ಶುಕ್ರ-ಮಂಗಳ ಸಂಯೋಗ; 20 ವರ್ಷದ ಬಳಿಕ 3 ರಾಶಿಗಳಿಗೆ ಬಂತು ಯೋಗ..!

Published : Jul 11, 2023, 01:08 PM IST
ಶುಕ್ರ-ಮಂಗಳ ಸಂಯೋಗ; 20 ವರ್ಷದ ಬಳಿಕ 3 ರಾಶಿಗಳಿಗೆ ಬಂತು ಯೋಗ..!

ಸಾರಾಂಶ

ಪ್ರತಿಯೊಂದು ಗ್ರಹವು ಒಂದು ಸಮಯದ ನಂತರ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತದೆ. ಅದರಂತೆ ಸುಮಾರು 20 ವರ್ಷದ ನಂತರ ಸಿಂಹ ರಾಶಿಯಲ್ಲಿ ಮಂಗಳ ಹಾಗೂ ಶುಕ್ರನ ಸಂಯೋಗವಾಗುತ್ತಿದ್ದು, ಇದರಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.

ಪ್ರತಿಯೊಂದು ಗ್ರಹವು ಒಂದು ಸಮಯದ ನಂತರ ತನ್ನ ರಾಶಿಚಕ್ರ  (Zodiac) ಚಿಹ್ನೆಯನ್ನು ಬದಲಾಯಿಸುತ್ತದೆ. ಅದರಂತೆ ಸುಮಾರು 20 ವರ್ಷದ ನಂತರ ಸಿಂಹ ರಾಶಿಯಲ್ಲಿ ಮಂಗಳ ಹಾಗೂ ಶುಕ್ರನ ಸಂಯೋಗವಾಗುತ್ತಿದ್ದು, ಇದರಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.

ಜ್ಯೋತಿಷ್ಯದ ಪ್ರಕಾರ ಕೆಲವು ಗ್ರಹಗಳು ಹಲವು ವರ್ಷಗಳ ನಂತರ ಒಂದಕ್ಕೊಂದು ಸೇರಿಕೊಳ್ಳುತ್ತದೆ. ಮಂಗಳ ಮತ್ತು ಶುಕ್ರ ಗ್ರಹ (venus) ಗಳ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ವಿಶೇಷ ಪ್ರಯೋಜನಗಳನ್ನು ತರುತ್ತದೆ. ಮಂಗಳ-ಶುಕ್ರ ಸಂಯೋಗವನ್ನು ಇತ್ತೀಚೆಗೆ ಜುಲೈ 7 ರಂದು ಮಾಡಲಾಯಿತು. ಅಲ್ಲಿ ಶುಕ್ರವು, ಸಿಂಹ (Leo) ವನ್ನು ಪ್ರವೇಶಿಸಿ ಮಂಗಳವನ್ನು ಸೇರಿದೆ. ಮಂಗಳ-ಶುಕ್ರ ಸಂಯೋಗದ ಲಾಭವನ್ನು ಯಾವ ರಾಶಿಯವರು ಪಡೆಯುತ್ತಾರೆ ಎಂಬ ಮಾಹಿತಿ ಇಲ್ಲಿದೆ..

ಕಟಕ ರಾಶಿ ( Cancer ) 

ಈ ರಾಶಿಯವರು ಸಿಂಹ ರಾಶಿಯಲ್ಲಿ ಮಂಗಳ ಮತ್ತು ಶುಕ್ರರ ಸಂಯೋಗದಿಂದ ವಿಶೇಷ ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಂಯೋಗವು ಕಟಕ ರಾಶಿಯ ಎರಡನೇ ಮನೆಯಲ್ಲಿ ನಡೆಯುತ್ತದೆ. ಇದು ಹಣ ಮತ್ತು ಮಾತಿನೊಂದಿಗೆ ಸಂಬಂಧಿಸಿದೆ, ಈ ಸಮಯದಲ್ಲಿ ಕಟಕ ರಾಶಿಯ ಜನರು ಅನಿರೀಕ್ಷಿತ ಆರ್ಥಿಕ ಲಾಭ (Financial benefit) ವನ್ನು ಪಡೆಯುತ್ತಿದ್ದಾರೆ. ಕಳೆದು ಹೋದ ಹಣ ವಾಪಸ್‌ ಸಿಗುವ ಸಾಧ್ಯತೆ ಇದ್ದು, ಅವರ ಮಾತು ಪ್ರಭಾವ ಬೀರಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಅಧಿಕಾರ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.

