ಆಲಗೂರು ಜಾತ್ರೆಯಲ್ಲಿ ತಾಮ್ರದ ಬಿಂದಿಗೆ-ತಲವಾರ್‌ ಪವಾಡ: ಪೂಜಾರಿಯ ಪವಾಡ ಕಂಡು ದಂಗಾದ ಭಕ್ತರು!

By Ravi Janekal  |  First Published Mar 23, 2023, 2:57 PM IST

ವಿಜಯಪು  ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಆಲಗೂರು  ಗ್ರಾಮದಲ್ಲಿ ನಡೆದ ಜಾತ್ರೆಯೊಂದರಲ್ಲಿ ನಡೆದ ಘಟನೆ ಅಚ್ಚರಿಯನ್ನ ಮೂಡಿಸಿದೆ. ತಲವಾರ್‌ ಜೊತೆಗೆ ತಾಮ್ರದ ಬಿಂದಿಗೆಯೊಂದು ತನ್ನಿಂದ ತಾನೆ ಮೇಲೆದ್ದು ಬಂದಿದ್ದು ಎಲ್ಲರಲ್ಲು ಅಚ್ಚರಿಯನ್ನ ಮೂಡಿಸಿದೆ. ದೇವರ ಪೂಜಾರಿ ಮಾಡಿದ್ದನ್ನ ಕಂಡು ಭಕ್ತರು ದಂಗಾಗಿದ್ದಾರೆ


ವಿಜಯಪುರ (ಮಾ.23) : ಪುಣ್ಯಕ್ಷೇತ್ರಗಳಲ್ಲಿ ದೈವಾರಾಧನೆಗಳ ಸಂದರ್ಭಗಳಲ್ಲಿ ಪವಾಡ, ಚಮತ್ಕಾರಗಳು ನಡೆಯುತ್ತಿರುತ್ವೆ. ನೋಡಿದಾಗ ಸಾಮಾನ್ಯ ವಿಷಯ ಎನಿಸಿದರೂ, ಅಲ್ಲಿ ನಿಗೂಢ ದೈವಿ ಶಕ್ತಿ ಇದ್ದೆ ಇರುತ್ತೆ. 

ವಿಜಯಪು(Vijayapur) ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಆಲಗೂರು(Alaguru village) ಗ್ರಾಮದಲ್ಲಿ ನಡೆದ ಜಾತ್ರೆಯೊಂದರಲ್ಲಿ ನಡೆದ ಘಟನೆ ಅಚ್ಚರಿಯನ್ನ ಮೂಡಿಸಿದೆ. ತಲವಾರ್‌ ಜೊತೆಗೆ ತಾಮ್ರದ ಬಿಂದಿಗೆಯೊಂದು ತನ್ನಿಂದ ತಾನೆ ಮೇಲೆದ್ದು ಬಂದಿದ್ದು ಎಲ್ಲರಲ್ಲು ಅಚ್ಚರಿಯನ್ನ ಮೂಡಿಸಿದೆ. ದೇವರ ಪೂಜಾರಿ ಮಾಡಿದ್ದನ್ನ ಕಂಡು ಭಕ್ತರು ದಂಗಾಗಿದ್ದಾರೆ..

Latest Videos

undefined

Chitradurga : ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಹರಿದು ಬಂದ ಲಕ್ಷಾಂತರ ಭಕ್ತರು

ಆಲಗೂರಿನಲ್ಲಿ ಬಿಂದಿಗೆ-ತಲವಾರ್‌ ಪವಾಡ..!

