ನವರಾತ್ರೀಲಿ ಉಪವಾಸ ಮಾಡಿದ್ರೆ ತೂಕ ಇಳಿಯುತ್ತಾ?

By Suvarna News  |  First Published Oct 16, 2023, 4:58 PM IST

ನವರಾತ್ರಿ ಹಬ್ಬದ ಸಮಯದಲ್ಲಿ ಉಪವಾಸ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಉಪವಾಸ ಆರೋಗ್ಯ ವೃದ್ಧಿಸುತ್ತೆ. ಜೊತೆಗೆ ತೂಕ ಕೂಡ ಕಡಿಮೆಯಾಗುತ್ತದೆ. ಆದ್ರೆ ಉಪವಾಸದ ವೇಳೆ ಏನ್ ತಿನ್ನಬೇಕು ಎಂಬುದು ಗೊತ್ತಾದಾಗ ಮಾತ್ರ ಇದು ಸಾಧ್ಯ. 
 


ನವರಾತ್ರಿ ಶುರುವಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ದುರ್ಗೆ ದೇವಸ್ಥಾನಗಳಲ್ಲಿ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ದಾಂಡಿಯಾ ಹೀಗೆ ನಾನಾ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿವೆ. ನವರಾತ್ರಿ ಸಮಯದಲ್ಲಿ ಉಪವಾಸ ಮಾಡಿ ತಾಯಿ ದುರ್ಗೆಯನ್ನು ಜನರು ಒಲಿಸಿಕೊಳ್ಳುವ ಪ್ರಯತ್ನ ಮಾಡ್ತಾರೆ.     ನವರಾತ್ರಿ ಸಮಯದಲ್ಲಿ ಮಾಡುವ ಉಪವಾಸದಿಂದ ಡಯಟ್ ಕೂಡ ಆಗುತ್ತೆ, ತೂಕ ಇಳಿಸಿಕೊಳ್ಳಬಹುದು ಅಂತಾ ಕೆಲವರು ಅಂದುಕೊಳ್ತಾರೆ. ಸರಿಯಾಗಿ ಉಪವಾಸ ಮಾಡಿದ್ರೆ ಮಾತ್ರ ತೂಕ ಇಳಿಕೆ ಸಾಧ್ಯ.

ಉಪವಾಸ (Fasting) ದಿಂದ ಏನು ಪ್ರಯೋಜನ? : ಉಪವಾಸದಿಂದ ಅನೇಕ ಪ್ರಯೋಜನವಿದೆ. ತಿಂಗಳಲ್ಲಿ ಒಂದು ದಿನವಾದ್ರೂ ಉಪವಾಸ ಮಾಡಬೇಕು. ಉಪವಾಸ ದೇಹವನ್ನು ನಿರ್ವಿಷಗೊಳಿಸಲು ಮತ್ತು ಜೀರ್ಣಾಂಗ (Digestive) ವ್ಯವಸ್ಥೆಯನ್ನು ಬಲಪಡಿಸಲು ನೈಸರ್ಗಿಕ ಮಾರ್ಗವಾಗಿದೆ. ಉಪವಾಸದಿಂದ ದೇಹದಲ್ಲಿನ ಕ್ಯಾಲೊರಿಗಳ ಸೇವನೆಯು ಕಡಿಮೆಯಾಗುತ್ತದೆ. ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಇದಲ್ಲದೆ  ಜೀರ್ಣಕ್ರಿಯೆಯ ಪ್ರಕ್ರಿಯೆಯು ಸುಧಾರಿಸುತ್ತದೆ. ಇದು ಆಹಾರ (Food) ವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಉಪವಾಸದ ನಂತರ ಮತ್ತೆ ತೂಕ ಹೆಚ್ಚಾಗದಂತೆ ಸಮತೋಲಿತ ಆಹಾರವನ್ನು ಸೇವಿಸುವುದು ಕೂಡ ಮುಖ್ಯ. ತೂಕ  ಕಳೆದುಕೊಳ್ಳಲು ಉಪವಾಸವು ಪರಿಣಾಮಕಾರಿ ಮತ್ತು ನೈಸರ್ಗಿಕ ಮಾರ್ಗವಾಗಿದೆ. ಉಪವಾಸ ಮಾಡುವಾಗ ಸಾಕಷ್ಟು ನೀರು ಕುಡಿಯುವುದು ಮತ್ತು ದೈಹಿಕ ಚಟುವಟಿಕೆಯನ್ನು ಮಾಡುವುದು ಸಹ ಮುಖ್ಯವಾಗಿದೆ.  