ಮೇಷ ರಾಶಿ ( Aries) 

ಮಂಗಳ ಮತ್ತು ಶುಕ್ರನ ಶಕ್ತಿಯುತ ಸಂಯೋಜನೆಯು ಮೇಷ ರಾಶಿಯ ಜನರಿಗೆ ಸಹ ಅನುಕೂಲಕರವಾಗಿದೆ. ಈ ಸಂಯೋಗವು ಮೇಷ ರಾಶಿಯ ಐದನೇ ಮನೆಯಲ್ಲಿ ನಡೆಯುತ್ತದೆ. ಇದು ಮಕ್ಕಳು ಮತ್ತು ಸೃಜನಶೀಲತೆಗೆ ಸಂಬಂಧಿಸಿದೆ. ಆದಾಯ ದಿಢೀರ್‌ ಹೆಚ್ಚಳವಾಗುತ್ತದೆ. ಷೇರು ಮಾರುಕಟ್ಟೆ  (Stock market) ಜೂಜು ಅಥವಾ ಲಾಟರಿಯಿಂದ ಆರ್ಥಿಕ ಲಾಭದ ಸಾಧ್ಯತೆ ಇದೆ. ಅವರ ಪ್ರೇಮ ಜೀವನದಲ್ಲಿ ಪ್ರಣಯ ಪ್ರವರ್ಧಮಾನಕ್ಕೆ ಬರುತ್ತದೆ ಮತ್ತು ಕುಟುಂಬ ಸದಸ್ಯರು ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ವೃತ್ತಿಯ ವಿಷಯದಲ್ಲಿ  ಉದ್ಯೋಗದಲ್ಲಿರುವವರಿಗರ ಬಡ್ತಿ ಸಾಧ್ಯತೆ ಇದೆ.

Sawan 2023:  ಶಿವಲಿಂಗಕ್ಕೆ ನೀರನ್ನು ಅರ್ಪಿಸುವ ಮನ್ನ ಇವಿಷ್ಟು ಮಾಡಿ

 

ಕುಂಭ ರಾಶಿ (Aquarius) 

ಮಂಗಳ ಮತ್ತು ಶುಕ್ರನ ಸಂಯೋಗವು ಕುಂಭ ರಾಶಿಯವರಿಗೆ ಅನುಕೂಲಕರ (convenient)  ಫಲಿತಾಂಶಗಳನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸಂಯೋಗವು ಕುಂಭದ ಹನ್ನೊಂದನೆ ಮನೆಯಲ್ಲಿ ನಡೆಯುತ್ತಿದೆ. ಇದು ಲಾಭ ಮತ್ತು ಸ್ನೇಹವನ್ನು ಪ್ರತಿನಿಧಿಸುತ್ತದೆ. ಹಠಾತ್‌ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಈ ಅವಧಿಯು ಅನುಕೂಲಕರವಾಗಿರುತ್ತದೆ. ಇದರೊಂದಿಗೆ ಅವರ ಗಳಿಕೆಯಲ್ಲಿ ಅನಿರೀಕ್ಷಿತ ಹೆಚ್ಚಳವಾಗುತ್ತದೆ. ಪ್ರೀತಿ  (love) ಮತ್ತು ಪ್ರಣಯ (romance) ಹೆಚ್ಚಾಗುತ್ತದೆ. ಮತ್ತು ಕುಟುಂಬ ಸದಸ್ಯರು ಸಹಕರಿಸುತ್ತಾರೆ ಹಾಗೂ ವೃತ್ತಿನಿರತರು ತಮ್ಮ ವೃತ್ತಿಯಲ್ಲಿ ಬಡ್ತಿ ಪಡೆಯಬಹುದು.

ಮಂಗಳವಾರ ಈ ವಸ್ತು ಖರೀದಿಸಿದರೆ ಧನಹಾನಿ; ಹನುಮಂತನ ಕೋಪಕ್ಕೆ ಗುರಿ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