ತಾಮ್ರದ ಬಿಂದಿಗೆಯಲ್ಲಿ ತಲವಾರ್‌ ಅಥವಾ ಕತ್ತಿಯನ್ನ ಹಾಕಿ ಮೇಲೆತ್ತಿದ್ದರೆ, ಕತ್ತಿಯ ಜೊತೆಗೆ ತಾಮ್ರದ ಬಿಂದಿಗೆ ಹೂವಿನಂತೆ ಮೇಲೆದ್ದು ಬರುತ್ತೆ. ಇಂಥ ಪವಾಡಕ್ಕೆ ಸಾಕ್ಷಿಯಾಗಿದ್ದು ಬೀರಲಿಂಗೇಶ್ವರ(Beeralingeshwar fair) ದೇವರ ಜಾತ್ರೆ. ಪ್ರತಿ ವರ್ಷ ದೇವರ ಹಿಪ್ಪರಗಿ ತಾಲೂಕಿನ ಆಲಗೂರು ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆ ನಡೆಯುತ್ತೆ. ಜಾತ್ರೆಯ ವೇಳೆ ಒಂದಿಲ್ಲೊಂದು ಪವಾಡಗಳು ನಡೆಯುತ್ವೆ. ಈ ಬಾರಿ ಬೀರದೇವರ ಪೂಜಾರಿ ಮಾಡಿದ ಪವಾಡ ಎಲ್ಲರನ್ನ ಚಕಿತಗೊಳ್ಳುವಂತೆ ಮಾಡಿದೆ. ನೆರೆದ ಜನರೆಲ್ಲ ಬಿಂದಿಗೆ ಹಾಗೂ ತಲವಾರ್‌ ಪವಾಡ ಕಂಡು ಹೌಹಾರಿದ್ದಾರೆ. ಒಂದು ಕ್ಷಣ ಬೀರಲಿಂಗೇಶ್ವರನನ್ನ ಮನದಲ್ಲಿ ನೆನೆದು ಭಕ್ತಿ ಭಾವಗಳನ್ನ ಪ್ರದರ್ಶಿಸಿದ್ದಾರೆ.

ಅಷ್ಟಕ್ಕೂ ಏನಿದು ಬಿಂದಿಗೆ-ತಲವಾರ್‌ ಪವಾಡ..!?

ಇನ್ನು ಅಷ್ಟಕ್ಕು ಈ ಬಿಂದಿಗೆ-ತಲಾವರ್‌ ನಿಂದ ನಡೆಯೋ ಪವಾಡ ಎಂಥದ್ದು.. ಏನಿದು ಪವಾಡ ಅನ್ನೋದನ್ನ ಹೇಳೋದಾದ್ರೆ ಒಂದು ಖಾಲಿ ತಾಮ್ರದ ಬಿಂದಿಗೆಯಲ್ಲಿ ಅಸಲಿ ತಲವಾರ್‌ ಅಥವ ಉದ್ದನೇಯ ಕತ್ತಿಯನ್ನ ಹಾಕಿ ದೇವರ ಹೆಸರಿನ ಜೈಕಾರ ಹಾಕಿ ಮೇಲೆತ್ತಲಾಗುತ್ತೆ. ಹೀಗೆ ಮೇಲೆ ಎತ್ತಿದರೆ ತಲವಾರ್‌ ಜೊತೆಗೆ ತಾಮ್ರದ ಬಿಂದಿಗೆಯು ಮೇಲೆದ್ದು ಬರುತ್ತೆ. ಇದನ್ನ ಪವಾಡ ಎಂದು ಹೇಳಲಾಗುತ್ತೆ. ದೈವಿ ಶಕ್ತಿಯಿಂದ ಹೀಗಾಗುತ್ತೆ ಎಂದು ಭಕ್ತರು ನಂಬುತ್ತಾರೆ.

ಹಲವು ಆರಾಧಕರು ಮಾಡುವ ಪವಾಡವಿದು..!

ವೀರಭದ್ರ ದೇವರು ಶಿವನ ಅವತಾರ, ದಕ್ಷಬ್ರಹ್ಮನ ಸಂಹಾರಕ್ಕಾಗಿ ಶಿವ ತನ್ನ ಜಡೆಯಿಂದ ವೀರಭದ್ರನನ್ನ ಸೃಷ್ಟಿಸುತ್ತಾನೆ. ಈಗ ವೀರಭದ್ರನ ವೇಷಹಾಕುವ ಪುರವಂತರು ಅಲ್ಲಲ್ಲಿ ವೀರಭದ್ರನ ಧ್ಯಾನ, ಜೈಕಾರ ಹಾಕುತ್ತ, ಒಡಬುಗಳನ್ನ ನುಡಿಯುತ್ತ ಈ ಪವಾಡವನ್ನ ಮಾಡಿ ಭಕ್ತರಲ್ಲಿ ಭಕ್ತಿಯನ್ನು ಉಕ್ಕೇರಿಸುತ್ತಾರೆ. ಬೆಂಗಳೂರು, ಮೈಸೂರು ಭಾಗಗಳಲ್ಲಿ ವೀರಭದ್ರನ ವೇಷಹಾಕುವ ವೀರಗಾಸೆಯವರು ಧಾರ್ಮಿಕ ಶುಭ ಕಾರ್ಯಗಳಲ್ಲಿ ಪಾಲ್ಗೊಂಡಾಗ ಈ ಪವಾಡವನ್ನ ಮಾಡುವುದು ಕಂಡು ಬರುತ್ತೆ.

