ಕಾಶಿ ಯಾರಿಗೆ ತಾನೇ ಗೊತ್ತಿಲ್ಲ? ಕಾಶಿ ಎಂದರೆ ಗಂಗೆ, ಕಾಶಿ ಎಂದರೆ ಮೋಕ್ಷ, ಕಾಶಿ ಎಂದರೆ ವಿಶ್ವನಾಥ, ಕಾಶಿ ಹಿಂದೂಗಳ ಹೆಮ್ಮೆ. ಇದರ ಹೊರತಾಗಿ ಕಾಶಿಯ ಇತಿಹಾಸ, ವಿಶೇಷಗಳು ನಿಮಗೆಷ್ಟು ಗೊತ್ತು?
ಕಾಶಿ ಎಂದರೆ ಹಿಂದೂಗಳ ಆಧ್ಯಾತ್ಮ ಕೇಂದ್ರ, ಮೋಕ್ಷದ ಹಾದಿ. ಕಾಶಿಗೆ ಹೋಗಿ ಬಂದವರಿಗೆ ಮೋಕ್ಷ ಸಿಗುವುದು ಎಂಬ ಮಾತೇ ಇದೆ. ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯ(Kashi Vishwanath Temple)ವು ಉತ್ತರ ಪ್ರದೇಶದ ವಾರಣಾಸಿ(Varanasi)ಯಲ್ಲಿದೆ. ಪಾಪಗಳನ್ನೆಲ್ಲ ಕಳೆವ ಪವಿತ್ರ ಗಂಗಾನದಿ ಇಲ್ಲಿ ವಿಶ್ವನಾಥನ ಸನ್ನಿಧಿಯ ಸಖ್ಯದಲ್ಲಿ ತೇಲುತ್ತಾಳೆ. ಇಂಥ ಈ ಕಾಶಿಯ ಬಗ್ಗೆ ನಿಮಗೆಷ್ಟು ಗೊತ್ತು?