ಈ ಟೈಂ ಟ್ರಾವೆಲರ್ ಪ್ರಕಾರ ಇಂದು ಭೂಮಿಗೆ ಬರುವ ಏಲಿಯನ್ 8000 ಜನರನ್ನು ಅಪಹರಿಸಲಿದ್ದಾನೆ!

By Suvarna News  |  First Published Mar 23, 2023, 2:10 PM IST

ಟಿಕ್ ಟಾಕ್‌ನಲ್ಲಿ ಸಾಕಷ್ಟು ಟೈಂ ಟ್ರಾವೆಲರ್‌ಗಳಿದ್ದಾರೆ. ಅವರಲ್ಲೊಬ್ಬ 2023ನೇ ಇಸವಿಗೆ ಸಾಕಷ್ಟು ಪ್ರಮುಖ ಘಟನಾವಳಿಗಳ ಮುನ್ಸೂಚನೆಗಳನ್ನು ನೀಡಿದ್ದಾನೆ. ಅವನು ಹೇಳಿದಂತೆ ನೋಡಿದರೆ ಇಂದು ಅಪರೂಪದ ವಿದ್ಯಮಾನವೊಂದಕ್ಕೆ ಜಗತ್ತು ಸಾಕ್ಷಿಯಾಗಬೇಕು. 


2671ನೇ ಇಸವಿಯಲ್ಲಿ ಬದುಕುತ್ತಿದ್ದೇನೆ ಎಂದು ಹೇಳಿಕೊಳ್ಳುವ ಟೈಮ್ ಟ್ರಾವೆಲರ್ ಒಬ್ಬರು ಈ ವರ್ಷ ಸಂಭವಿಸಲಿದೆ ಎಂದು ನಂಬಿರುವ ಘಟನೆಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದಾರೆ. ಭವಿಷ್ಯದ ಈವೆಂಟ್‌ಗಳ ಕುರಿತು ಎಚ್ಚರಿಕೆಗಳನ್ನು ನೀಡಿರುವ ಆತ, ತಾನು ಹೇಳಿದ ಈ ದಿನಾಂಕಗಳಂದು ಜಗತ್ತಿನಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ ಎಂಬುದನ್ನು ತಿಳಿಸಿದ್ದಾನೆ. ಆತನ ಭವಿಷ್ಯವಾಣಿಯಂತೆ ಇಂದು ಅಚ್ಚರಿಯ ಘಟನೆಯೊಂದಕ್ಕೆ ಜಗತ್ತು ಸಾಕ್ಷಿಯಾಗಬೇಕು. 

ಹೌದು, ಎನೊ ಅಲಾರಿಕ್ ಎಂಬ ಟಿಕ್ ಟಾಕ್ ಟೈಮ್ ಟ್ರಾವೆಲರ್(@theradianttimetraveler) ಪ್ರಕಾರ, ಮಾರ್ಚ್ 23ರಂದು ಭೂಮಿಯ ಮೇಲೆ ಕಾಲಿಡುವ ಚಾಂಪಿಯನ್ ಎಂಬ ಏಲಿಯನ್ 8000 ಜನರನ್ನು ಕಿಡ್ನಾಪ್ ಮಾಡಿ ಅನ್ಯ ಗ್ರಹಕ್ಕೆ ಕೊಂಡೊಯ್ದು ಮಾನವ ಕುಲವನ್ನು ರಕ್ಷಿಸುವ ಕೆಲಸ ಮಾಡಲಿದ್ದಾನಂತೆ. ಆತ ಮತ್ತೊಂದು ವರ್ಗದ ಕೆಟ್ಟ ಏಲಿಯನ್‌ಗಳಿಂದ ಈ ಜನರನ್ನು ರಕ್ಷಿಸಲಿದ್ದಾನಂತೆ!

Tap to resize

Latest Videos

ಇದೇ ಅಲ್ಲದೆ, ಈ ಸ್ವಘೋಷಿತ ಟೈಂ ಟ್ರಾವೆಲರ್, ಕ್ಯಾಲಿಫೋರ್ನಿಯಾಕ್ಕೆ ಸುನಾಮಿ ಅಪ್ಪಳಿಸಬಹುದೆಂದೂ, ಇದರಿಂದ ಅಪಾರ ಸಂಖ್ಯೆಯ ಸಾವುನೋವುಗಳಿಗೆ ಕಾರಣವಾಗಬಹುದು ಎಂದೂ ಹೇಳಿದ್ದಾರೆ. 

26,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಗಳಿಸಿರುವ ಈತ, 'ಗಮನ! ನಾನು ನಕಲಿ ಸಮಯ ಪ್ರಯಾಣಿಕ ಎಂದು ನಂಬುವವರಿಗೆ, 2023 ರ ಉಳಿದ ದಿನಗಳಲ್ಲಿ ನಡೆಯಲಿರುವ ಪ್ರಮುಖ ಘಟನೆಗಳನ್ನು ಗಮನಿಸಿ ನನ್ನ ಮಾತನ್ನು ನೆನಪಿಸಿಕೊಳ್ಳಿ' ಎಂದಿದ್ದಾನೆ.

Romantic zodiac signs: ಈ ರಾಶಿಯವರು ಪ್ರಣಯದಲ್ಲಿ ಪರಿಣತರು

ಆತನ ಪ್ರಕಾರ, ಈ ವರ್ಷದ ಯಾವ ದಿನಾಂಕದಲ್ಲಿ ಏನಾಗತ್ತದೆ ನೋಡೋಣ. 