ಜೀವವಿದ್ದಾಗಲೇ ಹೂಳಲ್ಪಟ್ಟು ಜೀವಂತ ದಂತಕಥೆಯಾಗಿ ಎದ್ದುಬಂದು ಪದ್ಮಶ್ರೀ ಪಡೆದ ಸಾಧಕಿ

ಹೇಗೆ ನಡೆಯುತ್ತೆ ಈ ತಾಮ್ರದ ಬಿಂದಿಗೆ ಪವಾಡ..!?

ಅಷ್ಟಕ್ಕು ಇದು ಪವಾಡವಾ? ಅಥವಾ ಕಣ್ಕಟ್ಟಾ ಎನ್ನುವ ಪ್ರಶ್ನೆಯು ಇಲ್ಲಿ ಉದ್ಭವಿಸುತ್ತೆ. ಮೊದಲು ತಾಮ್ರದ ಬಿಂದಿಗೆಗೆ ಪೂಜಿಸಲಾದ, ಮಂತ್ರಿಸಲಾದ ಅಕ್ಕಿಯನ್ನ ಹಾಕಲಾಗುತ್ತೆ. ಬಳಿಕ ಅದ್ರಲ್ಲಿ ಮಂತ್ರಪಠಣೆ ಮಾಡುತ್ತ, ಕತ್ತಿಯನ್ನ ಹಾಕಲಾಗುತ್ತೆ.ಆಗ ಅಕ್ಕಿ ಕಾಳುಗಳು ಕತ್ತಿಯನ್ನ ಸುತ್ತುವರೆಯುತ್ವೆ. ಅಕ್ಕಿ ತುಂಬಿದ ತಾಮ್ರದ ಬಿಂದಿಗೆಯಲ್ಲಿ ಒತ್ತಡ ನಿರ್ಮಾಣವಾಗುತ್ತೆ. ಆಗ ಅಕ್ಕಿಯ ಕಾಳುಗಳು ಕತ್ತಿಯನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ವೆ. ದೇವರ ಜಾತ್ರೆಗಳಲ್ಲಿ, ದೈವಿ ಕಾರ್ಯಗಳು ನಡೆದ ವೇಳೆ ಇದನ್ನ ಪೂಜಾರಿಗಳು, ದೈವಾರಾಧಕರು ಪ್ರದರ್ಶಿಸೋದು ಕಾಮನ್‌ ಆಗಿದೆ. ಹಾಗಂತ ಇದೇನು ಹೊಸತಾಗಿ ಶುರುವಾಗಿದ್ದಲ್ಲ. ಬದಲಿಗೆ ಈ ಮೊದಲಿನಿಂದಲು ಈ ರೀತಿಯ ಪ್ರದರ್ಶನಗಳು ನಡೆಯುತ್ತ ಬಂದಿವೆ. ಇಲ್ಲಿ ಜನರನ್ನ ದೈವಾರಾಧನೆಗೆ ಕಡೆಗೆ ಏಕಾಗ್ರಗೊಳಿಸುವ ಉದ್ದೇಶವಿರುತ್ತೆ. ಹಾಗಂತ ಇದೊಂದು ಎಲ್ಲು ನಡೆಯದ ಪವಾಡ ಅಂತೇನು ಅಲ್ಲ ಅನ್ನೋದು ತಜ್ಞರ ವಾದವಾಗಿದೆ..

click me!