Traits of Tuesday Born: ಮಂಗಳವಾರ ಹುಟ್ಟಿದವರ ವೃತ್ತಿ, ವೈವಾಹಿಕ ಜೀವನ ಹೇಗೆ?

By Suvarna News  |  First Published Dec 12, 2021, 2:22 PM IST

ಮಂಗಳವಾರ ಜನಿಸಿದವರು ಹೇಗಿರುತ್ತಾರೆ..? ಅವರ ಗುಣ, ಸ್ವಭಾವಗಳು ಏನು..? ಅವರ ವೃತ್ತಿ ಜೀವನ ಹೇಗಿರುತ್ತದೆ..? ವೈವಾಹಿಕ ಬದುಕು ಯಾವ ರೀತಿ ಇರುತ್ತದೆ...? ತಮ್ಮ ಸಂಗಾತಿಯ ಜೊತೆ ಹೇಗೆ ವರ್ತಿಸುತ್ತಾರೆ..? ಎಂಬಿತ್ಯಾದಿಗಳ ಬಗ್ಗೆ ಸಹಜವಾಗಿಯೇ ಕುತೂಹಲವಿರುತ್ತದೆ. ಇದೀಗ ಮಂಗಳವಾರ ಹುಟ್ಟಿದವರ ಬಗ್ಗೆ ತಿಳಿದುಕೊಳ್ಳೋಣ...


ವ್ಯಕ್ತಿಯ ಗುಣ, ಸ್ವಭಾವಗಳು ಹೇಗೆ ರಾಶಿ, ನಕ್ಷತ್ರಗಳಿಂದ ತಿಳಿಯಲಾಗುತ್ತದೋ ಹಾಗೆಯೇ ಅವರ ಹುಟ್ಟಿದ ವಾರದಿಂದಲೂ ತಿಳಿದುಕೊಳ್ಳಬಹುದಾಗಿದೆ. ಇಂದು ಮಂಗಳವಾರ (Tuesday) ಹುಟ್ಟಿದವರ (Born) ಬಗ್ಗೆ ನೋಡುವುದಾದರೆ, ದೃಢ ನಿಶ್ಚಯಿಗಳಾಗಿರುವ ಇವರು, ಹೋರಾಟದ ಮನೋಭಾವವನ್ನು ಹೊಂದಿರುತ್ತಾರೆ. ತಾವೇ ಎಲ್ಲದರಲ್ಲೂ ಮುಂದಿರಬೇಕು ಎಂದು ಬಯಸುವುದಲ್ಲದೆ, ನಾಯಕತ್ವದ (Leadership) ಗುಣವನ್ನೂ ಹೊಂದಿರುತ್ತಾರೆ. ತಾವೇ ಸದಾ ಗೆಲ್ಲಬೇಕು (Victory) ಎಂಬ ಹಂಬಲ ಇವರಲ್ಲಿ ಅತೀವವಾಗಿದೆ. ಎಲ್ಲದರಲ್ಲೂ ಸಕ್ರಿಯರಾಗಿರುವ ಇವರು, ಉತ್ಸಾಹ (enthusiasm), ಹುರುಪು, ಧೈರ್ಯವನ್ನು (Courage) ಸದಾ ಹೊಂದಿರುತ್ತಾರೆ. ಅಲ್ಲದೆ, ಇವರಿಗೆ ಅಸಹನೆ ಸಹ ಬಹುಬೇಗ ಬರುತ್ತದೆ.

ಮಂಗಳವಾರ ಜನಿಸಿದವರು ವ್ಯಕ್ತಿತ್ವದಲ್ಲಿ (Personality) ಹೇಗೆ..?

Tap to resize

Latest Videos

ಈ ವಾರದ ದಿನದಲ್ಲಿ ಜನಿಸಿದವರು ಅಪಾರ ಶಕ್ತಿ-ಯುಕ್ತಿಯುಳ್ಳವರು, ಇವರಿಗೆ ಸವಾಲುಗಳು (Challenges) ಎಂದರೆ ಬಹಳ ಇಷ್ಟ. ಆಗಾಗ ತಮ್ಮ ಸಾಮರ್ಥ್ಯಗಳನ್ನು (Capabilities) ಸಾಬೀತು ಪಡಿಸುತ್ತಿರುತ್ತಾರೆ. ಇದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಇವರದ್ದು ಸಾಹಸೀ (Adventure) ಪ್ರವೃತ್ತಿಯಾಗಿದ್ದು, ಸದಾ ಹೊಸತನ್ನು ಕಲಿಯಲು ಇಷ್ಟಪಡುತ್ತಾರೆ. ಇವರ ಅದೃಷ್ಟ ಸಂಖ್ಯೆ 9 (Nine). 

ಇದನ್ನು ಓದಿ: Mercury Transit: ಬುಧನ ರಾಶಿ ಪರಿವರ್ತನೆಯಿಂದ ಐದು ರಾಶಿಯವರಿಗೆ ಬಂಪರ್!

