ಗಟ್ಟಿಮೇಳದ ಬಾಯ್ ಬಡ್ಕಿ ಅಮೂಲ್ಯನಂತಹ ಹೆಂಡತಿಯ ಬಾಯಿ ಮುಚ್ತಾರೆ ಈ ಚಾಣಾಕ್ಷರು..!

By Sushma Hegde  |  First Published Jul 11, 2023, 11:16 AM IST

ಜೀವನದಲ್ಲಿ ನೋವು-ನಲಿವು ಸಾಮಾನ್ಯ, ಹಾಗೆಯೇ ಪ್ರೀತಿ-ವಿರಸ ಕೂಡ. ಇನ್ನು ದಾಂಪತ್ಯದಲ್ಲಿ ಗಂಡ ಹೆಂಡತಿ ನಡುವೆ ಪ್ರೀತಿ ಇದ್ದಷ್ಟು ಕೆಲವೊಮ್ಮೆ ಕೋಪ, ಮನಸ್ಥಾಪ ಹಾಗೂ ಜಗಳ ಕೂಡ ಬರುತ್ತದೆ. ಈ ಐದು ರಾಶಿಯವರಿಗೆ ಜಗಳವನ್ನು ನಿಭಾಯಿಸುವ ಕಲೆಯನ್ನು ಚೆನ್ನಾಗಿ ಅರಿತಿರುತ್ತಾರಂತೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.


ಜೀವನದಲ್ಲಿ ನೋವು-ನಲಿವು ಸಾಮಾನ್ಯ, ಹಾಗೆಯೇ ಪ್ರೀತಿ-ವಿರಸ ಕೂಡ. ಇನ್ನು ದಾಂಪತ್ಯದಲ್ಲಿ ಗಂಡ ಹೆಂಡತಿ ನಡುವೆ ಪ್ರೀತಿ ಇದ್ದಷ್ಟು ಕೆಲವೊಮ್ಮೆ ಕೋಪ, ಮನಸ್ಥಾಪ ಹಾಗೂ ಜಗಳ ಕೂಡ ಬರುತ್ತದೆ. ಈ ಐದು ರಾಶಿಯವರಿಗೆ ಜಗಳವನ್ನು ನಿಭಾಯಿಸುವ ಕಲೆಯನ್ನು ಚೆನ್ನಾಗಿ ಅರಿತಿರುತ್ತಾರಂತೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.

ದಾಂಪತ್ಯದಲ್ಲಿ ಕೆಲವು ಜನರಿಗೆ ಜಗಳ ಮಾಡುವುದೆಂದರೆ ಇಷ್ಟವಿರಲ್ಲ, ಬದಲಾಗಿ ಜಗಳದಿಂದ ದೂರವಿದ್ದು ಎಲ್ಲವನ್ನೂ ಸರಿಮಾಡಲು ಬಯಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗುತ್ತದೆ. ಕೆಲವು ಬಾರಿ ಹೆಚ್ಚು ಮತ್ತು ಅನಗತ್ಯ ಮಾತಿನಿಂದ ಜಗಳವಾದರೆ, ಮತ್ತೆ ಕೆಲವು ಬಾರಿ ಮಾತನಾಡದೇ ಇರುವುದರಿಂದಲೂ ಜಗಳವಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ನಿಭಾಯಿಸುವ ಕಲೆ ಗೊತ್ತಿದ್ದರೆ ಜಗಳ ಅಲ್ಲಿಗೆ ಕೊನೆಗೊಳ್ಳುತ್ತದೆ. 

Tap to resize

Latest Videos

ಗಟ್ಟಿಮೇಳದ ಧಾರಾವಾಹಿಯಲ್ಲಿ ಬರುವ ಬಾಯ್ ಬಡ್ಕಿ ಅಮೂಲ್ಯ ತರದ ಹೆಂಡತಿಯನ್ನು ಹೇಗೆ ಬಾಯಿ ಮುಚ್ಚುಬೇಕು ಎನ್ನುವ ಕಲೆ ಈ ಕೆಳಗಿನ ರಾಶಿಯವರಿಗೆ ತಿಳಿದಿರುತ್ತದೆ.

ಮಕರ ರಾಶಿ (Capricorn) 

ಮಕರ ರಾಶಿಯವರು ತಮ್ಮ ಸಂಗಾತಿಯನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಾರೆ. ಇವರು ಜಗಳಗಳಿಂದ ದೂರವಿರುವುದನ್ನು ಇಷ್ಟಪಡುತ್ತಾರೆ. ಈ ವ್ಯಕ್ತಿಗಳು ಯಾವುದೇ ವಿಷಯವನ್ನಾದರೂ ಹೆಚ್ಚು ಆಳವಾಗಿ ಯೋಚಿಸುತ್ತಾರೆ. ಹಾಗಾಗಿ ಯಾವುದೇ ಸಮಸ್ಯೆಯನ್ನು ಆರಾಮವಾಗಿ ಪರಿಹರಿಸುವ ಬಗ್ಗೆ ಪ್ರಯತ್ನಿಸುತ್ತಾರೆ. ಅಕಸ್ಮಾತ್ ಆಗಿ ಜಂಗಾತಿ ಜೊತೆ ಜಗಳದ ಪರಿಸ್ಥಿತಿ ಎದುರಾದರೆ, ಅದರಿಂದ ಹುಷಾರಾಗಿ ಹೊರ ಬಂದು, ಅಂತಹ ಪರಿಸ್ಥಿತಿ ಮುಂದೆ ಮತ್ತೆ ಬಾರದಂತೆ ಎಚ್ಚರವಹಿಸುತ್ತಾರೆ.  