Latest Videos

undefined

ಕಚೇರಿಗೂ ಹೋಗ್ಬೇಕು.. ನವರಾತ್ರಿ ವ್ರತ ಮಾಡ್ಬೇಕು ಎನ್ನುವ ಮಹಿಳೆಯರಿಗೆ ಟಿಪ್ಸ್

ಉಪವಾಸ ಹೀಗಿರಲಿ : ನವರಾತ್ರಿ ಉಪವಾಸದಲ್ಲಿ ಹಣ್ಣಿನ ಜ್ಯೂಸನ್ನು ಹೆಚ್ಚಿನ ಪ್ರಮಾಣದಲ್ಲಿ ನೀವು ಸೇವನೆ ಮಾಡ್ಬೇಕು. ದೇಹ ಹೈಡ್ರೀಕರಣಗೊಳ್ಳುವುದು ಮುಖ್ಯವಾಗುತ್ತದೆ.  ಇದಲ್ಲದೆ ಬಹುತೇಕರು ಸಾಮ ಅಕ್ಕಿ, ಹುರುಳಿ ಹಿಟ್ಟು, ರಾಜಗೀರಾ, ಆಲೂಗಡ್ಡೆ, ಕುಂಬಳಕಾಯಿ, ಸಿಹಿ ಗೆಣಸು, ಬಾಟಲ್ ಸೋರೆಕಾಯಿ, ಸೌತೆಕಾಯಿ, ಕ್ಯಾರೆಟ್, ಪಾಲಕ ಮುಂತಾದ ತರಕಾರಿಗಳನ್ನು ಸೇವಿಸುತ್ತಾರೆ. ಈ ಎಲ್ಲಾ ತರಕಾರಿ, ಹಣ್ಣು, ಧಾನ್ಯಗಳು ಉಪವಾಸದ ಸಮಯದಲ್ಲಿ ದೇಹವನ್ನು ಪೋಷಿಸಲು ಸಹಾಯ ಮಾಡುತ್ತದೆ. ಹಸಿವನ್ನು ಕಡಿಮೆ ಮಾಡಲು ಈ ಆಹಾರ ಪ್ರಯೋಜನಕಾರಿ.  

ಉಪವಾಸದ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಪುರಿ, ಪಕೋಡಾ ತಿನ್ನಬಾರದು. ಫಾಸ್ಟ್ ಫುಡ್, ಕರಿದ ಆಹಾರಗಳು ನಿಮ್ಮ ದೇಹವನ್ನು ಹಾಳು ಮಾಡುತ್ತವೆ. ಇದರ ಬದಲು ನೀವು ಹಲ್ವಾ ಅಥವಾ ಖಿಚಡಿ ಅಥವಾ ರೊಟ್ಟಿಗಳನ್ನು ತಿನ್ನಬೇಕು. ನೀವು ಸೇವನೆ ಮಾಡುವ ರೊಟ್ಟಿ ಹಿಟ್ಟುಗಳು ಗ್ಲುಟನ್ ಮುಕ್ತವಾಗಿರುತ್ತವೆ.  ಹೆಚ್ಚು ಶಕ್ತಿಯುತ ಮತ್ತು ಪೌಷ್ಟಿಕವಾಗಿರುತ್ತವೆ. ಉಪವಾಸ ಸಮಯದಲ್ಲಿ ನೀವು ಕರಿದ ಆಹಾರ ಸೇವನೆ ಆಡಿದ್ರೆ ಇದು ಆಹಾರದ ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ಇದ್ರಿಂದ ನಿಮ್ಮ ತೂಕ ಹೆಚ್ಚಾಗಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ನೀವು ಕರಿದ ಆಹಾರ ಸೇವನೆ ಮಾಡಲು ಹೋಗ್ಬೇಡಿ.

ಮಹಿಳಾ ದೌರ್ಜನ್ಯದ ವಿರುದ್ಧ ಬೀದಿಗಿಳಿದ ನವದುರ್ಗೆಯರು...!

ನವರಾತ್ರಿ ಉಪವಾಸ ಸ್ವಲ್ಪ ಭಿನ್ನವಾಗಿರುತ್ತದೆ. ಈ ಸಮಯದಲ್ಲಿ ಬರೀ ಆರೋಗ್ಯಕ್ಕೆ ಮಾತ್ರವಲ್ಲ ಆರಾಧನೆಗೆ ಮಹತ್ವ ನೀಡಲಾಗುತ್ತದೆ. ಹಾಗಾಗಿ ಅನೇಕ ಜನರು ಗೋಧಿ, ರವೆ, ಅಕ್ಕಿ, ಜೋಳದ ಹಿಟ್ಟು, ಮೈದಾ ಮತ್ತು ಬೇಳೆಕಾಳುಗಳನ್ನು ಸೇವನೆ ಮಾಡೋದಿಲ್ಲ. ನೀವು ಒಂಭತ್ತು ದಿನ ಈ ಆಹಾರದಿಂದ ದೂರವಿದ್ದರೆ ಸಮಸ್ಯೆಯಿಲ್ಲ. ಆದ್ರೆ ಈ ವೇಳೆ ಅನಾರೋಗ್ಯಕರ ಆಹಾರ ಸೇವನೆ ಮಾಡಬಾರದು. ಆರೋಗ್ಯಕರ ಆಹಾರ ನಿಮ್ಮ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳು ನಿಯಂತ್ರಣಕ್ಕೆ ತರುತ್ತದೆ ಎಂಬುದನ್ನು ನೆನಪಿಡಿ.

ಉಪವಾಸ ಅಂದ್ರೆ ಬಹುತೇಕರ ಕಣ್ಣು ಆಲೂಗಡ್ಡೆ ಫ್ರೈ ಮೇಲೆ ಹೋಗುತ್ತದೆ. ಉಪವಾಸದ ವೇಳೆ ಜನರು ಆಲೂಗಡ್ಡೆ ಫ್ರೈ ತಿನ್ನಲು ಇಷ್ಟಪಡ್ತಾರೆ. ಅದು ಉಪ್ಪು ಮತ್ತು ಖಾರ ಮಿಶ್ರಿತವಾಗಿರುವ ಕಾರಣ ಎಲ್ಲರಿಗೂ ಇಷ್ಟವಾಗುತ್ತದೆ. ಆದ್ರೆ ನೀವು ಅಪ್ಪಿತಪ್ಪಿಯೂ ನವರಾತ್ರಿ ಉಪವಾಸದ ವೇಳೆ ಆಲೂಗಡ್ಡೆ ಫ್ರೈ, ಚಿಪ್ಸ್ ತಿನ್ನಬೇಡಿ. 
 

click me!