ಮಂಗಳವಾರ ಜನಿಸಿದವರ ವೃತ್ತಿ ಬದುಕು (Career)

ಸ್ವಭಾವತಃ ಭೌತಿಕ ವಸ್ತುಗಳನ್ನು ಇಷ್ಟಪಡುವ ಇವರು, ಅದಕ್ಕೆ ಹೆಚ್ಚು ಬೆಲೆಯನ್ನು ಕೊಡುತ್ತಾರೆ. ಇವರಿಗೆ ಬ್ಯಾಂಕಿಂಗ್ (Banking) ಇಲ್ಲವೇ ಹಣಕಾಸು (Finance) ಕ್ಷೇತ್ರದಲ್ಲಿ ಕಾರ್ಯನಿರ್ವಹಸಲು ಬಹಳ ಇಷ್ಟ. ಕೆಲವೊಮ್ಮೆ ಎಂಥ ರಿಸ್ಕ್‌ಗಳನ್ನೂ (Risk) ತೆಗೆದುಕೊಳ್ಳುವ ಇವರು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೂಲಕ ವೃತ್ತಿ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಾರೆ. ಈ ಮೂಲಕ ಇತರರನ್ನು ಸುಲಭವಾಗಿ ಸೆಳೆದುಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಆದರೆ, ಮಾತಿನಲ್ಲಿ (Speak) ಮಾತ್ರ ಹಿಡಿತ (Control) ಇರಬೇಕು. ಇಲ್ಲದಿದ್ದರೆ ಎದುರಿನವರಿಗೆ ಅನಗತ್ಯ ಕಿರಿಕಿರಿ (Irritate) ಉಂಟಾಗುತ್ತದೆ. ಹೀಗಾಗಿ ಮೃದು (Soft) ಮಾತುಗಳನ್ನಾಡಿ ಎಲ್ಲರ ಹೃದಯ (Heart) ಗೆಲ್ಲಿ. ಇನ್ನು ನಿಮ್ಮನ್ನು ಬೇಕೆಂತಲೇ ಇತರರು ಟೀಕಿಸುತ್ತಾರೆ. ಅದಕ್ಕೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಲು ಹೋಗದೆ, ಸಮತೋಲನವನ್ನು ಕಾಪಾಡಿಕೊಳ್ಳಿ ಆ ಮೂಲಕ ಯಶಸ್ಸನ್ನು ಗಳಿಸಿ. 

ಪ್ರೀತಿಯ ಜೀವನ (Love)

undefined

ಸದಾ ಚಿಂತೆಯೊಂದಿಗೇ (worry) ಜೀವಿಸುವ ಇವರು, ಆಲೋಚನೆಗಳಲ್ಲಿ ಮುಳುಗಿರುತ್ತಾರೆ. ಹೀಗಾಗಿ ತಮ್ಮವರೊಂದಿಗೆ ಸಮಯ ಕಳೆಯಲು (Time spent), ತೊಡಗಿಕೊಳ್ಳಲು ಕಷ್ಟವಾಗುತ್ತದೆ. ಇತರರ ಭಾವನೆಗಳನ್ನು (Emotional) ಅರ್ಥೈಸಿಕೊಳ್ಳುವ ಹಾಗೂ ಅವರಿಗೂ ಪ್ರೀತಿಯನ್ನು ನೀಡುವ ಸಲುವಾಗಿ ಅವರಿಗೂ ಸಮಯವನ್ನು ಕೊಡುವ ಅವಶ್ಯಕತೆ ಇದೆ. ನೀವು ಮುಂದಾಲೋಚನೆ ಇಲ್ಲದೆ ಮಾತನಾಡುವ ಕೆಲವು ಪದಗಳಿಂದ ನಿಮ್ಮ ಸಂಗಾತಿಗೆ (Partner) ಬೇಸರವಾಗಬಹುದು. ಹೀಗಾಗಿ ಮಾತಿಗೆ ಮುನ್ನ ಯೋಚಿಸಿ. ಸಮಸ್ಯೆಗಳು ಎದುರಾದರೆ ವಿಭಿನ್ನ ದೃಷ್ಟಿಕೋನಗಳಿಂದ (Perspectives) ನೋಡಿ, ಆಗ ನಿಮಗೆ ಸುಲಭ ಪರಿಹಾರ ಲಭ್ಯವಾಗಲಿದೆ. 

ಇದನ್ನು ಓದಿ: Color and Personality: ನೀವಿಷ್ಟ ಪಡೋ ಬಣ್ಣಗಳು ನಿಮ್ಮ ಗುಣ ಹೇಳುತ್ತವೆ..

ವೈವಾಹಿಕ ಜೀವನ (Married Life)

ಮಂಗಳವಾರ ಜನಿಸಿದವರಿಗೆ ತಾಳ್ಮೆ (Impatient) ಸ್ವಲ್ಪ ಕಡಿಮೆಯೇ. ಹೀಗಾಗಿ ವೈವಾಹಿಕ ಬದುಕಿನಲ್ಲಿ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕಾದ ವಿಷಯಗಳಿಗೂ ಇವರು ಸಿಟ್ಟು (Angry) ಮಾಡಿಕೊಳ್ಳುತ್ತಾರೆ. ಇವರ ಈ ಸ್ವಭಾವಗಳೇ ಶುತ್ರುವಾಗಿದೆ. ಆದರೆ, ಏನೇ ಸಮಸ್ಯೆ ಎದುರಾದರೆ ಮಾತ್ರ ಬಾಳ ಸಂಗಾತಿಯನ್ನು ಧೈರ್ಯವಾಗಿ (courageously) ರಕ್ಷಿಸುವ ಗುಣವನ್ನು ಹೊಂದಿರುತ್ತಾರೆ. ಆದರೆ, ಎಲ್ಲ ವಿಷಯಗಳಿಗೂ ನಿಮ್ಮದೇ ನಡೆಯಬೇಕು ಎಂದು ಹೋಗುವುದು ತಪ್ಪು. ಸಂಗಾತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸಗಳು ಆಗಬೇಕು. ಹೀಗಾಗಿ ನಿಮ್ಮ ಸಂಗಾತಿಗೂ ನಿಮ್ಮಂತೆ ಸಮಾನ ಸ್ಥಾನಮಾನ (Equal status) ನೀಡಿ. 

click me!