ಕನ್ಯಾ ರಾಶಿ (Virgo)

ಈ ರಾಶಿಯ ವ್ಯಕ್ತಿಗಳಿಗೆ ಜಗಳ-ಗಲಾಟೆಗಳ ಬಗ್ಗೆ ಕೇಳಿದರೆ ಭಯವುಂಟಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಇವುಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸುತ್ತಾರೆ. ಕನ್ಯಾ ರಾಶಿಯ ವ್ಯಕ್ತಿಗಳಿಗೆ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವ ಪರಿ ತಿಳಿದಿರುವುದಿಲ್ಲ. ಈ ವ್ಯಕ್ತಿಗಳು ಹೆಚ್ಚು ಪ್ರಾಕ್ಟಿಕಲ್ ಆಗಿ ಇರುವುದಲ್ಲದೆ, ತಮ್ಮ ಬಗ್ಗೆ ಸಂಗಾತಿಗೆ ಏನನ್ನೂ ಹೇಳಿಕೊಳ್ಳುವುದಿಲ್ಲ. ವಿಷಯಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವ ಸ್ವಭಾವ ಇವರದ್ದು. ಹಾಗಾಗಿ ಇವರಿಗೆ ಜಗಳ-ಗಲಾಟೆಗಳೆಂದರೆ ಆಗುವುದೇ ಇಲ್ಲ.

Daily Horoscope: ಇಂದು ಈ ರಾಶಿಯವರು ಪ್ರಯಾಣ ಮಾಡಬೇಡಿ; ಅಪಾಯ ತಪ್ಪಿದ್ದಲ್ಲ.!

 

ಕುಂಭ ರಾಶಿ ( Aquarius) 

ಈ ರಾಶಿಯ ವ್ಯಕ್ತಿಗಳು ಸಂಗಾತಿಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಕುಂಭ ರಾಶಿಯ ವ್ಯಕ್ತಿಗಳಿಗೆ ಮಾನವೀಯತೆ ಹೆಚ್ಚಿರುತ್ತದೆ. ಈ ವ್ಯಕ್ತಿಗಳು ಇಷ್ಟಪಟ್ಟ ವಸ್ತುವನ್ನು ಅಥವಾ ಇಷ್ಟಪಡುವವರನ್ನು ಪಡೆದೇ ಪಡೆಯುತ್ತೇನೆ ಎಂಬ ಮನಸ್ಥಿತಿಯನ್ನು ಉಳ್ಳವರಾಗಿರುತ್ತಾರೆ. ಸಂಗಾತಿಯೊಂದಿಗೆ ನಡೆದ ವಾದವನ್ನು ಅಥವಾ ಜೋರಾಗಿ ಮಾತನಾಡಿದ್ದನ್ನು ಈ ರಾಶಿಯವರು ಗಂಭೀರವಾಗಿ ತೆಗೆದುಕೊಳ್ಳವುದಿಲ್ಲ. ಈ ವ್ಯಕ್ತಿಗಳಿಗೆ ವಾದ-ವಿವಾದಗಳ ಆರಂಭದಲ್ಲಿ ಸ್ವಲ್ಪ ಇರುಸು-ಮುರುಸಾದರೂ, ನಂತರ ಅದನ್ನು ತಮಾಷೆಯಾಗಿ ತೆಗೆದುಕೊಂಡು ಮರೆತು ಬಿಡುತ್ತಾರೆ.

ತುಲಾ ರಾಶಿ (Libra) 

ತುಲಾ ರಾಶಿಯವರು ಶಾಂತಿ ಪ್ರಿಯರೆಂದು ಹೇಳಲಾಗುತ್ತದೆ. ಎಲ್ಲ ವಿಷಯಗಳಲ್ಲು ಅಳೆದು-ತೂಗಿ ನಿರ್ಧರಿಸುವವರು. ದುಡುಕು ಸ್ವಭಾವ ಇವರದ್ದಲ್ಲ. ಹಾಗಾಗಿ ಇವರು ತಮ್ಮ ಸಂಗಾತಿಯೊಂದಿಗಾಗಲಿ, ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡಿರುತ್ತಾರೆ. ಜಗಳ-ಗಲಾಟೆಗಳು ಇವರ ಹತ್ತಿರ ಸುಳಿಯದಂತೆ, ವಾದ-ವಿವಾದಗಳಿಂದ ದೂರವಿದ್ದು, ತಾಳ್ಮೆಯನ್ನು ಕಾಯ್ದುಕೊಳ್ಳುತ್ತಾರೆ.

ಮಂಗಳವಾರ ಈ ವಸ್ತು ಖರೀದಿಸಿದರೆ ಧನಹಾನಿ; ಹನುಮಂತನ ಕೋಪಕ್ಕೆ ಗುರಿ..!

 

ಮೀನ ರಾಶಿ ( Pisces)

ಖುಷಿಯಿಂದ ಇರುವ ಈ ರಾಶಿಯವರು ಯಾವುದೇ ವಿಷಯವನ್ನು ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಯಾವುದೇ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಇವರು, ಕನಸಿನ ಲೋಕದಲ್ಲಿ ವಿಹರಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಈ ರಾಶಿಯ ವ್ಯಕ್ತಿಗಳ ಸಂಗಾತಿಯೊಂದಿಗೆ ಜಗಳವಾದರೆ ಅದನ್ನು ತಮಾಷೆಯಾಗಿ ಪರಿವರ್ತಿಸಲು ಇವರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲವಂತೆ. ಅಷ್ಟೇ ಅಲ್ಲದೇ ಸಂಗಾತಿಯನ್ನು ಪ್ರೀತಿಯಿಂದ ಮನವೊಲಿಸಿ, ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುವ ಬಗೆಯನ್ನು ಚೆನ್ನಾಗಿ ತಿಳಿದಿರುತ್ತಾರೆ.

click me!