆಟ್ಟಗಳ ನಡುವೆ ಭದ್ರಕಾಳಿ ಸರೋವರ 

ಈ ದೇವಾಲಯದ ಆಕರ್ಷಕ ವೈಶಿಷ್ಟ್ಯವೆಂದರೆ ಭದ್ರಕಾಳಿ ಸರೋವರ. ಇದು ಕಾಕತೀಯರ ಆಳ್ವಿಕೆಯಲ್ಲಿ ನಿರ್ಮಿಸಲಾದ ಮಾನವ ನಿರ್ಮಿತ ಸರೋವರವಾಗಿದೆ. ಈ ಸರೋವರವು ಸುಮಾರು ಎರಡೂವರೆ ಕಿಮೀ ಹರಡಿದೆ. ಇದು ಬೆಟ್ಟಗಳಿಂದ ಆವೃತವಾಗಿದೆ ಮತ್ತು ಸಮೀಪದಲ್ಲಿ ವಿವಿಧ ನೈಸರ್ಗಿಕ  (Natural) ಬಂಡೆಗಳ ರಚನೆಗಳಿಂದ ಕೂಡಿದೆ.

ಭದ್ರಕಾಳಿ ದೇವಸ್ಥಾನದ ಉತ್ಸವಗಳು

ಹಬ್ಬದ ಸಮಯದಲ್ಲಿ ವಾರಂಗಲ್‌ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸೂಕ್ತ ಸಮಯ. ಹಬ್ಬ ಹರಿದಿನಗಳಲ್ಲಿ ದೇವಸ್ಥಾನವನ್ನು ಅಲಂಕರಿಸಲಾಗುತ್ತದೆ. ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಆಯೋಜಿಸಲಾಗುವ ಬ್ರಹ್ಮೋತ್ಸವ (Brahmotsava) ಗಳಲ್ಲಿ ಭಕ್ತರ ದಂಡು ಆಗಮಿಸಲಿದೆ. ಶ್ರಾವಣ ಮಾಸದಲ್ಲಿ ದೇವಾಲಯ (Temple) ದಲ್ಲಿ ವಸಂತ ನವರಾತ್ರಿ, ಶಾಕಂಬರಿ ಉತ್ಸವ ಮತ್ತು ಶರಣ ನವರಾತ್ರಿಯಂತಹ ಅನೇಕ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ.

ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಮದ್ವೆಯಾದರೂ ವೈಷ್ಣವ್ ಸೆಳೆಯೋ ಕೀರ್ತಿ, ಅಂತವರ ರಾಶಿ ಯಾವುದಾಗಿರುತ್ತೆ?

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!