ಮೇ 15, 2023: 750 ಅಡಿಯ ದೊಡ್ಡ ಸುನಾಮಿಯು ಸ್ಯಾನ್ ಫ್ರಾನ್ಸಿಸ್ಕೋಗೆ ಅಪ್ಪಳಿಸಲಿದೆ. ಇದರಿಂದ 200,000ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಲಿವೆ. 

ಜೂನ್ 12, 2023: ಐದು ಮೈಲಿ ಆಳದ ಕಂದಕವು 9.5 ತೀವ್ರತೆಯ ಭೂಕಂಪದಿಂದ ತೆರೆದುಕೊಳ್ಳುತ್ತದೆ, ಇದು ಅಳಿವಿನಂಚಿನಲ್ಲಿರುವ ಅನೇಕ ಪ್ರಭೇದಗಳನ್ನು ಬಿಡುಗಡೆ ಮಾಡುತ್ತದೆ.

ಜೂನ್ 18, 2023: 7 ಜನರು ಇದ್ದಕ್ಕಿದ್ದಂತೆ ಆಕಾಶದಿಂದ ಬೀಳುತ್ತಾರೆ. 

ಆಗಸ್ಟ್ 12, 2023: ವಿಜ್ಞಾನಿಗಳು ಅಳಿಲಿನಿಂದ ಪಿಟ್ಯುಟರಿ ಗ್ರಂಥಿಯನ್ನು ಬಳಸಿಕೊಂಡು ಚರ್ಮದ ಕ್ಯಾನ್ಸರ್‌ಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ.

Solar Eclipse 2023: ಈ ರಾಶಿಗಳಿಗೆ ಗ್ರಹಣದ ಕಾರಣದಿಂದ ಸಮಸ್ಯೆ ಉಲ್ಬಣ

ಡಿಸೆಂಬರ್ 3, 2023: ಅಮೆಜಾನ್‌ನಲ್ಲಿ ಆಳವಾದ ಸ್ಫಟಿಕವನ್ನು ಕಂಡುಹಿಡಿಯಲಾಗುತ್ತದೆ, ಇದು ಎಲ್ಲಾ ಕಾಯಿಲೆಗಳು ಮತ್ತು ಗಾಯಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರಲಿದೆ.

ಡಿಸೆಂಬರ್ 29, 2023: ವಿಜ್ಞಾನಿಗಳು ಬದಲಿ ಅಂಗಗಳು ಮತ್ತು ಹೊಸ ರೀತಿಯ ಅಂಗಗಳನ್ನು ಬೆಳೆಯಲು ಕಾಂಡಕೋಶಗಳನ್ನು ಬಳಸಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ.

ಈತನ ಈ ಭವಿಷ್ಯವಾಣಿಗಳ ಬಗ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಹಳಷ್ಟು ಜನರು ಈ ಮಾತುಗಳನ್ನು ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಒಬ್ಬ ಬಳಕೆದಾರರು 'ಓಹ್, ಎಂತಹ ರೋಮಾಂಚಕಾರಿ ವರ್ಷ!' ಎಂದಿದ್ದರೆ, ಮತ್ತೊಬ್ಬರು, 'ಈ ದಿನಗಳಿಗಾಗಿ ಎದುರು ನೋಡುತ್ತೇನೆ' ಎಂದಿದ್ದಾರೆ. 

ಕಳೆದ ವಾರದ ವೀಡಿಯೊದಲ್ಲಿ, ಈ ಎನೋ ಅಲಾರಿಕ್  2024ರಲ್ಲಿ ಜಾಗತಿಕ ತಾಪಮಾನದಿಂದಾಗಿ ಧ್ರುವೀಯ ಮಂಜುಗಡ್ಡೆಗಳು ಕರಗಿದಂತೆ ವೈರಸ್ ಹೊರಹೊಮ್ಮುತ್ತದೆ ಎಂದು ಹೇಳಿದ್ದರು. ಜೊತೆಗೆ, 2025ರಲ್ಲಿ ಮಂಗಳ ಗ್ರಹದ ಮೇಲೆ ಮೊದಲ ವಸಾಹತುಗಳು ಶುರುವಾಗುತ್ತದೆ. ಗಗನಯಾತ್ರಿಗಳು ಲ್ಯಾಂಡಿಂಗ್ ಸೈಟ್ ಬಳಿ ಮಾನವ ಮೂಳೆಗಳನ್ನು ಕಂಡುಕೊಳ್ಳುತ್ತಾರೆ, ಮಾನವರು ಮೊದಲು ಮಂಗಳದಿಂದ ಬಂದಿದ್ದಾರೆ ಎಂದು ಇದು ಸಾಬೀತುಪಡಿಸುತ್ತದೆ ಎಂದಿದ್ದರು.

ಏನಿದು ಟೈಂ ಟ್ರಾವೆಲಿಂಗ್?(time travelling)
ಟೈಂ ಟ್ರಾವೆಲಿಂಗ್ ಎಂದರೆ ಇರುವ ಕಾಲವನ್ನು ಬಿಟ್ಟು ಮುಂದಕ್ಕೂ, ಹಿಂದಕ್ಕೂ ಹೋಗುವ ಸಾಮರ್ಥ್ಯ. ಪ್ರಸ್ತುತ ಈ ಟೈಂ ಟ್ರಾವೆಲರ್ ತಾನು 2671ನೇ ಇಸವಿಯಲ್ಲಿ ಬದುಕುತ್ತಿದ್ದು, ಇಲ್ಲಿಯವರೆಗೆ ಆದ ಘಟನೆಗಳಿಗೆ ಸಾಕ್ಷಿಯಾಗಿದ್ದೇನೆ ಎಂದಿದ್ದಾರೆ. 

click me!